ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 71/2015 ಕಲಂ
87 Karnataka Police Act
ದಿನಾಂಕ: 28-06-2015 ರಂದು 15-00 ಗಂಟೆಗೆ ಹಗೇದಾಳ ಗ್ರಾಮದ ಹೊರವಲಯದಲ್ಲಿ ಡಿ.ಬಿ ಘೋರ್ಪಡೆ ಇವರ ತೋಟದ
ಮುಂದಿನ ಸಿಮೆಂಟ ಪೂಲ ಮೇಲಿನ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತರೆಲ್ಲರೂ ಕೂಡಿಕೊಂಡು ದುಂಡಾಗಿ
ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ
15-10 ಗಂಟೆಗೆ ಶ್ರೀ. ವಿನಾಯಕ
ಪಿ.ಎಸ್.ಐ. ಮತ್ತು ಸಿಬ್ಬಂದಿ ಸಮೇತ ದಾಳಿ ಮಾಡಿ ಹಿಡಿದಿದ್ದು 11 ಜನರು ಸಿಕ್ಕಿ ಬಿದ್ದಿದ್ದು ಇರುತ್ತದೆ. ಸಿಕ್ಕಿ ಬಿದ್ದ
ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಹಣ ಸೇರಿ ಒಟ್ಟು 30,500=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಪ್ಲಾಸ್ಟೀಕ ಚೀಲ ಸಿಕ್ಕಿದ್ದು ಇರುತ್ತದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 193/2015 ಕಲಂ 87 Karnataka Police Act
ದಿ:- 28-06-2015 ರಂದು ಬೆಳಿಗ್ಗೆ 7:00 ಗಂಟೆಗೆ ಶ್ರೀ
ಟಿ.ಜಿ. ನಾಗರಾಜ, ಎ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ರವರು ಪೊಲೀಸ್ ಪರವಾಗಿ ಸ್ವಂತ ಪಿರ್ಯಾದಿಯೊಂದಿಗೆ ಮೂಲ ಪಂಚನಾಮೆ ಮುದ್ದೇಮಾಲು ಮತ್ತು ಆರೋಪಿತರನ್ನು
ಹಾಜರ್ಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ:- 28-06-2015 ರಂದು ಬೆಳಗಿನಜಾವ
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರದ ಪುಲ್ಲಾರಾವ್ ಎಂಬುವವರ ರೈಸ್ ಮಿಲ್ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಹಾರ್ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ
ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ಮತ್ತು ಸಿಪಿಐ ಗಂಗಾವತಿ (ಗ್ರಾ) ವೃತ್ತರವರ ಮಾರ್ಗದರ್ಶನದಲ್ಲಿ
ನಾನು ಮತ್ತು ಸಿಬ್ಬಂದಿಯವರಾದ ಪಿ.ಸಿ. 129, 160, 429, 358, 131, 38, ಎ.ಪಿ.ಸಿ. ಮಹಿಬೂಬರವರನ್ನು
ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ಮತ್ತು ವೈಯಕ್ತಿಕ ಮೋಟಾರ್ ಸೈಕಲ್ಗಳಲ್ಲಿ
ಹೊರಟು ಶ್ರೀರಾಮನಗರ ತಲುಪಿ ರೈಸ್ಮಿಲ್ನಿಂದ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ನಂತರ ಎಲ್ಲರೂ
ನಡೆದುಕೊಂಡು ಹೊರಟು ನೋಡಲಾಗಿ ಅಲ್ಲಿ ಪುಲ್ಲಾರಾವ್ ರೈಸ್ಮಿಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಬೀದಿ
ದೀಪದ ಲೈಟಿನ ಬೆಳಕಿನಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ
ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ
ಬೆಳಗಿನಜಾವ 05:00 ಗಂಟೆಯಾಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ 4 ಜನರು ಸಿಕ್ಕಿಬಿದ್ದಿದ್ದು
ಉಳಿದ ಇಬ್ಬರು ಅಲ್ಲಿಂದ ಓಡಿ ಹೋದರು. ಸಿಕ್ಕವರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಉಮೇಶ
ಜಾದವ ತಂದೆ ಲಿಂಬು ಜಾದವ, 28 ವರ್ಷ, ಲಮಾಣಿ ಉ: ಎಳೆ ನೀರು ವ್ಯಾಪಾರ ಸಾ: 6ನೇ ವಾರ್ಡ, ಬಂಜಾರ ಕಾಲೋನಿ,
ಶ್ರೀರಾಮನಗರ (2) ಅಬ್ದುಲ್ ತಂದೆ ಶೇಖ್ ಮಹೆಬೂಬ ಪಾಷಾ, 22 ವರ್ಷ, ಉ: ಅಕ್ಕಸಾಲಿಗ ಸಾ: 1ನೇ ವಾರ್ಡ-ಶ್ರೀರಾಮನಗರ
(3) ಸತೀಶ ತಂದೆ ಲಾಲಸಿಂಗ್, 28 ವರ್ಷ, ಜಾತಿ: ಲಮಾಣಿ ಉ: ಹೋಟಲ್ ಸಾ: 6ನೇ ವಾರ್ಡ, ಬಂಜಾರ ಕಾಲೋನಿ,
ಶ್ರೀರಾಮನಗರ (4) ಗೋಪಿ ತಂದೆ ರೇಖು, ವಯಸಸು 32 ವರ್ಷ, ಜಾತಿ: ಲಮಾಣಿ ಉ: ಡ್ರೈವರ್ ಸಾ: 6ನೇ ವಾರ್ಡ,
ಬಂಜಾರ ಕಾಲೋನಿ, ಶ್ರೀರಾಮನಗರ ಅಂತಾ ತಿಳಿಸಿದರು. ಓಡಿ ಹೋದವರ ಬಗ್ಗೆ ವಿಚಾರಿಸಲು ಅವರೇ ಈ ಇಸ್ಪೇಟ್
ಜೂಜಾಟವನ್ನು ಆಡಿಸುತ್ತಿದ್ದು, ಅವರ ಹೆಸರು (5) ಮೀರಿ ಸಾ: ಹೆಬ್ಬಾಳ ಕ್ಯಾಂಪ್ (6) ಪೆದ್ದ ಪಂಡು
ತಂದೆ ದೋನೆಪುಡಿ ಮೋಹನರಾವ್ ಸಾ: 6ನೇ ವಾರ್ಡ-ಶ್ರೀರಾಮನಗರ ಇರುತ್ತದೆ ಅಂತಾ ತಿಳಿಸಿದರು. ಸದರಿ ಸಿಕ್ಕವರಿಂದ
ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 4,100/- ಗಳು ಮತ್ತು 52 ಇಸ್ಪೇಟ್ ಎಲೆಗಳು ಮತ್ತು ಒಂದು
ಪ್ಲಾಸ್ಟಿಕ್ ಚೀಲ ಮತ್ತು (1) ಹಿರೋ ಹೋಂಡಾ ಸಿ.ಡಿ. ಡಿಲಕ್ಸ್ ಮೋ.ಸೈ. ಕೆ.ಎ-37/ ವಿ-4726 (2) ಬಜಾಜ್
ಪ್ಲಾಟಿನ ಮೋಟಾರ್ ಸೈಕಲ್ ನಂ: ಕೆ.ಎ-04/ ಇ.ವೈ-7550 ನೇದ್ದವುಗಳನ್ನು ಜಪ್ತು ಮಾಡಲಾಯಿತು. ಈ ಬಗ್ಗೆ ಬೆಳಗಿನಜಾವ 05:00 ರಿಂದ 06:00 ಗಂಟೆಯವರೆಗೆ ಪಂಚನಾಮೆ
ನಿರ್ವಹಿಸಿ ನಂತರ ಆರೋಪಿತರೊಂದಿಗೆ ಬೆಳಿಗ್ಗೆ 07:00 ಗಂಟೆಗೆ ಠಾಣೆಗೆ ವಾಪಸ್ ಬಂದು ಈ ವರದಿಯನ್ನು
ಸಲ್ಲಿಸಿದ್ದು ಇರುತ್ತದೆ. ಅಂತಾ ಇದ್ದ ವರದಿ ಆಧಾರದ
ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 193/2015 ಕಲಂ 87 ಕ.ಪೋ. ಕಾಯ್ದೆ ಆಡಿ ಪ್ರಕರಣವನ್ನು
ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು
3) ಹನುಮಸಾಗರ ಪೊಲೀಸ್ ಠಾಣಾ ಗುನ್ನೆ ನಂ 63/2015
ಕಲಂ 498(ಎ), 307 ಐ.ಪಿ.ಸಿ:.
ದಿನಾಂಕ 28-06-2015
ರಂದು ಮುಂಜಾನೆ 10-00 ಗಂಟೆಗೆ ಕುಷ್ಟಗಿ ಸರಕಾರಿ ಆಸ್ಪತ್ರೆಯಿಂಧ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಹೆಚ್.ಸಿ-11, ಪಿ/ಸಿ-168
ರವರೊಂದಿಗೆ ಕುಷ್ಟಗಿ ಆಸ್ಪತ್ರೆಗೆ ಬೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದಾ
ಗಾಯಾಳು ಫಿರ್ಯಾದಿ ಹನಮವ್ವ ಗಂಡ ಹನಮಂತ ಗೌಡ್ರ ಸಾ: ವೆಂಕಟಾಪೂರ ರವರ ನುಡಿ ಹೇಳಿಕೆಯನ್ನು
ಮುಂಜಾನೆ 11-00
ಗಂಟೆಯಿಂದ 12-30 ಗಂಟೆಯವರೆಗೆ
ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಾನು ಮೇಲ್ಕಂಡ ವಿಳಾಸದ
ನಿವಾಸಿಯಾಗಿದ್ದು ಹೊಲ ಮನೆ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದೇನೆ, ನನ್ನ ತವರು ಮನೆ ಹುನಗುಂದ ತಾಲೂಕಿನ ಗಾಣದಾಳ ಗ್ರಾಮವಾಗಿರುತ್ತದೆ. ನಮ್ಮ ತಂದೆ ತಾಯಿಗೆ 2 ಜನ ಗಂಡು ಮಕ್ಕಳುಇ 3 ಜನ ಹೆಣ್ಣುಮಕ್ಕಳು ಹೀಗೆ
ಒಟ್ಟು
5 ಜನ ಮಕ್ಕಳಿದ್ದು ನನಗೆ ಈಗ್ಗೆ ಸುಮಾರು 3 ತಿಂಗಳ ಹಿಂದೆ ನಮ್ಮ ತಾಯಿಯ ಅಣ್ಣನಾದ ಪರಮೇಶ್ವರ ಗೌಡ ಈತನ ಮಗನಾದ ಹನಮಂತಗೌಡ ಸಾ:
ವೆಂಕಟಾಪೂರ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನಾನು ನನ್ನ ಗಂಡನ ಮನೆಗೆ ಸಂಸಾರ
ಮಾಡಲು ಬಂದಾಗ ನನ್ನ ಗಂಡನು ನನ್ನ ಸಂಗಡ ಸುಮಾರು 2 ತಿಂಗಳು ಚನ್ನಾಗಿದ್ದನು. ನಂತರ ನನ್ನ ಗಂಡನು ನನಗೆ ನೀನು ಚನ್ನಾಗಿಲ್ಲ ನಿನ್ನ ಮೇಲೆ
ಮನಸ್ಸಿಲ್ಲ ಅಂತಾ ಹೇಳಿ ನನ್ನ ಸಂಗಡ ಜಗಳ ಮಾಡುತ್ತ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ
ನೀಡುತ್ತಿದ್ದನು. ಈ ಬಗ್ಗೆ ನಾನು ನಮ್ಮ ತಂದೆ ತಾಯಿಗೆ ಹೇಳಿರುವದಿಲ್ಲ. ಆದಾಗ್ಯೂ ಸಹ ನನ್ನ
ಗಂಡನು ನನಗೆ ಮೇಲಿಂದ ಮೇಲೆ ಜಗಳ ಮಾಡುತ್ತ ನೀನು ಚನ್ನಾಗಿಲ್ಲ ನಿನ್ನ ಮೇಲೆ ಮನಸ್ಸಿಲ್ಲ ಅಂತಾ
ಕಿರುಕುಳ ಕೊಡುತ್ತಿದ್ದನು. ಅದರಂತೆ ದಿನಾಂಕ 23-06-2015 ರಂದು ಮಂಗಳವಾರ ದಿವಸ ರಾತ್ರಿ ವೇಳೆಯಲ್ಲಿ ನಾನು ಮತ್ತು ನನ್ನ ಗಂಡ ಅತ್ತೆ ರಂಗವ್ವ ಮತ್ತು
ನನ್ನ ಗಂಡನ ಅಣ್ಣನಾದ ಕಡ್ಡೆಪ್ಪ @ ಕನಕಪ್ಪ ಎಲ್ಲರೂ ಕೂಡಿ ಊಟ
ಮಾಡಿದೆವು ನಾನು ಮತ್ತು ನನ್ನ ಗಂಡ ಕೂಡಿ ಅಡುಗೆ ಮನೆಯಲ್ಲಿ ಮಲಗಿಕೊಂಡೆವು ನಮ್ಮ ಅತ್ತೆ ರಂಗವ್ವ
ನನ್ನ ಗಂಡನ ಅಣ್ಣ ಕಡ್ಡೆಪ್ಪ @ ಕನಕಪ್ಪ ಇವರು ಹೊರಗೆ
ಪಡಸಾಲೆಯಲ್ಲಿ ಮಲಗಿಕೊಂಡಿದ್ದರು ನನ್ನ ಮಾವ ಪರಮೇಶ್ವರಗೌಡ ರವರು ನಮ್ಮ ತೋಟದ ಮನೆಯಲ್ಲಿ
ಮಲಗಿಕೊಂಡಿದ್ದರು ನಾವು ಮಲಗುವಾಗ ನನ್ನ ಗಂಡನು ನನ್ನ ಸಂಗಡ ಜಗಳ ತೆಗೆದು ನಿನಗೆ ಸಾಯಿಸಿ ಬೇರೆ
ಮದುವೆ ಮಾಡಿಕೊಳ್ಳುವೆನು ಅಂತಾ ಜಗಳ ಮಾಡಿದನು ಅದರಂತೆ ಬುಧವಾರ ಬೆಳಗಿನ ಜಾವ ಅಂದರೆ ದಿನಾಂಕ 24-06-2015
ರಂದು 4-00 ಗಂಟೆಯ ಸುಮಾರಿಗೆ
ನನ್ನ ಮೇಲೆ ನನ್ನ ಗಂಡನು ಸೀಮೆ ಎಣ್ಣೆ ಸುರದಿದ್ದರಿಂದ ಎಚ್ಚರವಾಗಿ ಎದ್ದಾಗ ನನ್ನ ಗಂಡನು ನನಗೆ
ಸಾಯಿಸುವ ಉದ್ದೇಶದಿಂದ ನನಗೆ ಸೀಮೆ ಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿದನು ನಾನು
ಚೀರಾಡಹತ್ತಿದಾಗ ಪಡಸಾಲೆಯಲ್ಲಿ ಮಲಗಿದ್ದ ನನ್ನ ಗಂಡನ ಅಣ್ಣ ಕಡ್ಡೆಪ್ಪ @ ಕನಕಪ್ಪ ನಮ್ಮ ಅತ್ತೆ ರಂಗವ್ವ ನಮ್ಮ ಮನೆಯ ಹತ್ತಿರ ಇದ್ದ ನಮ್ಮ ದೊಡ್ಡವ್ವ ಪರಾತೆವ್ವ ರವರು
ಚೀರಿದ ದ್ವನಿ ಕೇಳಿ ಬಂದರು. ನನಗೆ ಬೆಂಕಿ ಹತ್ತಿದ್ದನ್ನು ನೋಡಿ ಎಲ್ಲರೂ ಕೂಡಿ ಆರಿಸಿದರು. ನನಗೆ
ಬಲಗೈ ರಟ್ಟೆಯ ಕೆಳಗೆ ಎಡಗೈ ಬಲಗಾಲಿಗೆ ಬಲಗಡೆಯ ಎದೆಯ ಮತ್ತು ಎಡ ತೊಡೆಗೆ ಸುಟ್ಟ
ಗಾಯವಾಗಿರುತ್ತದೆ ನನಗೆ ಇಲಾಜ ಕುರಿತು ನನ್ನ ಗಂಡನ ಅಣ್ಣ ಕಡ್ಡೆಪ್ಪ @ ಕನಕಪ್ಪ ಅತ್ತೆ ರಂಗವ್ವ ಹಾಗೂ ದೊಡ್ಡ ಮಗಳಾದ ಪಾರತೆವ್ವ ಕೂಡಿ ಯಾವದೋ ಒಂದು ವಾಹನದಲ್ಲಿ
ಹನಮಸಾಗರಕ್ಕೆ ಕರೆದುಕೊಂಡು ಬಂದು ಡಾ// ದಾನಿಯವರ ಖಾಸಗಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದರು ಆ
ವೇಳೆಯಲ್ಲಿ ನಾನುಇ ಅರೆ ಪ್ರಜ್ಞೆಯಲ್ಲಿದ್ದೇನು, ಇಂದು ಬೆಳಿಗ್ಗೆ ಪ್ರಜ್ಞೆ ಬಂದಿದ್ದು ನಾನು ಕುಷ್ಟಗಿ ಸರಕಾರಿ ಆಸ್ಪತ್ರೆಯಲ್ಲಿ ಇಲಾಜ
ಪಡೆಯುತ್ತಿದ್ದೇನು. ನನ್ನ ಗಂಡನು ನನ್ನ ಸಂಗಡ ವಿನಾಃ ಕಾರಣ ಜಗಳ ಮಾಡುತ್ತ ನೀನು ಚನ್ನಾಗಿಲ್ಲ
ನಿನ್ನ ಮೇಲೆ ಮನಸ್ಸಿಲ್ಲ ಅಂತಾ ಹೇಳಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳಕೊಡುತ್ತಾ ಹೊಡಿ
ಬಡಿ ಮಾಡುತ್ತಿದ್ದನು. ನನಗೆ ಸಾಯಿಸಿ ಬೇರೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ನನಗೆ ದಿನಾಂಕ 24-06-2015
ರಂದು ಬುಧವಾರ ಬೆಳಿಗ್ಗೆ 4-00 ಗಂಟೆಯ ಸುಮಾರಿಗೆ ನಾನು ಮಲಗಿಕೊಂಡಾಗ ನನ್ನ ಮೇಲೆ ಸೀಮೇ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ
ಮಾಡಲು ಪ್ರಯತ್ನಿಸಿದ್ದು ಅದೆ. ಕಾರಣ ನನ್ನ ಗಂಡ ಹನಮಂತ ತಂದಿ ಪರಮೇಶ ಗೌಡ ಗೌಡ್ರ ಈತನ ಮೇಲೆ
ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ್ದನ್ನು ಪಡೆದುಕೊಂಡು ಪ್ರಕರಣ
ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಅದೆ.
0 comments:
Post a Comment