1) ಮುನಿರಾಬಾದಪೊಲೀಸ್ ಠಾಣೆ ಗುನ್ನೆ ನಂ.219/2015 ಕಲಂ.279, 304(ಎ) ಐ.ಪಿ.ಸಿ:
ದಿನಾಂಕ. 23-10-2015 ರಂದು 11-15 ಪಿ.ಎಂ.ಕ್ಕೆ ಫಿರ್ಯಾದಿದಾರರ ತಂದೆ ಪಂಚಯ್ಯ ಇವರು
ಮೋ.ಸೈ. ನಂ. ಕೆ.ಎ.37/ವೈ.9836 ನೇದ್ದರಲ್ಲಿ ಹಿಂದೆ ಕುಳಿತುಕೊಂಡು ಕೂಕನಪಳ್ಳಿಯಿಂದ
ಗಿಣಿಗೇರಾಕ್ಕೆ ಹೋಗುತ್ತಿರುವಾಗ ಮೋ.ಸೈ. ಚಲಾಯಿಸುತ್ತಿದ್ದ ಶಾಂತಯ್ಯನು ಎನ್.ಹೆಚ್. 13 ರಸ್ತೆಯ ಮೇಲೆ ಬೂದೇಶ್ವರ ಕೆರೆ ಹತ್ತಿರ ಮೋ.ಸೈ.ನ್ನು
ಅತಿವೇಗವಾಗಿ ಚಲಾಯಿಸಿಕೊಂಡು ಹೋಗಿತ್ತಿರುವಾಗ ಒಂದು ಕೋತಿ ಬಂದು ಮೋ.ಸೈ.ಗೆ ಬಂದು ಬಡಿದಿದ್ದರಿಂದ ಮೋ.ಸೈ. ನಿಯಂತ್ರಣ ಮಾಡಲು
ಆಗದೆ ನಿರ್ಲಕ್ಷತನದಿಂದ ಮೋ.ಸೈ. ಸ್ಕಿಡ್ ಮಾಡಿ ಅಪಘಾತ ಮಾಡಿಕೊಂಡು ಬಿದ್ದು, ಹಿಂದೆ ಕುಳಿತ ಪಂಚಯ್ಯ ಇವರಿಗೆ ತಲೆಗೆ ಭಾರಿ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆ ಕುರಿತು
ಹುಬ್ಬಳ್ಳಿ ಎಸ್.ಡಿ.ಎಂ. ಆಸ್ಪತ್ರೆಗೆ ಹೋಗಿದ್ದು ಅಲ್ಲಿ ವೈದ್ಯಾಧಿಕಾರಿಗಳು ಉಳಿಯುವ ಭರವಸೆ
ನೀಡಲಾರದ್ದರಿಂದ ಮುಂದೆ ಯಾವುದಾದರು ದೊಡ್ಡ ಆಸ್ಪತ್ರೆಗೆ ಕರೆದುಕಂಡು ಹೋಗಬೇಕೆಂದು ಸ್ವ
ಇಚ್ಚೆಯಿಂದ ಡಿಸ್ ಚಾರ್ಚ ಮಾಡಿಸಿಕೊಂಡು ಊರಿಗೆ ಕೂಕನಪಳ್ಳಿ ಗ್ರಾಮಕ್ಕೆ ಕರೆದುಕೊಂಡು ಬಂದಾಗ
ಇಂದು ದಿನಾಂಕ. 25-10-2015 ರಂದು ಸಾಯಂಕಾಲ 7-30 ಗಂಟೆಗೆ ಕೂಕನಪಳ್ಳಿ ಗ್ರಾಮದಲ್ಲಿ
ಮೃತ ಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಲಿಖತಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2) ಗಂಗಾವತಿನಗರಪೊಲೀಸ್ ಠಾಣೆ ಗುನ್ನೆ ನಂ. 237/2015 ಕಲಂ.363 ಐ.ಪಿ.ಸಿ:
ದಿನಾಂಕ 25-10-2015 ರಂದು 18-30 ಗಂಟೆಗೆ ಎಂ.ಕೆ.ಶ್ರೀಕಾಂತ ತಂದೆ ದಿ:ಎಂ.ಖಾಜನಗೌಡ ಮಾನಸಗಲ್ ವಯ 30 ವರ್ಷ ಜಾ: ಈಡಿಗ ಉ: ವ್ಯವಸಾಯ
ಸಾ: ಜಯನಗರ, ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರನ ಸಹೋದರನಾದ ಇ.ಬಿ.ನಾಗರಾಜ ತಂದೆ ಎ.ಇ. ಬಸವರಾಜ 28 ವರ್ಷ ಈತನು ಹಳೆ
ಕಾರಗಳನ್ನು ಕಮಿಷನ್ ಆಧಾರದ ಮೇಲೆ ವ್ಯಾಪಾರ ಮಾಡಿಕೊಂಡಿದ್ದು ಅದರಂತೆ ಆರೋಪಿ ಆಸೀಪ್ ಅಲಿ ಸಾ:
ಗದಗ ಈತನು ಸಹ ಹಳೆ ಕಾರುಗಳನ್ನು ಕಮಿಷನ್ ಆಧಾರದ ಮೇಲೆ ವ್ಯಾಪಾರ ಮಾಡಿಕೊಂಡಿದ್ದು, ಸದರಿಯವರಿಬ್ಬರ ನಡುವೆ ಹಳೆ ಕಾರುಗಳ ವ್ಯವಹಾರ ಇದ್ದು, ನಾಗರಾಜ ಈತನು ಆಸೀಫ್ ಅಲಿಗೆ ವ್ಯವಹಾರದಲ್ಲಿ 06-07 ಲಕ್ಷ
ರೂಪಾಯಿಗಳನ್ನು ಕೊಡಬೇಕಾಗಿರುವುದು ಕೊಡದೆ ಸುಮಾರು ಎರಡು ವರ್ಷಗಳಿಂದ ಸತಾಯಿಸುತ್ತಿದ್ದರಿಂದ
ದಿನಾಂಕ 24-10-2015 ರಂದು 19-30 ಗಂಟೆಯ ಸುಮಾರಿಗೆ ನಾಗರಾಜ ಈತನು ಗಂಗಾವತಿ ನಗರದ ಜುಲಾಯಿ
ನಗರದಲ್ಲಿಯ ಅಜಯ ಆಟೋ ಕನ್ಸೆಲ್ಟಿನ್ಸಿ ಆಫೀಸದಲ್ಲಿ ಇರುವಾಗ ಆರೋಪಿತನು ಬಂದು ನಾಗರಾಜನಿಗೆ ತನ್ನ
ಸಂಗಡ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿರುತ್ತಾನೆಂದು ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 237/2015, ಕಲಂ 363 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 184/2015 ಕಲಂ.379 ಐ.ಪಿ.ಸಿ:
ದಿನಾಂಕ: 25-10-2015 ರಂದು ಸಾಯಂಕಾಲ 5-45 ಗಂಟೆಗೆ
ಪಿರ್ಯಾದಿದಾರನಾದ ಪಿ.ಕನ್ನನ್ ತಂದೆ ಪೆರುಮಾಳ ಸಾ: ಮನೆ ನಂ: 12 ಇಂದಿರಾ ನಗರ
ಪಣಚನಲ್ಲೂರು( ಟಿ.ಎನ್) ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕರಣ ಮಾಡಿಸಿದ ಪಿರ್ಯಾದಿಯನ್ನು
ಹಾಜರುಪಡಿಸಿದ್ದು ಸದರ ಪಿರ್ಯಾದಿಯ ಸಾರಾಂಶವೆನೆಂದರೆ, ದಿನಾಂಕ: 16-10-2015
ರಂದು ಗುಜರಾತ ರಾಜ್ಯ ದಲ್ಲಿರುವ ಸುರೇಂದ್ರನಗರದ ನೇಸ್ಟಲೇ ಇಂಡಿಯಾ
ಲಿಮಿಟೇಡ್ ಕಂಪನಿಯಿಂದ 1) POLO Mini Jar Total
80 Bax, 2) POLO Mint Big Roll Total 20 Bax, 3) MILKYBAR Eclairs Total 490 Box
& 4) POLO Mint Roll Total 168 Box ಹಿಗೇ
ಒಟ್ಟು 758 ಚಾಕಲೇಟ್
ಬಾಕ್ಸಗಳು ಒಟ್ಟು ಬೆಲೆ 18,98,290=00 ರೂಪಾಯಿಗಳಷ್ಟು ಚಾಲಕೇಟ ಬಾಕ್ಸಗಳನ್ನು ಲೋಡ ಮಾಡಿಕೊಂಡು ತಮಿಳುನಾಡು
ರಾಜ್ಯದ ತಿರುವಳ್ಳೂರನ ಅದೇ ನೇಸ್ಟಲೇ ಇಂಡಿಯಾ ಲಿಮಿಟೇಡ್ ಕಂಪನಿಗೆ ತಲುಪಿಸಲು ಸಂಜೆ 05-30 ಗಂಟೆಯ
ಸುಮಾರಿಗೆ ಸುರೇಂದ್ರನಗರ ಬಿಟ್ಟು ಹೊರಟೆವು. ನಾವು ಇಬ್ಬರೂ ಡ್ರೈವರಗಳು ಆಗಿದ್ದರಿಂದ ಒಬ್ಬ
ಒಬ್ಬರೂ ಡ್ರೈವಿಂಗ ಮಾಡಿಕೊಂಡು ಅಲ್ಲಲ್ಲಿ ಊಟ, ನಾಷ್ಟ ಹಾಗೂ ಸ್ನಾನ ಮಾಡಿಕೊಳ್ಳುತ್ತಾ ಮತ್ತು ವಿಶ್ರಾಂತಿ
ಮಾಡುತ್ತಾ ಬರುತ್ತಿದ್ದೆವು. ಸೋನಕಾಡ ಸೊಲ್ಲಾಪೂರ ಮಾರ್ಗವಾಗಿ ಆಲಮಟ್ಟಿಯವರೆಗೆ ಡ್ರೈವಿಂಗ
ಮಾಡಿಕೊಂಡು ಬಂದು ನಮ್ಮ ಲಾರಿಯ 2 ನೇ ಚಾಲಕನಾದ ಪಿ. ತಂಗರಾಜ ರವರಿಗೆ ಡ್ರೈವಿಂಗ ಮಾಡಲು ಕೊಟ್ಟು
ವಿಶ್ರಾಂತಿ ಮಾಡುತ್ತಿದ್ದೇನು. ಪಿ. ತಂಗರಾಜನು ಇಲಕಲ್ ದಾಟಿ ಮಹಾರಾಣಿ ಡಾಬಾದವರೆಗೆ ಡ್ರೈವಿಂಗ
ಮಾಡಿಕೊಂಡು ದಿನಾಂಕ:19-10-2015 ರಂದು ಬೆಳಗಿನ ಜಾವ 03-00
ಗಂಟೆಗೆ ಬಂದು ತನಗೆ ನಿದ್ದೆ ಬರುತ್ತಿದ್ದರಿಂದ ಮಹಾರಾಣಿ ಡಾಬಾದಲ್ಲಿ
ಲಾರಿಯನ್ನು ನಿಲ್ಲಿಸಿ ಮಲಗಿದ್ದನು. ನಂತರ ಬೆಳಗಿನ ಜಾವ 05-00 ಗಂಟೆಯ ಸುಮಾರಿಗೆ ಎದ್ದು ಪುನಃ 2 ನೇ ಚಾಲಕ ಪಿ.ತಂಗರಾಜನು ಲಾರಿಯನ್ನು ನಡೆಸಿಕೊಂಡು ವಣಗೇರಿ ಟೋಲನಾಕ
ದಾಟಿ ಬೆಳಗಿನ 06-00 ಗಂಟೆಯ
ಸುಮಾರಿಗೆ ಎಡಗಡೆ ಪಾಕಿಂಗ್ ದಲ್ಲಿ ಲಾರಿಯನ್ನು ನಿಲ್ಲಿಸಿ ಮೇಲೆ ಹತ್ತಿ ನೋಡಲು ನಮ್ಮ ಲಾರಿಯ
ಮೇಲೆ ಹಾಕಿರುವ ತಡಪಾಲುನ್ನು ಸುಮಾರು ಒಂದು ಮಾರಿನಷ್ಟು ಕತ್ತರಿಸಿ [ಕೊಯ್ದು] ಲಾರಿಯಲ್ಲಿದ್ದ 1) POLO Mini Jar Total 80 Bax,ಗಳ ಪೈಕಿ 14 ಬಾಕ್ಸಗಳನ್ನು 1 ಬಾಕ್ಸಗೆ 3413=00 ರೂಪಾಯಿಯಂತೆ 14 ಬಾಕ್ಸಗಳ
ಕಿಮ್ಮತ್ತು 47782=00, 2) POLO Mint Big Roll Total 20 Bax, ಗಳ ಪೈಕಿ 03 ಬಾಕ್ಸಗಳನ್ನು 1 ಬಾಕ್ಸಗೆ 2950=00 ರೂಪಾಯಿಯಂತೆ 03 ಬಾಕ್ಸಗಳ ಕಿಮ್ಮತ್ತು 8850=00, 3) MILKYBAR Eclairs Total 490 Box ಗಳ ಪೈಕಿ 28 ಬಾಕ್ಸಗಳನ್ನು 1 ಬಾಕ್ಸಗೆ 2485=00 ರೂಪಾಯಿಯಂತೆ 28 ಬಾಕ್ಸಗಳ
ಕಿಮ್ಮತ್ತು 69580=00, ಮತ್ತು 4) POLO Mint Roll Total 168 Box ಗಳ ಪೈಕಿ 32 ಬಾಕ್ಸಗಳನ್ನು 1 ಬಾಕ್ಸಗೆ 2075=00 ರೂಪಾಯಿಯಂತೆ 32 ಬಾಕ್ಸಗಳ ಕಿಮ್ಮತ್ತು 66400=00, ಹಿಗೇ ಒಟ್ಟು 77 ಬಾಕ್ಸಗಳು ಒಟ್ಟೂ ರೂ: 1,92,612=00 ರೂಪಾಯಿಗಳಷ್ಟು ಬೆಲೆ ಬಾಳುವ
ಚಾಕಲೇಟ ಬಾಕ್ಸಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡಿದ್ದು ಹೋಗಿದ್ದು ಇರುತ್ತದೆ. ಈ ಬಗ್ಗೆ
ನಮ್ಮ ಲಾರಿಯ ಟ್ರಾನ್ಸಪೋರ್ಟ ಮಾಲಕರಿಗೆ ಹಾಗೂ ನೇಸ್ಟಲೇ ಇಂಡಿಯಾ ಲಿಮಿಟೇಡ್ ಕಂಪನಿಯವರಿಗೆ
ವಿಷಯ ತಿಳಿಸಿ ಈಗ ತಡವಾಗಿ ಬಂದು ಪಿರ್ಯಾದಿಯನ್ನು ಹಿಂದಿಯಲ್ಲಿ ಹೇಳಿದ್ದನ್ನು ಕನ್ನಡಕ್ಕೆ
ಅನುವಾದಿಸಿ ಗಣಕೀಕರಣ ಮಾಡಿಸಿ ಕೊಟ್ಟಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡೆನು.
0 comments:
Post a Comment