Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, January 30, 2016

1) ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 05/2016 ಕಲಂ: 279, 304(ಎ) ಐ.ಪಿ.ಸಿ ಹಾಗೂ 187 ಐ.ಎಂ.ವಿ. ಕಾಯ್ದೆ:
ದಿನಾಂಕ 29/1/2016 ರಂದು ರಾತ್ರಿ 8.-30 ಗಂಟೆಗೆ ಪಿರ್ಯಾದಿದಾರಳ ಗಂಡನಾದ ವೆಂಕಟೇಶ ಇತನು ಸೈಕಲ್ಲ ತಗೆದುಕೊಂಡು ಕಂಪ್ಲಿ ಸರ್ಕಲ್ ಕಡೆಯಿಂದ ಮನೆ ಕಡೆಗೆ ಬರುತ್ತಿರುವಾಗ ಕಂಪ್ಲಿ ರಸ್ತೆಯ ಸಿಂಗನಾಳ ಇವರ ಗದ್ದೆಯ ಹತ್ತಿರ ರಸ್ತೆಯ ಎಡಬಾಜು ಹೊರಟಿರುವಾಗ ಹಿಂದಿನಿಂದ ಅಂದರೆ ಕಂಪ್ಲಿ ಸರ್ಕಲ್ ಕಡೆಯಿಂದ ಯಾವುದೋ ಒಂದು ಲಾರಿ ಚಾಲಕ ತನ್ನ ಲಾರಿಯನ್ನು ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ವೆಂಕಟೇಶ ಇತನ ಸೈಕಲ್ಲಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ವೆಂಕಟೇಶ ಇತನ ತಲೆಗೆ ಭಾರಿ ಒಳಪೆಟ್ಟಾಗಿ ಮೂಗಿನಿಂದ ರಕ್ತ ಸ್ರಾವವವಾಗಿದ್ದು ಮತ್ತು ಕೈಕಾಲುಗಳಿಗೆ ರಕ್ತಗಾಯವಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದುಇರುತ್ತದೆ ಅಪಘಾತ ಮಾಡಿದ ಲಾರಿಯ ಚಾಲಕ ತನ್ನ ಲಾರಿಯನ್ನು ಹಾಗೆಯೇ ಜೋರಾಗಿ ಕಂಪ್ಲಿ ಕಡೆಗೆ ತಗೆದುಕೊಂಡು ಹೋಗಿ ಪರಾರಿಯಾಗಿದ್ದು ಇರುತ್ತದೆ. ಸದರ ಲಾರಿಯ ನಂಬರ ಪ್ರತ್ಯಕ್ಷ ದರ್ಶಿಗಳು ನೋಡಿರುವುದಿಲ್ಲಾ ಅಂತಾ ಮುಂತಾಗಿ ಕೊಟ್ಟ ಪಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.
2)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 15/2016 ಕಲಂ: 379 ಐ.ಪಿ.ಸಿ:.
ದಿನಾಂಕ 29-01-2016 ರಂದು ರಾತ್ರಿ 10-00 ಗಂಟೆಗೆ ಫೀರ್ಯಾದಿದಾರರಾದ ಶ್ರೀಮತಿ ವಿಜಯಲಕ್ಷ್ಮೀ ಗಂಡ ಶಂಕರರಡ್ಡಿ ಬಾಣದ, ವಯಾ: 26 ವರ್ಷ, ಜಾ; ರೆಡ್ಡಿ ಉ: ಮನೆಗೆಲಸ, ಸಾ: ಸದರ್ಾರಗಲ್ಲಿ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ, ದಿನಾಂಕ: 26-01-2016 ರಂದು ತಾನು ತನ್ನ ಮನೆಯವರ ಸಂಗಡ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಹೋಗಿದ್ದು, ಜಾತ್ರೆಗೆ ಹೋಗುವ ಸಮಯದಲ್ಲಿ ತಾನು ಸುಮಾರು 50 ಗ್ರಾಂ ತೂಕದ ಅಂದಾಜು ಕಿಮ್ಮತ್ತು 1,25,000-00 ರೂ ಬೆಲೆ ಬಾಳುವ ಬಂಗಾರದ ಮಾಂಗಲ್ಯದ ಸರವನ್ನು ಕೊರಳಲ್ಲಿ ಹಾಕಿಕೊಂಡು ಹೋಗಿದ್ದರು. ರಥೋತ್ಸವ ಮುಗಿದ ನಂತರ ತಾನು ತನ್ನ ಕುಟುಂಬದ ಸದಸ್ಯರ ಸಂಗಡ ಜಾತ್ರೆ ಮಾಡಿಕೊಂಡು ವಾಪಾಸ್ ಮನೆಗೆ ಸಾಯಂಕಾಲ 7-30 ಗಂಟೆಯ ಸುಮಾರಿಗೆ ಬಂದಿರುತ್ತೇನೆ. ವಾಪಾಸ್ ಮನೆಗೆ ಬಂದ ನಂತರ ತಾನು ಕೊರಳಲ್ಲಿ ಹಾಕಿಕೊಂಡು ಹೋದ ಬಂಗಾರದ ಮಾಂಗಲ್ಯದ ಸರವನ್ನು ಬಿಚ್ಚಿ ಮನೆಯ ಅಲ್ಮಾರದಲ್ಲಿ ಇಡಲು ತನ್ನ ಕೊರಳಲ್ಲಿ ಕೈ ಹಾಕಿದಾಗ ತನ್ನ ಕೊರಳಲ್ಲಿನ ಮಾಂಗಲ್ಯದ ಸರ ಕಾಣಿಸಲಿಲ್ಲ. ಆಗ ತಾನು ಭಯಬೀತಳಾಗಿ ಮನೆಯಲ್ಲಿ ಬಟ್ಟೆ ಬದಲಿಸುವಾಗ ಬಿದ್ದಿರಬಹುದೇನೋ ಎಂದು ಎಲ್ಲಾ ಕಡೆಗಳಲ್ಲಿ ಹುಡುಕಾಡಿದಾಗ ತನ್ನ ಕೊರಳಲ್ಲಿನ ಮಾಂಗಲ್ಯದ ಸರ ಕಂಡು ಬರಲಿಲ್ಲ. ತಾನು ಜಾತ್ರೆಗೆ ಹೋದಾಗ ಗವಿಸಿದ್ದೇಶ್ವರ ಜಾತ್ರೆಯ ರಥೋತ್ಸವ ಬಂದು ವಾಪಾಸ್ ಹೋಗುವ ಸ್ಥಳದಲ್ಲಿರುವ ಗುಂಡುಗಳ ಹತ್ತಿರ ತಾನು ನಿಂತಿದ್ದಾಗ ಭಾರೀ ಪ್ರಮಾಣದಲ್ಲಿ ಜನ ಸೇರಿದ್ದರು. ಆ ಸಮಯದಲ್ಲಿ ಜನರ ನೂಕು ನುಗ್ಗಲಿದ್ದು ಅಲ್ಲಿಯೇ ಯಾರೋ ಕಳ್ಳರು ನನ್ನ ಕೊರಳಲ್ಲಿನ ಅಂದಾಜು 50 ಗ್ರಾಂ ತೂಕದ ಅಂದಾಜು 1,25,000-00 ರೂಪಾಯಿ ಬೆಲೆ ಬಾಳುವ ಮಾಂಗಲ್ಯದ ಸರವನ್ನು ಯಾರೋ ಕಳ್ಳರು ಗಲಾಟೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಮುಂತಾಗಿ ಸಲ್ಲಿಸಿದ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂಡೇನು.  
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 31/2016 ಕಲಂ: 78(3) Karntaka Police Act.
ದಿನಾಂಕ. 29-01-2016 ರಂದು 6-30 ಪಿ.ಎಂ.ಕ್ಕೆ ಆರೋಪಿತನಾದ ಮಹಮ್ಮದ ಅಜೀಮ ಮುನಿರಾಬಾದ ಗ್ರಾಮದ ಗ್ಯಾಸ ಗುಡಾನ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಫೀರ್ಯಾದಿ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿ ಆರೋಪಿತನಿಂದ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಹಾಗೂ ಜೂಜಾಟದ ನಗದು ಹಣ. 2185-00 ರೂ. ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
4) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 05/2016 ಕಲಂ: 143, 147, 148, 341, 323, 324, 355, 504 ಸಹಿತ 149  ಐ.ಪಿ.ಸಿ:.
ದಿನಾಂಕ:-29/01/2016 ರಂದು 3-30 ಪಿ.ಎಂ.ಕ್ಕೆ ಫಿರ್ಯಾದಿದಾರರಾದ ಹನುಮರಡ್ಡೆಪ್ಪರವರು ಠಾಣೆಗೆ ಬಂದು ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೆನೆಂದರೆ, ಇಂದು ದಿನಾಂಕ; 29/01/2016  ರಂದು 11-00 ಎ.ಎಂ.ಕ್ಕೆ ತಾನು ತಮ್ಮ ಶೆಡ್ ನಿಂದ ತಮ್ಮ ಮನೆಗೆ ರಸ್ತೆಯಲ್ಲಿ ನಡೆದುಕೊಂಡು ಹೊರಟಾಗ, ಫಿರ್ಯಾದಿ ತಮ್ಮ ಶೆಡ್ ಪಕ್ಕದಲ್ಲಿ ಕಟ್ಟಿಗೆ ಬಡ್ಡೆಗಳನ್ನು ಹಾಕಬೇಡ ಅಂತಾ ಹೇಳಿದ ದ್ವೇಷದಿಂದ ಆರೋಪಿತರೆಲ್ಲರೂ ಕೂಡಿ ಗುಂಪು ಕಟ್ಟಿಕೊಂಡು, ತಮ್ಮ ಕೈಯಲ್ಲಿ ಕಟ್ಟಿಗೆ ಬಡಿಗೆ ಹಿಡಿದುಕೊಂಡು ಬಂದು ತನಗೆ ರಸ್ತೆಯಲ್ಲಿ ತಡೆದು ನಿಲ್ಲಿಸಿ ‘‘ಲೇ ಸೂಳೇ ಮಗನೇ ಆ ಜಾಗ ನಿನ್ನದೇನಲೇ ಅಲ್ಲಿ ನಿನ್ನ ಹಕ್ಕು ಏನಿದೇ’’’’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಯಿಂದ ಕಟ್ಟಿಗೆಯಿಂದ ಮತ್ತು ಚಪ್ಪಲಿಯಿಂದ ಹೊಡೆದು ರಕ್ತಗಾಯಗೊಳಿಸಿದ್ದು ಆಗ ಘಟನೆಯನ್ನು ನೋಡಿದ ಗ್ರಾಮದ ಹೇಮಣ್ಣ ಸೋಂಪೂರ, ಕಲ್ಲಪ್ಪ ಬಡಿಗೇರ, ತಿಪ್ಪರಡ್ಡೆಪ್ಪ ಸೊಂಪೂರ, ದೇವರಡ್ಡಿ ಮಾದಿನೂರ, ಸೋಮಣ್ಣ ಸೋಂಪೂರರವರು ಬಂದು ಆರೋಪಿತರಿಗೆ ಸಿಟ್ಟು ಮಾಡಿ ಜಗಳ ಬಿಡಿಸಿದಾಗ ಆರೋಪಿತರು ತನಗೆ ‘‘ಇವತ್ತು ಉಳಿದುಕೊಂಡಿ ಇನ್ನೊಮ್ಮೆ ಸಿಗೋ ನಿನ್ನ ಜೀವ ಸಹಿತ ಉಳಿಸುವದಿಲ್ಲಾ’’’ ಅಂತಾ ಜೀವದ ಬೆದರಿಕೆ ಹಾಕುತ್ತಾ ಹೋಗಿದ್ದು ಇದರಿಂದ ತನಗೆ ಹಣೆ ಮೇಲೆ, ತಲೆಯ ಎಡಗಡೆ ರಕ್ತಗಾಯವಾಗಿ, ಬೆನ್ನಿಗೆ ಹಾಗೂ ಎದೆಗೆ ಒಳಪೆಟ್ಟು ಆಗಿದ್ದು, ತನಗೆ ಕೈಯಿಂದ, ಕಟ್ಟಿಗೆಯಿಂದ, ಚಪ್ಪಲಿಯಿಂದ ಹೊಡೆದು ಆವಾಚ್ಯವಾಗಿ ಬೈಯ್ದಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ದೂರಿನ ಸಾರಾಂಶದ ಮೇಲಿಂದ  ಪ್ರಕರಣ ದಾಖಲು ಮಾಡಿ ತನಿಖೆ ಕೈ ಕೊಂಡೆನು.

0 comments:

 
Will Smith Visitors
Since 01/02/2008