Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, February 18, 2016

1) ಕುಷ್ಠಗಿ ಪೊಲೀಸ್ ಠಾಣೆ ಗುನ್ನೆ ನಂ. 70/2016 ಕಲಂ: 78(3) Karnataka Police Act:
ದಿನಾಂಕ: 17-02-2016 ರಂದು 8-15 ಪಿ.ಎಂ.ಗೆ ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು  ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ರಾತ್ರಿ 6-30 ಗಂಟೆಗೆ ಕುಷ್ಠಗಿ ಪೊಲೀಸ್ ಠಾಣೆಯಲ್ಲಿದ್ದಾಗ ಕುಷ್ಟಗಿ ಪಟ್ಟಣದ ಗಜೇಂದ್ರಗಡ ಸರ್ಕಲ್ ಹತ್ತಿರ ಆಸ್ಪತ್ರೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1) ಸೈಯದ್ ಜೀಲಾನ ತಂದೆ ಸೈಯದ್ ಸಾದತ್ ಹುಸೇನ ಮುಲ್ಲಾ  2] ಸೈಯದ್ ಪಾಷಾ  ತಂದೆ ಸೈಯದ್ ಅಬ್ದುಲ್ ಸಮದಾ ಸಾಬ ಮುಲ್ಲಾ  ಇಬ್ಬರೂ ಸಾ: ಮುಲ್ಲಾರ ಓಣಿ ಕುಷ್ಟಗಿ ರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-108, 63, ಪಿ.ಸಿ-117,116,109, 393 ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ  ಎಲ್ಲರೂ ಕೂಡಿ ಸರಕಾರಿ ಜೀಪನಲ್ಲಿ ಠಾಣೆಯಿಂದ 6-45 ಪಿ.ಎಂ ಗೆ ಹೊರಟು ಕುಷ್ಟಗಿ ಪಟ್ಟಣದ ಗಜೇಂದ್ರಗಡ ಸರ್ಕಲ್ ಹತ್ತಿರ ಆಸ್ಪತ್ರೆಯ ಮುಂದೆ ದೂರದಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು ವಿಚಾರಿಸಿದಾಗ ಹೆಸರು ಸದ್ದಾಂ ಹುಸೇನ ತಂದೆ ಮಹಿಬೂಬಸಾಬ ಕಲಕಬಂಡಿ ವಯಾ: 23 ವರ್ಷ ಜಾತಿ:ಮುಸ್ಲಿಂ : ಆಟೋ ಚಾಲಕ ಸಾ: ಮುಲ್ಲಾರ ಓಣಿ ಕುಷ್ಟಗಿ ಅಂತಾ ಹೇಳಿದ್ದು ಹಾಗೂ ಸದರಿಯವರು ಜನರಿಂದ ಪಣವಾಗಿ ಹಣ ಪಡೆದು ಅವರಿಗೆ ಹೆಚ್ಚಿನ ಹಣ ಕೊಡುವುದಾಗಿ ಹೇಳಿದ್ದು, ಹಾಗೂ ತಾನು ಬರೆದ ಮಟಕಾ ಚೀಟಿಗಳನ್ನು ರಾಜಮಹ್ಮದ  ತಂದೆ ಮುಂಜೂರಸಾಬ ಸುಂಕದ ವಯಾ: 30 ವರ್ಷ ಜಾ: ಮುಸ್ಲಿಂ ಉ: ವ್ಯಾಪಾರ ಸಾ: ಮುಲ್ಲಾರ ಓಣಿ ಕುಷ್ಟಗಿ ಇವರಿಗೆ ಕೊಡುವದಾಗಿ ತಿಳಿಸಿದನು. ಮತ್ತು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 2100-00 ರೂಪಾಯಿ ನಗದು ಹಣ, ಒಂದು ಶ್ಯಾಮಸಂಗ್  ಮೊಬೈಲ್ ಅಂ ಕಿ. 600-00 ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಚೀಟಿ ಇವುಗಳನ್ನು ಜಪ್ತ ಪಡಿಸಿದ್ದು ಸದರ ಪಂಚನಾಮೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
2) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 39/2016 ಕಲಂ: 323, 324, 341, 504, ಸಹಿತ 34 ಐ.ಪಿ.ಸಿ:
ದಿನಾಂಕ: 17-01-2016 ರಂದು ಬೆಳಗ್ಗೆ  ಕೊಪ್ಪಳ ಜಿಲ್ಲಾ ಆಸ್ಪತ್ರೆಯ ನಿಸ್ತಂತು ಘಟಕದಿಂದ ಎಂ.ಎಲ್.ಸಿ. ಮಾಹಿತಿ ಬಂದಿದ್ದು, ಕೂಡಲೇ ಸದರಿ ಆಸ್ಪತ್ರೆಗೆ ಬೇಟಿ ನೀಡಿ, ಅಲ್ಲಿ ಜಗಳದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಫಿರ್ಯಾಧಿದಾರನ ಹೇಳಿಕೆ ಫಿರ್ಯಾಧಿಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶವೆನಂದರೆ, ಫಿರ್ಯಾಧಿದಾರರ ತಾಯಿ ಹಾಗೂ ಆರೋಪಿ ನಂ: 01 ಇವರ ತಾಯಿಯ ಹೆಸರಿನಲ್ಲಿ ಜಂಟಿಯಲ್ಲಿ 8 ಎಕರೆ, ಹೊಲವಿದ್ದು, ಪಿಯರ್ಾದಿದಾರರು ಆರೋಪಿ ನಂ: 01 ಇವರ ತಾಯಿಯ ಹೆಸರಿನಲ್ಲಿರುವ ನಾಲ್ಕು ಎಕರೆ ಹೊಲವನ್ನು ಖರೀದಿ ಮಾಡಿದ್ದು, ತಮ್ಮ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿರುವುದಿಲ್ಲ. ದಿನಾಂಕ: 16-02-2016 ರಂದು ಬೆಳಗಿನ ಜಾವ 12-30 ಗಂಟೆಯ ಸುಮಾರಿಗೆ ಹೊಲದಲ್ಲಿ ತಾವು ಬೆಳೆದ ಜೋಳದ ಬೆಳೆಯನ್ನು ಕಿತ್ತು ಹಾಕಿ, ಬೆಳೆಯ ಹತ್ತಿರ ಮಲಗಿಕೊಂಡಿದ್ದಾಗ, ಆರೋಪಿತರೆಲ್ಲರೂ ಕೊಡಿಕೊಂಡು ಬಂದು, ಫಿಯರ್ಾದಿದಾರನಿಗೆ ಅವಾಚ್ಯ ಶಬ್ದಗಳಿಂದ ಬೈದು, ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು, ಕಟ್ಟಿಗೆಯಿಂದ ತೆಲೆಗೆ ಹೊಡೆದು ರಕ್ತಗಾಯ ಮಾಡಿದ್ದು, ಇರುತ್ತದೆ. ಇದನ್ನು ನೋಡಿ, ಬಿಡಿಸಲು ಬಂದ, ಫಿರ್ಯಾಧಿದಾರನ ತಮ್ಮ ಬಿಡಿಸಲು ಬಂದಾಗ ಆತನಿಗೂ ಸಹ ಕೈಯಿಂದ ಹೊಡೆ ಬಡೆ ಮಾಡಿದ್ದು ಇರುತ್ತದೆ.  ಕಾರಣ ತಮಗೆ ಹೊಡೆ ಬಡೆ ಮಾಡಿದ ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಹೇಳಿಕೆ ಫಿರ್ಯಾಧಿಯನ್ನು ಪಡೆದುಕೊಂಡು ಸಂಜೆ 6-00 ಗಂಟೆಗೆ ಠಾಣೆಗೆ ಬಂದು ಫಿರ್ಯಾಧಿಯ ಸಾರಾಂಶದ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 40/2016 ಕಲಂ: 279, 337, 304(ಎ) ಐ.ಪಿ.ಸಿ:
ದಿನಾಂಕ: 17-02-2016 ರಂದು ಸಂಜೆ 7-30 ಗಂಟೆಗೆ ಆರೋಪಿ ನಂ: 02 ಈತನು ತನ್ನ ಅಕ್ಕಳಾದ ಪಿರ್ಯಾದಿದಾರರನ್ನು ತಮ್ಮ ಮೋಟರ್ ಸೈಕಲ್ ನಂ: ಕೆಎ-35 ವಾಯ್-2122 ನೇದ್ದರ ಮೇಲೆ ಕೂಡಿಕೊಂಡು ಬೆಟಗೇರಿ ಆಸ್ಪತ್ರೆಗೆ ಹೋಗಿ ಫಿರ್ಯಾದಿದಾರಳ ಒಂದು ವರ್ಷದ ಮಗಳನ್ನು ತೋರಿಸಿಕೊಂಡು ವಾಪಸ್ ಬರುತ್ತಿದ್ದಾಗ ಆರೋಪಿ ನ: 02 ಈತನು ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದು, ಅದೇ ರೀತಿಯಾಗಿ ಆರೋಪಿ ನಂ: 01 ಈತನು ಮೋರನಾಳ ಕಡೆಯಿಂದ ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ನಂ: ಕೆಎ-37 ಹೆಚ್-9111 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು, ಒಬ್ಬರಿಗೊಬ್ಬರು ಸೈಡ ಕೊಡದೇ ರಸ್ತೆ ಮಧ್ಯದಲ್ಲಿ ಮುಖಾಮುಖಿಯಾಗಿ ಟಕ್ಕರ್  ಕೊಟ್ಟು ಅಫಘಾತಮಾಡಿದ್ದರಿಂದ ಎಲ್ಲರೂ ಮೋಟರ್ ಸೈಕಲ್ ನೊಂದಿಗೆ ರಸ್ತೆಯ ಮೇಲೆ ಬಿದ್ದ ಪರಿಣಾಮ ಫಿರ್ಯಾದಿದಾರಳಿಗೆ ತಲೆಯ ಮೇಲೆ ಒಳಪೆಟ್ಟಾಗಿದ್ದು, ಬಲ ಮೋಣ ಕೈ ಹತ್ತಿರ ತೆರಚಿದ ರಕ್ತಗಾಯ ವಾಗಿದ್ದು ಇರುತ್ತದೆ. ಆರೋಪಿ ನಂ: 01 ಈತನಿಗೆ ಬಲಗಡೆಯ ಕಣ್ಣಿನ ಹತ್ತಿರ, ಬಾಯಿಯ ಹತ್ತಿರ ಭಾರಿ ರಕ್ತಗಾಯವಾಗ ಸ್ಥಳದಲ್ಲಿಯ ಮೃತ ಪಟ್ಟಿದ್ದು ಇರುತ್ತದೆ. ನಂತರ ಗಾಯಾಳು ಆರೋಪಿ ನಂ: 02 ಹಾಗೂ ಫಿರ್ಯಾದಿದಾರಳಿಗೆ ಚಿಕಿತ್ಸೆ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಟಗೇರಿಗೆ ದಾಖಲು ಮಾಡಿದಾಗ, ಚಿಕಿತ್ಸೆ ಫಲಕಾರಿಯಾಗದೇ ಆರೋಪಿ ನಂ: 02 ಈತನು ಸಹ ಸಂಜೆ 8-00 ಗಂಟೆ ಸುಮಾರಿಗೆ ಮೃತ ಪಟ್ಟಿದ್ದು ಇರುತ್ತದೆ. ಕಾರಣ ಸದರಿ ತಾವು ನಡೆಸುತ್ತಿದ್ದ ಮೋಟರ್ ಸೈಕಲ್ ಗಳನ್ನು ಇಬ್ಬರು ಸವಾರರು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಒಬ್ಬರಿಗೊಬ್ಬರು ಸೈಡ್ ಕೊಡದೇ ರಸ್ತೆ ಮಧ್ಯದಲ್ಲಿ ಮುಖಾಮುಖಿಯಾಗಿ ಟಕ್ಕರ್ ಕೊಟ್ಟು ಅಫಘಾತ ಮಾಡಿದ್ದರಿಂದ  ಸದರಿ ಅಫಘಾತದಲ್ಲಿ ಫಿರ್ಯಾದಿದಾರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಇರುತ್ತದೆ. ಆದ್ದರಿಂದ ಸದರಿ ಅಫಘಾತಕ್ಕೆ ಕಾರಣರಾದ ಇಬ್ಬರು ಮೋಟರ್ ಸೈಕಲ್ ಸವಾರರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ವಾಪಸ್  ರಾತ್ರಿ 10-00 ಗಂಟೆಗೆ ಠಾಣೆಗೆ ಬಂದು ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 29/2016 ಕಲಂ: 110 (ಇ) &(ಜಿ) ಸಿ.ಆರ್.ಪಿ.ಸಿ.

ದಿನಾಂಕ: 17-02-2016 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಪಿಸಿ 332 ಸಣ್ಣ ಈರಣ್ಣ ರವರನ್ನು ಸಂಗಡ ಕರೆದುಕೊಂಡು ನಗರದಲ್ಲಿ ಪ್ಯಾಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಾ ನಗರದ ಕೊಪ್ಪಳ ನಗರದ ಬಸ್ ನಿಲ್ದಾಣದಲ್ಲಿ ಅಲ್ಲಿ ಓರ್ವ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ರಸ್ತೆಯಲ್ಲಿ ಹೋಗಿ ಬರುವ ಜನರಿಗೆ ಅವಾಚ್ಯವಾಗಿ ಬೈದಾಡುತ್ತಾ ಗದ್ದಲ ಮಾಡುತ್ತಾ ಅನುಚಿತವಾಗಿ ವರ್ತನೆ ಮಾಡುತ್ತಾ ಬೈದಾಡುತ್ತಿದ್ದನು ಆಗ ಸದರಿಯವನಿಗೆ ವಿಚಾರಿಸಿ ಹೆಸರು ವಿಳಾಸ ಕೇಳಲು ತನ್ನ ಹೆಸರು ರವಿ ತಂದೆ ಸೋಮಪ್ಪ ತಳವಾರ ವಯಾ: 28 ವರ್ಷ ಜಾ: ವಾಲ್ಮೀಕಿ ಉ: ಕೂಲಿಕೆಲಸ ಸಾ: ತಳಕಲ್ ಅಂತಾ ತಿಳಿಸಿದನು. ಸದರಿಯವನ ವರ್ತನೆಯಿಂದ ರಸ್ತೆಯಲ್ಲಿ ಹೋಗಿ ಬರುವ ಜನರಿಗೆ ತೊಂದರೆಯಾಗಿ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ಸಾಧ್ಯತೆ ಕಂಡು ಬಂದಿದ್ದರಿಂದ ಮತ್ತು ಸದ್ಯ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆದಿರುವುದಿರುವುದರಿಂದ ಮುಂಜಾಗೃತ ಕ್ರಮವಾಗಿ ಸದರಿಯವನನ್ನು ವಶಕ್ಕೆ ತೆಗೆದುಕೊಂಡು ವಾಪಸ್ ಠಾಣೆಗೆ ಬಂದಿದ್ದು, ಸದರಿಯವನಿಗೆ ಹೀಗೆಯೇ ಬಿಟ್ಟಲ್ಲಿ ಚುನಾವಣೆ ಕಾಲಕ್ಕೆ ಯಾವುದಾದರು ಕೆಟ್ಟ ಪರಿಣಾಮ ಬೀರಬಹುದೆಂದು ಮುಂಜಾಗೃತ ಕ್ರಮವಾಗಿ ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.

0 comments:

 
Will Smith Visitors
Since 01/02/2008