Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, June 30, 2016

Press Note

: : ಪತ್ರಿಕಾ ಪ್ರಕಟಣೆ : :
ಕೊಪ್ಪಳ ಜಿಲ್ಲೆಯ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಶ್ರೀರಾಮನಗರದಲ್ಲಿ ಇಬ್ಬರು ವ್ಯಕ್ತಿಗಳು ಖೋಟಾ ನೋಟು ಚಲಾವಣೆ ಮಾಹಿತಿ ಅನ್ವಯ ಮಾನ್ಯ ಡಾ: ಕೆ. ತ್ಯಾಗರಾಜನ್, ಐಪಿಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ, ಹಾಗೂ ಮಾನ್ಯ ಎಸ್.ಎಂ. ಸಂದಿಗವಾಡ, ಡಿ.ಎಸ್.ಪಿ. ಗಂಗಾವತಿ ಉಪ ವಿಭಾಗ, ರವರ ಮಾರ್ಗದರ್ಶನದಲ್ಲಿ ಶ್ರೀ ಪ್ರಭಾಕರ ಎಸ್. ಧರ್ಮಟ್ಟಿ, ಸಿಪಿಐ ಗಂಗಾವತಿ ಗ್ರಾಮೀಣ ವೃತ್ತ ಹಾಗೂ ಶ್ರೀ ಪ್ರಕಾಶ ಎಲ್. ಮಾಳಿ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಶ್ರೀ ಖಾಜಾಸಾಬ ದಫೆದಾರ ಪಿಸಿ 358, ಶ್ರೀ ಆನಂದ ಪಿಸಿ 429, ಶ್ರೀ ಗ್ಯಾನಪ್ಪ ಕುರಿ ಪಿಸಿ 131, ಶ್ರೀ ಶಿವಪುತ್ರಪ್ಪ ಕಿನ್ನಾಳ ಪಿಸಿ 38, ಹಾಗೂ ಶ್ರೀ ಕನಕಪ್ಪ ಎಪಿಸಿ 77, ಶ್ರೀ ದುರ್ಗಾಪ್ರಸಾದ ಎ.ಪಿ.ಸಿ. 166 ಗಣಕಯಂತ್ರ ವಿಭಾಗ ಕೊಪ್ಪಳ ಇವರುಗಳು ನಿನ್ನೆ ದಿನಾಂಕ: 29-06-2016 ರಂದು ಮಧ್ಯಾಹ್ನ 1:30 ಗಂಟೆಗೆ ಶ್ರೀರಾಮನಗರದಲ್ಲಿ ಖೋಟಾ ನೋಟು ಚಲಾವಣೆಯಲ್ಲಿ ತೊಡಗಿದಂತಹ ಝಾರ್ಖಂಡ ಮೂಲದ ವ್ಯಕ್ತಿಗಳಾದ 1] ಮಹ್ಮದ್ ಸೈದುಲ್ ಶೇಖ್ ತಂದೆ ಮಕ್ಬುಲ್ ಶೇಖ್, ವಯಸ್ಸು 24 ವರ್ಷ, ಜಾತಿ: ಮುಸ್ಲೀಂ : ಮಾವಿನ ಹಣ್ಣುಗಳನ್ನು ಪ್ಯಾಕಿಂಗ್ ಮಾಡುವ ಕೆಲಸ ಸಾ: ಬೆಂಗಡುಬ್ಬಿ, ರಾಜಮಲ್ ಪಿ.ಎಸ್. ಜಿಲ್ಲಾ: ಸಾಹೇಬ ಗಂಜ್, ರಾಜ್ಯ: ಝಾರ್ಕಂಡ್ 2] ಮುಸ್ತಫ ಶೇಖ @ ಪಿಂಟು ತಂದೆ ಮಹ್ಮದ್ ಬರಕತ ಅಲಿ ವಯಸ್ಸು: 24 ವರ್ಷ ಜಾತಿ: ಮುಸ್ಲಿಂ : ಮೊಬೈಲ್ ರಿಪೇರಿ, ಸಾ: ಕಟ್ಟಿಟೂಲ್ ಪೋಸ್ಟ್. ಪಲಾಸ ಗಚ್ಚೆ ರಾಧಾನಗರ ಪಿ.ಎಸ್. ಜಿಲ್ಲೆ: ಸಾಹೇಬ ಗಂಜ, ಝಾರ್ಖಂಡ ರವರುಗಳನ್ನು ವಶಕ್ಕೆ ಪಡೆದುಕೊಂಡು ಶ್ರೀರಾಮನಗರದಲ್ಲಿ ಚಲಾವಣೆ ಮಾಡುತ್ತಿದ್ದ ಒಂದು ಸಾವಿರ ಮುಖ ಬೆಲೆಯ 90 ಸಾವಿರ ಖೋಟಾ ನೋಟುಗಳನ್ನು ಹಾಗೂ ಹೊಸಪೇಟೆಯ ರಾಣಿಪೇಟೆಯಲ್ಲಿರುವ ಬಾಡಿಗೆ ಮನೆಯಲ್ಲಿ ಒಂದು ಸಾವಿರ ರೂಪಾಯಿ ಮುಖ ಬೆಲೆಯ 5 ಲಕ್ಷ ರೂಪಾಯಿ ಖೋಟಾ ನೋಟುಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಆಪಾಧಿತರನ್ನು ಈ ಖೋಟಾನೋಟುಗಳ ಮೂಲದ ಬಗ್ಗೆ ವಿಚಾರಿಸಿದಾಗ ಅವರು ಪಶ್ಚಿಮ ಬಂಗಾಲದ ಮಾಲ್ದಾ ಜಿಲ್ಲೆಯಿಂದ ಬಂದಿರುವದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 184/2016 ಕಲಂ: 489(ಬಿ)(ಸಿ) ರೆಡ್ ವಿತ್ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಆಪಾದಿತರನ್ನು ಇನ್ನೂ ಹೆಚ್ಚಿನ ತನಿಖೆಗೆ ಒಳಪಡಿಸಬೇಕಾಗಿದ್ದು, ತನಿಖೆಯು ಮುಂದುವರೆದಿರುತ್ತದೆ.
        ಈ ಬಗ್ಗೆ ಮಾನ್ಯ ಡಾ: ಕೆ. ತ್ಯಾಗರಾಜನ್, ಐಪಿಎಸ್. ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ದಾಳಿಯಲ್ಲಿ ಶ್ರಮಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಶ್ಲಾಘನೆ ಮಾಡಿರುತ್ತಾರೆ.

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 184/2016 ಕಲಂ: 489(ಬಿ)(ಸಿ) ಐ.ಪಿ.ಸಿ:.
ದಿನಾಂಕ:- 29-06-2016 ರಂದು ಮಧ್ಯಾಹ್ನ 1:00 ಗಂಟೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರದ ಟೈಮ್ ಮ್ಯೂಜಿಕ್ ಸೆಂಟರನ ಮಾಲೀಕರಾದ ವಿಷ್ಣುಕುಮಾರ ಎಂಬುವರು ಕರೆ ಮಾಡಿ ತಮ್ಮ ಅಂಗಡಿಗೆ ಉತ್ತರ ಭಾರತದ ಒಬ್ಬ ವ್ಯಕ್ತಿಯು ಬಂದು ಏರ್ ಫೋನನ್ನು ಖರೀದಿಸಲು ಒಂದು ಸಾವಿರ ರೂಪಾಯಿಯ ನೋಟನ್ನು ಕೊಟ್ಟಿದ್ದು, ಆದರೆ ನೋಟು ಖೋಟಾ ನೋಟು ಇರಬಹುದೆಂದು ಫೋನ್ ಮೂಲಕ ತಿಳಿಸಿದ್ದು  ಕೂಡಲೇ ಶ್ರೀ ಪ್ರಕಾಶ. ಎಲ್. ಮಾಳಿ, ಪಿ.ಎಸ್..  ಶ್ರೀರಾಮನಗರದ ಟೈಮ್ ಮ್ಯೂಜಿಕ್ ಸೆಂಟರಗೆ ಭೇಟಿ ನೀಡಿ ಸ್ಥಳದಲ್ಲಿ ಕೂಡ್ರಿಸಿದ್ದಂತಹ ವ್ಯಕ್ತಿಯನ್ನು ವಿಚಾರಿಸಲು ಅವನು ತನ್ನ ಹೆಸರು ಮಹ್ಮದ್ ಸೈದುಲ್ ಶೇಖ್ ತಂದೆ ಮಕ್ಬುಲ್ ಶೇಖ್, ವಯಸ್ಸು 24 ವರ್ಷ, ಜಾತಿ: ಮುಸ್ಲೀಂ : ಮಾವಿನ ಹಣ್ಣುಗಳನ್ನು ಪ್ಯಾಕಿಂಗ್ ಮಾಡುವ ಕೆಲಸ ಸಾ: ಬೆಂಗಡುಬ್ಬಿ, ರಾಜಮಲ್ ಪಿ.ಎಸ್. ಜಿಲ್ಲಾ: ಸಾಹೇಬ ಗಂಜ್, ರಾಜ್ಯ: ಝಾರ್ಕಂಡ್ ಅಂತಾ ತಿಳಿಸಿದ್ದು, ಅವನನ್ನು ಪರಿಶೀಲಿಸಲು ಅವನ ಹತ್ತಿರ ಒಂದು ಸಾವಿರ ರೂಪಾಯಿ ಮುಖ ಬೆಲೆಯ 5 ನೋಟುಗಳು ಇದ್ದು, ಅವುಗಳ ನಂಬರ್:  4FH 887680,  4FH 887681, 4FH 890515, 4FH 890516, 4FH 887679 ಅಂತಾ ಇದ್ದು, ನೋಟುಗಳು ಖೋಟಾ ನೋಟು ಹೌದೇ ? ಅಥವಾ ಅಲ್ಲವೇ ? ಎಂಬ ಬಗ್ಗೆ   ಶ್ರೀರಾಮನಗರದ ಸಿಂಡಿಕೇಟ್ ಬ್ಯಾಂಕಿನಲ್ಲಿ ಪರಿಶೀಲನೆ ಮಾಡಿಸಿ ಈ 5 ನೋಟುಗಳೂ ಖೋಟಾ ನೋಟು ಇವೆ ಅಂತಾ ಬ್ಯಾಂಕಿನವರು ದೃಢೀಕರಿಸಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 127/2016 ಕಲಂ: 78(3) Karnataka Police Act.
ದಿನಾಂಕ 29-06-2016 ರಂದು 19-15 ಗಂಟೆಯ ಸುಮಾರಿಗೆ ಆರೋಪಿತನಾದ ಸಿದ್ದಪ್ಪ ತಂದೆ ಕುಪ್ಪಣ್ಣ ವಗ್ಗಾ ವಯಸ್ಸು 48 ವರ್ಷ ಜಾ:ಪದ್ಮಸಾಲಿ  ಉ:ಸ್ಕೂಲ್ ಬ್ಯಾಗ್ ವ್ಯಾಪಾರ ಸಾ: ಹುಲಿಗೆಮ್ಮ ದೇವಸ್ಥಾನದ ಹತ್ತಿರ ಲಕ್ಷ್ಮೀಕ್ಯಾಂಪ್,  ಕೃಷ್ಣದೇವರಾಯ ವೃತ್ತದ ಹತ್ತಿರ ರುವ ಪಾರ್ಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವಮೇಲೆ ಶ್ರೀ ರಾಮಪ್ಪ ನಾಯ್ಕ್ ಪಿ.ಎಸ್.ಐ.  ಪಿ.ಎಸ್.ಐ. (ಅ.ವಿ) ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ [01] ನಗದು ಹಣ ರೂ.545-00 [02] ಒಂದು ಸ್ಯಾಮಸಂಗ್ ಕಂಪನಿಯ ಮೊಬೈಲ್ ಅಂ.ಕಿ.ರೂ.100-00. [03] ಒಂದು ಮಟ್ಕಾ ನಂಬರ ಬರೆದ ಪಟ್ಟಿ, (04) ಒಂದು ಬಾಲ್ ಪೆನ್ನು ಜಪ್ತಿ ಪಡಿಸಿದ್ದು ಇರುತ್ತದೆ.  ಆರೋಪಿತನಿಂದ ಜಪ್ತಿ ಪಡಿಸಿದ ಮುದ್ದೆಮಾಲನ್ನು ಪಂಚರ ಸಮಕ್ಷಮ 7-15 ಪಿ.ಎಂ. ದಿಂದ 8-00 ಪಿ.ಎಂ. ದ ವರೆಗೆ ಜಪ್ತಿ ಪಡಿಸಿಕೊಂಡು ಪ್ರತ್ಯೇಕವಾಗಿ ಪಂಚನಾಮೆಯನ್ನು ಬರೆದು ಕೊಂಡಿರುತ್ತಾರೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 135/2016 ಕಲಂ: 78(3) Karnataka Police Act.

ದಿನಾಂಕ 29-06-2016 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ  ಬಸವಣ್ಣಕ್ಯಾಂಪ್ ಉಣ್ಣಿ ಬಸವೇಶ್ವರ ಗುಡಿ  ಹಿಂದೆ  ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟ ತೊಡಗಿದ್ದ ಆರೋಪಿ ನಂ1) ಲಕ್ಷ್ಮೀ ನಾಯರಾಯಣ ತಂದಿ ಶ್ರೀನಿವಾಸ ರಾವ್ ಸಾ. ಬಸವಣ್ಣಕ್ಯಾಂಪ್ ಈತನ ಮೇಲೆ ಶ್ರೀ. ನಿಂಗಪ್ಪ ಪಿ.ಎಸ್.ಐ ಮತ್ತು ಸಿಬ್ಬಂದಿವರು ಪಂಚರ ಸಮಕ್ಷದಲ್ಲಿ  ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನಿಗೆ ಹಿಡಿದುಕೊಂಡು  ಆತನಿಂದ ರೂ. 1385=00 ಗಳನ್ನು ಜಪ್ತ ಮಾಡಿಕೊಂಡು  ಈತನು ಮಟ್ಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 2 ಬಸವಂತಪ್ಪ ಕಬ್ಬೆರ ಸಾ. ಜಂಬುನಾಥನ ಹಳ್ಳಿ ತಾ. ಸಿಂಧನೂರು ಈತನಿಗೆ ಕೊಡುವುದಾಗಿ ಒಪ್ಪಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ.

Wednesday, June 29, 2016

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 182/2016 ಕಲಂ: 87 Karnataka Plice Act:.
ಪಿ.ಎಸ್.ಐ ಕುಷ್ಠಗಿ ಪೊಲೀಸ ಠಾಣೆರವರು ಕುಷ್ಟಗಿ ಠಾಣಾ ವ್ಯಾಪ್ತಿಯ ಹಿರೇಬನ್ನಿಗೋಳದ ಆಶ್ರಯ ಯೋಜನೆ ಕಾಲೋನಿ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಎ.ಎಸ್.(ಎಸ್), ಹೆಚ್.ಸಿ63, ಪಿ.ಸಿ-109,161, 116,430,117,393,24 ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.-37-ಜಿ-292 ನೇದ್ದರಲ್ಲಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 1] ರಮೇಶ ತಂದೆ ಪವಾಡೆಪ್ಪ ಅರಳಿಕಟ್ಟಿ ವಯಾ: 32 ವರ್ಷ ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಹಿರೇಬನ್ನಿಗೋಳ 2] ಕಲ್ಲಪ್ಪ ತಂದೆ ನಿಂಗಪ್ಪ ಚರ್ಲಿ ವಯಾ: 55 ವರ್ಷ ಜಾತಿ: ಲಿಂಗಾಯತ ಉ:ಒಕ್ಕಲುತನ ಸಾ: ಹಿರೇಬನ್ನಿಗೋಳ 3] ಶರಣಪ್ಪ ತಂದೆ ಶಿವಮೂರ್ತೆಪ್ಪ ದುಗ್ಗಲರ್ ವಯಾ: 36 ವರ್ಷ ಜಾತಿ: ಲಿಂಗಾಯತ ಉ: ಡ್ರೈವರ ಸಾ: ಹಿರೇಬನ್ನಿಗೋಳ 4] ಬಸವರಾಜ ತಂದೆ ಪ್ರಭುಲಿಂಗಪ್ಪ ನಾಲತವಾಡ್  ವಯಾ: 46 ವರ್ಷ  ಜಾ: ಲಿಂಗಾಯತ, : ಒಕ್ಕಲುತನ ಸಾ: ಹಿರೇಬನ್ನಿಗೋಳ 5]  ದೇವಪ್ಪ ತಂದೆ ಬಸವರಾಜ ಗೋಣಿ ವಯಾ: 31 ವರ್ಷ ಜಾತಿ: ಉಪ್ಪಾರ, : ಗೌಂಡಿಕೆಲಸ ಸಾ: ಹಿರೇಬನ್ನಿಗೋಳ  6] ಗೌಡಪ್ಪ ತಂದೆ ಶರಣಪ್ಪ ಮರಿಸಿದ್ದಣ್ಣನ್ನವರ ವಯ: 31 ವರ್ಷ, ಜಾ: ಲಿಂಗಾಯತ, : ಡ್ರೈವರ, ಸಾ: ಹಿರೇಬನ್ನಿಗೋಳ 7] ಬಸಪ್ಪ ತಂದೆ ಬಸಪ್ಪ ಬಂಡಿ ವಯ: 65 ವರ್ಷ,ಜಾ: ಲಿಂಗಾಯತ, : ಒಕ್ಕಲುತನ ಸಾ: ಹಿರೇಬನ್ನಿಗೋಳ 8] ಈಶಪ್ಪ ತಂದೆ ಕರಿಬಸಪ್ಪ ತುಪ್ಪಾದ ವಯ: 62 ವರ್ಷ, ಜಾ: ಲಿಂಗಾಯತ, : ಒಕ್ಕಲುತನ ಸಾ: ಹಿರೇಬನ್ನಿಗೋಳ 9] ಸಂಗಪ್ಪ ತಂದೆ ಭೀಮಪ್ಪ ಮಲ್ಲಾಪೂರ ವಯ: 32 ವರ್ಷ, ಜಾ: ಲಿಂಗಾಯತ, : ಒಕ್ಕಲುತನ ಸಾ: ಹಿರೇಬನ್ನಿಗೋಳ 9 ಜನ ಆರೋಪಿತರು ಸಿಕ್ಕಿದ್ದು ಇರುತ್ತದೆ. ಸಿಕ್ಕ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 7800=00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆಯ ಬರಕಾ ಇವುಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 183/2016 ಕಲಂ: 78(3) Karnataka Plice Act & 420 ಐ.ಪಿ.ಸಿ.
ಪಿ.ಎಸ್.ಐ ಕುಷ್ಟಗಿ ಪೊಲೀಸ್ ಠಾಣೆ ರವರು ಗೋತಗಿ ಗ್ರಾಮದ ಬಸವಣ್ಣ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರಾದ ಹೆಚ್.ಸಿ-63,ಪಿ.ಸಿ-117,109 ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ ಎಲ್ಲರೂ ಹೋಗಿ ಗೋತಗಿ ಗ್ರಾಮದ ಬಸವಣ್ಣ ಗುಡಿಯ ಹತ್ತಿರ ದೂರದಲ್ಲಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು ವಿಚಾರಿಸಿದಾಗ ಹೆಸರು ಯಮನಪ್ಪ ತಂದೆ ಹನುಮಪ್ಪ ಇಲಕಲ್  ವಯ: 36 ವರ್ಷ, ಜಾ: ವಾಲ್ಮೀಕಿ  : ಪಾನಶಾಪ  ಸಾ: ಗೋತಗಿ ತಾ: ಕುಷ್ಟಗಿ ತಿಳಿಸಿದ್ದು ಸದರಿಯವನು ಜನರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಮೋಸ ಮಾಡುತ್ತಿದ್ದು. ಮತ್ತು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 550-00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಪಟ್ಟಿ  ಮತ್ತು ಲಾವಾ ಕಂಪನಿಯ ಮೋಬೈಲ್ ಅಂ:ಕಿ:300/- ರೂ:ಗಳು ಇವುಗಳನ್ನು ಜಪ್ತ ಪಡಿಸಿದ್ದು. ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಶೀನು ರಂಗ್ರೇಜಿ  ಸಾ: ಗಜೇಂದ್ರಗಡಾ ನೇದ್ದನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ನಂತರ ಆರೋಪಿತತನ್ನು ಮುದ್ದೆಮಾಲುಗಳನ್ನು, ಪಂಚನಾಮೆ ಮತ್ತು ವರದಿಯೊಂದಿಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 182/2016 ಕಲಂ: 279, 338, ಐ.ಪಿ.ಸಿ.  
ದಿನಾಂಕ:- 28-06-2016 ರಂದು ರಾತ್ರಿ 8:00 ಗಂಟೆಗೆ ಫಿರ್ಯಾದಿದಾರರಾದ ಶರಣೇಗೌಡ ತಂದೆ ವಿರುಪಾಕ್ಷಗೌಡ ಮೂಲಿಮನಿ, ವಯಸ್ಸು 33 ವರ್ಷ, ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: 1ನೇ ವಾರ್ಡ-ಹೇರೂರು. ತಾ: ಗಂಗಾವತಿ. ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ದಿನಾಂಕ:- 24-06-2016 ರಂದು ಸಂಜೆ 5:15 ಗಂಟೆಯ ಸುಮಾರಿಗೆ ನನ್ನ ತಂಗಿಯ ಮಗಳಾದ ರಾಜಲಕ್ಷ್ಮೀ ತಂದೆ ವೆಂಕಟೇಶಗೌಡ, ವಯಸ್ಸು 13 ವರ್ಷ, 8ನೇ ತರಗತಿ ವಿದ್ಯಾರ್ಥಿನಿ ಸಾ: ಹೇರೂರು ಇವಳು ಗಂಗಾವತಿಯಿಂದ ಶಾಲೆಯಿಂದ ಆಟೋ ರಿಕ್ಷಾದಲ್ಲಿ ಬಂದು ಹೇರೂರಿನಲ್ಲಿ ಇಳಿದು ನಂತರ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ಈಶ್ವರ ಗುಡಿಯ ಹತ್ತಿರ ಗಂಗಾವತಿ-ಕನಕಗಿರಿ ಮುಖ್ಯ ರಸ್ತೆಯಲ್ಲಿ ಅವಳ ಹಿಂಭಾಗದಿಂದ ಅಂದರೆ ಗಂಗಾವತಿ ಕಡೆಯಿಂದ ಅಮರಯ್ಯ ತಂದೆ ಈಶ್ವರಯ್ಯ, ವಯಸ್ಸು 40 ವರ್ಷ ಸಾ: ಹೇರೂರು ಈತನು  ಹಿರೋ  ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂಬರ್: ಕೆ.ಎ-37/ ಇ.ಎ-2424 ನೇದ್ದನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ರಾಜಲಕ್ಷ್ಮೀಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು.  ಇದರಿಂದ ಅವಳಿಗೆ ಬಲ ಮೊಣಕೈಗೆ ಮತ್ತು ಬಲ ಮೊಣಕಾಲಿಗೆ ತೀವ್ರ ಗಾಯವಾಗಿದ್ದು, ನಂತರ ಅವಳನ್ನು ಗಂಗಾವತಿಯ ಸಿ.ಬಿ. ಚಿನಿವಾಲ  ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದು, ನಂತರ ವೈದ್ಯರು ಅವಳನ್ನು ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿಗೆ ಕರೆದುಕೊಂಡು ಹೋಗಲು  ತಿಳಿಸಿದ್ದರಿಂದ ನಾವು ಮರುದಿವಸ ಬೆಳಿಗ್ಗೆ ಅವಳನ್ನು ಬಳ್ಳಾರಿಯ ಆರ್.ಕೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದು, ನಾನು ಈ ದಿವಸ ವಾಪಸ್ ಬಳ್ಳಾರಿಯಿಂದ ಬಂದಿದ್ದು, ಕಾರಣ ತಡವಾಗಿ ದೂರು ನೀಡಿರುತ್ತೇನೆ. ಕಾರಣ  ಈ ಅಪಘಾತವನ್ನು ಮಾಡಿದಂತಹ ಮೋಟಾರ ಸೈಕಲ್ ಚಾಲಕ ಅಮರಯ್ಯನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ." ಅಂತಾ ನೀಡಿದ ಹೇಳಿಕೆ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 64/2016 ಕಲಂ: 279, 338 ಜೊತೆಗೆ ಕಲಂ: 304 (ಎ) .ಪಿ.ಸಿ.

ದಿನಾಂಕ: 28-06-2016  ರಂದು ಸಾಯಂಕಾಲ 5-30 ಗಂಟೆಗೆ ಯಲಬುರ್ಗಾ ಸರ್ಕಾರಿ ಆಸ್ಪತ್ರೆಯಿಂದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಒಬ್ಬ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿರುತ್ತಾನೆ ಅಂತಾ ಎಮ್.ಎಲ್.ಸಿ. ಮಾಹಿತಿ ಬಂದಿದ್ದು, ಸದ್ರಿ ಎಮ್.ಎಲ್.ಸಿ. ವಿಚಾರಣೆ ಕುರಿತು ಆಸ್ಪತ್ರೆಗೆ ಬೇಟಿ ನೀಡಿ ವಿಚಾರಿಸಲಾಗಿ ಗಾಯಾಳು ನಿಂಗಪ್ಪನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಅಲ್ಲಿಯೇ ಹಾಜರಿದ್ದ ಗಾಯಾಳುವಿನ ಸಂಬಂದಿಕನಾದ ಪ್ರಕಾಶ ತಂದೆ ಶಿವಪ್ಪ ಉಗ್ರಾಂಣಿ ಸಾ: ಯಲಬುರ್ಗಾ ಈತನ ನುಡಿ ಪಿರ್ಯಾದಿ ಹೇಳಿಕೆಯನ್ನು ಸಾಯಂಕಾಲ 6-30 ಗಂಟೆಗೆ ಪಡೆದುಕೊಂಡು ವಾಪಾಸ್ ಠಾಣೆಗೆ ಸಾಯಂಕಾಲ 6-40 ಗಂಟೆಗೆ ಬಂದಿದ್ದು, ಸದ್ರಿ ಪಿರ್ಯಾದಿ ಪ್ರಕಾಶ ಈತನು ನೀಡಿದ ಪಿರ್ಯಾದಿಯ ಸಾರಾಂಶ ಏನಂದರೆ, ನಮ್ಮ ಸಂಬಂದಿಕನಾದ ನಿಂಗಪ್ಪ ತಂದೆ ಚಂದ್ರಶೇಖರ ಕಟ್ಟಿಮನಿ ಸಾ: ಯಲಬುರ್ಗಾ ಈತನದು ಸೂಪರ್ ಎ.ಸಿ.ಈ. ಗೂಡ್ಸ ವಾಹನ ಸಂ. ಕೆಎ-37/ಎ-3236 ಇರುತ್ತದೆ. ದಿನಾಂಕ: 28-06-2016 ರಂದು ಸಾಯಂಕಾಲ 5-05 ಗಂಟೆಯ ಸುಮಾರಿಗೆ ನನ್ನ ಪರಿಚಯಸ್ಥನಾದ ರೇಣುಕಪ್ಪ ತಂದೆ ಯಲ್ಲಪ್ಪ ಕಲಾಲ ಈತನು ನನಗೆ ಫೋನ ಮಾಡಿ ತಿಳಿಸಿದ. ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಿತ್ತು ನಮ್ಮ ಸಂಬಂದಿ ನಿಂಗಪ್ಪ ತಂದೆ ಚಂದ್ರಶೇಖರ ಕಟ್ಟಿಮನಿ ಸಾ: ಯಲಬುರ್ಗಾ ಈತನಿಗೆ ಮಾತನಾಡಿಸಲು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ.  ಸದ್ರಿ ನಿಂಗಪ್ಪನ ತಲೆಯ ಎಡ ಭಾಗಕ್ಕೆ, ಎಡ ಕೆಣ್ಣೆಯ ಹತ್ತಿರ ರಕ್ತಗಾಯವಾಗಿ ಎಡ ಕಿವಿಯಿಂದ ರಕ್ತ ಬರುತ್ತಿತ್ತು. ಎಡಗೈ ರಟ್ಟೆಗೆ ಭಾರಿ ಪಟ್ಟು ಬಿದ್ದು, ಎಡಗೈಗೆ ಅಲ್ಲಲ್ಲಿ ತೆರಚಿದ ಗಾಯಗಳಾಗಿದ್ದವು.  ನಂತರ ನಿಂಗಪ್ಪನಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ನಾನು ಮತ್ತು ರೇಣಕಪ್ಪ ಕಲಾಲ ಇಬ್ಬರೂ ಹಾಕಿಕೊಂಡು ಬಂದು ಯಲಬುರ್ಗಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ಸದ್ರಿ ನಿಂಗಪ್ಪ ತಂದೆ ಚಂದ್ರಶೇಖರ ಕಟ್ಟಿಮನಿ ಸಾ: ಯಲಬುರ್ಗಾ ಈತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶ ಮೇಲಿಂದ ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ: 64/2016 ಕಲಂ: 279, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.ಸದರ ಪ್ರಕರಣದಲ್ಲಿ ಭಾರಿ ಗಾಯಗೊಂಡಿದ್ದ ನಿಂಗಪ್ಪನಿಗೆ ಯಲಬುರ್ಗಾ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಇರುತ್ತದೆ. ನಂತರ ರಾತ್ರಿ 9 ಗಂಟೆಗೆ ಪಿ.ಎಸ್.ಐ. ಗದಗ ಗ್ರಾಮೀಣ ಪೊಲೀಸ್ ಠಾಣೆಯಿಂದ ಒಂದು ಎಮ್.ಎಲ್.ಸಿ. ಯಾದಿ ಸ್ವೀಕೃತಗೊಂಡಿದ್ದು ಅದರಲ್ಲಿ ಗಾಯಗೊಂಡ ನಿಂಗಪ್ಪ ತಂದೆ ಚಂದ್ರಶೇಖರ ಕಟ್ಟಿಮನಿ ಸಾ: ಯಲಬುರ್ಗಾ ಈತನಿಗೆ ಚಿಕಿತ್ಸೆಗಾಗಿ ಗದಗ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬರುವ ಕಾಲಕ್ಕೆ ರಸ್ತೆ ಮಾರ್ಗದ ಮಧ್ಯದಲ್ಲಿ ಮೃತ ಪಟ್ಟಿದ್ದು ಇರುತ್ತದೆ. ಸದರಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ. 

 
Will Smith Visitors
Since 01/02/2008