: : ಪತ್ರಿಕಾ ಪ್ರಕಟಣೆ : :
ಕೊಪ್ಪಳ ಜಿಲ್ಲೆಯ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಶ್ರೀರಾಮನಗರದಲ್ಲಿ
ಇಬ್ಬರು ವ್ಯಕ್ತಿಗಳು ಖೋಟಾ ನೋಟು ಚಲಾವಣೆ ಮಾಹಿತಿ ಅನ್ವಯ ಮಾನ್ಯ ಡಾ: ಕೆ. ತ್ಯಾಗರಾಜನ್, ಐಪಿಎಸ್,
ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ, ಹಾಗೂ ಮಾನ್ಯ ಎಸ್.ಎಂ. ಸಂದಿಗವಾಡ, ಡಿ.ಎಸ್.ಪಿ. ಗಂಗಾವತಿ
ಉಪ ವಿಭಾಗ, ರವರ ಮಾರ್ಗದರ್ಶನದಲ್ಲಿ ಶ್ರೀ ಪ್ರಭಾಕರ ಎಸ್. ಧರ್ಮಟ್ಟಿ, ಸಿಪಿಐ ಗಂಗಾವತಿ ಗ್ರಾಮೀಣ
ವೃತ್ತ ಹಾಗೂ ಶ್ರೀ ಪ್ರಕಾಶ ಎಲ್. ಮಾಳಿ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ
ಸಿಬ್ಬಂದಿಯವರಾದ ಶ್ರೀ ಖಾಜಾಸಾಬ ದಫೆದಾರ ಪಿಸಿ 358, ಶ್ರೀ ಆನಂದ ಪಿಸಿ 429, ಶ್ರೀ ಗ್ಯಾನಪ್ಪ ಕುರಿ
ಪಿಸಿ 131, ಶ್ರೀ ಶಿವಪುತ್ರಪ್ಪ ಕಿನ್ನಾಳ ಪಿಸಿ 38, ಹಾಗೂ ಶ್ರೀ ಕನಕಪ್ಪ ಎಪಿಸಿ 77, ಶ್ರೀ ದುರ್ಗಾಪ್ರಸಾದ
ಎ.ಪಿ.ಸಿ. 166 ಗಣಕಯಂತ್ರ ವಿಭಾಗ ಕೊಪ್ಪಳ ಇವರುಗಳು ನಿನ್ನೆ ದಿನಾಂಕ: 29-06-2016 ರಂದು ಮಧ್ಯಾಹ್ನ
1:30 ಗಂಟೆಗೆ ಶ್ರೀರಾಮನಗರದಲ್ಲಿ ಖೋಟಾ ನೋಟು ಚಲಾವಣೆಯಲ್ಲಿ ತೊಡಗಿದಂತಹ ಝಾರ್ಖಂಡ ಮೂಲದ ವ್ಯಕ್ತಿಗಳಾದ
1] ಮಹ್ಮದ್ ಸೈದುಲ್ ಶೇಖ್ ತಂದೆ ಮಕ್ಬುಲ್ ಶೇಖ್, ವಯಸ್ಸು 24 ವರ್ಷ, ಜಾತಿ: ಮುಸ್ಲೀಂ ಉ: ಮಾವಿನ ಹಣ್ಣುಗಳನ್ನು ಪ್ಯಾಕಿಂಗ್ ಮಾಡುವ ಕೆಲಸ ಸಾ: ಬೆಂಗಡುಬ್ಬಿ, ರಾಜಮಲ್ ಪಿ.ಎಸ್. ಜಿಲ್ಲಾ: ಸಾಹೇಬ ಗಂಜ್, ರಾಜ್ಯ: ಝಾರ್ಕಂಡ್ 2] ಮುಸ್ತಫ ಶೇಖ @ ಪಿಂಟು ತಂದೆ ಮಹ್ಮದ್ ಬರಕತ ಅಲಿ ವಯಸ್ಸು: 24 ವರ್ಷ ಜಾತಿ: ಮುಸ್ಲಿಂ ಉ: ಮೊಬೈಲ್ ರಿಪೇರಿ, ಸಾ: ಕಟ್ಟಿಟೂಲ್ ಪೋಸ್ಟ್. ಪಲಾಸ ಗಚ್ಚೆ ರಾಧಾನಗರ ಪಿ.ಎಸ್. ಜಿಲ್ಲೆ: ಸಾಹೇಬ ಗಂಜ, ಝಾರ್ಖಂಡ ರವರುಗಳನ್ನು ವಶಕ್ಕೆ ಪಡೆದುಕೊಂಡು
ಶ್ರೀರಾಮನಗರದಲ್ಲಿ ಚಲಾವಣೆ ಮಾಡುತ್ತಿದ್ದ ಒಂದು ಸಾವಿರ ಮುಖ ಬೆಲೆಯ 90 ಸಾವಿರ ಖೋಟಾ ನೋಟುಗಳನ್ನು
ಹಾಗೂ ಹೊಸಪೇಟೆಯ ರಾಣಿಪೇಟೆಯಲ್ಲಿರುವ ಬಾಡಿಗೆ ಮನೆಯಲ್ಲಿ ಒಂದು ಸಾವಿರ ರೂಪಾಯಿ ಮುಖ ಬೆಲೆಯ 5 ಲಕ್ಷ
ರೂಪಾಯಿ ಖೋಟಾ ನೋಟುಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಆಪಾಧಿತರನ್ನು ಈ ಖೋಟಾನೋಟುಗಳ ಮೂಲದ
ಬಗ್ಗೆ ವಿಚಾರಿಸಿದಾಗ ಅವರು ಪಶ್ಚಿಮ ಬಂಗಾಲದ ಮಾಲ್ದಾ ಜಿಲ್ಲೆಯಿಂದ ಬಂದಿರುವದಾಗಿ ತಿಳಿಸಿರುತ್ತಾರೆ.
ಈ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 184/2016 ಕಲಂ: 489(ಬಿ)(ಸಿ) ರೆಡ್ ವಿತ್
34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಆಪಾದಿತರನ್ನು ಇನ್ನೂ ಹೆಚ್ಚಿನ ತನಿಖೆಗೆ
ಒಳಪಡಿಸಬೇಕಾಗಿದ್ದು, ತನಿಖೆಯು ಮುಂದುವರೆದಿರುತ್ತದೆ.
ಈ ಬಗ್ಗೆ ಮಾನ್ಯ ಡಾ: ಕೆ. ತ್ಯಾಗರಾಜನ್,
ಐಪಿಎಸ್. ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ದಾಳಿಯಲ್ಲಿ ಶ್ರಮಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ
ಶ್ಲಾಘನೆ ಮಾಡಿರುತ್ತಾರೆ.
0 comments:
Post a Comment