1]
ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 14/2017 ಕಲಂ 78(3)
Karnataka Police Act.
ದಿನಾಂಕ 06-02-2017 ರಂದು ಸಂಜೆ 7-30 ಗಂಟೆಯ ಸುಮಾರಿಗೆ ನಾಗಲಾಪೂರ ಗ್ರಾಮದ ಅಗಸಿ ಮುಂದೆ
ಸಮುದಾಯದ ಭವನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಫಿ ನಂ.1 ಮತ್ತು 2 ರವರು ಸಾರ್ವಜನಿಕರನ್ನು ಬರ
ಮಾಡಿಕೊಂಡು ಅವರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬನ್ನಿ ನಸೀಬದ ಜೂಜಾಟ ಅಂತಾ ಕೂಗುತ್ತಾ ಅವರಿಂದ
ಹಣ ಪಡೆದು ಅವರಿಗೆ ಓ.ಸಿ ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಶ್ರೀ ವೀರಾರೆಡ್ಡಿ ಪಿ.ಎಸ್.ಐ. ಕನಕಗಿರಿ ಠಾಣೆ ರವರು ಪಂಚರೊಂದಿಗೆ
ದಾಳಿ ಮಾಡಲು ಆರೋಪಿ ನಂ.1 ಮತ್ತು 2 ರವರಿಂದ 1 ಮಟಕಾ ಪಟ್ಟಿ, 1 ಬಾಲ್ ಪೆನ್ನು ಹಾಗೂ ನಗದು ಹಣ ರೂ.410/- ಗಳನ್ನು ಸಂಜೆ 7-30 ಗಂಟೆಯಿಂದ 8-30 ಗಂಟೆಯವರೆಗೆ ಲೈಟಿನ ಬೆಳಕಿನಲ್ಲಿ ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಮಟಕಾ
ಪಟ್ಟಿಯನ್ನು ಆರೋಫಿ ನಂ.3 ರವರಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
2]
ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 09/2017 ಕಲಂ 78(3)
Karnataka Police Act.
ದಿನಾಂಕ: 06-02-2017 ರಂದು ರಾತ್ರಿ 21:15 ಗಂಟೆಗೆ ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು
ಗಣಕೀಕೃತ ವರದಿ, ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ ಒಬ್ಬ ಆರೋಪಿಯನ್ನು ಹಾಜರಪಡಿಸಿದ್ದು,
ವರದಿಯಲ್ಲಿ ಕನ್ನಾಳ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ
ಅಧಿಕಾರಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ.2050-00, ಒಂದು ಬಾಲ್ ಪೆನ್
,ಒಂದು ಮಟಕಾ ಚೀಟಿ, ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತನಾದ ಹನಮಂತ ತಂದೆ ಕನಕಪ್ಪ ಹೊಸಗೇರಿ,
ಹಾಗೂ ಮಟಕಾ ಪಟ್ಟಿ ತೆಗೆದುಕೊಳ್ಳುವವನಾದ ಹನಮಂತ ಸಾ:ಹಾಗಲದಾಳ ತಾ:ಗಂಗಾವತಿ ಈತನ ವಿರುದ್ದ ಕಾನೂನು
ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
3]
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 29/2017 ಕಲಂ 143, 147, 447, 323, 504, 506 ರೆಡ್ ವಿತ್ 149 ಐ.ಪಿ.ಸಿ. ಮತ್ತು 3(1)(x)
S.C/S.T. P.A. Act 1989:.
ದಿನಾಂಕ:- 06-02-2017 ರಂದು ಸಂಜೆ 7:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಹನುಮೇಶ ತಂದೆ ದಿ: ರಾಮಲಿಂಗಪ್ಪ ಕನಕಗಿರಿ ರವರು, ದೂರನ್ನು ಹಾಜರಪಡಿಸಿದ್ದು, "ನಮಗೂ ಹಾಗೂ ನನ್ನ ದೊಡ್ಡಪ್ಪ ಕನಕಪ್ಪ ಇವರಿಗೂ ಜಮೀನಿನ ವಿಭಾಗದ ವಿಚಾರದಲ್ಲಿ ಸಿವಿಲ್ ವ್ಯಾಜ್ಯ ನಡೆದಿರುತ್ತದೆ. ಆದರೆ ಇಂದು ದಿನಾಂಕ:- 06-02-2017 ರಂದು ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಾಯಿಯಾದ ಯಂಕಮ್ಮ ಗಂಡ ದಿ: ರಾಮಲಿಂಗಪ್ಪ-75 ವರ್ಷ ಇಬ್ಬರೂ ಕೇಸರಹಟ್ಟಿ ಗ್ರಾಮ ಸೀಮಾದ ನಮ್ಮ ಜಮೀನು ಸರ್ವೆ ನಂ: 80/ಆ ರಲ್ಲಿ ಇದ್ದಾಗ ಈ ಜಮೀನುಗಳಿಗೆ ಸಂಬಂಧವಿರದ ವ್ಯಕ್ತಿಗಳಾದ (1) ಬಸವರಾಜ ತಂದೆ ಪಂಪಾಪತೆಪ್ಪ ಹಳ್ಳಿ-35 ವರ್ಷ (2) ವಿರುಪಣ್ಣ ತಂದೆ ಪಂಪಾಪತೆಪ್ಪ ಹಳ್ಳಿ-40 ವರ್ಷ (3) ಮಂಜುನಾಥ ತಂದೆ ಪಂಪಾಪತೆಪ್ಪ ಹಳ್ಳಿ-32 ವರ್ಷ (4) ನಿರುಪಾದಿಗೌಡ ತಂದೆ ಬಸವನಗೌಡ ಕನ್ನಾಳ-33 ವರ್ಷ (5) ಚಂದ್ರಶೇಖರ ತಂದೆ ರುದ್ರಪ್ಪ ಗುಡೂರ-30 ವರ್ಷ (6) ಹೆಚ್.ಎಲ್. ಬಸವರಾಜ ತಂದೆ ಲಿಂಗರಡ್ಡೆಪ್ಪ ಹಳ್ಳಿ-45 ವರ್ಷ (7) ವಿರುಪಣ್ಣ @ ವಿ.ಪಿ. ಸಿಂಗ್ ತಂದೆ ಬಸಪ್ಪ ಹಳ್ಳಿ-48 ವರ್ಷ (8) ರೆಡ್ಡಿ ತಂದೆ ಅನ್ನನಗೌಡ ಹಳ್ಳಿ-48 ವರ್ಷ ಎಲ್ಲರೂ ಜಾತಿ: ಲಿಂಗಾಯತ ಸಾ: ಕೇಸರಹಟ್ಟಿ (9) ವಿಶ್ವನಾಥ ತಂದೆ ಮಲ್ಲಯ್ಯ ಜಿನ್ನದ,-30 ವರ್ಷ (10) ಶಿವಯ್ಯ ತಂದೆ ಆದಯ್ಯಸ್ವಾಮಿ-30 ವರ್ಷ ಇಬ್ಬರೂ ಜಾತಿ: ಜಂಗಮರು ಸಾ: ಕೇಸರಹಟ್ಟಿ ಇವರುಗಳು ಅಕ್ರಮಕೂಟ ರಚಿಸಿಕೊಂಡು ಸಮಾನ ಉದ್ದೇಶದಿಂದ ಕೂಡಿಕೊಂಡು ಜೆ.ಸಿ.ಬಿ.ಯನ್ನು ತೆಗೆದುಕೊಂಡು ನಮ್ಮ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಂದು ನಮ್ಮ ಜಮೀನಿನಲ್ಲಿಯ ಜಾಲಿಯನ್ನು ಸ್ವಚ್ಛ ಮಾಡಲು ಬಂದರು. ಆಗ ನಾನು, ನನ್ನ ತಾಯಿ ಅಡ್ಡ ಹೋಗಿ ಈ ಜಮೀನು ನಮ್ಮದು ಇದೆ ಇಲ್ಲಿ ಯಾಕೆ ಬಂದು ಸ್ವಚ್ಛ ಮಾಡುತ್ತೀರಾ ಅಂತಾ ಕೇಳಿದ್ದಕ್ಕೆ ಲೇ ನಾಯಕ ಸೂಳೇ ಮಕ್ಕಳ ಈ ಜಮೀನನ್ನು ನಾವು ಖರೀದಿ ಮಾಡಿದ್ದೇವೆ, ಈ ಜಮೀನು ನಮ್ಮದು ಇದೆ ಅಂತಾ ಜಾತಿ ಎತ್ತಿ ಬೈದು ಬೈದರು. ಆಗ ನಾವು ಅಡ್ಡ ಹೋಗಿದ್ದಕ್ಕೆ ನೀವೇನಾದರೂ ಅಡ್ಡ ಬಂದರೆ ಇಲ್ಲಿಯೇ ಹೂತು ಹಾಕುತ್ತೇವೆ ಅಂತಾ ಬೆದರಿಕೆ ಹಾಕಿ ಜೆ.ಸಿ.ಬಿ.ಯನ್ನು ಹಾಗೆಯೇ ಮೈಮೇಲೆ ತಂದರು. ನಂತರ ನನಗೆ ಕೈಗಳಿಂದ ಹೊಡಿ-ಬಡಿ ಮಾಡಿ ಎಳೆದಾಡಿದರು. ಬಿಡಿಸಲು ಬಂದ ನನ್ನ ತಾಯಿ ಯಂಕಮ್ಮಳನ್ನು ದಬ್ಬಿದರು. ಇದರಿಂದ ನಮಗೆ ಒಳಪೆಟ್ಟಾಯಿತು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment