1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 53/2017
ಕಲಂ: 279, 337, 338 ಐ.ಪಿ.ಸಿ. ಹಾಗೂ 187 ಐ.ಎಂ.ವಿ. ಕಾಯ್ದೆ:.
ದಿ:20-03-2017 ರಂದು ಮಧ್ಯಾಹ್ನ 3-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಂಜುನಾಥ ಬಡಿಗೇರ. ಸಾ: ದೇವರಾಜ ಅರಸ ಕಾಲೋನಿ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ
ದೂರಿನ ಸಾರಾಂಶವೇನೆಂದರೇ, ದಿ: 17-03-2017 ರಂದು ಮಧ್ಯಾಹ್ನ 2-45 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ತಮ್ಮ ಶ್ರೀನಿವಾಸ ಬಡಿಗೇರ ಇತನು ತನ್ನ ಆಟೋ ನಂ: ಕೆಎ-21/ಎ-885 ನೇದ್ದರಲ್ಲಿ ಕೊಪ್ಪಳದ
ದೇವರಾಜ ಅರಸ ಕಾಲೋನಿಯ ಮೇರುನ್ನೀಸಾ, ರಜೀಯಾಬೇಗಂ ಹಾಗೂ ಗೌಸಿಯಾಬೇಗಂ ಮತ್ತು ಗೌಸಿಯಾಬೇಗಂ ಳ ಡಿಲೇವರಿ ಆಗಿದ್ದರಿಂದ ಮಗುವಿಗೆ
ಆಟೋದಲ್ಲಿ ಕೂಡ್ರಿಸಿಕೊಂಡು ಭಾಡಿಗೆಗೆ ಅಂತಾ ಕರೆದುಕೊಂಡು ಹೊಸಬಂಡಿಹರ್ಲಾಪೂರಕ್ಕೆ ಹೋಗುವಾಗ
ಕೊಪ್ಪಳ-ಹೊಸಪೇಟೆ ರಸ್ತೆಯ ಗಿಣಿಗೇರಿ ಬೈಪಾಸ್ ದಾಟಿ ಸ್ವಲ್ಪ ಮುಂದೆ ಹೊರಟಿದ್ದಾಗ ಅದೇ ಸಮಯಕ್ಕೆ
ಆಟೋ ಓವರ ಟೇಕ್ ಮಾಡಿಕೊಂಡು ಬಂದ ಲಾರಿ ನಂ: ಕೆಎ-37/ಎ-3802 ನೇದ್ದರ ಚಾಲಕನು ತನ್ನ
ಟಿಪ್ಪರ ಲಾರಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ
ರೀತಿಯಲ್ಲಿ ಓಡಿಸುತ್ತಾ ಓವರಟೇಕ್ ಮಾಡಿಕೊಂಡು ಬಂದು ಆಟೋಕ್ಕೆ ಟಕ್ಕರ ಕೊಟ್ಟು ಅಪಘಾತ ಮಾಡಿ ವಾಹನ
ನಿಲ್ಲಿಸದೇ ಹೋಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಆಟೋ ಚಾಲಕ ಶ್ರೀನಿವಾಸನಿಗೆ ಭಾರಿಗಾಯ
ಹಾಗೂ ಆಟೋದಲ್ಲಿದ್ದ 03 ಜನ ಮಹಿಳೆಯರಿಗೆ ಸಾದಾ
ಗಾಯಗಳಾಗಿದ್ದು ಅದೆ. ಪ್ರಕರಣವನ್ನು ದಾಖಲಿಸಿ
ತನಿಖೆ ಕೈಗೊಂಡಿದ್ದು ಅದೆ.
2] ತಾವರಗೇರಾ ಪೊಲೀಸ್ ಠಾಣೆ
ಯು.ಡಿ.ಅರ್. ನಂ: 04/2017 ಕಲಂ. 174 ಸಿ.ಆರ್.ಪಿ.ಸಿ
ಮೃತ ಹನಮಂತ ತಂದೆ ಹೊಳಿಯಪ್ಪ ಎಡಗಿನಹಾಳ ಈತನವು ಸುಮಾರು 30 ಕುರಿಗಳಿದ್ದು ಅವುಗಳನ್ನು ಪ್ರತಿದಿನ ಮೇಯಿಸಲು ಎಂದಿನಂತೆ ದಿನಾಂಕ:13-03-2017
ರಂದು ಬೆಳಿಗ್ಗೆ 07-30 ಗಂಟೆಯ ಸುಮಾರು ಕುರಿಗಳನ್ನು ಹೊಡೆದುಕೊಂಡು ಮೇಯಿಸಲು ತಮ್ಮ ಗ್ರಾಮದ ಹಳ್ಳದ ಕಡೆಗೆ
ಹೋಗಿದ್ದು ಇರುತ್ತದೆ. ಹಿಗೇ ಹಳ್ಳದಲ್ಲಿ
ಕುರಿಗಳನ್ನು ಮೇಯಿಸುವಾಗ ಆಕಸ್ಮಿಕವಾಗಿ ಹಳ್ಳದಲ್ಲಿದ್ದ ಗುಂಡಿಯನ್ನು ಗಮನಿಸದೇ ಅದರಲ್ಲಿ ಜಾರಿ
ಬಿದ್ದಿದ್ದು ದಂಡೆಯಲ್ಲಿದ್ದ ಹಳ್ಳದ ಉಸುಕು ಅವನ ಮೇಲೆ ಬಿದ್ದು ಅವನಿಗೆ
ಉಸಿರುಗಟ್ಟಿಂತಾಗಿದ್ದು ಹಾಗೂ ಜಾರಿ ಬಿದ್ದದರಿಂದ ಗೆಜ್ಜೆಯ ಹತ್ತಿರ ಸೊಂಟದ ಹತ್ತಿರ
ಗಾಯವಾಗಿದ್ದು ಇರುತ್ತದೆ. ನಂತರ ಅಲ್ಲಿಯೇ ಆತನ ಜೋತಗೆ
ತನ್ನ ಕುರಿಗಳನ್ನು ಮೇಯಿಸುತ್ತಿದ್ದ ತಮ್ಮ ಗ್ರಾಮದ ಸೋಮಪ್ಪ ಭೀಮಣ್ಣ ಮೂಳ್ಳುರವರು ಓಡಿ ಬಂದು
ಆತನನ್ನು ಮೇಲೆ ಎಬ್ಬಿಸಿದ್ದು ಅಲ್ಲಿಂದ ಸಮೀಪ ತಮ್ಮ ಗ್ರಾಮ ಇರುವದರಿಂದ ಗ್ರಾಮದಲ್ಲಿದ್ದ ಅವರ
ತಮ್ಮ ಬೀರಪ್ಪ ಸ್ಥಳಕ್ಕೆ ಹೋಗಿ ಒಂದು ಖಾಸಗಿ ವಾಹನದಲ್ಲಿ ಅವನನ್ನು ಕರೆದುಕೊಂಡು ಮೊದಲು ಸಿಂಧನೂರ
ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಇಲಾಜಿಗೆ ಬಾಲಂಕು ಆಸ್ಪತ್ರೆ ರಾಯಚೂರಿನಲ್ಲಿ
ದಾಖಲು ಮಾಡಿದ್ದು ಇರುತ್ತದೆ. ನಂತರ ದಿನಾಂಕ:19-03-2017
ರಂದು ರಾತ್ರಿ ಮಲಗುವಾಗ ಆಸ್ಪತ್ರೆಯಲ್ಲಿ ವೈದ್ಯರು ಅವನಿಗೆ ನೀರು
ಕುಡಿಯಬೇಡ ಅಂತಾ ಹೇಳಿದ್ದು ರಾತ್ರಿ ರಾತ್ರಿ ಎಲ್ಲರೂ ಮಲಗಿದ್ದಾಗ ಆತನು ಇಂದು ದಿನಾಂಕ:20-03-2017
ರಂದು ಬೆಳಗಿನ ಜಾವ 01-00 ಗಂಟೆಯ ಸುಮಾರು ತನ್ನ ಬಾಜು ಇಟ್ಟಿದ್ದ ಬಾಟಲಿಯಲ್ಲಿದ್ದ ಒಂದು ಲೀಟರನಷ್ಟು ನೀರು ಒಮ್ಮೇಲೆ
ಕುಡಿದಿದ್ದು ಆಗ ಆತನಿಗೆ ಉಸಿರಾಟದಲ್ಲಿ ತೊಂದರೆಯಾಗಿ ಒದ್ದಾಡುತ್ತಿರುವಾಗ ಆತನನ್ನು ಹೆಚ್ಚಿನ
ಇಲಾಜಿಗೆ ಹುಬ್ಬಳ್ಳಿಗೆ ಕರೆದುಕೊಂಡು ಹೋಗಲು ಆಸ್ಪತ್ರೆಯ ವೈದ್ಯರು ತಿಳಿಸಿದ್ದು ಕೂಡಲೇ ಒಂದು
ಖಾಸಗಿ ಅಂಬುಲೇನ್ಸನಲ್ಲಿ ಹೆಚ್ಚಿನ ಇಲಾಜಿಗೆ ಹುಬ್ಬಳ್ಳಿಗೆ ಕರೆದುಕೊಂಡು ಹೋಗುವಾಗ ಕುಷ್ಟಗಿ
ಸಮೀಪದಲ್ಲಿ ಬೆಳಗಿನ ಜಾವ 03-00 ಗಂಟೆಯ ಸುಮಾರು ಆತನಿಗೆ
ಉಸಿರು ನಿಂತಂತೆ ಆಗಿದ್ದು ಆಗ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಹೋಗಿ ಮಾನ್ಯ ವೈದ್ಯರಲ್ಲಿ ಪರೀಕ್ಷಿಸಲು ಈತನು ಮೃತಪಟ್ಟ ಬಗ್ಗೆ ಖಚಿತಪಡಿಸಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment