1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ: 68/2017 ಕಲ0: 498(ಎ),
324, 504, 506 ಐ.ಪಿ.ಸಿ:.
ದಿನಾಂಕ : 18-03-2017 ರಂದು
ಬೆಳಗ್ಗೆ 8-00 ಗಂಟೆಯ ಸುಮಾರಿಗೆ ಫಿರ್ಯಾದಿದಾರಳಾದ ಶ್ರೀಮತಿ ದೇವಮ್ಮ ಗಂಡ ರಮೇಶ ಬೋವಿ ತನ್ನ
ಮಕ್ಕಳೊಂದಿಗೆ ಮನೆಯಲ್ಲಿ ಇರುವಾಗ ಗಂಡ ರಮೇಶ ಈತನು ವಿನಾ: ಕಾರಣ ಜಗಳ ತೆಗೆದು ಕಟ್ಟಿಗೆಯಿಂದ ಕೈಗೆ
ಮತ್ತು ಬೆನ್ನಿಗೆ ಹೊಡೆದು ನೀನು ಎಲ್ಲಿಯಾದರು ಬಿದ್ದು ಸತ್ತು ಹೊಗು ಸೂಳೆ ಅಂತಾ ಹೊಡೆ ಬಡಿ ಮಾಡಿದ್ದು
ಮನೆಯಿಂದ ಹೊರಗೆ ಹಾಕಿದ್ದು ಈ ಘಟನೆಯನ್ನು ಓಣಿಯ ಜನರಾದ ಮಾಬುಸಾಬ ಹಾಗೂ ಹನಮಂತಪ್ಪ ಯರಗೇರಿ ಇವರು
ನೋಡಿ ಬಿಡಿಸಿಕೊಂಡಿದ್ದು ಅವನು ಅಷ್ಟಕ್ಕೆ ಬಿಡದೆ ಈ ಸೂಳೇ ಇನ್ನು ಮುಂದೆ ನಮ್ಮ ಮನೆಯಲ್ಲಿ ಇರುವದು
ಬೇಡ ಇನ್ನೊಮ್ಮೆ ಮನೆಯ ಕಡೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವ ಭಯ ಹಾಕಿ ಮನೆಯಿಂದ
ಹೊರಗೆ ಹಾಕಿದ್ದರಿಂದ ಫಿರ್ಯಾದಿಗೆ ಏನು ತೊಚದಂತಾಗಿ ಈ ಬಗ್ಗೆ ಫಿರ್ಯಾದಿ ತಂದೆ ತಾಯಿಗೆ ವಿಷಯ ತಿಳಿಸಿ
ಅವರೊಂದಿಗೆ ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡು ಠಾಣೆಗೆ ಬಂದು ಈ ಫಿರ್ಯಾದಿ
ಕೊಟ್ಟಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿದ್ದು
ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ. ನಂ: 19/2017 ಕಲಂ. 323, 324, 354, 504, 506 ಸಹಿತ 34 ಐ.ಪಿ.ಸಿ:
ದಿನಾಂಕ: 18-03-2017 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಪಿರ್ಯಾದಿದಾರಳು ತಮ್ಮ ಬಾಡಿಗೆ
ಮನೆಯ ಮುಂದೆ ಇದ್ದಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಪಿರ್ಯಾದಿದಾರಳಿಗೆ ಏನಲೇ ಬೋಸುಡಿ ನಿನಗೆ
ಎಷ್ಟು ಸಾರಿ ಹೇಳಬೇಕು, ನಮ್ಮ ಡಿಶ್ ಪುಟ್ಟಿ ಮೇಲೆ ಸೋಲಾರ್ ಲ್ಯಾಂಪ್ ಹಾಕಬೇಡ ಅಂದರು ಹಾಕುತ್ತೀಯಾ
ನಿನ್ನ ಸೊಕ್ಕು ಜಾಸ್ತಿಯಾಗಿದೆ ಅಂತಾ ಅವಾಚ್ಯವಾಗಿ ಬೈದಾಡಿ ಎಲ್ಲರೂ ಕೂಡಿಕೊಂಡು ಆಕೆಯ ಮೈ ಕೈ ಮುಟ್ಟಿ
ಎಳೆದಾಡಿ ಮಾನಭಂಗ ಮಾಡಿ, ಕೈಯಿಂದ ಬಡಿದಿದ್ದು ಅದೆ. ನಂತರ ಅವರ ಪೈಕಿ ಆರೋಪಿ ನಂ. 02 ನೇದವಳು ಪಿರ್ಯಾದಿದಾರಳ
ತಲೆ ಕೂದಲನ್ನು ಗಟ್ಟಿಯಾಗಿ ಹಿಡಿದುಕೊಂಡು ಸಿ.ಸಿ. ರಸ್ತೆಗೆ ಜೋರಾಗಿ ಹಾಯಿಸಿದ್ದು, ಇದರಿಂದಾಗಿ ಪಿರ್ಯಾದಿದಾರಳ
ಹಣೆಗೆ, ಬಲಗಣ್ಣಿನ ಹತ್ತಿರ ರಕ್ತಗಾಯವಾಗಿದ್ದು ಇರುತ್ತದೆ. ನಂತರ ಮೂರು ಜನ ಆರೋಪಿತರು
ಪಿರ್ಯಾದಿದಾಳಿಗೆ ಇನ್ನೊಮ್ಮೆ ನಮ್ಮ ಜೊತೆಗೆ ಹೇಗೆ ಇರಬೇಕು ಹಾಗೇ ಇರಬೇಕು, ಇಲ್ಲಾ ಅಂದರೆ ನಿನ್ನ
ಜೀವ ಸಹಿತ ಬೀಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ. ನಂ: 45/2017
ಕಲ0: 143, 147, 323, 324, 354, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ
18-03-2017 ರಂದು ರಾತ್ರಿ 11-00 ಗಂಟೆಗೆ ಶ್ರೀಮತಿ ಶಕುಂತಲಮ್ಮ ಗಂಡ ಉಮೇಶ ತೆಗ್ಗಿನಮನಿ, ವಯಸ್ಸು
28 ವರ್ಷ, ಜಾ: ಕುರುಬರ, ಉ: ಮನೆಗೆಲಸ, ಸಾ: ಕಿಲ್ಲಾ ಏರಿಯಾ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು
ಫಿಯರ್ಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ 18-03-2017 ರಂದು ರಾತ್ರಿ 8-30 ಗಂಟೆ
ಸುಮಾರಿಗೆ ಶಾಲೆಯಲ್ಲಿ ಬೈಕಿನ ಮೇಲಿನ ಸ್ಟಿಕ್ಕರನ್ನು ಕೆರೆದುದಕ್ಕೆ ಸಂಬಂಧಿಸಿದಂತೆ ಪ್ರತಿಭಾ ಶಾಲೆಯ
ಹತ್ತಿರ ಜಗಳವಾಗಿದ್ದಕ್ಕೆ ಸಂಬಂಧಿಸಿದಂತೆ ಖಲಂದರ ತಂದೆ ಮೈನುಸಾಬ ಸೀಮೆಎಣ್ಣೆ ಇವನು ತನ್ನ ಸಂಗಡಿಗರೊಂದಿಗೆ
ಬಂದು ಹನುಮೇಶ ಕಾಯಿಗಡ್ಡೆ, ಮೌನೇಶ ತೆಗ್ಗಿನಮನಿ, ಮೇಘರಾಜ ತೆಗ್ಗಿನಮನಿ, ನಿರುಪಾದಿ ಅಡ್ಡೇರ ಇವರೆಲ್ಲರಿಗೂ
ಕೈಯಿಂದ ಹೊಡೆಬಡೆ ಮಾಡಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment