1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 80/2017 ಕಲಂ:
307, 302 IPC.
ದಿನಾಂಕ 14-05-2017 ರಂದು ಬೆಳಿಗ್ಗೆ 4-00 ಗಂಟೆಗೆ ಠಾಣೆಯಲ್ಲಿ ಫಿರ್ಯಾದಿ
ಸ್ವೀಕೃತಗೊಂಡಿದ್ದು ಅದರ ಸಾರಾಂಶವೆನಂದರೆ, ನಾನು ಶ್ರೀಮತಿ ವಿಶಾಲಾಕ್ಷಿ ಗಂಡ ಹೊನ್ನಪ್ಪ ಕಟಿಗೇರ
ವಯ 32 ವರ್ಷ ಜಾತಿ ಕುರುಬರ ಉ. ಮನೆಗೆಲಸ ಸಾ. ಕಕ್ಕರಗೋಳ ತಾ. ಗಂಗಾವತಿ ಬರೆದುಕೊಡುವ ಲಿಖಿತ ಫಿರ್ಯಾದಿ ಏನಂದರೆ ನನ್ನ ಗಂಡನಾದ ಹೊನ್ನಪ್ಪ ತಂದೆ ಸಿದ್ದಪ್ಪ ಕಟಿಗೇರ ವಯ
34 ವರ್ಷ ಈತನು ಇತ್ತೀಚಿಗೆ, ಕುಡಿದು ಬಂದು ಮನೆಯಲ್ಲಿ ನನಗೆ ಮತ್ತು ತನ್ನ ತಾಯಿ ಈರಮ್ಮಳಿಗೆ ಮತ್ತು
ನನ್ನ ಮಕ್ಕಳಿಗೆ ವಿನಾಃಕಾರಣ ಹೊಡೆಯುವುದು, ಬಡಿಯುವುದು ಮಾಡುತ್ತಾ, ತನಗೆ ಖರ್ಚಿಗೆ ಹಣ ಕೊಡದಿದ್ದರೆ,
ಪುನಃ ನಮಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದನು. ನನ್ನ ಗಂಡನು ನನಗೆ ಹೊಡೆಬಡಿ ಮಾಡುತ್ತಿದ್ದರಿಂದ
ನನಗೆ ಬೇಸರವಾಗಿ ಈಗ್ಗೆ 4-5 ದಿನಗಳ ಹಿಂದೆ ನನ್ನ ಮಕ್ಕಳನ್ನು ಗಂಡ ಮತ್ತು ಅತ್ತೆಯ ಹತ್ತಿರ ಬಿಟ್ಟು
ನನ್ನ ತವರು ಮನೆಗೆ ಹೊಗಿದ್ದು ಇರುತ್ತದೆ. ನಿನ್ನೆ ದಿವಸ ದಿನಾಂಕ 13-05-2017 ರಂದು ರಾತ್ರಿ
11-00 ಗಂಟೆಯ ಸುಮಾರಿಗೆ ನಾನು ನನ್ನ ತವರು ಮನೆಯಲ್ಲಿ ಹಿಂದಿನ ಬಾಗಿಲ ಹತ್ತಿರ ನನ್ನ ತಾಯಿಯೊಂದಿಗೆ
ಮಲಗಿದ್ದಾಗ ನನ್ನ ಗಂಡನ ಮನೆಯಲ್ಲಿ ಹಿಂದಿನ ಬಾಗಿಲ ಹತ್ತಿರ ಜೋರಾಗಿ ಚೀರಾಡುವ ಶಬ್ದವಾಗಿದ್ದರಿಂದ
ನಾನು ಮತ್ತು ನನ್ನ ತಾಯಿ ವೀರುಪಮ್ಮ ಕೂಡಿಕೊಂಡು ಹಿಂದಿನ ಬಾಗಿಲ ಹತ್ತಿರ ಬಂದು ನೋಡಲು ನನ್ನ ಗಂಡನು
ತನ್ನ ತಾಯಿಯೊಂದಿಗೆ ಜಗಳ ತಗೆದು, ಕುಡಿಯಲು ತನಗೆ ಕರ್ಚಿಗೆ ಹಣ ಕೊಡು, ಇಲ್ಲದಿದ್ದರೆ ನಿನ್ನನ್ನು
ಮತ್ತು ಮಕ್ಕಳನ್ನು ಕೊಂದು ಬಿಡುತ್ತೇನೆ ಅಂತಾ ಕೈಯಲ್ಲಿ, ಕೊಡ್ಲಿಯಿಂದ ಮತ್ತು ಹಾರಿಯಿಂದ ಹೊಡೆಬಡಿ
ಮಾಡುತ್ತಿದ್ದನು. ಆಗ ನಾವು ಗಾಭರಿಯಾಗಿ ಚೀರಾಡುತ್ತಿದ್ದಾಗ ನನ್ನ ಗಂಡನು ಅಲ್ಲಿಂದ ಕೈಯಲ್ಲಿದ್ದ ಕೊಡ್ಲಿ
ಮತ್ತು ಹಾರಿಯನ್ನು ಅಲ್ಲಿಯೇ ಬಿಸಾಕಿ ಅಲ್ಲಿಂದ ಓಡಿ ಹೊದನು. ಒಳಗಡೆ ಹೋಗಿ ನೋಡಲಾಗಿ ನನ್ನ ಅತ್ತೆಯಾದ
ಈರಮ್ಮಳಿಗೆ ಮತ್ತು ನನ್ನ ನಾಲ್ಕು ಜನ ಮಕ್ಕಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಅದರಲ್ಲಿ ಹಿರಿಯ
ಮಗಳಾದ ಕುಮಾರಿ ಪವಿತ್ರಾ ಈಕೆಯು ಸ್ಥಳದಲ್ಲಿ ಮೃತಪಟ್ಟಿದ್ದಳು. ನನ್ನ ಮಗಳಾದ ಪವಿತ್ರಾ ಈಕೆಗೆ ನೋಡಲಾಗಿ
ಅವಳ ಬಾಯಿಯಿಂದ ನೊರೆ ಬಂದಿದ್ದು ಅಲ್ಲದೆ ಅವಳು ಮೃತಪಟ್ಟ ಸ್ಥಳದಲ್ಲಿ ಹೊಲಕ್ಕೆ ಹೊಡೆಯುವ ಕ್ರಿಮಿನಾಶಕ
ಡಬ್ಬಿ ಬಿದ್ದುದ್ದರಿಂದ ಅವಳಿಗೆ ವಿಷ ಹಾಕಿ ಮತ್ತು ಕೊಡ್ಲಿ ಮತ್ತು ಹಾರಿಯಿಂದ ಹೊಡೆದು ಕೊಲೆ ಮಾಡಿದ
ಬಗ್ಗೆ ಕಂಡು ಬಂದಿದ್ದು ಇರುತ್ತದೆ. ಈ ಘಟನೆ ಆದಾಗ ನಿನ್ನೆ ರಾತ್ರಿ 11-00 ಗಂಟೆಯಿಂದ ರಾತ್ರಿ
11-30 ಗಂಟೆ ಆಗಿರಬಹುದು. ನಂತರ ಸುದ್ದಿ ತಿಳಿದು ಅಲ್ಲಿಗೆ ಬಂದ ನಮ್ಮ ಗ್ರಾಮದ ಮಲ್ಲನಗೌಡ ಈತನು ಅಂಬುಲೆನ್ಸ್
ಗೆ ಫೋನ್ ಮಾಡಿ ಕರೆಯಿಸಿಕೊಂಡು ಗಾಯಗೊಂಡ ನನ್ನ ಮೂರು ಜನ ಮಕ್ಕಳನ್ನು ಮತ್ತು ನಮ್ಮ ಅತ್ತೆಯಾದ ಈರಮ್ಮಳನ್ನು
ಚಿಕಿತ್ಸೆಗಾಗಿ ಗಂಗಾವತಿಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ. ತನ್ನ ಗಂಡನು ತನ್ನ ಮಗಳನ್ನು ಕೊಲೆ
ಮಾಡಿದ ನಂತರ ಹೊಲದ ಕಡೆಗೆ ಓಡಿ ತಮ್ಮ ಹೊಲದಲ್ಲಿಯ ಜಾಲಿಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದನು.
ಕಾರಣ ನನ್ನ ಮಗಳಾದ ಪವಿತ್ರಾಳನ್ನು ಕೊಲೆ ಮಾಡಿ ನನ್ನ ಅತ್ತೆ ಮತ್ತು ಮೂರು ಜನ ಮಕ್ಕಳನ್ನು
ಕೊಲೆ ಮಾಡಲು ಪ್ರಯತ್ನಿಸಿ ತಾನು ಆತ್ಮಹತ್ಯ ಮಾಡಿಕೊಂಡ ನನ್ನ ಗಂಡನ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು
ವಿನಂತಿ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ
ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/2017 ಕಲಂ: 174 ಸಿ.ಆರ್.ಪಿ.ಸಿ..
ದಿನಾಂಕ 14-05-2017 ರಂದು ಬೆಳಗಿನ 05-05 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ವಿಶಾಲಾಕ್ಷಿ ಗಂಡ ಹೊನ್ನಪ್ಪ ಕಟಿಗೇರ ವಯ 32 ವರ್ಷ ಜಾತಿ ಕುರುಬರ ಉ. ಮನೆಗೆಲಸ ಸಾ. ಕಕ್ಕರಗೋಳ ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ ದುರು ಕೊಟ್ಟಿದ್ದು ಸದರ್ ದೂರಿನ ಸಾರಾಂಶವೆನಂದರೆ, ನನ್ನ ತವರು ಮನೆ ಕಕ್ಕರಗೋಳ ಗ್ರಾಮ ಇದ್ದು, ನನ್ನನ್ನು ನಮ್ಮ ಗ್ರಾಮದ ಸಹೋದರ ಅತ್ತೆಯಾದ ಈರಮ್ಮ ಗಂಡ ಸಿದ್ದಪ್ಪ ಈಕೆಯ ಮಗನಾದ ಹೊನ್ನಪ್ಪನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನನ್ನ ತವರು ಮನೆಯು ಸಹ ನನ್ನ ಗಂಡನ ಮನೆಯ ಪಕ್ಕಕ್ಕೆ ಹೊಂದಿಕೊಂಡಿರುತ್ತದೆ. ನನಗೆ 1) ಪವಿತ್ರಾ ವಯ 10 ವರ್ಷ, 2) ತ್ರಿವೇಣಿ ವಯ 8 ವರ್ಷ, 3) ಈರಣ್ಣ ವಯ 5 ವರ್ಷ ಹಾಗೂ ಕೊನೆಯವನು 4) ಸಿದ್ದಪ್ಪ ವಯ 2 ವರ್ಷ ಅಂತಾ ಹಿಗೆ ಒಟ್ಟು 4 ಜನ ಮಕ್ಕಳು ಇರುತ್ತಾರೆ. ನನ್ನ ಗಂಡನಾದ ಹೊನ್ನಪ್ಪ ತಂದೆ ಸಿದ್ದಪ್ಪ ಕಟಿಗೇರ ವಯ 34 ವರ್ಷ ಈತನು ಇತ್ತೀಚಿಗೆ, ಕುಡಿದು ಬಂದು ಮನೆಯಲ್ಲಿ ನನಗೆ ಮತ್ತು ತನ್ನ ತಾಯಿ ಈರಮ್ಮಳಿಗೆ ಮತ್ತು ನನ್ನ ಮಕ್ಕಳಿಗೆ ವಿನಾಃಕಾರಣ ಹೊಡೆಯುವುದು, ಬಡಿಯುವುದು ಮಾಡುತ್ತಾ, ತನಗೆ ಖರ್ಚಿಗೆ ಹಣ ಕೊಡದಿದ್ದರೆ, ಪುನಃ ನಮಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದನು. ನನ್ನ ಗಂಡನು ನನಗೆ ಹೊಡೆಬಡಿ ಮಾಡುತ್ತಿದ್ದರಿಂದ ನನಗೆ ಬೇಸರವಾಗಿ ಈಗ್ಗೆ 4-5 ದಿನಗಳ ಹಿಂದೆ ನನ್ನ ಮಕ್ಕಳನ್ನು ಗಂಡ ಮತ್ತು ಅತ್ತೆಯ ಹತ್ತಿರ ಬಿಟ್ಟು ನನ್ನ ತವರು ಮನೆಗೆ ಹೊಗಿದ್ದೆನು. ನಿನ್ನೆ ದಿವಸ ದಿನಾಂಕ 13-05-2017 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ನಾನು ನನ್ನ ತವರು ಮನೆಯಲ್ಲಿ ಹಿಂದಿನ ಬಾಗಿಲ ಹತ್ತಿರ ನನ್ನ ತಾಯಿಯೊಂದಿಗೆ ಮಲಗಿದ್ದಾಗ ನನ್ನ ಗಂಡನ ಮನೆಯಲ್ಲಿ ಹಿಂದಿನ ಬಾಗಿಲ ಹತ್ತಿರ ಜೋರಾಗಿ ಚೀರಾಡುವ ಶಬ್ದವಾಗಿದ್ದರಿಂದ ನಾನು ಮತ್ತು ನನ್ನ ತಾಯಿ ವೀರುಪಮ್ಮ ಕೂಡಿಕೊಂಡು ಹಿಂದಿನ ಬಾಗಿಲ ಹತ್ತಿರ ಬಂದು ನೋಡಲು ನನ್ನ ಗಂಡನು ತನ್ನ ತಾಯಿಯೊಂದಿಗೆ ಜಗಳ ತಗೆದು, ಕುಡಿಯಲು ತನಗೆ ಕರ್ಚಿಗೆ ಹಣ ಕೊಡು, ಇಲ್ಲದಿದ್ದರೆ ನಿನ್ನನ್ನು ಮತ್ತು ಮಕ್ಕಳನ್ನು ಕೊಂದು ಬಿಡುತ್ತೇನೆ ಅಂತಾ ಕೈಯಲ್ಲಿ, ಕೊಡ್ಲಿಯಿಂದ ಮತ್ತು ಹಾರಿಯಿಂದ ಹೊಡೆಬಡಿ ಮಾಡುತ್ತಿದ್ದನು. ಆಗ ನಾವು ಗಾಭರಿಯಾಗಿ ಚೀರಾಡುತ್ತಿದ್ದಾಗ ನನ್ನ ಗಂಡನು ಅಲ್ಲಿಂದ ಕೈಯಲ್ಲಿದ್ದ ಕೊಡ್ಲಿ ಮತ್ತು ಹಾರಿಯನ್ನು ಅಲ್ಲಿಯೇ ಬಿಸಾಕಿ ಅಲ್ಲಿಂದ ಓಡಿ ಹೊದನು. ಒಳಗಡೆ ಹೋಗಿ ನೋಡಲಾಗಿ ನನ್ನ ಅತ್ತೆಯಾದ ಈರಮ್ಮಳಿಗೆ ಮತ್ತು ನನ್ನ ನಾಲ್ಕು ಜನ ಮಕ್ಕಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಅದರಲ್ಲಿ ಹಿರಿಯ ಮಗಳಾದ ಕುಮಾರಿ ಪವಿತ್ರಾ ಈಕೆಯು ಸ್ಥಳದಲ್ಲಿ ಮೃತಪಟ್ಟಿದ್ದಳು. ನನ್ನ ಮಗಳಾದ ಪವಿತ್ರಾ ಈಕೆಗೆ ನೋಡಲಾಗಿ ಅವಳ ಬಾಯಿಯಿಂದ ನೊರೆ ಬಂದಿದ್ದು ಅಲ್ಲದೆ ಅವಳು ಮೃತಪಟ್ಟ ಸ್ಥಳದಲ್ಲಿ ಹೊಲಕ್ಕೆ ಹೊಡೆಯುವ ಕ್ರಿಮಿನಾಶಕ ಡಬ್ಬಿ ಬಿದ್ದುದ್ದರಿಂದ ಅವಳಿಗೆ ವಿಷ ಹಾಕಿ ಮತ್ತು ಕೊಡ್ಲಿ ಮತ್ತು ಹಾರಿಯಿಂದ ಹೊಡೆದು ಕೊಲೆ ಮಾಡಿದ ಬಗ್ಗೆ ಕಂಡು ಬಂದಿದ್ದು ಇರುತ್ತದೆ. ಈ ಘಟನೆ ಆದಾಗ ನಿನ್ನೆ ರಾತ್ರಿ 11-00 ಗಂಟೆಯಿಂದ ರಾತ್ರಿ 11-30 ಗಂಟೆ ಆಗಿರಬಹುದು. ನಂತರ ಸುದ್ದಿ ತಿಳಿದು ಅಲ್ಲಿಗೆ ಬಂದ ನಮ್ಮ ಗ್ರಾಮದ ಮಲ್ಲನಗೌಡ ಈತನು ಅಂಬುಲೆನ್ಸ್ ಗೆ ಫೋನ್ ಮಾಡಿ ಕರೆಯಿಸಿಕೊಂಡು ಗಾಯಗೊಂಡ ನನ್ನ ಮೂರು ಜನ ಮಕ್ಕಳನ್ನು ಮತ್ತು ನಮ್ಮ ಅತ್ತೆಯಾದ ಈರಮ್ಮಳನ್ನು ಚಿಕಿತ್ಸೆಗಾಗಿ ಗಂಗಾವತಿಗೆ ಕಳುಹಿಸಿಕೊಟ್ಟರು. ನನ್ನ ಗಂಡನಾದ ಹೊನ್ನಪ್ಪ ತಂದೆ ಸಿದ್ದಪ್ಪ ಕಟಿಗೇರ ಈತನು ನನ್ನ ಮಗಳನ್ನು ಕೊಲೆ ಮಾಡಿ ಉಳಿದ 4 ಜನರಿಗೆ ತೀವ್ರ ಸ್ವರೂಪದ ಗಾಯಮಾಡಿ ಕೊಲೆಗೆ ಪ್ರಯತ್ನಿಸಿ ನಂತರ ನಿನ್ನೆ ದಿವಸ ದಿನಾಂಕ 13-05-17 ರಂದು ರಾತ್ರಿ 11-30 ಗಂಟೆಯಿಂದ ಈ ದಿನ ದಿನಾಂಕ 14-05-2017 ರಂದು ಬೆಳಗಿನ ಜಾವ 12-00 ಗಂಟೆ ಅವಧಿಯಲ್ಲಿ ನನ್ನ ಗಂಡ ನಮ್ಮ ಹೊಲದಲ್ಲಿನ ಜಾಲಿ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ:
279, 338, ಐ.ಪಿ.ಸಿ..
ದಿ:14-05-2017
ರಂದು ಬೆಳಗಿನಜಾವ 04-00 ಗಂಟೆಗೆ
ಜಿಲ್ಲಾ ಆಸ್ಪತ್ರೆ ಕೊಪ್ಪಳದಿಂದ ಎಮ್.ಎಲ್.ಸಿ ಬಂದಿದ್ದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶಿವಕುಮಾರ
ಇವರನ್ನು ವಿಚಾರಿಸಿ ಹೇಳಿಕೆ ಫಿರ್ಯಾದಿ ಪಡೆದುಕೊಂಡಿದ್ದು ಸಾರಾಂಶವೆನೆಂದರೆ, ಇಂದು
ದಿ:14-05-17 ರಂದು 02-30
ಎ.ಎಮ್ ಕ್ಕೆ ಫಿರ್ಯಾದಿದಾರರು ಟಣಕನಕಲ್ ದಿಂದಾ ಹೆರಿಗೆ ಕೇಸ್
ಬಂದಿದ್ದರಿಂದ ಅಟೆಂಡ್ ಮಾಡಲು ಅಂತಾ 108 ಅಂಬುಲೆನ್ಸ ನಂ: ಕೆಎ-40/ಜಿ-0462 ನೇದ್ದರಲ್ಲಿ
ಕುಳಿತು ಹೋಗುವಾಗ ಕೊಪ್ಪಳ-ಕುಷ್ಟಗಿ ರಸ್ತೆಯ ಟಣಕನಕಲ್ ಇನ್ನೂ ಮುಂದೆ ಸ್ವಲ್ಪ ಅಂತರದಲ್ಲಿರುವಾಗ 108 ಚಾಲಕ
ಹನ್ಮಂತಪ್ಪ ಇತನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಓಡಿಸುತ್ತಾ ವಾಹನವನ್ನು
ಹತೋಟಿಯಲ್ಲಿಡದೇ ಪಲ್ಟಿ ಮಾಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಫಿರ್ಯಾದಿಗೆ ಭಾರಿ
ಗಾಯಗಳಾಗಿದ್ದು ಅದೆ. ಕಾರಣ ಅಪಘಾತ ಮಾಡಿದ 108 ಅಂಬುಲೆನ್ಸ ನಂ: ಕೆಎ-40/ಜಿ-0462 ನೇದ್ದರ
ಚಾಲಕ ಹನ್ಮಂತಪ್ಪ ತಂದೆ ರಂಗಪ್ಪ ಗುಡದೂರ. ಸಾ: ಗುಡ್ಡದ ದೇವಲಾಪೂರ ಇವರ ಮೇಲೆ ಸೂಕ್ತ ಕಾನೂನು
ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು,
ವಾಪಾಸ್ ಠಾಣೆಗೆ 05-10 ಎ.ಎಮ್
ಕ್ಕೆ ಬಂದು ಸದರಿ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment