1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 83/2017 ಕಲಂ:
78(3) Karnataka Police Act.
ದಿನಾಂಕ:-15-05-2017 ರಂದು ರಾತ್ರಿ 8-45 ಗಂಟೆಗೆ ಮರ್ಲಾನಹಳ್ಳಿ ಗ್ರಾಮದ ಗಂಗಾವತಿ
ಕಾರಟಗಿ ಮುಖ್ಯ ರಸ್ತೆಯ ಪಕ್ಕದ ಎಕ್ಸಿಸ್ ಬ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಮೂದು
ಮಾಡಿದ ಆರೋಪಿತರು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಶ್ರೀ ಧೀಪಕ್ ಆರ್
ಬೂಸರಡ್ಡಿ ಸಿಪಿಐ ಗಂಗಾವತಿ ಗ್ರಾಮೀಣ ವೃತ್ತರವರು ಮತ್ತು ಕಾರಟಗಿ ಠಾಣೆಯ ಸಿಬ್ಬಂದಿಯವರು ದಾಳಿ
ಮಾಡಿ ಹಿಡಿಯಲು 4 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು, ಆರೋಪಿತರಿಂದ ರೂ. 12500=00 ಗಳನ್ನು ಹಾಗೂ 6 ಮೋಬೈಲ್ ಫೊನ್
ಮತ್ತು ಮಟಕಾ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಆರೋಪಿತರಿಗೆ ಮಟ್ಕಾ ಪಟ್ಟಿ
ಮತ್ತು ಹಣವನ್ನು ಯಾರಿಗೆ ಕೊಡುತ್ತಿರಿ ಅಂತಾ ವಿಚಾರಿಸಲಾಗಿ ಮಟ್ಕಾ ಪಟ್ಟಿ ಮತ್ತು
ಹಣವನ್ನು ಆರೋಪಿ ನಂ 1 ಇತನು ತಾವೇ ಇಟ್ಟುಕೊಳ್ಳುವುದಾಗಿ ತಿಳಿಸಿರುತ್ತಾರೆ ಅಂತಾ ಆರೋಪಿತರ ಸಮೇತ
ಠಾಣೆಯಲ್ಲಿ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 52/2017 ಕಲಂ:
304(ಎ) ಐ.ಪಿ.ಸಿ:.
ದಿನಾಂಕ: 14-05-2017 ರಂದು ಬೆಳಗಿನ ಜಾವ 04 ಗಂಟೆ ಸುಮಾರಿಗೆ ಆರೋಪಿ ನಂ. 01, 02 ನೇದವರು
ಮೃತನಿಗೆ ತಮ್ಮ ಟ್ರ್ಯಾಕ್ಟರ್ ದಲ್ಲಿ ಉಸುಗು ತುಂಬುವ ಕೂಲಿಕೆಲಸಕ್ಕಾಗಿ ಯಡಿಯಾಪುರ ಸೀಮಾದ ಆರೋಪಿ
ನಂ. 03 ನೇದವನ ಜಮೀನಿನಲ್ಲಿ ಹೋಗಿದ್ದು ಅದೆ. ಸದರಿ ಆರೋಪಿತರು ಮೃತನು ಉಸುಗು ತುಂಬುವ ಕಾಲಕ್ಕೆ ಯಾವುದೇ
ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೇ ನಿರ್ಲಕ್ಷ್ಯತನದಿಂದ ಕೆಲಸ ಮಾಡಿಸಿರುವದರಿಂದ ಮುಂಜಾನೆ
05 ಗಂಟೆ ಸುಮಾರಿಗೆ ಉಸುಗು & ಮಣ್ಣಿನ ಪಡಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 86/2017 ಕಲಂ:
420 ಸಹಿತ 34 ಐ.ಪಿ.ಸಿ:.
ದಿನಾಂಕ 16-05-2015 ರಂದು ಮುಂಜಾನೆ 11-30 ಗಂಟೆಯ ಸುಮಾರಿಗೆ ಒಬ್ಬ ಅಂ. 24 ರಿಂದ 26 ವರ್ಷ ವಯಸ್ಸಿನ ಹಾಗೂ ಒಬ್ಬ ಅಂ.35 ರಿಂದ 38 ವರ್ಷ ವಯಸ್ಸಿನ ಇಬ್ಬರೂ ವ್ಯಕ್ತಿಗಳು ಗಂಗಾವತಿ ನಗರದ ಹಿರೇ ಜಂತಕಲ್ ನಲ್ಲಿರುವ ಫಿರ್ಯಾದಿದಾರರ ಮನೆಗೆ ಬಂದು
ಬೆಳ್ಳಿ ಮತ್ತು ಬಂಗಾರದ ಸಾಮಾನುಗಳನ್ನು ತೊಳೆದುಕೊಡುವುದಾಗಿ ಹೇಳಿ ಮೊದಲಿಗೆ ತಾಮ್ರದ
ಪಾತ್ರೆಯನ್ನು ತೊಳೆದುಕೊಟ್ಟು ನಂತರ ಬಂಗಾರದ ಆಭರಣಗಳನ್ನು ತೊಳೆದು ಕೊಡುವ ನೆಪದಲ್ಲಿ ಪಿರ್ಯಾಧಿದಾರರ
ತಾಯಿಯ 1] 60 ಗ್ರಾಂ ತೂಕದ 06 ಬಂಗಾರದ ಬಳೆಗಳು, ಅಂದಾಜು ಕಿಂ
1,50,000-00 ರೂ (02) 40 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ ಅಂ.ಕಿ.ರೂ. 60,000-00. ಪಿರ್ಯಾಧಿದಾರರ ತಂಗಿಯ (02) ಅಂ. 20 ಗ್ರಾಂ ತೂಕದ 02 ಬಂಗಾರದ ಬಳೆಗಳು ಅಂ.ಕಿ.ರೂ. 35,000-00 ಹೀಗೆ ಒಟ್ಟು 120 ಗ್ರಾಂ ತೂಕದ ಒಟ್ಟು ಅಂ.ಕಿ.ರೂ. 2,45,000-00 ಬೆಲೆ ಬಾಳುವ ಬಂಗಾರದ ಸಾಮಾನುಗಳನ್ನು ಮೋಸದಿಂದ ತೆಗೆದುಕೊಂಡು ಹೋಗಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment