1] ಬೇವೂರು ಪೊಲೀಸ್ ಠಾಣೆ ಗುನ್ನೆ ನಂ. 68/2017 ಕಲಂ. 87 Karnataka Police Act.
ದಿನಾಂಕ:-27.06.2017 ರಂದು
ಸಾಯಂಕಾಲ 4:45 ಗಂಟೆ ಸುಮಾರಿಗೆ ತರಲಕಟ್ಟಿ ಗ್ರಾಮದ ಸೀಮಾದಲ್ಲಿರುವ ಸಾರ್ವಜನಿಕ ಸ್ಥಳದ ಗಿಡ ಮರಗಳಿದ್ದ
ನಾಲಾದ ಹತ್ತಿರ ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಬೇವೂರ ಪಿಎಸ್ಐ
ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ 04 ಜನ 1} ಮುರ್ತುಜಾ ತಂದೆ ದಿವಾನಸಾಬ
ಮಕಾಂದರ ವಯ : 22 ವರ್ಷ ಜಾತಿ : ಮುಸ್ಲಿಂ ಉ : ಗೌಂಡಿಕೆಲಸ ಸಾ : ಕಂದಕೂರ ತಾ : ಕುಷ್ಟಗಿ 2} ಮಾಸಪ್ಪ
ತಂದೆ ಶಂಕ್ರಪ್ಪ ಗುಗ್ಗರಿ ವಯ: 35 ವರ್ಷ ಜಾತಿ: ಕುರುಬರು ಉ: ಒಕ್ಕಲುತನ ಸಾ: ತೊಪಲಕಟ್ಟಿ ತಾ: ಕುಷ್ಟಗಿ
3} ಶಂಕ್ರಪ್ಪ ತಂದೆ ಶರಣಪ್ಪ ಹುಗ್ಗಿ ವಯ: 32 ವರ್ಷ ಜಾತಿ: ಗಾಣಿಗೇರ ಉ: ಒಕ್ಕಲುತನ ಸಾ: ಯಡ್ಡೋಣಿ
4} ಕಲ್ಲಪ್ಪ ತಂದೆ ಹನಮಪ್ಪ ಹಕಾರಿ ವಯ: 35 ವರ್ಷ ಜಾತಿ: ಗಾಣಿಗೇರ ಉ: ಒಕ್ಕಲುತನ ಸಾ: ಹಿರೇಬೊಮ್ಮನಾಳ
ತಾ: ಕೊಪ್ಪಳ ಆರೋಪಿತರೆಲ್ಲರೂ ಸಿಕ್ಕಿ ಬಿದ್ದಿದ್ದು ಸದರಿ ಸಿಕ್ಕಿಬಿದ್ದ ಆರೋಪಿತರಿಂದ 7200=00 ರೂ
ನಗದು ಹಣ ಹಾಗೂ ಇಸ್ಪೆಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆಯೊಂದಿಗೆ
ತಮ್ಮ ವರದಿ ಸಲ್ಲಿಸಿದ್ದು ಇರುತ್ತದೆ. ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾದ್ದರಿಂದ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೂಕನೂರು ಪೊಲೀಸ್ ಠಾಣೆ ಗುನ್ನೆ ನಂ. 74/2017 ಕಲಂ. 379 ಐಪಿಸಿ & 4(1),
4(1A) R/W 21, 22 MMDR Act.
ದಿನಾಂಕ: 28-06-2017 ರಂದು ಮುಂಜಾನೆ 07-15 ಗಂಟೆ
ಸುಮಾರಿಗೆ ಕೂಕನೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ತಾಳ ಗ್ರಾಮದ ಊರಾಚೆ ಇರುವ ಮುತ್ತಾಳ ಸೀಮಾದಲ್ಲಿಯ
ಸಾರ್ವಜನಿಕ ಹಳ್ಳದಲ್ಲಿ ಆರೋಪಿತರು ವಾಹನಗಳಲ್ಲಿ ಮರಳನ್ನು ಸಾಗಿಸಲು ಇಲಾಖೆಯಿಂದ ಪರವಾನಿಗೆ ಪಡೆಯದೇ
ಅನಧಿಕೃತವಾಗಿ ಕಳ್ಳತನದಿಂದ ಜೆ.ಸಿ.ಬಿ. ನಂ. ಕೆಎ-06/ಎನ್-3217 ನೇದ್ದರ ಮೂಲಕ ಟಿಪ್ಪರ್ ನಂ. ಕೆಎ-37/ಎ-6336
& ಕೆಎ-20/8685 ನೇದ್ದವುಗಳಲ್ಲಿ ಲೋಡ ಮಾಡುತಿದ್ದಾಗ ಕೂಕನೂರ ಪಿ.ಎಸ್.ಐ. ರವರು ಪಂಚರ ಸಮಕ್ಷಮ
ಸಿಬ್ಬಂದಿಯೊಂದಿಗೆ ದಾಳಿ ಮಾಡಲು ಅಲ್ಲಿಂದ ಆರೋಪಿತರು ತಪ್ಪಿಸಿಕೊಂಡು ಓಡಿ ಹೋಗಿದ್ದು, ಆರೋಪಿ ಕೆ.ಎ37
ಎ-6336 ನೇದ್ದರ ಚಾಲಕ ಬಸವರಾಜ ತಂದೆ ದೇವಪ್ಪ ನಿಂಗರೆಡ್ಡಿ ಹಾಗೂ ಕೆ.ಎ. 20/8685 ನೇದ್ದರ ಚಾಲಕ
ಮಂಜುನಾಥ ಇಂಗಳಹಳ್ಳಿ ಇವರು ಸಾ: ಹುಲಕೋಟಿ ಇವರನ್ನು ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಈ ಬಗ್ಗೆ
ವಿವರವಾದ ದಾಳಿ ಪಂಚನಾಮೆಯನ್ನು ಮುಂಜಾನೆ 07-15 ಗಂಟೆಯಿಂದ 09-15 ಗಂಟೆವರೆಗೆ ಅನುಸರಿಸಿಕೊಂಡು,
ವಾಪಸ್ ಠಾಣೆಗೆ ಆರೋಪಿತರು ಹಾಗೂ ವಾಹನದೊಂದಿಗೆ ಬಂದು ಮುಂಜಾನೆ 10-15 ಗಂಟೆಗೆ ಟಿಪ್ಪರ್ ವಾಹನಗಳ
ಚಾಲಕರು & ಅದರ ಮಾಲೀಕರು, ಜೆ.ಸಿ.ಬಿ. ವಾಹನ ಚಾಲಕ & ಅದರ ಮಾಲೀಕರ ವಿರುದ್ದ ಕಾನೂನು ಪ್ರಕಾರ
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ.105/2017 ಕಲಂ: 323, 324, 354, 504 ಐ.ಪಿ.ಸಿ.
ದಿನಾಂಕ: 28-06-2017 ರಂದು ಸಾಯಂಕಾಲ 5-00 ಗಂಟೆಗೆ
ಫಿರ್ಯಾಧಿ ಶ್ರೀಮತಿ ಹುಲಿಗೆವ್ವ ಗಂಡ ಮಲ್ಲೇಶಪ್ಪ ಕುಕನೂರು ವಯಸ್ಸು: 48 ವರ್ಷ ಜಾತಿ: ಮೋಚಿ. ಉ:
ಹೊಲ ಮನೆಕೆಲಸ ಸಾ: ಕವಲೂರು ತಾ: ಕೊಪ್ಪಳ. ಇವರು ಠಾಣೆಗೆ ಹಾಜರಾಗಿ, ಹೇಳಿಕೆ ಫಿರ್ಯಾಧಿ ನೀಡಿದ್ದನ್ನು
ಗಣಕೀಕರಣ ಮಾಡಿಕೊಂಡಿದ್ದು ಅದರ ಸಾರಾಂಶವೆನೆಂದರೆ, ಫಿರ್ಯಾದಿದಾರರು ತನ್ನ ಮನೆಯ ಮುಂಭಾಗ ಇರುವಾಗ
ಈ ಹಿಂದೆ ತನ್ನ ತಂಗಿಯ ಗಂಡನಾದ ಆರೋಪಿ ಹನುಮಂತಪ್ಪನಿಗೆ ಸಂಸಾರದ ವಿಷಯದಲ್ಲಿ ಬುದ್ದಿವಾದ ಹೇಳಿದ್ದಕ್ಕೆ
ಅದನ್ನೆ ಮನಸ್ಸಿನಲ್ಲಿಟ್ಟುಕೊಂಡು ಆರೋಪಿತನು ಇಂದು ದಿನಾಂಕ: 28-06-2017 ರಂದು ಸಾಯಂಕಾಲ 4-00 ಗಂಟೆಯ
ಸುಮಾರಿಗೆ ಅವಾಚ್ಯವಾಗಿ ಬೈದು ಮೈಕೈ ಮುಟ್ಟಿ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದು ಆಗ ಬಿಡಿಸಲು ಬಂದ
ಆತನ ಹೆಂಡತಿ ಅತ್ತೆಯವರಿಗೆ ಮೈಕೈ ಮುಟ್ಟಿ ಎಳೆದಾಡಿ ಅವಾಚ್ಯವಾಗಿ ಬೈದಾಡಿ ಕೈಗಳಿಂದ ಮತ್ತು ಕಟ್ಟಿಗೆಯಿಂದ
ಹೊಡೆಬಡೆ ಮಾಡಿ ದು:ಖಪಾತಗೊಳಿಸಿದ್ದು ಆಗ ಅಲ್ಲಿಯೇ ಇದ್ದು ಗ್ರಾಮದ ಮಲೇಶಪ್ಪ ಹಾಗೂ ಹನಮಪ್ಪ ಎಂಬುವರು
ಬುದ್ದಿವಾದ ಹೇಳಿ ಜಗಳ ಬಿಡಿಸಿದರು. ನಂತರ ಗಾಯಗೊಂಡ ಗಾಯಾಳುಗಳು ಎಲ್ಲರೂ ಪೊಲೀಸ್ ಠಾಣೆಗೆ ಬಂದು ಫಿರ್ಯಾದಿದಾರಳು
ಹೇಳಿಕೆ ದೂರನ್ನು ಕೊಟ್ಟಿದ್ದು ಚಿಕಿತ್ಸೆ ಕುರಿತು ಆಸ್ಪತ್ರೆಗೆ ಕಳುಹಿಸಿ ಫಿರ್ಯಾದಿಗೆ ಪಿಯರ್ಾದಿ
ತಂಗಿಗೆ, ತಾಯಿಗೆ ಮೈಕೈ ಮುಟ್ಟಿ ಎಳೆದಾಡಿ ಅವಾಚ್ಯವಾಗಿ ಬೈದು ಜಗಳ ತಗೆದು ಕೈಗಳಿಂದ ಕಲ್ಲಿನಿಂದ ಮತ್ತು
ಕಟ್ಟಿಗೆಯಿಂದ ಹೊಡೆಬಡೆ ಮಾಡಿರುತ್ತಾನೆ ಕಾರಣ ಹನುಮಂತಪ್ಪನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ
ಅಂತಾ ಮುಂತಾಗಿ ಕೊಟ್ಟ ಫಿರ್ಯಾಧಿ ಸಾರಾಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
4] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ.83/2017 ಕಲಂ: 363 ಐ.ಪಿ.ಸಿ.
ದಿನಾಂಕ:
28-03-2017 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದಿದಾರರಾದ ಫಕ್ರುಧ್ಧೀನ್ ತಂದೆ ಗುಲಾಮ್ ಮೇಜದಾನಿ
ವಣಗೇರಿ, ವಯ: 38 ವರ್ಷ ಜಾತಿ: ಮುಸ್ಲಿಂ ಉ: ಕೆ.ಎಸ್.ಆರ್.ಟಿ.ಸಿ. ಯಲಬುರ್ಗಾದಲ್ಲಿ ಕಂಡಕ್ಟರ್ ಸಾ:
ಯಲಬುರ್ಗಾ ಜಿ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಫಿರ್ಯಾದಿಯನ್ನು
ಹಾಜರು ಪಡಿಸಿದ್ದು, ಅದರ ಸಾರಾಂಶವೆನೆಂದರೆ, ಫಿರ್ಯಾದಿದಾರರ ಮಗಳಾದ ಹುಸ್ನಾನಾಜ್ ತಂದೆ ಫಕ್ರುಧ್ಧೀನ್ ವಣಗೇರಿ, ವಯ: 2 ವರ್ಷ, 6 ತಿಂಗಳು
ಜಾತಿ: ಮುಸ್ಲಿಂ ಸಾ: ಯಲಬುರ್ಗಾ ಜಿ: ಕೊಪ್ಪಳ ಇವಳು ದಿನಾಂಕ: 28-06-2017 ರಂದು
ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ನಮ್ಮ ಕುಲಸ್ಥರಾದ ಶೇಕಿಲಾ ಬೇಗಂ ಬುಲ್ಡಿಯಾರ್ ಇವರ ಮನೆಯಲ್ಲಿ
ಮಲಗಿಕೊಂಡಿದ್ದವಳು. ಮನೆಯಿಂದ ಎದ್ದು ಬಂದವಳು. ನಮ್ಮ ಮನೆಗೆ ಬರದೇ ಎಲ್ಲಿಯೋ ಕಾಣೆಯಾಗಿರುತ್ತಾಳೋ
ಅಥವಾ ಯಾರಾದರೂ ಯಾವುದಾದರು ಉದ್ಧೇಶದಿಂದ ಅಪಹರಣ ಮಾಡಿಕೊಂಡು ಹೋಗಿರುತ್ತಾರೋ ಹೇಗೋ ತಿಳಿದಿರುವುದಿಲ್ಲ.
ಕಾರಣ ನನ್ನ ಮಗಳನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ.69/2017 ಕಲಂ. 273, 284, ಐ.ಪಿ.ಸಿ. ಹಾಗೂ 32, 34 ಕೆ.ಇ.
ಕಾಯ್ದೆ.
ದಿನಾಂಕ:
28-06-2017 ರಂದು ಸಾಯಾಂಕಾಲ 4-45 ಗಂಟೆಗೆ ಹನಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಪರಮನಟ್ಟಿ ಸೀಮಾದಲ್ಲಿ
ಸಾರ್ವಜನಿಕ ಸ್ಥಳದಲ್ಲಿ ಕಳ್ಳಭಟ್ಟಿ ಸರಾಯಿ ಮಾರಟ ಮಾಡುವ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ಕೂಡಲೆ
ಸಿ.ಪಿ.ಐ ಕುಷ್ಟಗಿ ಇವರ ನೇತೃತ್ವದಲ್ಲಿ ಪಿ.ಎಸ್.ಐ ರವರು ಹಾಗೂ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ
ಹೆಚ್.ಸಿ-83, 210 ಪಿ.ಸಿ-168, 436, ಮ.ಪಿ.ಸಿ-211 ರವರೊಂದಿಗೆ ಪರಮನಟ್ಟಿ ಸೀಮಾದಲ್ಲಿ ಕಳ್ಳಭಟ್ಟಿ
ಸರಾಯಿ ಮಾರಾಟ ಮಾಡುವವರ ಮೇಲೆ ದಾಳಿ ಮಾಡಿದಾಗ ಕಳ್ಳಭಟ್ಟಿ ತೆಗೆದುಕೊಳ್ಳಲು ಬಂದವರು ಓಡಿ ಹೋಗಿದ್ದು,
ಕಳ್ಳಭಟ್ಟಿ ಸರಾಯಿ ಮಾರುವ ಮಹಿಳೆ ಮಂಜುಳಾ ಸಿಕ್ಕಿಬಿದ್ದಿದ್ದು, ಆಕೆಯ ಹತ್ತಿರ 2 ಲೀಟರ್ ಬಾಟಲಿಯಲ್ಲಿ
ಕಳ್ಳಭಟ್ಟಿ ಸರಾಯಿ ತುಂಬಿದ್ದು, ಇನ್ನೊಂದು 2 ಲೀಟರ್ ಪ್ಲಾಸ್ಟಿಕ್ ಬಾಟಲಿಯಲ್ಲಿ ಅರ್ಧ ಕಳ್ಳಭಟ್ಟಿ
ಸರಾಯಿ ತುಂಬಿದ್ದು, ಹಾಗೂ ನಗದು 150/- ರೂ ಸಿಕ್ಕಿದ್ದು, ಕಳ್ಳಭಟ್ಟಿ ಸರಾಯಿ 3 ಲೀಟರ್ ಆಗುತ್ತಿದ್ದು,
ಅದರ ಅಂ:ಕಿ: 600/- ರೂ ಆಗುತ್ತಿದ್ದು, ಸದರ ದಾಳಿ ಪಂಚನಾಮೆಯನ್ನು
ಇಂದು ಸಾಯಂಕಾಲ 5-35 ಗಂಟೆಯಿಂದ 6-50 ಗಂಟೆಯವರಗೆ ನಿರ್ವಹಿಸಿ ಆರೋಪಿತಳು ಕಳ್ಳಭಟ್ಟಿ
ಸರಾಯಿಯನ್ನು ಸರ್ಕಾರ ನಿಷೇಧಿಸಿದರೂ ಸಹಿತ ಇವಳು ತನ್ನ ಲಾಭಕ್ಕೋಸ್ಕರ ಮಾನವ ಜೀವಕ್ಕೆ
ಅಪಾಯಕಾರಿಯಾಗುವಂತ ಅಪಾಯಕಾರಿ ರಸಾಯನಿಕ ವಸ್ತುಗಳನ್ನು ಮಿಶ್ರಣ ಮಾಡಿ ಕಳ್ಳಭಟ್ಟಿ ಸರಾಯಿ
ತಯಾರಿಸಿ ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ: 11 ಮತ್ತು 14 ರ ಉಲ್ಲಂಘನೆ ಮಾಡಿ ಕಲಂ: 32,
34 ಶಿಕ್ಷಾರ್ಹ ಅಪರಾಧವೆಸಿದ್ದರಿಂದ ಸದರಿಯವಳನ್ನು ಮಹಿಳಾ ಪಿ.ಸಿ ರವರ ಸಹಾಯದಿಂದ ವಶಕ್ಕೆ
ತೆಗೆದುಕೊಂಡು ಬಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment