Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, June 3, 2017

1]  ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 57/2017 ಕಲಂ. 279, 337, 338, 304(ಎ)  ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ 01-06-2017 ರಂದು ಫಿರ್ಯಾದಿದಾರಳು ತನ್ನ ಸಂಭಂಧಿಕರಾದ ಇತರೇ ನಾಲ್ಕು ಜನ ಮಹಿಳೆಯರೊಂದಿಗೆ ಆರೋಪಿತನ ಅಟೋದಲ್ಲಿ ಕುಳಿತುಕೊಂಡು ಗಂಗಾವತಿಯನ್ನು ಮಧ್ಯಾಹ್ನ 4-00 ಗಂಟೆಗೆ ಬಿಟ್ಟು ಕನಕಗಿರಿಯ ಕಡೆಗೆ ಬರುತ್ತಿರುವಾಗ ಆರೋಪಿತನು ತನ್ನ ಅಟೋವನ್ನು ಅತೀ ವೇಗ ಹಾಗೂ ಅಲಕ್ಷ್ಯತನದಿಂದ ವೇಗವಾಗಿ ನಡೆಸಿಕೊಂಡು ಬಂದು ಗಂಗಾವತಿ-ಕನಕಗಿರಿ ರಸ್ತೆಯ ಮೇಲೆ ಸುಳೇಕಲ್ ಕ್ರಾಸ್ ಹತ್ತಿರ ಸಂಜೆ 5-00 ಗಂಟೆಯ ಸುಮಾರಿಗೆ ಅಟೋವನ್ನು ಪಲ್ಟಿ ಮಾಡಿ ಓಡಿ ಹೋಗಿದ್ದು ಇದರಿಂದಾಗಿ ಫಿಯರ್ಾದಿದಾರಳಿಗೆ ಬಲಭುಜ, ಎಡಗೈ ಮೇಲೆ, ಮೊಳಕಾಲಿನ ಹತ್ತಿರ ಭಾರಿ ಒಳಪೆಟ್ಟು ಹಾಗೂ ರಕ್ತಗಾಯವುಂಟಾಗಿದ್ದು ಇತರೇ ಎಲ್ಲರಿಗೂ ಕೂಡ ಸಾದಾ ಮತ್ತು ಭಾರಿ ಒಳಪೆಟ್ಟು ಹಾಗೂ ರಕ್ತಗಾಯವುಂಟಾಗಿದ್ದು ಕಾರಣ ಅಪಘಾತಪಡಿಸಿದ 03 ಗಾಲಿಯ ಅಪೇ ಕಾರ್ಗೋ ವಾಹನ ನಂ.ಕೆಎ-36/6428 ನೇದ್ದರ ಚಾಲಕ ರವಿ ತಂದೆ ಶ್ಯಾಮಣ್ಣ ವೆಂಕಟಗಿರಿ ವಯ. 21 ವರ್ಷ ಜಾ.ಈಳಿಗೇರ .ಅಟೋ ಡ್ರೈವರ್ ಸಾ. ದಾಸನಾಳ ತಾ.ಗಂಗಾವತಿ ಈತನ ಮೇಲೆ ಕೇಸ್ ಮಾಡಲು ವಿನಂತಿ ಅಂತಾ ಕೊಟ್ಟ ಹೇಳಿಕೆ ಫಿರ್ಯಾಧಿಯನ್ನು ವಾಪಸ್ ಠಾಣೆಗೆ ರಾತ್ರಿ 10-30 ಗಂಟೆಗೆ ಹಾಜರುಪಡಿಸಿದ್ದು ಸದರಿ ಸಾರಾಂಶದ ಮೇಲಿನಿಂದ ಠಾಣಾ ಗುನ್ನೆ ನಂ. 57/17 ಕಲಂ 279 337 338 ಐಪಿಸಿ ಹಾಗೂ 187 .ಎಂ.ವಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ಸದರ ಪ್ರಕರಣದಲ್ಲಿ ಭಾರಿ ಗಾಯಾಗೊಂಡ ಗಾಯಾಳು ಪಕೀರಮ್ಮ ಗಂಡ ಯಂಕಪ್ಪ ವಯ.35 ವರ್ಷ .ಮನೆಗೆಲಸ ಸಾ.ಜಂಗಮರ ಕಲ್ಗುಡಿ ಇವಳನ್ನು ನಿನ್ನೆ ದಿನಾಂಕ 01-06-2017 ರಂದು ಗಂಗಾವತಿ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಇಲಾಜಿಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆಸದರ ಪ್ರಕರಣದಲ್ಲಿ ಭಾರಿ ಗಾಯಗೊಂಡ ಗಾಯಾಳು ಪಕೀರಮ್ಮ ಗಂಡ ಯಂಕಪ್ಪ ವಯ.35 ವರ್ಷ .ಮನೆಗೆಲಸ ಸಾ.ಜಂಗಮರ ಕಲ್ಗುಡಿ ಇವಳನ್ನು ಇಂದು ದಿನಾಂಕ 02-06-2017 ರಂದು ಬಳ್ಳಾರಿ ಆಸ್ಪತ್ರೆಯಿಂದ ಹೆಚ್ಚಿನ ಇಲಾಜು ಕುರಿತು ಹುಬ್ಬಳ್ಳಿಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಗದಗ ದಾಟಿದ ನಂತರ ಅಂ. 11-00 ಗಂಟೆಯ ಸುಮಾರಿಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2]  ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 58/2017 ಕಲಂ. 78(3) Karnataka Police Act.
ದಿನಾಂಕ 02/06/2017 ರಂದು ಸಂಜೆ 5-30 ಗಂಟೆಯ ಸುಮಾರಿಗೆ ಮುಸಲಾಪೂರ ಗ್ರಾಮದ ಅಂಬೇಡ್ಕರ್ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಓ.ಸಿ.ಮಟಕಾ ನಡೆಸಿದ್ದಾರೆ ಅಂತಾ ಭಾತ್ಮಿ ಬಂದ ಮೇರೆಗೆ ಶಶಿಕಾಂತ ರಾಥೋಡ ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಮುಸಲಾಪೂರ ಗ್ರಾಮದ ಶ್ರೀ ಅಂಬೇಡ್ಕರ್ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತದೇ ಬನ್ನೀ ಎಂಬ ನಸೀಬದ ಜೂಜಾಟ ಅಂತಾ ಕೂಗುತ್ತಾ ಅವರಿಂದ ಹಣ ಪಡೆದು ಅವರಿಗೆ ಓ.ಸಿ. ನಂಬರಗಳನ್ನು ಬರೆದು ಕೊಡುತ್ತಾ ಮೋಸ ಮಾಡುತ್ತಿರುವದನ್ನು ಖಾತ್ರಿ ಪಡೆಸಿಕೊಂಡು ಒಮ್ಮೆಲೆ ಪಂಚರೊಂದಿಗೆ ದಾಳಿ ಮಾಡಲು ಆರೋಪಿತನಿಂದ 01 ಮಟಕಾ ಬರೆದ ಪಟ್ಟಿ, 1 ಬಾಲ್ ಪೆನ್ನು ನಗದು ಹಣ ರೂ. 1750=00 ಸಿಕ್ಕಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3]  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 123/2017 ಕಲಂ. 504, 341, 326, 506 ಸಹಿತ 34 ಐ.ಪಿ.ಸಿ:.

ದಿ:02-06-2017 ರಂದು ಮದ್ಯಾಹ್ನ ದನದ ಸಂತೆಗೆ ಅಂತಾ ಗಿಣಿಗೇರಿಗೆ ಹೋಗಿದ್ದು ಸದರಿ ಸಂತೆಯಲ್ಲಿ ಫಿರ್ಯಾದಿ ಅಣ್ಣ ದೇವಪ್ಪನು ಸಹ ತನ್ನ ಒಂದು ಎತ್ತನ್ನು ಮಾರಾಟ ಮಾಡಲು ಬಂದಿದ್ದನು. ಸದರಿ ಎತ್ತ ನ್ನೆ ಟಣಕನಕಲ್ ಗ್ರಾಮದಲ್ಲಿರುವ ತನ್ನ ಸಂಬಂಧಿಕ ಆರೋಪಿ ಶಂಕ್ರಪ್ಪನು ತನಗೆ ಖರೀದಿಗೆ ಅಂತಾ ಆರೋಪಿ ಮಲ್ಲಪ್ಪ ಇವರ ಮುಖಾಂತರ ವ್ಯವಹಾರ ಮುಗಿಸಿಕೊಂಡನು. ಹೀಗೆ ತನ್ನ ಅಣ್ಣ ದೇವಪ್ಪನು ಎತ್ತನ್ನು ಮಾರಾಟ ಮಾಡಿದ ಹಣ ಪಡೆದುಕೊಂಡು ವಾಪಾಸ್ ಊರಿಗೆ ಹೋದನು. ನಂತರ ಫಿರ್ಯಾದಿದಾರರು ಸಂತೆ ಮುಗಿಸಿಕೊಂಡು ಸಂಜೆ ಊರಿಗೆ ಅಂತಾ ಹೋಗುವಾಗ ಮಾರ್ಗದ ಹಟ್ಟಿ ಕ್ರಾಸ್ ದಲ್ಲಿರುವ ಢಾಬಾದಲ್ಲಿ ರಾತ್ರಿ 7-00 ಗಂಟೆಯ ಸುಮಾರಿಗೆ ಊಟಕ್ಕೆ ಹೋಗಿದ್ದು ಇರುತ್ತದೆ. ಅದೇ ಸಮಯಕ್ಕೆ ಫಿರ್ಯಾದಿಯು ಕುಳಿತ ಜಾಗೆಯಲ್ಲಿ ಆರೋಪಿತರಿಬ್ಬರೂ ಬಂದು ಅದೇ ಟೇಬಲ್ ಮುಂದೆ ಕುಳಿತುಕೊಂಡು, ಫಿರ್ಯಾದಿಗೆ ಇವತ್ತು ಸಂತೆಯಲ್ಲಿ ದೇವಪ್ಪನ ಎತ್ತು ಕೊಡಿಸಿಯಲ್ಲಲೇ ನಮಗೆ ಬಹಳ ದುಬಾರಿಯಾಯಿತು. ನಮಗೆ ಲಾಸ್ ಮಾಡಿದಿಯಲೇ ನಾಗ್ಯಾ ಎಂದು ಬಾಯಿ ಮಾಡಿದ್ದು, ಅವರಿಗೆ ಫಿರ್ಯಾದಿತನು ನೀವು ಸಂಬಂಧಿಕರಿದ್ದೀರಿ ಕಡಿಮೆ ಬೆಲೆಯಲ್ಲಿ ವ್ಯವಹಾರ ಆಗಿದೆ ಯಾವುದೇ ಲಾಸ್ ಇಲ್ಲ ಎಂದು ಹೇಳಿದಾಗ ಆರೋಪಿ ದೇವಪ್ಪನು ಒಮ್ಮೆಲೆ ಸಿಟ್ಟಿನಿಂದ ಫಿರ್ಯಾದಿಗೆ ನಿನ್ನದು ಸಂತೆಯಲ್ಲಿ ತಿಂಡಿ ಜಾಸ್ತಿಯಾಗಿದೆ ನಮಗೆಲ್ಲಾ ಮೋಸ ಮಾಡತೀಯಾ ಇವತ್ತು ಕುಡಿದು ಊಟ ಮಾಡಿದ ಬಿಲ್ಲು ನೀನೆ ಕೊಡು ಎಂದು ಬೈಯ್ದನು. ಫಿರ್ಯಾದಿಯು ಅವರಿಗೆ ಸರಿಯಾಗಿ ಮರ್ಯಾದೆ ಕೊಟ್ಟು ಮಾತನಾಡು ಎಂದಿದ್ದಕ್ಕೆ ಅವರು ಕೇಳದೇ ಮೂರ್ತ ವಿಸರ್ಜನೆಗೆ ಢಾಬಾದ ಹಿಂದೆ ಹೋದಾಗ ಹಿಂದಿನಿಂದ ಬಂದ ಇಬ್ಬರೂ ಫಿರ್ಯಾದಿಗೆ ಪುನಃ ಜಗಳ ತೆಗೆದು ಎಲ್ಲಿಗೆ ಹೋಗತೀಯಲೇ ಸೂಳೆಮಗನೇ ಎಂದು ಬೈಯ್ದು, ಆರೋಪಿ ಮಲ್ಲಪ್ಪನು ತೆಕ್ಕೆಬಡಿದು ಕೆಳಗಡೆ ಕೆಡವಿ ಅಲ್ಲಿಯೇ ಬಿದ್ದಿದ್ದ ಒಡೆದ ಬೀರ ಬಾಟಲಿ ತೆಗೆದುಕೊಂಡು ಈ ಸೂಳೇಮಗನದು ಜಾಸ್ತಿಯಾಗಿದೆ ಎಂದು ಸಿಟ್ಟಿನಿಂದ ಫಿರ್ಯಾದಿಯ ತಲೆಗೆ ಚುಚ್ಚಿದನು. ಅಲ್ಲದೇ ಆರೋಪಿ ಶಂಕ್ರಪ್ಪನು ಕೂಡಾ ಅದೇ ಒಡೆದ ಬೀರ ಬಾಟಲಿ ತೆಗೆದುಕೊಂಡು ಫಿರ್ಯಾದಿಯ ತಲೆಗೆ ಜೋರಾಗಿ ಚುಚ್ಚಿದಾಗ ತಲೆಯಲ್ಲಿ ಭಾರಿ ರಕ್ತಗಾಯವಾಗಿರುತ್ತದೆ. ನಂತರ ಇನ್ನೊಂದು ಸಲ ದನದ ಸಂತೆಗೆ ಬಂದರೆ ನಿನಗೆ ಸಾಯಿಸುತ್ತೇವೆ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ. ನಂತರ ಮಳೆ ಬಂದಾಗ ಪ್ರಜ್ಞೆ ಬಂದು ಫಿರ್ಯಾದಿತನು ಸಮೀಪದ ತನ್ನ ಊರಿಗೆ ಹೋಗಿ ಮನೆಯವರಿಗೆ  ತಿಳಿಸಿದಾಗ ಅವರು ಕೊಪ್ಪಳದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ಸೇರಿಸಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008