Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, October 30, 2017

1] ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ.254/2017 ಕಲಂ. 380 ಐ.ಪಿ.ಸಿ.
ದಿನಾಂಕ:-29-10-2017 ರಂದು ಮುಂಜಾನೆ 9-45 ಗಂಟೆಗೆ ಫಿರ್ಯಾಧಿದಾರನ ಶ್ರೀ ಮಹಾಂತಗೌಡ ತಂದೆ ಶಿವನಗೌಡ ಪಾಟೀಲ್ ಸಾ: ಕಾರಟಗಿ ಇವರು ಠಾಣೆಗೆ ಹಾಜರಾಗಿ ಲಿಖಿತ  ಫಿರ್ಯಾಧಿ ಕೊಟ್ಟದ್ದು, ಅದರ ಸಾರಾಂಶವೇನೆಂದರೆ,  ದಿನಾಂಕ 28-10-2017 ರಂದು ನಾನು ಹಾಗೂ ನನ್ನ ಅಕ್ಕ ಡಾ: ಸುಜತಾ ಪಾಟೀಲ್ ಜಿಲ್ಲಾ ಆಯುಷ ಅಧಿಕಾರಿಗಳು  ಗದಗ ಹಾಗೂ ನನ್ನ ತಾಯಿ ಲಲಿತಾ ರವರೊಂದಿಗೆ ಊಟ ಮಾಡಿ ಕೌಟುಂಬಿಕ ವಿಷಯಗಳನ್ನು ರಾತ್ರಿ ಸುಮಾರು 1-00 ಗಂಟೆಯವರೆಗೆ ಮಾತನಾಡಿ ಮಲಗಿದೆವು. ದಿನಾಂಕ 29-10-2017 ರಂದು ಬೆಳಗಿನ ಜಾವ 3-45 ಕ್ಕೆ ಎಚ್ಚರವಾಗಿ ನನ್ನ ಅಕ್ಕನ ವ್ಯಾನಿಟಿ ಬ್ಯಾಗ್ ನ್ನು ಯಾರೋ ಚೆಕ್ ಮಾಡುತ್ತಿರುವದುನ್ನು ಗಮನಿಸಿ, ನನ್ನ ಅಕ್ಕ ಮತ್ತು ತಾಯಿಗೆ ತಿಳಿಸಿದೆನು ನಂತರ ನಾವೆಲ್ಲರೂ ಗಾಬರಿಯಾಗಿ ಜೋರಾಗಿ ಕಿರುಚಿಕೊಂಡು ಮನೆಯಿಂದ ಹೊರ ಬಂದು ಸುತ್ತಲಿನ ಜರನ್ನು ವಿಚಾರಿಸಲಾಗಿ, ಹಾಗೂ ನಮ್ಮ ಮನೆಯ ವಸ್ತುಗಳನ್ನು ಪರೀಕ್ಷಿಸಲಾಗಿ ನಮ್ಮ ಮನೆಯಲ್ಲಿ ಕಳ್ಳತನವಾಗಿರುವದು ಗೊತ್ತಾಗಿರುತ್ತದೆ. ನಮ್ಮ ಮನೆಯ ಸಮೀಪವಿರುವ ಶ್ರೀದೇವಿ ಪೆಟ್ರೋಲ್ ಬಂಕ್ ನ ವಾಚಮ್ಯಾನ ನ್ನು ವಿಚಾರಿಸಲಾಗಿ ಸುಮಾರು 3 ರಿಂದ 4 ಜನ ಕಳ್ಳರು TATA ACE  ವಾಹನದಲ್ಲಿ ಬಂದಿರುವುದು ತಿಳಿದು ಬಂದಿರುತ್ತದೆ ಹಾಗೂ ಒಬ್ಬನು ಮನೆಯ ಒಳಗೆ ಬಂದಿರುವದು ತಿಳಿದು ಬಂದಿರುತ್ತದೆ. ಹಾಗೂ  TATA ACE ವಾಹನ ಹಳೆಯ ಬಸ್ ನಿಲ್ದಾಣದ ಕಡೆಗೆ ಕಳ್ಳನು ನಮ್ಮ ಮನೆಯ ಹಿಂದೆ  ಓಡಿ ಹೋಗಿರುತ್ತಾನೆ. ಕಳ್ಳರು ನಮ್ಮ ಮನೆಯಿಂದ  ಈ ಕೆಳ ಕಾಣಿಸಿದ ವಸ್ತುಗಳನ್ನು ದೋಚಿರುತ್ತಾರೆ.1)    3 ತೊಲೆ ಬಂಗಾರದ ಬಳೆಗಳು ಮೊತ್ತ ಸುಮಾರು ರೂ.76,000/-2)    ನಗದು ಹಣ ರೂ. 10,000/-3)    Redmi Note (4) Mobile ( Ph No.9448263181) ರೂ.14000/-4)    HTC Desire (626) Mobile  (Ph No.9738834935 ) ರೂ.13000/-5)    Fastrack Watch ರೂ.10,000/-6)    H.P. Pen drive ರೂ.1000/-ಇವೆಲ್ಲವುಗಳ  ಒಟ್ಟು ಮೌಲ್ಯ ರೂ.1,24,000/- ಆಗುತ್ತದೆ. ಕಾರಣ ನಮ್ಮ ಮನೆಯಿಂದ ಕಳುವಾದ ವಸ್ತುಗಳನ್ನು ಪತ್ತೆ ಹಚ್ಚಿ ಕಳ್ಳರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಲಿಖಿತ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಸಂಚಾರಿ ಪೊಲೀಸ್  ಠಾಣೆ  ಗುನ್ನೆ ನಂ. 46/2017  ಕಲಂ. 279, 338 ಐ.ಪಿ.ಸಿ.
ದಿನಾಂಕ. 29-10-2017 ರಂದು ಸಂಜೆ 6-00 ಗಂಟೆಗೆ ಫಿರ್ಯಾದಿ ಶ್ರೀ ರಾಮಣ್ಣ ಮಸೂತಿ ಇವರು ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿದ್ದು ಅವರ ಹೇಳಿಕೆಯನ್ನು ಗಣಕೀಕರಣ ಮಾಡಿಕೊಂಡಿದ್ದು, ಅದರ ಸಾರಾಂಶವೆನೆಂದರೆ, ದಿನಾಂಕ: 29-10-2017 ರಂದು ಸಂಜೆ 4-00 ಗಂಟೆ ಸುಮಾರು ಗಂಗಾವತಿಗೆ ಟ್ರಿಪ್ ಹೋಗುವ ಕುರಿತು ಕೊಪ್ಪಳ ಬಸ್ ನಿಲ್ದಾಣ ಮುಂದೆ ಗಂಗಾವತಿಗೆ ಹೋಗುವ ಪ್ರಯಾಣಿಕನನ್ನು ಹತ್ತಿಸಿಕೊಂಡು ಕೊಪ್ಪಳ ನಗರದ ಕೊಪ್ಪಳ-ಹೊಸಪೇಟೆ ಎನ್.ಹೆಚ್.63 ರಸ್ತೆಯ ಮೇಲೆ   ವಿಜಯಾ ಬ್ಯಾಂಕ ಮುಂದೆ  ಬಸವೇಶ್ವರ ಸರ್ಕಲ್ ಟ್ರಾಫಿಕ್ ಸಿಗ್ನಲ ಲೈಟ್ ನಿಲ್ಲುವ ಸೂಚನೆ ಬಂದಿದ್ದರಿಂದ  ಕ್ರಷರ್ ವಾಹನವನ್ನು ನಿಲ್ಲಿಸಿದ್ದು, ಆಗ ಕ್ರಷರ್ ವಾಹನದಲ್ಲಿದ್ದ ಕ್ಲೀನರ್ ಸಲೀಮಪಾಶಾ ಈತನು ಹಿಂದಿನ ಬಾಗಿಲು ತೆಗೆದು ಇಳಿಯುತ್ತಿರುವಾಗ ಅದೇ ವೇಳೆಗೆ ಹಿಂದಿನಿಂದ ಒಂದು ಬಿಳಿ ಬಣ್ಣದ ಮಾರುತಿ ಸಿಪ್ಟ್ ಕಾರಿನ ಚಾಲಕ ತನ್ನ ಕಾರನ್ನು ನಿರ್ಲಕ್ಷ್ಯತನದಿಂದ ನಡೆಸಿ ವಾಹನ ನಡುವಿನ ಅಂತರವನ್ನು ಕಾಯ್ದುಕೊಳ್ಳದೆ ಬಂದು ನಮ್ಮ ಕ್ರಷರ್ ವಾಹನಕ್ಕೆ ಹಿಂದಿನ ಬಾಗಿಲಿಗೆ ಬಂದು ಟಕ್ಕರ್ ಕೊಟ್ಟಿದ್ದುಇದರಿಂದ ಕ್ರಷರ್ ಹಿಂದಿನ ಬಾಗಿಲು ನಮ್ಮ ಗಾಡಿ ಕ್ಲೀನರ್ ಸಲೀಮಪಾಶಾ ಈತನ ಬಲಗಾಲಿಗೆ ಜೋರಾಗಿ ಬಡಿದಿದ್ದು ಇದರಿಂದ ಅವನ ಬಲಗಾಲಿನ ಮೊಣಕಾಲು ಕೆಳಗೆ  ಭಾರಿ ರಕ್ತಗಾಯವಾಗಿ ಎಲುಬು ಮುರಿದಂತಾಗಿದ್ದು ಇರುತ್ತದೆ. ನಂತರ ಗಾಯಾಳು ಸಲೀಮಪಾಶಾ ಈತನನ್ನು ಚಿಕಿತ್ಸೆ ಕುರಿತು ಕ್ರಶರ್ ವಾಹನದಲ್ಲಿ ಕೊಪ್ಪಳದ ಕಿಮ್ಸ ಕುರಿತು ಕರೆದುಕೊಂಡು ಹೋಗಿ ದಾಖಲುಮಾಡಿರುತ್ತೆವೆ. ಅಂತಾ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೂಕನೂರು ಪೊಲೀಸ್  ಠಾಣೆ  ಗುನ್ನೆ ನಂ. 147/2017  ಕಲಂ. 457, 380 ಐ.ಪಿ.ಸಿ.

ದಿನಾಂಕ: 28-10-2017 ರಂದು ರಾತ್ರಿ 11 ಗಂಟೆಯಿಂದ ದಿನಾಂಕ: 29-10-2017 ಮಂಜಾನೆ 05 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿ ಮಲ್ಲಿಕಾರ್ಜುನ ಇವರ ವಾಸದ ಬಾಡಿಗೆ ಮನೆಯ ಬಾಗಿಲಿಗೆ ಹಾಕೀದ ಬೀಗ ಮುರಿದು ಮನೆಯಲ್ಲಿಯ ಟ್ರಜರಿಯಲ್ಲಿಟ್ಟಿದ್ದ 97 1/2 ಗ್ರಾಂ ( 09 ತೊಲೆ 7 1/2 ಗ್ರಾಂ) ಬಂಗಾರದ ಆಭರಣಗಳು ಅಂ.ಕಿ. 2,46,000/-ರೂ. & 70 ಗ್ರಾಂ (07 ತೊಲೆ) ಬೆಳ್ಳಿ ಸಾಮಾನುಗಳು ಅಂ.ಕಿ. 2,800/-ರೂ. ಹಾಗೂ ನಗದು ಹಣ 1,11,000/- ರೂ ಹೀಗೆ ಒಟ್ಟು 3,59,800/-ರೂ. ಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಕಳ್ಳರನ್ನು ಹಾಗೂ ಕಳ್ಳತನವಾದ ಬಂಗಾರ, ಬೆಳ್ಳಿಯ ಆಭರಣಗಳು, ನಗದುಹಣವನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008