1] ಕುಕನೂರ ಪೊಲೀಸ್
ಠಾಣೆ ಗುನ್ನೆ ನಂ: 201/2017 ಕಲಂ. 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ.
ಕಾಯ್ದೆ:
ದಿನಾಂಕ:25-12-2017 ರಂದು ಆರೋಪಿ ನಂ. 01 ನೇದವನು ಹಿಟಾಚಿ ಆಯಿಲ್ ಪೈಪ್ ತರುವ ಸಲುವಾಗಿ
ಮೋಟಾರ್ ಸೈಕಲ್ ನಂ. ಕೆಎ-37/ವಿ-4854 ನೇದ್ದರ ಹಿಂದುಗಡೆ ಸೀಟಿನಲ್ಲಿ ಪಿರ್ಯಾದಿದಾರನಿಗೆ ಕುಳಿಸಿಕೊಂಡು
ಯಲಬುರ್ಗಾದಿಂದ ಕೊಪ್ಪಳ ಕಡೆಗೆ ಅತಿಜೋರು ಅಲಕ್ಷತನದಿಂದ ಚಲಾಯಿಸಿಕೊಂಡು ಹೋರಟಿದ್ದಾಗ ರಾತ್ರಿ
7-30 ಗಂಟೆ ಸುಮಾರು ರಾಜೂರು ದಾಟಿ ಕುಕನೂರು ಕಡೆಗೆ 01 ಕಿ.ಮೀ. ಅಂತರದಲ್ಲಿ ಆರೋಪಿ ನಂ. 02 ನೇದವನು
ತಾನು ಚಲಾಯಿಸುತಿದ್ದ ನೊಂದಣಿ ಸಂಖ್ಯೆ ಇರದ ಟ್ರ್ಯಾಕ್ಟರನ್ನು ಕುಕನೂರು ಕಡೆಯಿಂದ ರಾಜೂರು ಕಡೆಗೆ
ಅತಿಜೋರು & ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿದ್ದು, ಎರಡು ವಾಹನದ ಚಾಲಕರು ಪರಸ್ಪರ ಡಿಕ್ಕಿ
ಹೊಡೆಸಿರುತ್ತಾರೆ. ಇದರಿಂದಾಗಿ ಪಿರ್ಯಾದಿಗೆ & ಆರೋಪಿ ನಂ. 01 ನೇದವನಿಗೆ ಭಾರಿ ಸ್ವರೂಪದ ಗಾಯಗಳಾಗಿರುತ್ತವೆ.
ಆರೋಪಿ ನಂ. 02 ನೇದವನು ಟ್ರ್ಯಾಕ್ಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಮುಂತಾಗಿ
ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೇನು.
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 178/2017. ಕಲಂ: 279, 337, 338 ಐ.ಪಿ.ಸಿ :.
ದಿನಾಂಕ: 24-12-2017 ರಂದು ಫಿರ್ಯಾದಿಯ ತಂದೆ ಹನುಮಂತಸಾ ತುಳಸಿಕಟ್ಟಿ ರವರು ರಾತ್ರಿ 08-00 ಗಂಟೆಯ ಸುಮಾರಿಗೆ ಕೆಲಸದ ನಿಮಿತ್ತ ಸೇಬಿನಕಟ್ಟಿಗೆ ಹೋಗಿ
ಬರುತ್ತೇನೆ ಅಂತಾ ಹೇಳಿ ತಮ್ಮ ಎಕ್ಸ್.ಎಲ್.ಸೂಪರ್ ಮೋಟಾರ್ ಸೈಕಲ್ ನಂ: ಕೆ.ಎ-37/ಡಬ್ಯ್ಲೂ-0001 ನೇದ್ದನ್ನು ತೆಗೆದುಕೊಂಡು ಹೋಗಿದ್ದು ನಂತರ ಕೆಲಸ ಮುಗಸಿ
ವಾಪಸ್ ಹನಮಸಾಗರಕ್ಕೆ ಬರುವಾಗ ಯಲ್ಲಪ್ಪ ಕೊಣೆರಿ ರವರ ಹೊಲದ ಹತ್ತಿರ ರಾತ್ರಿ 10-45 ಗಂಟೆಯ ಸುಮಾರು ನಮ್ಮ ಎಕ್ಸ್.ಎಲ್. ಸೂಪರ್ ಮೋಟಾರ್ ಸೈಕಲ್ ಕೆ.ಎ-37/ಡಬ್ಯ್ಲೂ-0001 ತೆಗೆದುಕೊಂಡು
ರೋಡಿನ ಎಡಗಡೆ ಬರುವಾಗ ಹಿಂದಿನಿಂದ ಒಬ್ಬ ಲಾರಿ ಚಾಲಕ ತನ್ನ ಲಾರಿಯನ್ನು ಅತೀವೇಗ ಹಾಗೂ
ಆಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವಂತೆ ನಡೆಸಿಕೊಂಡು ಬಂದು ಪಿರ್ಯಾದಿ ತಂದೆಯ ಮೋಟಾರ್
ಸೈಕಲಗೆ ಟಕ್ಕರಕೊಟ್ಟು ಅಪಘಾತಪಡಿಸಿದ್ದು, ಅಪಘತಪಡಿಸಿದ ಲಾರಿ ನಂ:
ಕೆ.ಎ-29/9275 ಅಂತಾ
ಇದ್ದು, ಚಾಲಕನ ಹೆಸರು ನೀಲಪ್ಪ ತಂದೆ ಮಲ್ಲಪ್ಪ ಇದರಾಳ ಸಾ:
ಹೂಲಗೇರಿ ಅಂತಾ ಇದ್ದು. ನಂತರ 108 ಆಂಬ್ಯುಲೆನ್ಸಗೆ ಫೋನ್ ಮಾಡಿ ಆಂಬ್ಯುಲೆನ್ಸ ಕರೆಸಿಕೊಂಡು ತಮ್ಮ ತಂದೆಯನ್ನು ಉಪಚಾರ
ಕುರಿತು ಇಲಕಲ್ ಮಹಾಂತೇಶ ಅಕ್ಕಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಉಪಚಾರ ಪಡಿಸಿ
ಇಂದು ತಡವಾಗಿ ಠಾಣೆಗೆ ಬಂದಿದ್ದು, ಕಾರಣ ಅಪಘಾತಪಡಿಸಿದ ಲಾರಿ ನಂ:
ಕೆ.ಎ-29/9275 ನೇದ್ದರ
ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಪಿರ್ಯಾದಿ ನೀಡಿದ್ದು ಅದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 188/2017. ಕಲಂ: 420 ಐ.ಪಿ.ಸಿ :.
ದಿನಾಂಕ: 25-12-2017 ರಂದು
08-30 ಪಿ.ಎಮ್. ಕ್ಕೆ ಫಿರ್ಯಾಧಿ ಮಹೆಬೂಬ್ ಜಿಲಾನ್ ಮೋಟರ್ ವಾಲೆ ಸಾ: ತೆಗ್ಗಿನಕೇರಾ ಓಣಿ ಕೊಪ್ಪಳ
ರವರು ನೀಡಿದ ಪಿರ್ಯಾದಿ ಕೊಡುವುದೇನೆಂದರೆ, ನನಗೆ ಶಫಾತಾಜ್ ಜ್ಯುವೇಲರ್ಸ ಮಾಲೀಕನಾದ ರಹಮತ್ಉಲ್ಲಾ
ಶೇಖ್ ಇವರ ಪರಿಚಯವಿದ್ದು ಇವರು ಕೊಪ್ಪಳ ನಗರದ ಹಂಚರಾಜ ಬಾಗಸವಾರ ಇವರ ಕಾಂಪ್ಲೆಕ್ಸನಲ್ಲಿ ಒಂದು ಜ್ಯುವೇಲರ್ಸ
ಶಾಪ್ ಇಟ್ಟುಕೊಂಡಿದ್ದು ಸದರಿ ಶಾಪ್ ನಲ್ಲಿ ಬೆಳ್ಳಿ, ಬಂಗಾರದ ಆಭರಣಗಳನ್ನು ಹೊಸದಾಗಿ ಮಾಡಿಕೊಡುವುದು
ಮತ್ತು ರೀಪೇರಿ ಮಾಡಿಕೊಡುವುದು ಮಾಡುತ್ತಿದ್ದು ಮತ್ತು ಶಾಪ್ ನಲ್ಲಿ ರೋಲ್ಡಗೋಲ್ಡ ಹೆಣ್ಣು ಮಕ್ಕಳ
ಸಾಮಾನುಗಳನ್ನು ಮಾರಾಟ ಮಾಡುತ್ತಿದ್ದು ಇರುತ್ತದೆ. ನಾನು ದಿನಾಂಕ 14-02-2017 ರಂದು ಶಫಾತಾಜ್ ಜ್ಯುವೇಲರ್ಸ
ಮಾಲೀಕನಾದ ರಹಮತ್ಉಲ್ಲಾ ಶೇಖ್ ಇವರ ಜುವೆಲರಿ ಶಾಪಗೆ ಹೋಗಿ ನನ್ನ ಹತ್ತಿರ ಇದ್ದ ಈ ಕಳಕಂಡ ಬಂಗಾರದ
ಸಾಮಾನುಗಳನ್ನು ರೀಪೇರಿಗೆ ಮತ್ತು ಹೊಸದಾಗಿ ಮಾಡಲು ಕೊಟ್ಟಿದ್ದು ಇರುತ್ತದೆ. ನಾನು ಒಟ್ಟು 3 1/2
ತೊಲೆ ಬಂಗಾರ ಹಾಗೂ 40,000/- ರೂ. ಹಣ ಕೊಟ್ಟಿದ್ದು ಇರುತ್ತದೆ. ಅದರಂತೆ ನಮ್ಮ ಸಂಬಂದಿಕರಾದ
ಚಾಂದ್ ಪಾಶ ಇವರು ಒಟ್ಟು 9 ತೊಲೆ 01 ಗ್ರಾಮ್ ಬಂಗಾರದ ಸಮಾನುಗಳು ಮತ್ತು 67,000/- ರೂ. ಮುಂಗಡ ಹಣವನ್ನು
ಕೊಟ್ಟಿದ್ದು ಇರುತ್ತದೆ. ಅದರಂತೆ ಮಹೆಬೂಬ ಹುಸೇನ್ ತಂದೆ ಅಬ್ದುಲ್ ಸಾಬ ಸಾ: ತೆಗ್ಗಿನಕೇರಾ ಕೊಪ್ಪಳ
ಇವರು ಒಂದು ಬಂಗಾರದ ಉಂಗುರ 1/2 ತೊಲೆ ಮಾಡಿಕೊಡಲು 15,000=00 ರೂ ಗಳನ್ನು ಮತ್ತು ಅಬ್ದುಲ್ ರಹೆಮಾನ್
ಸಾ: ಹಟಗಾರಪೇಟೆ ಕೊಪ್ಪಳ ಇವರು ಮತ್ತು ನಾನು ಶಫಾತಾಜ್ ಜ್ಯುವೇಲರ್ಸ ಮಾಲೀಕನಾದ ರಹಮತ್ಉಲ್ಲಾ ಶೇಖ್
ಇವರ ಹತ್ತಿರ ಹೋಗಿ ಜುಮಕಿ, ಓಲೆ, ಮತ್ತು ಮಾಟಿಲ್ ಸೇರಿ 1 ತೊಲೆ 7.1/2 ಗ್ರಾಂ ಬಂಗಾರದ ಸಾಮಾನುಗಳನ್ನು
ಮಾಡಿ ಕೊಡಲು ಒಟ್ಟು 70,000=00 ರೂ ಗಳನ್ನು ಅಡ್ವಾನ್ಸ ಕೊಟ್ಟಿದ್ದು, ಮತ್ತು ಆರ್.ಖಾಜಾಪಾಷಾ ತಂದೆ
ಮೌಲಾಸಾಬ ರೆಡ್ಡಿ ಸಾ: ತೆಗ್ಗಿನಕೇರಾ ಕೊಪ್ಪಳ ಇವರು 1/2 ತೊಲೆಯ ಬಂಗಾರದ ಉಂಗುರ ಮತ್ತು 1/2 ತೊಲೆಯ
ಕಿವಿ ಓಲೆ ಮಾಡಿ ಕೊಡಲು 30,000=00 ರೂ ಗಳನ್ನು ಅಡ್ವಾನ್ಸ ಕೊಟ್ಟಿದ್ದು ಅಲ್ಲದೆ ರೀಪೇರಿ ಮಾಡಲು
ಅಂತಾ ಒಂದು ಬಂಗಾರ ನೆಕ್ಲೇಸ್ ಅ.ತೂ.3.1/2 ತೊಲೆ ಅ.ಕಿ.90,000=00 ರೂ ಬೆಲೆ ಬಾಳುವುದನ್ನು ಕೊಟ್ಟಿದ್ದು
ಇರುತ್ತದೆ. ಕಾರಣ ಮೇಲ್ಕಂಡ ನಾನು ಮತ್ತು ನಮ್ಮ ಸಂಬಂಧಿಕರು ಸೇರಿ ಶಫಾತಾಜ್ ಜ್ಯುವೇಲರ್ಸ ಮಾಲೀಕನಾದ
ರಹಮತ್ಉಲ್ಲಾ ಶೇಖ್ ಇವರ ಜುವೇಲರಿ ಅಂಗಡಿಗೆ ಹೋದಾಗ ರಹಮತ್ ಉಲ್ಲಾ ಶೇಖ್ ಇವರ ಮಾವನವರಾದ ಶಬ್ಬೀರಸಾಬ
ಇವರು ಸಹ ನಾವು ಹೊಸದಾಗಿ ಬಂಗಾರದ ಸಾಮಾನುಗಳನ್ನು ಮಾಡಿಸಲು ಅಡ್ವಾನ್ಸ ಕೊಡುವಾಗ ಹಾಗೂ ರೀಪೇರಿಗೆ
ಬಂಗಾರದ ಸಾಮಾನುಗಳನ್ನು ಕೊಡುವಾಗ ಅಂಗಡಿಯಲ್ಲಿ ಇದ್ದು ಇಬ್ಬರೂ ನನ್ನ ಹಾಗೂ ನಮ್ಮ ಸಂಬಂದಿಕರ ಹೊಸದಾಗಿ
ಬಂಗಾರದ ಸಾಮಾನುಗಳನ್ನು ಮಾಡಲು ಅಡ್ವಾನ್ಸ ಹಣ ಮತ್ತು ರೀಪೇರಿಗೆ ಕೊಟ್ಟ ಬಂಗಾರದ ಸಾಮಾನುಗಳನ್ನು ನಮಗೆ
ಹಣವನ್ನು ಕೊಡದೇ ಮತ್ತು ರೀಪೇರಿಗೆ ಕೊಟ್ಟ ಬಂಗಾರದ ಸಾಮಾನುಗಳನ್ನು ಕೊಡದೇ ಅಂಗಡಿ ಬಂದ್ ಮಾಡಿಕೊಂಡು
ನನಗೆ ಮತ್ತು ನಮ್ಮ ಸಂಬಂದಿಕರಿಗೆ ಮೋಸ ಮಾಡಿ ಹೋಗಿದ್ದು ಇರುತ್ತದೆ, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು
ಇದೆ
0 comments:
Post a Comment