1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 37/2018 ಕಲಂ. 392 IPC.
ದಿನಾಂಕ:
13-02-2018 ರಂದು ರಾತ್ರಿ 7-45 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀದೇವಿ ಪೂಜಾರ ಗಂಡ ಹನುಮಪ್ಪ
ಮತ್ತು ತನ್ನ ಗಂಡ ಹನುಮಪ್ಪ ಜಂತ್ಲಿ ಕೂಡಿಕೊಂಡು ಇಂದು ಮಹಾಶಿವರಾತ್ರಿ ಹಬ್ಬ ಇದ್ದುದ್ದರಿಂದ ತಾವಿಬ್ಬರೂ
ಕೂಡಿಕೊಂಡು ತಮ್ಮ ಮನೆಯಿಂದ ಸಮೀಪದ ರಸ್ತೆಯಲ್ಲಿ ಜಾಗಿರದಾರ ಲೇಔಟ್ನಲ್ಲಿ ಮುಳ್ಳುಕಂಟಿಯಲ್ಲಿ, ಕತ್ತಲಲ್ಲಿ
ನಡೆದುಕೊಂಡು ನಗರದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ಹೋಗಿದ್ದೆವು. ನಂತರ ರಾತ್ರಿ 8-30 ಗಂಟೆಯ
ಸುಮಾರಿಗೆ ನಾವು ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಗುಡಿಯಿಂದ ಅದೇ ರಸ್ತೆಯಲ್ಲಿ ನಾವು ನಮ್ಮ ಮನೆಗೆ
ನಡೆದುಕೊಂಡು ಹೋಗುತ್ತಿದಾಗ. ಜಾಗಿರದಾರ ಲೇಔಟ್ನಲ್ಲಿ ನನ್ನ ಗಂಡ ಸ್ವಲ್ಪ ಮುಂದೆ ನಾನು ಹಿಂದೆ ನಡೆದುಕೊಂಡು
ಹೋಗುತ್ತಿದ್ದಾಗ ಅಲ್ಲಿ ಕತ್ತಲು ಅಲ್ಲದೆ ಮುಳ್ಳುಕಂಟಿ ಇತ್ತು. ನಾವು ಅಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ
ಬಲಗಡೆಗೆ ಹಿಂದಿನಿಂದ ಯಾರೋ ಒಬ್ಬ ಅಪರಿಚಿತ ದುಷ್ಕರ್ಮಿಯು ಬಂದು ನನ್ನ ಕೊರಳಲ್ಲಿದ್ದ ಬಂಗಾರದ ಮಂಗಳ
ಸೂತ್ರ ಅಂ.ತೂ: 45 ಗ್ರಾಂ ನೇದ್ದನ್ನು ಬಲವಂತವಾಗಿ ಕಿತ್ತುಕೊಂಡು ನನ್ನ ಹಿಂದಿನಿಂದ ಓಡಿ ಹೋದನು.
ನಾನು ಕಳ್ಳ-ಕಳ್ಳ ಅಂತಾ ಕೂಗಾಡಿದೆನು. ಆಗ ನನ್ನ ಗಂಡ ಅವನನ್ನ ಹಿಡಿಯಲು ಸ್ವಲ್ಪ ಹಿಂದೆ ಬೆನ್ನತ್ತಿ
ಹೋಗಿ ವಾಪಸು ಬಂದರು. ನನ್ನ ಕೊರಳಲ್ಲಿದ್ದ ಸರವನ್ನು ಕಿತ್ತುಕೊಂಡು ನನ್ನ ಹಿಂದಿನಿಂದ ಹೋಗಿದ್ದು,
ಅಲ್ಲದೆ ಅಲ್ಲಿ ಕತ್ತಲು ಮುಳ್ಳುಕಂಟಿಯಿಂದ ಕೂಡಿದ್ದರಿಂದ ನಾನು ಅವನನ್ನ ಸರಿಯಾಗಿ ನೋಡಿರುವುದಿಲ್ಲಾ.
ಕಾರಣ ಮಾನ್ಯರವರು ನನ್ನ ಕೊರಳಲ್ಲಿದ್ದ ಬಂಗಾರದ ಮಂಗಳ ಸೂತ್ರ ಅಂದಾಜು ತೂಕ 45 ಗ್ರಾಂ ಒಟ್ಟು ಅಂ.ಕಿ.ರೂ:
1,15,000=00 ಬೆಲೆ ಬಾಳುವುದನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿರುತ್ತಾನೆ. ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿರುತ್ತಾರೆ.
2] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ.
15/2018 ಕಲಂ. 323, 504, 506, 109 ಐ.ಪಿ.ಸಿ
ಮತ್ತು 3(1)(R), 3(1)(S) SC/ST PA Amendment Act-2015.
ದಿನಾಂಕ 11.02.2018 ರಂದು ಮುಂಜಾನೆ 10:45 ಗಂಟೆಗೆ ಫಿರ್ಯಾದಿದಾರರು ಬಸವರಾಜಪ್ಪನ ಮನೆಯ ಹತ್ತಿರ
ನಿಂತಿದ್ದು ಆಗ ಆರೋಪಿ ನಂ 01 ಇತನು ಏಕಾ ಏಕಿಯಾಗಿ ಬಂದು ಫಿರ್ಯಾದಿದಾರರ ಕಪಾಳಕ್ಕೆ ಮತ್ತು ಹೊಟ್ಟೆಗೆ
ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದಾಡಿ ಮಾರಣಾಂತಿಕವಾಗಿ ಕೈಯಿಂದ ಹೊಡೆದು ಹಲ್ಲೇ ಮಾಡಿ ಕೊಲೆ
ಬೆದರಿಕೆ ಹಾಕಿದ್ದು ಇರುತ್ತದೆ. ರ್ಯಾದಿದಾರರು ಆರೋಪಿ ನಂ: 02 ಇತನಿಗೆ ಒಂದು ಕೋಟಿ ರೂಪಾಯಿ ಹಗರಣವಾಗಿದ್ದು
ಅದನ್ನು ಪಂಚಾಯತ ಸಭೆಯಲ್ಲಿ ಮತ್ತು ಲಿಖಿತವಾಗಿ ಕೇಳಿದರೂ ಕೊಡದೇ ಹಲ್ಲೆ ಮಾಡಿಸಿದ್ದು ಇರುತ್ತದೆ.
ಆರೋಪಿ ನಂ: 02 ರಿಂದ 05 ನೇದ್ದವರ ಕುಮ್ಮಕ್ಕಿನಿಂದ ಮತ್ತು ಪ್ರಚೋದನೆ ನೀಡಿ ಆರೋಪಿ ನಂ: 01 ಇತನಿಂದ
ರ್ಯಾದಿದಾರರಿಗೆ ಹಲ್ಲೆ ಮಾಡಿಸಿ ಕೊಲೆ ಬೇದರಿಕೆ ಮಾಡಿಸಿರುತ್ತಾರೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ
ಸಾರಾಂಶದ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 14/2018 ಕಲಂ. 279, 337, 338 ಐ.ಪಿ.ಸಿ:
ದಿನಾಂಕ: 13-02-2018 ರಂದು ಸಂಜೆ 7-00 ಗಂಟೆಯ ಸುಮಾರಿಗೆ ಗಾಯಾಳು ಶರಣಪ್ಪ ತಂದೆ ಫಕೀರಪ್ಪ
ಪೂಜಾರ, ವಯ: 32 ವರ್ಷ ಸಾ: ಗೊಬ್ಬರಗುಂಪಿ ಹಾ:ವ: ಸಂಗನಾಳ ತಾ: ಯಲಬುರ್ಗಾ ಈತನು
ಬಹಿರ್ದೇಸೆಗೆಂದು ಯಲಬುರ್ಗಾ-ಕುಕನೂರು ರಸ್ತೆಯನ್ನು ದಾಟಿ, ರಸ್ತೆಯ ಬದಿಗೆ ರಾಮಪ್ಪ ಗುರಿಕಾರ
ಇವರ ಹೊಲದ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿತನು ತಾನು ನಡೆಸುತ್ತಿದ್ದ ಕಾರನ್ನು
ಯಲಬುರ್ಗಾ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಶರಣಪ್ಪನಿಗೆ
ಹಿಂದಿನಿಂದ ಟಕ್ಕರ್ ಕೊಟ್ಟು ಅಫಘಾತ ಮಾಡಿದ್ದರಿಂದ ಶರಣಪ್ಪನಿಗೆ ತಲೆಯ ಹಿಂದೆ ಭಾರಿ ಸ್ವರೂಪದ
ರಕ್ತಗಾಯ ವಾಗಿರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment