1] ಕುಷ್ಟಗಿ ಪೊಲೀಸ್
ಠಾಣೆ ಗುನ್ನೆ ನಂ. 37/2018
ಕಲಂ. 78(3) Karnataka Police Act & 420 IPC.
ಕುಷ್ಟಗಿ
ಪಟ್ಟಣದ ಉಮಾ ವೈನ್ ಶಾಪ್ ಹತ್ತಿರ ಒಂದು ಪಾನ್ ಶಾಪ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟಕಾ ಜೂಜಾಟ
ನಡೆದಿದೆ ಅಂತಾ ಬಾತ್ಮೀ ಮೇರೆಗೆ ಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ರವರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ
ಹೋಗಿ ರೇಡ್ ಮಾಡಿ ಆರೋಪಿತನನ್ನು ಹಾಗೂ ಅವನಿಂದ ಜೂಜಾಟದ ಒಟ್ಟು ಹಣ 1660=00 ರೂ, ಒಂದು ಬಾಲ್ ಪೆನ್ನು,
ಒಂದು ಮಟಕಾ ಚೀಟಿ ಜಪ್ತಿ ಮಾಡಿಕೊಂಡಿದ್ದು ಸದರಿ ಆರೋಪಿತನು ಸಾರ್ವಜನಿಕರಿಗೆ
ಮೋಸ ಮಾಡುವ ಉದ್ದೇಶದಿಂದ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಚೀಟಿ ಬರೆದುಕೊಟ್ಟು ಅವರಿಂದ
ಹಣ ಪಡೆದು ಮೋಸ ಮಾಡಿದ್ದು ಇರುತ್ತದೆ. ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.
22/2018 ಕಲಂ. 143, 147, 148, 341,
504, 307, 506 ಸಹಿತ 149 ಐ.ಪಿ.ಸಿ ಮತ್ತು 3(2)(5)5(ಎ)
ಎಸ್.ಸಿ/ಎಸ್.ಟಿ. ಕಾಯ್ದೆ:
ಆರೋಪಿತರು ದಿ:07-02-2018 ರಂದು ಸಂಜೆ 6-00 ಗಂಟೆಯ ಸುಮಾರಿಗೆ ಫಿರ್ಯಾದಿಯ ಅಳಿಯ ಗಣೇಶನು
ಗಿಣಿಗೇರಿ ಗ್ರಾಮದ ಜಾನಾ ಇವರ ಮೊಬೈಲ್ ಶಾಪ್ ಮುಂದೆ ಕರೆನ್ಸಿ ಹಾಕಿಸಲು ಹೊರಟಿದ್ದಾಗ, ಆರೋಪಿತರು
ಅಕ್ರಮ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಟ್ಟಿಗೆ ರಾಡು ಹಿಡಿದುಕೊಂಡು ಬಂದು ಗಣೇಶನಿಗೆ ತಡೆದು
ನಿಲ್ಲಿಸಿ ಏಕಾಏಕೀ ಕಬ್ಬಿಣದ ರಾಡು ಮತ್ತು ಕಟ್ಟಿಗೆಯಿಂದ ಹಲ್ಲೆ ಮಾಡಿದ್ದು, ಅಲ್ಲದೇ ಲೇ
ಕನಕಾಪೂರ ತಾಂಡಾದ ಸೂಳೇಮಕ್ಕಳೆ ನೀವೇಲ್ಲಾ ಕಬಡ್ಡಿಯಲ್ಲಿ ನಮಗೆ ಸೋಲಿಸಿ ಅವಮಾನ ಮಾಡಿದ್ದಿರಿ
ಅಲ್ಲದೇ ಈಗ ಬರೊಬ್ಬರಿ ಸಿಕ್ಕಿರಿ ನಿಮ್ಮನ್ನೆಲ್ಲಾ ಹೊಡೆದು ಸಾಯಿಸಿದರೆ ನಾವೇ ಮುಂದೆ
ಕಬಡ್ಡಿಯಲ್ಲಿ ಡಾನ್ ಎಂದವರೇ, ಅಲ್ಲದೇ ಈ ಸೂಳೇಮಗನಿಗೆ ತಮ್ಮ ತೋಟಕ್ಕೆ ತೆಗೆದುಕೊಂಡು ಹೋಗಿ
ಮುಗಿಸಿಬಿಡೋಣ ಎಂದು ತಮ್ಮ ಮೋಟಾರ ಸೈಕಲ್ ದಲ್ಲಿ ಕರೆದುಕೊಂಡು ಭೀಮನೂರ ರಸ್ತೆಯ ಬಾಜು ಇರುವ ತಮ್ಮ
ತೋಟದ ಹತ್ತಿರ ಹೋಗಿ ರಾಡು, ಮತ್ತು ಕಟ್ಟಿಗೆಯಿಂದ ಗಣೇಶನ ಕೈಗಳಿಗೆ ಹೊಡೆದು ಮಾರಣಾಂತಿಕ ಹಲ್ಲೆ
ಮಾಡಿದ್ದರಿಂದ ಗಣೇಶನ ಎರಡೂ ಮೊಣಕೈ ಗಳ ಮೇಲೆ ಭಾರಿ ಪೆಟ್ಟಾಗಿ ಮೂಳೆ ಮುರಿದಿರುತ್ತವೆ. ಮತ್ತು
ಬಲಕಾಲ ಪಾದದ ಹತ್ತಿರ ಭಾರಿ ಒಳಪೆಟ್ಟಾಗಿ ಬಾವು ಬಂದಿದೆ. ಮತ್ತು ತಲೆಯಲ್ಲಿ ರಕ್ತಗಾಯ ವಾಗಿದೆ.
ಮತ್ತು ಮೈ ಕೈ ಗೆ ಒಳಪೆಟ್ಟಾಗಿದ್ದು ಇರುತ್ತದೆ. ಈ ಸೂಳೇಮಗ ಒಬ್ಬನೇ ಸಿಕ್ಕಿದ್ದಾನೆ ಅವನು
ಸತ್ತನಲೇ ಇದು ನಮ್ಮ ಮೇಲೆ ಬರಬಾರದೆಂದು ತಮ್ಮ ತಮ್ಮಲ್ಲಿ ಮಾತನಾಡುತ್ತಾ ತಮ್ಮ ಗಾಡಿಯ ನಡುವೆ
ಗಣೇಶನಿಗೆ ಹಾಕಿಕೊಂಡು ತೋಟದಿಂದಾ ಕೊಪ್ಪಳದ ಜಿಲ್ಲಾ ಆಸ್ಪತ್ರೆಯ ಮುಂದೆ ಬಂದು ಮೇನ ರೋಡ ಬಾಜು
ಗಣೇಶನಿಗೆ ಕೆಡವಿದ್ದು ಅಲ್ಲದೇ ಗಣೇಶನಿಗೆ ಹೊಡೆದು ಸಾಯಿಸಿದ ಬಗ್ಗೆ ಯಾರ ಮುಂದೆ ಹೇಳಬಾರದೆಂದು
ಮಾತನಾಡಿಕೊಂಡು, ಅಲ್ಲಿಂದ ಎಲ್ಲರೂ ವಾಪಾಸ್ ಗಿಣಿಗೇರಿ ಕಡೆಗೆ ಹೋಗಿದ್ದು ಇರುತ್ತದೆ. ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ.
29/2018 ಕಲಂ. 379 ಐ.ಪಿ.ಸಿ:
ಪಿರ್ಯಾಧಿದಾರರು ಹಾಗೂ ಇನ್ನೊಬ್ಬ
ಲಾರಿ ಚಾಲಕನು ದಿನಾಂಕ 03-02-2018 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಲಾರಿ
ನಂ:ಕೆಎ 25 / ಸಿ 8882 ನೇದ್ದರಲ್ಲಿ ನೇದ್ದರಲ್ಲಿ ಅಹ್ಮದಬಾದನಿಂದ ಗಂಗಾವತಿಗೆ ಸರಕುಗಳನ್ನು
ಲೋಡ್ ಮಾಡಿಕೊಂಡು ಹೊರಟಿದ್ದು ದಿನಾಂಕ: 04-02-2018 ರಂದು
ರಾತ್ರಿ 9-00 ಗಂಟೆಯಿಂದ ದಿನಾಂಕ:
05-02-2018 ರ ಮದ್ಯಾಹ್ನ 12-54 ಗಂಟೆಯ ಮಧ್ಯದ ಅವಧಿಯಲ್ಲಿ ಮಹರಾಷ್ಟ್ರದ ಕರಾಡನಿಂದ ಗಂಗಾವತಿಗೆ ಬರುವ ಮಾರ್ಗದ ಮಧ್ಯದಲ್ಲಿ ಯಾರೋ ಕಳ್ಳರು ಲಾರಿ ಮೇಲೆ
ಹತ್ತಿ ಲಾರಿಗೆ ಹೊದಿಸಿದ್ದ ತಾಡಪತ್ರಿ ಹಾಗೂ ತಂತಿಯ ಜಾಳಿ ಕಟ್ ಮಾಡಿ ಲಾರಿಯಲ್ಲಿದ್ದ ಅಂದಾಜು 1,04,142-00 ರೂ ಬೆಲೆ ಬಾಳುವ ಎಲ್ ಆರ್
ನಂ : 1018059768
ನೇದ್ದರಲ್ಲಿ
ಒಂದು ಬಟ್ಟೆಯ ಗಂಟು ,
ಎಲ್
ಆರ್ ನಂ :
1018060023 ನೇದ್ದರಲ್ಲಿ
ಒಂದು ಬಟ್ಟೆಯ ಗಂಟು ಒಟ್ಟು ಎರಡು ಬಟ್ಟೆಯ ಗಂಟುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment