This post is in Kannada language.
Visit to our new website which is launched on 15-02-2018 www.koppalpolice.in & www.koppalpolice.in/kan
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
ಕೊಲೆ ಪ್ರಕರಣ
1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 190/2012 ಕಲಂ. 302 ಸಹಿತ 34 ಐ.ಪಿ.ಸಿ:.
ದಿ: 15-12-2012 ರಂದು ಬೆಳಿಗ್ಗೆ 09-15 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಕೇಶಪ್ಪ ತಂದೆ ಭಿಪ್ಪಪ್ಪ ಸಾ: ಭಾಗ್ಯನಗರ ಇವರು ಠಾಣೆಗೆ ಹಾಜರಾಗಿ ಸಲ್ಲಿಸಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ ನನ್ನ ತಂದೆತಾಯಿಗೆ ನಾವು ಒಟ್ಟು 9 ಜನ ಮಕ್ಕಳಿದ್ದು ಇವರಲ್ಲಿ 3 ಜನ ಹೆಣ್ಣುಮಕ್ಕಳು ಹಾಗೂ 5 ಜನ ಗಂಡು ಮಕ್ಕಳಿದ್ದು ಇವರಲ್ಲಿ ಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ ನನ್ನ ತಮ್ಮಂದಿರು 4 ಜನರಿದ್ದು ಅವರಲ್ಲಿ 1] ಬಸವರಾಜ 2] ನಾಗಪ್ಪ 3] ದೇವಪ್ಪ ಹಾಗೂ 5] ಢಾಕಣ್ಣ ಅಂತಾ ಹೀಗೆ ಇರುತ್ತೆ盆 ನಮ್ಮ ತಮ್ಮಂದಿರು ಎಲ್ಲರೂ ಬೇರೆ ಬೇರೆ ಮನೆಯಲ್ಲಿ ನಮ್ಮ ನಮ್ಮ ಕುಟುಂಬದೊಂದಿಗೆ ವಾಸವಾಗಿದ್ದೆ盆 ನನ್ನ 3 ನೇ ತಮ್ಮ ದೇವಪ್ಪ ಭ璾 ವಯಸ್ಸು 50 ವರ್ಷ ಈತನು ಕೊಪ್ಪಳದಲ್ಲಿ ಪಿ.ಡಬ್ಲ್2ಯೂಡಿ ಕಾಂಟ್ರ್ಯಾಕ್ಟರ್ ಅಂತಾ ಕೆಲಸ ಮಾಡಿಕೊಂಡಿದ್ದನು ಹಾಗೂ ಕೊಪ್ಪಳದಲ್ಲಿ ಆದರ್ಶ ಲಾಡ್ಜ ಮಾಲೀಕನಿದ್ದನು ಆತನ ಹೆಂಡತಿ ಮಕ್ಕಳು ನಮ್ಮೂರಿನ ಬನಶಂಕರಿ ಗುಡಿಯ ಹಿಂದೆ ಇರುವ ತಮ್ಮ ಮನೆಯಲ್ಲಿ ವಾಸವಾಗಿದ್ದರು ಇಂದು ದಿ: 15-12-2012 ರಂದು ಬೆಳಗಿನಜಾವ 02-00 ಗಂಟೆಯ ಸುಮಾರಿಗೆ ನಾನು ನನ್ನ ಮನೆಯಲ್ಲಿ ಮಲಗಿದ್ಧಾಗ ನನ್ನ ಸೊಸೆ ಈರಮ್ಮ ಗಂಡ ದೇವಪ್ಪ ಭ璾 ಇವರು ಮೊಬೈಲ್ ಗೆ ಕರೆ ಮಾಡಿ ಹೇಳಿದ್ದೆ滆ಂದರೇ ?ನಮ್ಮ ಮನೆಯಲ್ಲಿದ್ದ ನನ್ನ ಗಂಡನಿಗೆ ನಮ್ಮೂರಿನ ನಾಗರಾಜ ಸ್ವಾಗಿ ಹಾಗೂ ಇನ್ನೊಬ್ಬನು ಬಂದು ನನ್ನ ಗಂಡನಿಗೆ ಕೂಗಿ ಎಬ್ಬಿಸಿ ನಿಮ್ಮ ಮಗ ಗುರುರಾಜ ಇವನಿಗೆ ಆದರ್ಶ ಲಾಡ್ಜ ಹತ್ತಿರ ಯಾರೋ ಹೊಡೆಯುತ್ತಿದ್ದಾರೆಂದು ಹೇಳಿ ಆತನಿಗೆ ಕರೆದುಕೊಂಡು ಹೋಗಿರುತ್ತಾರೆ ನನ್ನ ಗಂಡನು ಅವರ ಸಂಗಡ ತನ್ನ ಮೋಟಾರ ಸೈಕಲ್ ತೆಗೆದುಕೊಂಡು ಹೋದವರು ವಾಪಾಸ ಮನೆಗೆ ಬಂದಿರುವುದಿಲ್ಲ ಹಾಗೂ ಮತ್ತೆ ನಾಗರಾಜನು ವಾಪಾಸ ಬಂದು ನಮ್ಮ ಮನೆಯ ಬಾಗಿಲು ಬಾರಿಸಿ ನನ್ನ ಗಂಡ ದೇವಪ್ಪನಿಗೆ ಸಹ ಹೊಡೆಯುತ್ತಿದ್ದಾರೆ ಅಂತಾ ಕೂಗಿ ತಿಳಿಸಿದಾಗ ನಾನು ಭಯವಾಗಿ ಬಾಗಿಲು ತೆಗೆಯಲಿಲ್ಲ ಅಂತಾ ಹೇಳಿ ನನಗೆ ಬರಲು ತಿಳಿಸಿದಳು. ಆಗ ನಾನು ಕೂಡಲೇ ನನ್ನ ತಮ್ಮ ದೇವಪ್ಪನ ಮೊಬೈಲ್ಗೆ ಕರೆ ಮಾಡಿದಾಗ ಆತನ ಮೊಬೈಲ್ ರಿಂಗ್ ಆಯಿತು ಕರೆ ಸ್ವಿರಿಸಲಿಲ್ಲ ನಂತರ ನನ್ನ ಮಗ ಮುತ್ತಣ್ಣ ಶಶಿಧರ ಇವರಿಗೆ ಕರೆದುಕೊಂಡು ನನ್ನ ತಮ್ಮ ದೇವಪ್ಪನ ಮನೆಗೆ ಬಂದೆವು ಆಗ ಮನೆಯಲ್ಲಿ ಈರಮ್ಮಳಿಗೆ ಕೂಗಿ ಎಬ್ಬಿಸಿ ವಿಚಾರಿಸಿ ನಂತರ ಸ್ವಲ್ಪ ಹೊತ್ತಿನಲ್ಲಿ ನಾಗರಾಜ ಸ್ವಾಗಿ ಇವರ ಮನೆಗೆ ಹೋಗಿ ನೋಡಿದಾಗ ಅವನು ತನ್ನ ಮನೆಯಲ್ಲಿರಲಿಲ್ಲ ನಂತರ ನಾನು ನನ್ನ ಮಗ ಮುತ್ತಣ್ಣ ಶಶಿಧರ 3 ಜನರು ಕೂಡಿಕೊಂಡು ನಮ್ಮ ಸಂಬಂಧಿಕರಾದ ರವಿ ಪರಗಿ ಇವರಿಗೆ ವಿಷಯ ತಿಳಿಸಿ ರವಿ ಈತನ ಕಾರಿನಲ್ಲಿ ಭಾಗ್ಯನಗರದಿಂದಾ ಕೊಪ್ಪಳಕ್ಕೆ ಬರುತ್ತಿದ್ದೆವು ನಂತರ ಬೆಳಗಿನಜಾವ 2-20 ಗಂಟೆಯ ಸುಮಾರಿಗೆ ನಾವು ನಗರದ ಪಾನಘಂಟಿ ಕಲ್ಯಾಣ ಮಂಟಪದ ಹತ್ತಿರ ಬಂದಾಗ ಅಲ್ಲಿ ರಸ್ತೆಯ ಎಡಬಾಜು ಒಂದು ಮೋಟಾರ ಸೈಕಲ್ ಬಿದ್ದಿದ್ದನ್ನು ನೋಡಿ ರವಿ ಈತನು ನಮ್ಮ ಕಾರನ್ನು ನಿಧಾನಕ್ಕೆ ಸೈಡಿಗೆ ತೆಗೆದುಕೊಳ್ಳುತ್ತಿರುವಾಗ ಬಿದ್ದಿದ್ದ ಮೋಟಾರ ಸೈಕಲ್ ನಮ್ಮ ತಮ್ಮ ದೇವಪ್ಪನದೇ ಇತ್ತು ಆಗ ನಾವು ನಮ್ಮ ಕಾರನ್ನು ಸೈಡಿಗೆ ನಿಲ್ಲಿಸಿ ಹತ್ತಿರ ಬಂದು ನೋಡಲು ಮೋಟಾರ ಸೈಕಲ್ ದಿಂದಾ ಸ್ವಲ್ಪ ದೂರದಲ್ಲಿ ಪೂರ್ವಕ್ಕೆ ನನ್ನ ತಮ್ಮ ದೇವಪ್ಪನು ಕಲ್ಲುಗಳ ಮಧ್ಯದಲ್ಲಿ ಬಿದ್ದಿದ್ದನು ಆಗ ಲೈಟಿನ ಬೆಳಕಿನಲ್ಲಿ ಸಮೀಪದಲ್ಲಿ ಹೋಗಿ ನೋಡಿ ಬಿದ್ದಿದ್ದ ನಮ್ಮ ತಮ್ಮ ದೇವಪ್ಪನಿಗೆ ಎಬ್ಬಿಸಲು ಆತನು ಮಾತನಾಡಲಿಲ್ಲ ಆತನ ಕುತ್ತಿಗೆಗೆ ಭಾರಿ ರಕ್ತಗಾಯವಾಗಿತ್ತು ಆತನ ಮುಖ, ಮೈ ಕೈಗಳಿಗೆ ಹಾಗೂ ಬಟ್ಟೆಗಳಿಗೆ ರಕ್ತ ಹತ್ತಿತ್ತು ನೋಡಲು ನನ್ನ ತಮ್ಮ ಮೃತಪಟ್ಟಿದ್ದನು ಆತನ ಶವದಿಂದಾ ಸುಮಾರು ಮೂರು ಅಡಿ ದೂರದಲ್ಲಿ ಒಂದು ಕಬ್ಬಿಣದ ಚಾಕು ಬಿದ್ದಿದ್ದು ಇರುತ್ತದೆ ಇದೇ ಚಾಕುವಿನಿಂದ ನನ್ನ ತಮ್ಮನಿಗೆ ಹೊಡೆದು ಕೊಲೆ ಮಾಡಿದಂತೆ ಕಾಣುತ್ತದೆ ನಾವು ಮಾತನಾಡುವ ಧ್ವನಿ ಕೇಳಿ ಸಮೀಪದ ಮನೆಯ ಭ玿 ಆಂಜನೇಯ ಹಾಗೂ ಅವರ ಮಗ ವಿಷ್ಣು ಕೂಡಾ ಬಂದು ನೋಡಿದರು. ಅವರು ಬೆಳಗಿನಜಾವ 01-30 ಗಂಟೆಯ ಸುಮಾರಿಗೆ ಬೈಫ್ ಬಿದ್ದಿದ್ದನ್ನು ಮತ್ತು ಅಲ್ಲಿ 3 ಜನರು ಇದ್ದು ಓರ್ವನು ಭಾಗ್ಯನಗರದ ಕಡೆಗೆ ಬೈಫ್ ಹತ್ತಿಕೊಂಡು ಹೋಗಿದ್ದು ಸುಮಾರು 20 ವರ್ಷದ ಹುಡುಗನಾಗಿದ್ದು ಇನ್ನಿಬ್ಬರು ಕತ್ತಲಲ್ಲಿ ಭಾಗ್ಯನಗರದ ಕಡೆಗೆ ಹೋಗಿದ್ದು ಮುಂದೆ ಹೇಗೆ ಹೋದರು ಅಂತಾ ಕಾಣಲಿಲ್ಲ ಎಂದು ತಿಳಿಸಿದರು. ಕಾರಣ ನನ್ನ ತಮ್ಮ ದೇವಪ್ಪನಿಗೆ ನಮ್ಮೂರಿನ ನಾಗರಾಜ ಹಾಗೂ ಇತರೆ 2 ಜನರು ಕೂಡಿಕೊಂಡು ಬಂದು ಯಾವುದೋ ದುರುದ್ದೆದಿಂದಾ ಅವನನ್ನು ಚಾಕುವಿನಿಂದ ಕೊಲೆ ಮಾಡಿ ಹೋಗಿರುತ್ತಾರೆ ಅಂತಾ ನೀಡಿದ ಫೀರ್ಯಾದಿ ಸಾರಾಂಶದ ಮೇಲಿಂದ ಶ್ರಿ ವಿಜಯ. ಬಿರಾದಾರ. ಪೊಲೀಸ ಇನ್ಸಪೆಕ್ಟರ್ ನಗರ ಪೊಲೀಸ ಠಾಣೆ ಕೊಪ್ಪಳ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ
ಅಪಘಾತ ಪ್ರಕರಣಗಳು
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 311/2012 ಕಲಂ. 279, 337, ಐ.ಪಿ.ಸಿ. ಹಾಗೂ 187 ಐ.ಎಂ.ವಿ. ಕಾಯ್ದೆ.
ದಿನಾಂಕ- 15/12/2012 ರಂದು ರಾತ್ರಿ 9:00 ಗಂಟೆಗೆ ಗಂಗಾವತಿ ಮಲ್ಲಿಕಾರ್ಜುನ ನರ್ಸಿಂಗ ಹೋಮದಿಂದ ಆರ್.ಟಿ.ಎ. ಬಗ್ಗೆ ಎಂ.ಎಲ್.ಸಿ. ಸ್ವಿಕ್ಪ್ರತವಾಗಿದ್ದು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಶ್ರಿತಿ ಪ್ಯಾರಿಮಾ ಗಂಡ ಖಾದರವಲಿ 40 ವರ್ಷ ಜಾತಿ: ಮುಸ್ಲಿಂ ಉ: ಕೂಲಿಕೆಲಸ ಸಾ: ಹನಮನಹಳ್ಳಿ ತಾ: ಗಂಗಾವತಿ ಇವರ ನುಡಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ?ದಿನಾಂಕ 15-12-2012 ರಂದು ಮಧ್ಯಾಹ್ನ 1:00 ಗಂಟೆಯ ಸುಮಾರಿಗೆ ನಾನು ನಮ್ಮ ಗ್ರಾಮ ಸೀಮಾದಲ್ಲಿ ಕಟ್ಟಿಗೆ ತರುವ ಕುರಿತು ವಿರುಪಾಪೂರ ಗಡ್ಡಿ ಕಡೆಗೆ ಹೋಗಿದ್ದೆನು ನಂತರ ಕಟ್ಟಿಗೆ ಮಾಡಿಕೊಂಡು ವಾಪಸ್ಸು ಬರುತ್ತಿರುವಾಗ ನಮ್ಮ ಗ್ರಾಮ ಹತ್ತಿರ ಏಲಕೂರ ಹನಮಂತ ಇವರ ಗದ್ದೆಯ ಪಕ್ಕದಲ್ಲಿ ಗಂಗಾವತಿಹುಲಗಿ ಮುಖ್ಯ ರಸ್ತೆಯಲ್ಲಿ ಎಡಬದಿಯಲ್ಲಿ ಕಟ್ಟಿಗೆ ಹೊತ್ತುಕೊಂಡು ಬರುತ್ತಿರುವಾಗ ನನ್ನ ತಲೆಯ ಮೇಲೆ ಇದ್ದ ಸಿಂಬೆ ಕೆಳಗೆ ಬಿದ್ದಿದ್ದು ಅದನ್ನು ಎತ್ತಿಕೊಳ್ಳಲು ಹೋದಾಗ ಹಿಂಬಾಗದಿಂದ ಅಂದರೆ ಹುಲಗಿ ಕಡೆಯಿಂದ ಬಂದ ಒಬ್ಬ ಇಂಡಿಕಾ ಕಾರ ಚಾಲಕನು ತನ್ನ ಕಾರನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ನನಗೆ ಟಕ್ಕರು ಕೊಟ್ಟದ್ದರಿಂದ ನಾನು ಅಂಗಾತವಾಗಿ ರಸ್ತೆಯಲ್ಲಿ ಬಿದ್ದೆನು ಇದರಿಂದಾಗಿ ನನಗೆ ತಲೆಯ ಹಿಂಬಾಗದಲ್ಲಿ ರಕ್ತ ಗಾಯವಾಗಿದ್ದು ಇದೆ. ನಂತರ ಕಾರ ಚಾಲಕನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ ಬಂದಿದ್ದು ಆಗ ಸಮಯ ಮಧ್ಯಾಹ್ನ 2:30 ಗಂಟೆಯಾಗಿರಬಹುದು ನಂತರ ಘಟನೆಯನ್ನು ನೋಡಿದ ಅಲ್ಲಿಯೇ ಇದ್ದು ನಮ್ಮ ಗ್ರಾಮದ ಮಂಜುನಾಥ ತಂದೆ ನಾಗರಾಜ 25 ವರ್ಷ ಈತನು ಬಂದು ನನ್ನನ್ನು ಎಬ್ಬಿಸಿ ಅಪಘಾತ ಮಾಡಿದ ಕಾರ ನಂಬರ ನೋಡಿ ಕೆ.ಎ-35/ಎ-9658 ಇಂಡಿಕಾ ಕಾರ ಅಂತಾ ತಿಳಿಸಿದನು. ನಂತರ ವಿಷಯವನ್ನು ನನ್ನ ಮಗ ಮತ್ತು ಗಂಡನಿಗೆ ವಿಷಯ ತಿಳಿಸಿ ಅದೇ ಕಾರಿನಲ್ಲಿ ಇಲಾಜು ಕುರಿತು ನನ್ನನ್ನು ಗಂಗಾವತಿಯ ಡಾ: ಮಲ್ಲಿಕಾರ್ಜುನ ನರ್ಸಿಂಗ ಹೋಮಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ ನಂತರ ಸದರಿ ಕಾರ ಚಾಲಕನು ಕೇಸು ಮಾಡಬೇಡಿ ಚಿಕಿತ್ಸೆ ಖರ್ಚು ಕೊಡುತ್ತೆನೆ ಅಂತಾ ಹಣ ತರುವದಾಗಿ ಹೇಳಿ ತನ್ನ ಕಾರ ಸಮೇತ ಹೊರಟು ಹೋದನು. ನಂತರ ರಾತ್ರಿಯಾದರೂ ಸಹ ಕಾರ ಚಾಲಕನು ಬರದೇ ಇದ್ದುದರಿಂದ ಮತ್ತು ನನಗೆ ಹೃದಯ ಬೇನೆ ಇದ್ದುದರಿಂದಾ ಡಾ: ಚಂದ್ರಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಕೊಂಡು ಈಗ ತಡವಾಗಿ ಈ ದೂರನ್ನು ಕೊಟ್ಟಿರುತ್ತೆನೆ ಶ್ರಿ ಮಲ್ಲಣ್ಣ ಎ.ಎಸ್.ಐ ಗಂಗಾವತಿ ಗ್ರಾಮೀಣ ಠಾಣೆ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ
3) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 103/2012 ಕಲಂ. 279, 338, ಐ.ಪಿ.ಸಿ:.
ದಿನಾಂಕ 15.12.2012 ರಂದು ರಾತ್ರಿ 8 ಗಂಟೆ ಸುಮಾರಿಗೆ ಹೊಸಪೇಟಿ - ಕುಷ್ಟಗಿ ಎನ್.ಹೆಚ್-50 ರಸ್ತೆಯ ಪುಟಗಮರಿ ಕ್ರಾಸ್ ಹತ್ತಿರ ಆರೋಪಿತನಾದ ಸಂತೊಷ ತಂದೆ ಪ್ರಭಯ್ಯ ಪಾಪನಾಳ ಫ್ಫ್ರ ನಂ: ಕೀ 29/ಎಂ7145 ನೇದ್ದರ ಚಾಲಕ ತಾನು ನಡೆಸುತ್ತಿದ್ದ ಕಾರ ನಂ ಕೀ 29/ಎಂ-7145 ನೆದ್ದನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಹೊಗಿ ಪುಟಗಮರಿ ಕಡೆಯಿಂದ ಬುಡಕುಂಟಿ ಕಡೆಗೆ ಹೊರಟಿದ್ದ ಮೋಟರ ಸೈಕಲ ನಂ ಕೆ.ಎ-37 ಆರ್-2278 ನೇದ್ದಕ್ಕೆ ಟಕ್ಕರಕೊಟ್ಟು ಅಪಘಾತಪಡಿಸಿದ್ದು ಇದರಿಂದ ಮೊ/ಸೈ ಸವಾರನಾದ ಶಂಕ್ರಪ್ಪ ತಂದೆ ಬಸಪ್ಪ ಮ್ಯಾಗೇರಿ ವ:38 ಸಾ|| ಯಲಬುರ್ತಿ ಇವನಿಗೆ ಭಾರಿ ಸ್ವರೂಪದ ರಕ್ತಗಾಯ ಹಾಗೂ ಒಳಪೆಟ್ಟಾಗಿದ್ದು ಇರುತ್ತದೆ ಶ್ರಿ ಸುನೀಲ ಕುಮಾರ ಪಿ.ಎಸ್.ಐ ಬೇವೂರ ಠಾಣೆ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ
ಹುಡುಗ ಕಾಣೆ ಪ್ರಕರಣ
4) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 102/2012 ಕಲಂ. ಹುಡುಗ ಕಾಣೆ:.
ದಿನಾಂಕ : 15-12-12 ರಂದು ಸಂಜೆ 7:30 ಗಂಟೆಗೆ ಪಿರ್ಯಾದಿ ಪರಸಪ್ಪ ತಂದೆ ಪಕೀರಪ್ಪ ನಿಡಶೇಸಿ ವ:55 ಜಾ||ಗಾಣಿಗ ಉ|| ಒಕ್ಕಲುತನ ಸಾ|| ಚಿಕ್ಕಮನ್ನಾಪೂರ ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಸಾರಾಂಶ ಏನೆಂದರೆ ದಿನಾಂಕ 05-12-12 ರಂದು ಪಿರ್ಯಾದಿಯ ತಂದೆ ಪಕೀರಪ್ಪ ಇವರು ಮರಣ ಹೊಂದಿದ್ದು ಅಂತ್ಯ ಸಂಸ್ಕಾರಕ್ಕೆ ಪಿರ್ಯಾದಿಯ ಮಗ ಮಹೇಶನು ಶಾಲೆಯಿಂದ ರಜೆಯ ಮೇಲೆ ಊರಿಗೆ ಬಂದಿದ್ದು ನಂತರ ದಿನಾಂಕ 10-12-12 ರಂದು ಬೆಳಿಗ್ಗೆ 8 ಗಂಟೆಗೆ ಮುರರ್ಜಿ ವಸತಿ ಶಾಲೆ ಬೇವೂರಗೆ ಕಳುಹಿಸಲು ಪಿರ್ಯಾದಿಯು ಚಿಕ್ಕಮನ್ನಾಪೂರದಲ್ಲಿ ಮಹೇಶನಿಗೆ ಶಾಲೆಗೆ ಹೊಗಲು ಕುರಿತು ಬಸ್ಸಿಗೆ ಹತ್ತಿಸಿ ಕಳುಹಿಸಿದ್ದು ನಂತರ ಶಾಲೆಯ ಮುಖ್ಯಗುರುಗಳಿಗೆ ಸಂಜೆ 6 ಗಂಟೆಗೆ ಪೋನ ಮಾಡಿ ವಿಚಾರ ಮಾಡಲಾಗಿ ಮಹೇಶನು ಶಾಲೆಗೆ ಬಂದಿರುತ್ತೆನೆ ಅಂದು ವಿಚಾರಿಸಿದಾಗ ಗುರುಗಳು ನಿಮ್ಮ ಮಗ ಶಾಲೆಗೆ ಬಂದಿಲ್ಲಾ ಅಂತಾ ತಿಳಿಸಿದರು, ನಂತರ ತನ್ನ ಮಗನು ಶಾಲೆಗೆ ಹೊಗದೇ ಮನೆಗೂ ಬಾರದೇ ಯಾರಿಗೂ ಹೇಳದೆ ಕೇಳದೆ ಹೊಗಿದ್ದು ಅಲ್ಲಲ್ಲಿ ಫಿರ್ಯಾಧಿದಾರರು ಹುಡೂಕಾಡಿದರೂ ಸಿಗದಿದ್ದರಿಂದ ಕಾರಣ ಕಾಣೆಯಾದ ತನ್ನ ಮಗನನ್ನು ಪತ್ತೆ ಹಚ್ಚಿ ಕೊಡಲು ವಿನಂತಿ ಅಂತಾ ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದ್ದು ಇರುತ್ತದೆ ಶ್ರಿ ಸುನೀಲ ಕುಮಾರ ಪಿ.ಎಸ್.ಐ ಬೇವೂರ ಠಾಣೆ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ
0 comments:
Post a Comment