ಅಪಘಾತ ಪ್ರಕರಣಗಳು :
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 155/2013 ಕಲಂ. 279, 338 ಐ.ಪಿ.ಸಿ:
ದಿನಾಂಕ: 07.09.2013 ರಂದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ಮಂಗಳಾಪೂರ-ಗುನ್ನಳ್ಳಿ ರಸ್ತೆಯ ಮೇಲೆ, ಮಂಗಳಾಪೂರ ಗ್ರಾಮದ ರಹಿಮಾನಸಾಬ ಇವರ ಮನೆಯ ಹತ್ತಿರದ ರಸ್ತೆಯ ಮೇಲೆ ಆರೋಪಿತನಾದ ಯಮನೂರಸಾಬ ಇತನು ತನ್ನ ಮೋ.ಸೈ ನಂ ಕೆ.ಎ-27/ಹೆಚ್-7031 ನೇದ್ದನ್ನು ಕೊಪ್ಪಳ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಪಿಯರ್ಾದಿದಾರರ ಮೊಮ್ಮಗಳಾದ ಅಕ್ಕಮಹಾದೇವಿ ವಯಾ: 6 ವರ್ಷ ಇವಳಿಗೆ ಟಕ್ಕರಕೊಟ್ಟು ಅಪಘಾತ ಮಾಡಿದ್ದು ಇದರಿಂದ ಅವಳಿಗೆ ಭಾರಿ ರಕ್ತಗಾಯಗಳಾಗಿದ್ದು ಇರುತ್ತದೆ. ಕಾರಣ ಮೋ.ಸೈ ನಂ.ಕೆ.ಎ-27/ಹೆಚ್-7031 ನೇದ್ದರ ಸವಾರ ಯಮನೂರಸಾಬ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿಯರ್ಾದಿ ಸಾರಾಂಶ ಮೇಲಿಂದ ಶ್ರೀಮತಿ ಪದ್ಮಾವತಿ ಮಹೆಚ್.ಸಿ 109 ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 221/2013 ಕಲಂ. 279, 337, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ:- 07-09-2013 ರಂದು ಬೆಳಿಗ್ಗೆ 08:30 ಗಂಟೆಗೆ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯಲ್ಲಿ ಕೊಪ್ಪಳ ಕಡೆಯಿಂದ ಲಾರಿ ನಂಬರ್: ಕೆ.ಎ-37/ 4564 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀ ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದಿದ್ದರಿಂದ ವೇಗ ನಿಯಂತ್ರಿಸಲು ಆಗದೇ ರಸ್ತೆಯ ತನ್ನ ಎಡಗಡೆ ಹೋಗದೇ ಒಮ್ಮೆಲೇ ಬಲಗಡೆಗೆ ತಿರುಗಿಸಿಕೊಂಡು ಬಂದು ಚಿಕ್ಕಬೆಣಕಲ್ ಕ್ರಾಸ್ ಹತ್ತಿರ ಇರುವ ಭೀಮಯ್ಯ ತಂದೆ ರಂಗಯ್ಯ ಇವರ ಪಂಚರ್ ಅಂಗಡಿಯ ಮುಂದೆ ಪಂಚರ್ ಹಾಕಲು ನಿಲ್ಲಿಸಿದ್ದ ಟಾಟಾ ಏಸ್ ಗೂಡ್ಸ್ ವಾಹನ ನಂ: ಕೆ.ಎ-37/ 9176 ನೇದ್ದಕ್ಕೆ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದರಿಂದ ಲಾರಿಯು ಅಂಗಡಿಯ ಪಕ್ಕದ ದನದ ಶೆಡ್ ಮೇಲೆ ಉರುಳಿ ಬಿದ್ದು, ಶೆಡ್ನಲ್ಲಿದ್ದ ಭೀಮಯ್ಯನ 2 ಎಮ್ಮೆಗಳು ಸ್ಥಳದಲ್ಲಿಯೇ ಸತ್ತಿದ್ದು, ಭೀಮಯ್ಯ ತಂದೆ ರಂಗಯ್ಯ, 55 ವರ್ಷ ಸಾ: ಚಿಕ್ಕಬೆಣಕಲ್ ಹಾಗೂ ಅವರ ಮಗ ಆಂಜನೇಯ ತಂದೆ ಭೀಮಯ್ಯ, ವಯಸ್ಸು 28 ವರ್ಷ, ಜಾತಿ: ವಾಲ್ಮೀಕಿ ಉ: ಪಂಚರ್ ಹಾಕುವುದು ಸಾ: ಚಿಕ್ಕಬೆಣಕಲ್ ಮತ್ತು ಟಾಟಾ ಏಸ್ ಚಾಲಕ ಜಗದೀಶ ತಂದೆ ಜೈನಾಗೇಶ ಕುರ್ತಕೋಟಿ, ವಯಸ್ಸು 24 ವರ್ಷ, ಲಿಂಗಾಯತ ಸಾ: ಚಿಕ್ಕಬೆಣಕಲ್ ಮತ್ತು ಅಲ್ಲಿಯೇ ನಿಂತಿದ್ದ ಲಿಂಗರಾಜ ತಂದೆ ನರಸಪ್ಪ ಹಿರೇಕುರುಬರು, ವಯಸ್ಸು 25 ವರ್ಷ, ಜಾತಿ: ಕುರುಬರು ಉ: ವಿದ್ಯಾಥರ್ಿ ಸಾ: ಚಿಕ್ಕಬೆಣಕಲ್ ಇವರಿಗೆ ತೀವ್ರ ಮತ್ತು ಸಾದಾ ಗಾಯಗಳಾಗಿದ್ದು, ಅಪಘಾತವಾದ ನಂತರ ಲಾರಿ ಚಾಲಕನು ಅಲ್ಲಿಂದ ಓಡಿ ಹೋಗಿದ್ದು ಇರುತ್ತದೆ. ನಂತರ ಗಾಯಾಳುಗಳನ್ನು ಗಂಗಾವತಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲು ಮಾಡಿದ್ದು ಇರುತ್ತದೆ. ಶ್ರೀ. ಹನುಮರೇಡ್ಡೆಪ್ಪ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 229/2013 ಕಲಂ. 279, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ. 06-07-2013 ರಂದು ರಾತ್ರಿ 10-00 ಗಂಟೆ ಸುಮಾರಿಗೆ ಫಿರ್ಯಾದಿದಾರರ ಮಾವ ರಮೇಶ ಪೊಲೀಸ್ ಪಾಟೀಲ ಸಾ. ಹೊಸಪೇಟೆ ಇವರು ತಮ್ಮ ಮೋಟಾರ ಸೈಕಲ್ ನಂ. ಕೆ.ಎ.35/ಎಕ್ಸ.1018 ನೇದ್ದರಲ್ಲಿ ಹೊಸಪೇಟೆಯಿಂದ ಅಬ್ಬಿಗೆರಿಗೆ ಹೋಗಿ ಅಬ್ಬಗೆರೆಯಿಂದ ರಾತ್ರಿ ಬೂದಗುಂಪಾಕ್ಕೆ ಬಂದು ಫಿರ್ಯಾದಿಗೆ ಮಾತನಾಡಿಸಿಕೊಂಡು ತಮ್ಮ ಮೋಟಾರ ಸೈಕಲದಲ್ಲಿ ಹೊಸಪೇಟೆಗೆ ಹೋಗಿ ಬೂದಗುಂಪಾ ಕ್ರಾಸ್ ಕಡೆಗೆ ಹೋಗುತ್ಗಿರುವಾಗ ಕೊಪ್ಪಳ ಗಂಗಾವತಿ ರಸ್ತೆಯ ಮೇಲೆ ಪೆಟ್ರೊಲ್ ಬಂಕ ಮುಂದೆ ಗಂಗಾವತಿ ರಸ್ತೆಯ ಮೇಲೆ ಲಾರಿ ನಂ. ಹೆಚ್.ಆರ್.61/ಬಿ.0906 ನೇದ್ದರ ಚಾಲಕನು ಲಾರಿಯನ್ನು ಗಂಗಾವತಿ ಕಡೆಯಿಂದ ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಅಡ್ಡಾದಿಡ್ಡಿ ಚಲಾಯಿಸಿಕೊಂಡು ಬಂದು ರಮೇಶ ಇವರಿಗೆ ಹಿಂದೆ ಠಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ರಮೇಶ ಇತನು ಮೋ.ಸೈ. ಸಮೇತ ಕೆಳಗೆ ಬಿದ್ದಾಗ ಲಾರಿಯ ಮುಂದಿನ ಎಡಗಡೆಯ ಗಾಲಿ ರಮೇಶ ಇತನ ಬಲಗಾಲ ಮೇಲೆ ಹತ್ತಿ ಹೋಗಿದ್ದರಿಂದ ಬಲಗಾಲ ತೊಡೆಯಿಂದ ಪಾದದ ವರೆಗೆ ಚರ್ಮ ಹರಿದು ಎಲಬು ಮುರಿದು ಮಾಂಸಖಂಡ ಹೊರಗೆ ಬಂದು ಭಾರಿ ಗಾಯವಾಗಿರುತ್ತದೆ ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶ ಇರುತ್ತದೆ. ಶ್ರೀ. ವಿ.ಕೆ. ಹಿರೇಗೌಡರ್ ಪಿ.ಎಸ್.ಐ. ಮುನಿರಾಬಾದ ಠಾಣೆ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
0 comments:
Post a Comment