Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, August 21, 2014PÉÆ¥Àà¼À f¯ÉèAiÀÄ°è ªÀgÀ¢AiÀiÁzÀ ¥ÀæPÀgÀtUÀ¼ÀÄ

1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 201/2014 ಕಲಂ. 326, 504, 506 ಸಹಿತ 34 ಐ.ಪಿ.ಸಿ:.

ದಿನಾಂಕ: 20-08-2014 ರಂದು 15-00 ಗಂಟೆಗೆ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ. ವಸೂಲಾಗಿದ್ದು, ಅದರ ವಿಚಾರಣೆ ಕುರಿತು ಸರಕಾರಿ ಆಸ್ಪತ್ರೆಗ ಬೇಟಿ ನೀಡಿ ಆಸ್ಪತ್ರೆಯಲ್ಲಿ ದುಃಖಪಾತಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಹೊನ್ನೂರಪ್ಪ ತಂದೆ ಹಿರೇದುರಗಪ್ಪ ತಳವಾರ, ವಯಾ; 35 ವರ್ಷ, ಜಾ; ನಾಯಕ, ಉ: ಒಕ್ಕಲುತನ, ಸಾ: ಆರಾಳ ತಾ: ಗಂಗಾವತಿ ರವರ ಹೇಳೀಕೆ ಪಡೆದುಕೊಂಡು ವಾಪಾಸ್ ಠಾಣೇಗೆ 16-30 ಗಂಟೆಗೆ ಬಂದಿದ್ದು, ಸದರಿ ಗಾಯಾಳುವಿನ ಹೇಳಿಕೆ ಪಿರ್ಯಾದಿ ಸಾರಾಂಶವೇನೆಂದರೆ, ದಿನಾಂಕ:20-08-2014 ರಂದು ಮದ್ಯಾನ್ಹ 1-30 ಗಂಟೆಯ ಸುಮಾರಿಗೆ ನಾನು ಹೊಲಕ್ಕೆ ಹೋಗಿದ್ದು, ಹೊಲದಲ್ಲಿ ರಾಮಣ್ಣ ಈತನ ಹೊಲದ ಮದ್ಯದಲ್ಲಿ ಸಣ್ಣ ಕಾಲುವೆ ಇದ್ದು, ನಾವು ತಿರುಗಾಡುವ ಸಲುವಾಗಿ ಸುಮಾರು 10 ವರ್ಷಗಳಿಂದ ಒಂದು ಸಣ್ಣ ಪೈಪನ್ನು ಹಾಕಿದ್ದು ಅದರ ಎರಡೂ ಪಕ್ಕಗಳಲ್ಲಿ ಬಂಡೆಗಳನು ಹಾಕಿರುತ್ತೇವೆ. ಅದರಂತೆ ಇಂದು ರಾಮಣ್ಣನು ಪೈಪಿಗೆ ಹಾಕಿದ ಬಂಡೆಗಳನ್ನು ಕಿತ್ತು ಹಾಕಿದ್ದು ಇರುತ್ತದೆ. ನಾನು ರಾಮಣ್ಣನಿಗೆ ಕಾಲುವೆ ಮೇಲೆ ಹಾಕಿದ ಕಲ್ಲುಗಳನ್ನು ಯಾತಕ್ಕೆ ಕಿತ್ತಿದ್ದೀಯಾ ಅಂತಾ ಕೇಳಿದ್ದಕ್ಕೆ ರಾಮಣ್ಣ ಮತ್ತು ಆತನ ಹೆಂಡತಿ ಹುಲಿಗೆಮ್ಮ ಕೂಡಿಕೊಂಡು ನನಗೆ ಲೇ ಸೂಳೇ ಮಗನೇ ಇದೇನು ಹೊಲ ನಿಮ್ಮಪ್ಪಂದು, ನೀನು ಯಾಕೆ ಕೇಳುತ್ತೀಯಲೇ ಸೂಳೆ ಮಗನೇ ಅಂತಾ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲ ಅಂತಾ ಅವಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿರುತ್ತಾರೆ. ಮತ್ತು ಹುಲಿಗೆಮ್ಮನು ಲೋ ಜಿಟ್ಯಾ ನೀನು ನಮ್ಮ ಹೊಲದಾಗ ಬಂದು ಏನು ಸೆಂಟಾ ಕೇಳತೀಯಲೋ ನಿನ್ನ ಹೊಲದಾಗ ನಾವು ಬಂದರೆ ಕೇಳು ನೀನು ಈಗ ಸುಮ್ಮನೆ ಹೋಗು ಇಲ್ಲ ಅಂದರೆ ನಿನ್ನನ್ನು ಜಿವಂತ ಉಳಿಸುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಮತ್ತು ಅಲ್ಲಿಯೇ ಇದ್ದ ಒಂದು ಸೈಜುಗಲ್ಲನ್ನು ತೆಗೆದುಕೊಂಡು ನನ್ನ ತಲೆಗೆ ಎತ್ತಿಹಾಕಿದ್ದು ಇದರಿಂದ ನನ್ನ ತಲೆಗೆ ಬಾರೀ ರಕ್ತಗಾಯವಾಗಿರುತ್ತದೆ. ಅಂತಾ ಮುಂತಾಗಿ ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 144/2014 ಕಲಂ. 110 (ಈ) ಮತ್ತು (ಜಿ) ಸಿ.ಆರ್.ಪಿ.ಸಿ:.

ದಿ:20-08-2014 ರಂದು ಸಂಜೆ 05-00 ಗಂಟೆಗೆ ನನ್ನೊಂದಿಗೆ ಹೀರಪ್ಪ ನಾಯಕ ಹೆಚ್.ಸಿ.108 ರವರೊಂದಿಗೆ ನಗರದಲ್ಲಿ ಗಸ್ತು ಮಾಡುತ್ತಿರುವಾಗ ಸಂಜೆ 5-30 ಪಿ.ಎಂ. ಗೆ ಪಟ್ಣtದ ಬಸವೇಸ್ವರ ಸರ್ಕಲ್‌ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಒಬ್ಬನು ನಿಂತುಕೊಂಡು ರಸ್ತೆಯಲ್ಲಿ ಹೋಗುವವರಿಗೆ ಬರುವವರಿಗೆ ಅವಾಚ್ಯವಾಗಿ ಲೇ ಬೋಸುಡಿ ಮಕ್ಕಳಾ ಯಾವನಾದರೂ ತಿಂಡಿ ಇದ್ದ ಸೂಳೇ ಮಕ್ಕಳು ಇದ್ರ ಬರ್ರಲೇ ಯಾವ ಸೂಳೆ ಮಕ್ಕಳು ನನ್ನನ್ನು ಏನು ಮಾಡುತ್ತಾರೆ ಯಾವ ಸರಕಾರ ಏನು ಮಾಡುತ್ತದೆ ಅಂತಾ ಬೈದಾಡುತ್ತಿದ್ದು ಆಗ ನಾವು ಅವನಿಗೆ ಈ ರೀತಿ ಮಾಡುವುದು ಸರಿ ಅಲ್ಲ ಇಲ್ಲಿಂದ ಸುಮ್ಮನೆ ಹೋಗು ಅಂತಾ ಎಚ್ಚರಿಕೆ ಕೊಟ್ಟರೂ ಸಹಿತ ಸದರಿಯವನು ತನ್ನ ವರ್ತನೆಯನ್ನು ಹಾಗೆಯೇ ಮುಂದುವರಿಸಿದ್ದರಿಂದ ಸದರಿಯವನು ಶಾಂತವಿದ್ದ ವಾತಾವರಣವನ್ನು ಕಲುಷಿತಗೊಳಿಸುತ್ತಾನೆ ಅಂತಾ ಪರಿಗಣಿಸಿ ಸದರಿಯವನಿಗೆ ವಶಕ್ಕೆ ತಗೆದುಕೊಂಡು ಆವನ ಹೆಸರು ವಿಚಾರಿಸಲು ಚನ್ನಪ್ಪ ತಮದೆ ಹೊನ್ನಪ್ಪ ಕಂದಕುರ ವಯ 27 ವರ್ಷ ಜಾತಿ ಲಿಂಗಾಯತ ು.ಕೂಲಿಕೆಲಸ ಸಾ. ತಲುವಗೇರ ತಾ. ಕುಷ್ಟಗಿ ಅಂತಾ ತಿಳಿಸಿದ್ದು ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಶಾಂತವಿದ್ದ ವಾತಾವರಣವನ್ನು ಕಲುಷಿತಗೊಳಿಸುತ್ತಾನೆ ಅಂತಾ ಸದರಿಯವನನ್ನು ಮುಂಜಾಗ್ರತಾ ಕ್ರಮವಾಗಿ ತಾಬಾಕ್ಕೆ ತೆಗೆದುಕೊಂಡು ವಾಪಸ್ ಠಾಣೆಗೆ 06-12 ಪಿ.ಎಂ.ಗೆ ಬಂದು ಸರಕಾರ ತರ್ಪೆಯಿಂದ ಸದರಿಯವನ ವಿರುದ್ದ ಠಾಣೆ ಗುನ್ನೆ ನಂ: 144/2014 ಕಲಂ 110(& ಜಿ) ಸಿ.ಆರ್.ಪಿ.ಸಿ ರಿತ್ಯ ಪ್ರಕರಣ ದಾಖಲಿಸಿ ಕ್ರಮ ಜರುಗಿಸಿದ್ದು ಇರುತ್ತದೆ

0 comments:

 
Will Smith Visitors
Since 01/02/2008