Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, September 7, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 193/2014 ಕಲಂ. 309 ಐ.ಪಿ.ಸಿ:.
ದಿ: 06-09-2014 ರಂದು ಸಂಜೆ 06-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಪುಟ್ಟರಾಮಯ್ಯ. ತಹಶೀಲ್ದಾರರು ಕೊಪ್ಪಳ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ಇಂದು ದಿ: 06-09-2014 ರಂದು ಬೆಳಗ್ಗೆ 11-00 ಗಂಟೆ ಸುಮಾರಿಗೆ ಕೊಪ್ಪಳ ತಹಶೀಲ್ದಾರ ಕಾರ್ಯಾಲಯದ ಆವರಣದ ವಾಹನ ನಿಲುಗಡೆ ಪ್ರದೇಶದಲ್ಲಿ ಸಣ್ಣ ಹನಮಂತಪ್ಪ ತಂದೆ ಭೀಮಪ್ಪ ಸಾ: ಹಳೆ ಬಂಡಿಹರ್ಲಾಪೂರ ಈತನು ಯಾವುದೇ ಮನವಿಯನ್ನು ಸಲ್ಲಿಸದೇ ಏಕಾಏಕೀ ಸೀಮೆ ಎಣ್ಣೆ ಕುಡಿದು ತನ್ನ ಮೈ ಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿರುತ್ತಾನೆ. ಕಾರಣ ಸದರಿ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 193/2014 ಕಲಂ: 309 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 274/2014 ಕಲಂ. 341, 323, 504, 506, 392 ಐ.ಪಿ.ಸಿ.
ದಿನಾಂಕ:-06-09-2014 ರಂದು ಬಳಗಿನ ಜಾವ 00-50 ಗಂಟೆಯ ಸುಮಾರಿಗೆ ಪಿರ್ಯಾದಿದಾರರಾದ ಮಾರೆಪ್ಪ ತಂದಿ ಹೆಮಣ್ಣ ಜೊಗಲದಿನ್ನಿ ವಯಾ: 30 ವರ್ಷ ಜಾ: ನಾಯಕ ಉ: ಒಕ್ಕಲುತನ ಸಾ. ಸಾಲುಂಚಿಮರ ತಾ: ಗಂಗಾವತಿ ಇವರು ಠಾಣಗೆ ಹಾಜರಾಗಿ ಲಿಖಿತ ಪಿರ್ಯಾದಿ ಕೊಟ್ಟಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ನಿನ್ನೆ ದಿನಾಂಕ; 05-09-2014 ರಂದು ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ತಾನು ಮತ್ತು ತಮ್ಮೂರಿನ ಹುಲ್ಲೇಶ ತಂದಿ ಯಂಕೊಬ ನಾಯಕ ಕೂಡಿಕೊಂಡು ತಮ್ಮ ಮೋಟಾರ್ ಸೈಕಲ್ ನಂ ಕೆ.ಎ- 37 ವಿ- 3229 ಮೇಲೆ ಸಾಲುಂಚಿಮರದಿಂದ ರವಿ ನಗರದ ಕಡೆಗೆ ಹೋಗುವಾಗ ವಿ.ಆರ್.ಎಲ್ ಲಾರಿ ನಂ ಎಮ್.ಹೆಚ್- 13 ಆರ್-2116 ನೆದ್ದರ ಚಾಲಕ ತಮ್ಮ ಲಾರಿಯನ್ನು ಓಡಿಸಿಕೊಂಡು ನಮ್ಮನ್ನು ಓವರೆಟೆಕ್ ಮಾಡಲು ಬಂದಾಗ್ಗೆ ನಾನು ಮತ್ತು ಹುಲ್ಲೇಶ ಕೂಡಿ ಲಾರಿಯ ಚಾಲಕನಿಗೆ ನಿಧಾನವಾಗಿ ನೋಡಿಕೊಂಡು ಹೋಗಬೇಕು ಅಂತಾ ಹೇಳಿದ್ದಾಗ್ಗೆ ಸದರಿಯವನು ಲಾರಿಯನ್ನು ನಿಲ್ಲಿಸಿ ಈ ಲಾರಿ ಯಾರದು ಗೊತ್ತಾ ವಿ.ಆರ್.ಎಲ್ ಕಂಪನಿಯದು ನಾವು ಹೀಗೆ ನಡೆಸುತ್ತೇವೆ ಇದನ್ನು ಕೇಳಲು ನೀವ್ಯಾರಲೇ ಸೂಳೆ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದಾಡಿದನು ಆಗ ನಾವು ಸರಿಯಾಗಿ ಮಾತನಾಡು ಅಂತಾ ಅಂದಿದ್ದಕ್ಕೆ ಸದರಿ ಲಾರಿಯ ಚಾಲಕ ಲಾರಿಯಿಂದ ಕೆಳಗೆ ಇಳಿದು ನಮಗೆ ನಿಲ್ಲಿಸಿ ಏನರ್ಲೇ ನನಗೆ ಕೆಳಗೆ ಇಳಿದು ಬಾ ಅಂತಿನ್ಲೇ ಅಂತಾ ಅಂದು ನಮಗೆ ಹೊಡೆ ಬಡೆ ಮಾಡಿ ಪಿರ್ಯಾದಿದಾರರ ಜೇಬಿನಲ್ಲಿದ್ದ 1500=00 ಹಣ  ಮತ್ತು ಕೊರಳಲ್ಲಿದ್ದ ಒಂದು ತೊಲೆ ಬಂಗಾರದ ಚೈನ ಸರ ಅಂ.ಕಿ 25000=00 ನೆದ್ದನ್ನು ಕಿತ್ತಿಕೊಂಡು ಲಾರಿ ಚಾಲು ಮಾಡಿಕೊಂಡು ಹೋಗಿದ್ದರಿಂದ ನಾವು ಆತನಿಗೆ ಬೆನ್ನೂ ಹತ್ತಿ ತಿರುಗಾಡಿ ರವಿ ನಗರದ ಹತ್ತಿರ ಹೋಗಿ ಆತನ ಲಾರಿಯನ್ನು ನಿಲ್ಲಿಸಿ ವಿಚಾರಿಸಿದ್ದು ಸದರಿಯವನು ನಮ್ಮ ಹಣ ಮತ್ತು ಬಂಗಾರ ಕಿತ್ತಿಕೊಂಡು ಹೋಗಿದ್ದು ಸದರಿ ವಿ.ಆರ್.ಎಲ್  ಲಾರಿಯ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿಸಿಕೊಂಡು ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 185/2014 ಕಲಂ. 379 ಐ.ಪಿ.ಸಿ.
ದಿನಾಂಕ 05-08-2014 ರಂದು ಮಧ್ಯಾಹ್ನ 3-30 ಗಂಟೆಗೆ ಶ್ರೀ ಡಿ.ಗೋವಿಂದರಾಜು ತಂದೆ ದಿ:ವೆಂಕಟೇಶ್ವರಲು, ಆಡಳಿತ ಶಿರಸ್ತೇದಾರರು ಮಾನ್ಯ ಪ್ರಧಾನ ಸಿವಿಲ್ & ಜೆ.ಎಂ.ಎಫ್.ಸಿ. ನ್ಯಾಯಾಲಯ, ಗಂಗಾವತಿ ರವರು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 04-08-2014 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ 05-08-2014 ರಂದು ಬೆಳಗಿನ ಜಾವ 05-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಗಂಗಾವತಿ ನಗರದ ಆನೇಗುಂದಿ ರಸ್ತೆಯಲ್ಲಿರುವ ಸರ್ಕ್ಯೂಟ್ ಹೌಸ್ ಹತ್ತಿರ ಇರುವ ಮಾನ್ಯ ತ್ವರಿತ ನ್ಯಾಯಾಧೀಶರ ವಸತಿ ಗೃಹದ ಹೊರಭಾಗಕ್ಕೆ ಅಳವಡಿಸಿದ ಎಲ್.ಜಿ. ಕಂಪನಿಯ  ಎ.ಸಿ.ಯ. ಎಕ್ಜಿಸ್ಟಿಂಗ್ ಫ್ಯಾನ್ ಅಂ.ಕಿ. ರೂ. 10,000-00 ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿ ಅದನ್ನು ಹೆಚ್.ಆರ್.ಎಸ್.ಎಂ. ಕಾಲೇಜ್ ಹಿಂಭಾಗದಲ್ಲಿ ಒಡೆದು ಅದರಲ್ಲಿ ಅಳವಡಿಸಿದ ಕಾಪರ್ ವಾಯರ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
4) ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 51/2014 ಕಲಂ. 279, 337 ಐ.ಪಿ.ಸಿ.
ದಿನಾಂಕ 06-09-2014 ರಂದು ಮಧ್ಯಾಹ್ನ 1-20 ಗಂಟೆಗೆ ಎಂ.ಎಲ್.ಸಿ ಮಾಹಿತಿ ಬಂದಿದ್ದು, ಕೂಡಲೇ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ಕೊಡಿಸುತ್ತಿರುವ ಸುರೇಂದ್ರಶೆಟ್ಟಿ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 06-09-2014 ರಂದು ಮಧ್ಯಾಹ್ನ 12-50 ಗಂಟೆಯ ಸುಮಾರಿಗೆ ತನ್ನ ಅಣ್ಣನ ಹೆಂಡತಿ ಶ್ರೀಮತಿ ರೇಖಾಶೆಟ್ಟಿ ಇಕೆಯು ತನ್ನ ಸ್ಕೂಟಿ ನಂ. KA 37 / R 1578 ನೇದ್ದನ್ನು ತೆಗೆದುಕೊಂಡು ತನ್ನ ಮಗು ರಾಘವೇಂದ್ರ ಇತನನ್ನು ಎಸ್.ಎಫ್.ಎಸ್ ಶಾಲೆಯಿಂದ ಕರೆದುಕೊಂಡು ಬರುವ ಕುರಿತು ಶಾಲೆಗೆ ಕಡೆಗೆ ಗದಗ - ಹೊಸಪೇಟೆ ಎನ್.ಹೆಚ್ 63 ರಸ್ತೆಯ ಮೇಲೆ ರಿಲಾಯನ್ಸ್ ಪೆಟ್ರೋಲ್ ಹತ್ತಿರ ಹೋಗುತ್ತಿರುವಾಗ ಎದುರುಗಡೆಯಿಂದ ನಗರ ಸಾರಿಗೆ ಬಸ್ ನಂ. KA 37 / F 550 ನೇದ್ದರ ಚಾಲಕನು ತಾನು ಚಲಾಯಿಸುತ್ತಿರುವ ಬಸ್ ನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರೇಖಾಶೆಟ್ಟಿ ಇವರ ಸ್ಕೂಟಿಗೆ ಠಕ್ಕರ್ ಮಾಡಿ ಅಪಘಾತ ಮಾಡಿದ್ದು ಇದರಿಂದ ರೇಖಾಶೆಟ್ಟಿ ಇವರಿಗೆ ಬಲಗಡೆ ತಲೆಗೆ ರಕ್ತಗಾಯ, ಬಲಗಾಲ ಪಾದದ ಮೇಲೆ ತೆರಚಿದ ಗಾಯ ವಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆಯನ್ನು ಮಧ್ಯಾಹ್ನ 1-30 ಗಂಟೆಯಿಂದ 2-15 ಗಂಟೆಯವರೆಗೆ ಪಡೆದುಕೊಂಡು ವಾಪಾಸ್ ಠಾಣೆಗೆ 2-30 ಗಂಟೆಗೆ ಬಂದಿದ್ದು, ಸದರಿ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 165/2014 ಕಲಂ. 465, 468, 471, 419, 420 ಐ.ಪಿ.ಸಿ:.

ದಿನಾಂಕ. 24-09-2011 ರಂದು ದೃವದೇಶ ಮೆಟಾಸ್ಥೀಲ್ ಪ್ಯಾಕ್ಟರಿಯ ಸಿ.ಇ.ಓ. ಓಂಕಾರ ಮತ್ತು ಆಡಳಿತ ವರ್ಗದವರು ಕೂಡಿಕೊಂಡು ಫಿರ್ಯಾದಿಗೆ ಸೇರಿದ ಜಮೀನ ಸರ್ವೆ ನಂ. 167/1 ಫಿರ್ಯಾದಿದಾರರ ಜಮೀನಿನ ಪಹಣಿ ಪತ್ರ ನೀಡಿ ಫಿರ್ಯಾದಿದಾರರ ಹೆಸರಿನಲ್ಲಿ 200-00 ರೂ. ಗಳೆ ಎರಡು ಬಾಂಡ ಪಡೆದುಕೊಂಡು ಬಾಂಡಿನಲ್ಲಿ ಒಪ್ಪಿಗೆ ಪತ್ರ ತಯಾರಿಸಿ ಬಾಂಡಿನಲ್ಲಿ ಫಿರ್ಯಾದಿದಾರರ ಖೊಟ್ಟಿ ಸಹಿ ಮಾಡಿ ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳಿಗೆ ಕೊಟ್ಟು, ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳು ಯಾವುದೆ ವಿಚಾರಣೆ ಮಾಡಿದೆ ಫಿರ್ಯಾದಿದಾರರ ಅಣ್ಣನ ಜಮೀನು ಸರ್ವೆ ನಂ. 167/3 ರಲ್ಲಿ 220 ಕೆ.ವಿ. ಟವರ ಹಾಕಿದ್ದು, ಫಿರ್ಯಾದಿದಾರರಿಗೆ ಯಾವುದೆ ಮಾಹಿತಿ ಇಲ್ಲದೆ ಖೊಟ್ಟಿ ದಾಖಲೆಗಳನ್ನು ಶೃಷ್ಟಿ ಮಾಡಿ ಮೋಸ ಮಾಡಿರುತ್ತಾರೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008