Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, October 1, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 291/2014 ಕಲಂ. 420 ಐ.ಪಿ.ಸಿ:.

ದಿನಾಂಕ:-30-09-2014 ರಂದು ಕಾರಟಗಿ ಪೊಲೀಸ ಠಾಣೆಯ ಕೋರ್ಟ ಕರ್ತವ್ಯದ ಪಿ.ಸಿ 164 ರವರು ಠಾಣೆಗೆ ಹಾಜರಾಗಿ ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿ ನಂ 156/2014 ನೆದ್ದನ್ನು ತಂದು ಹಾಜರು ಪಡಿಸಿದ್ದು ಸದರಿ ಖಾಸಗಿ ಪಿರ್ಯಾದಿಯ ಸಾರಾಂಶವೆನಂದರೆ ಸದರಿ ಪ್ರಕರಣದ ಪಿರ್ಯಾದಿದಾರರಾದ  ರಾಘವೇಂದ್ರ ತಂದಿ ಕೇಶವ ಶೆಟ್ಟಿ ಸಾ. ಕಾರಟಗಿ ರವರು ಭತ್ತದ ವ್ಯವಹಾರ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು ಅದೇ ರೀತಿ ಆರೋಪಿತನು ಭತ್ತದ ವ್ಯವಹಾರ ಮಾಡಿಕೊಂಡಿದ್ದು ಸದರಿ ಇಬ್ಬರು ಪರಿಚಯದ ಮೇಲೆ ಆರೋಪಿತನು ದಿನಾಂಕ:-24-03-2010 ರಂದು ಪಿರ್ಯಾದಿದಾರರ ಕಡೆಯಿಂದ ಸೋನಾ ಅಕ್ಕಿನುಚ್ಚಿನ 160 ಚೀಲಗಳು ಹಾಗೂ ಸೋನಾ ಅಕ್ಕಿಯ 80 ಚೀಲಗಳುನ್ನು ಪಡೆದುಕೊಂಡು ಅದಕ್ಕೆ ಕಾರಟಗಿ ಇನ್ ವೈಸ್ ಮಿಲ್ ನಂ 132 ನೆದ್ದನ್ನು ಪಡೆದುಕೊಂಡು ಸದರಿ ಅಕ್ಕಿ ಚೀಲಗಳನ್ನು ಲಾರಿ ನಂ ಟಿ.ಎನ್-28/ಎಇ/-7591 ನೆದ್ದರಲ್ಲಿ ಲೋಡ ಮಾಡಿಕೊಂಡು ಹೋಗಿದು ನಂತರ ಪಿರ್ಯಾದಿದಾರರು ಸದರಿ ಅಕ್ಕಿ ಚೀಲಗಳ ಹಣವನ್ನು ಹಿಂತಿರುಗಿಸುವಂತೆ ಒತ್ತಾಯ ಮಾಡಿದ್ದರಿಂದ ಆರೋಪಿತನು ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ಪಿರ್ಯಾದಿದಾರರ ಅಂಗಡಿಯ ಹೆಸರಿನಲ್ಲಿ ರೂ. 1,10,000=00 ಗಳಿಗೆ ಚೆಕ್ ನಂ 917401 ನೆದ್ದನ್ನು ಕೋರಿಯರ ಮೂಲಕ ಕಳುಹಿಸಿಕೊಟ್ಟಿದ್ದು ಪಿರ್ಯಾದಿದಾರರು ಸದರಿ ಚೆಕ್ಕನ್ನು ನವಿಕರಿಸಿಲು ಮರ್ಲಾನಹಳ್ಳಿಯ ಎಕ್ಷಿಸ್ ಬ್ಯಾಂಕ್ ಶಾಖೆಗೆ ಹೋದಾಗ ಆರೋಪಿತನು ಸದರಿ ಚೆಕ್ ನ್ನು ಮೋಸ ಮಾಡುವ ಉದ್ದೇಶದಿಂದ ಅವಧಿ ಮೀರಿದ ಚೆಕ್ ನ್ನು ಪಿರ್ಯಾದಿದಾರರಿಗೆ ಕಳುಹಿಸಿಕೊಟ್ಟರುವ ಬಗ್ಗೆ ತಿಳಿದು ಬಂದಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 292/2014 ಕಲಂ. ಕಲಂ 379 ಐಪಿಸಿ ಮತ್ತು KARNATAKA MINOR MINERAL CONSISTENT RULE 1994 U/s 42 ಮತ್ತು MMDR (MINES AND MINERALS REGULATION OF DEVELOPMENT ACT 1957 U/s 4(1),(1A)

ಇಂದು ದಿನಾಂಕ: 30-9-2014 ರಂದು ರಾತ್ರಿ ರಾತ್ರಿ 10-15 ಗಂಟೆಗೆ ನ್ಯಾಯಾಲಯ ಕರ್ತವ್ಯ ನಿರ್ವಹಿಸುವ ಪಿ.ಸಿ. 164 ರವರು ಗಂಗಾವತಿ ಗ್ರಾ. ಠಾಣೆ ಗುನ್ನೆ ನಂ. 229/2014 ನೇದ್ದರ ಹದ್ದಿಯ ಪ್ರಯುಕ್ತ ಸಂಬಂಧಪಟ್ಟ ಕಾಗದ ಪತ್ರಗಳನ್ನು ಹಾಜಪಡಿಸಿದ್ದು ಅದರ ಸಾರಂಶವೇನಂದರೆದಿನಾಂಕ: 22-08-2014 ರಂದು ಸಾಯಂಕಾಲ 4:00 ಗಂಟೆಗೆ ಫಿರ್ಯಾದಿದಾರರು ಗಂಗಾವತಿ ಗ್ರಾಮೀಣ ಠಾಣೆಗೆ ಹಾಜರಾಗಿ ತಮ್ಮ ಲಿಖಿತ ವರದಿ ಹಾಗೂ ಮೂಲ ಪಂಚನಾಮೆಯೊಂದಿಗೆ ಮರಳು ಹಸ್ತಾಂತರಿಸಿದ ರಶೀದಿಯನ್ನು ಹಾಜರಪಡಿಸಿದ್ದು ಅದರ ಸಾರಾಂಶ ವೇನಂದರೆ, ಮಾನ್ಯ ತಹಶೀಲ್ದಾರ ರು ಗಂಗಾವತಿ ರವರ ಕಾರ್ಯಾಲಯದಿಂದ ಬಂದ ನೋಟಿಸ್ ಸಂ/ಕಂ//ಗಣಿ/2014-15 ದಿನಾಂಕ: 19-08-2014 ರ ಪ್ರಕಾರ ಸ್ವೀಕೃತವಾಗಿದ್ದರ ಹಿನ್ಲೆಯಲ್ಲಿ ಇಂದು ದಿನಾಂಕ: 22-08-2014 ರಂದು ಮಧ್ಯಾಹ್ನ 12:30 ಗಂಟೆಗೆ ನಾನು  ಮತ್ತು ಡಿ.ವಿ. ವೆಂಕಟರಾಜು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕಪಯೋಗಿ ಇಲಾಖೆ ಗಂಗಾವತಿ, ಸಹಾಯಕ ಅಭಿಯಂತರರಾದ ಶ್ರೀ ನಾಗರಾಜ, ಗ್ರಾಮ ಲೆಕ್ಕಾಧಿಕಾರಿ ನಾಗರಾಜ ಮತ್ತು ಮುಷ್ಟೂರ ಗ್ರಾಮ ಸಹಾಯಕ ನಾಗರಾಜ ಮತ್ತು ಕುಂಟೋಜಿ ಗ್ರಾಮ ಸಹಾಯಕರಾದ ಪವಾಡೆಪ್ಪ ಇವರೊಂದಿಗೆ ಕೂಡಿ ಆಕ್ರಮವಾಗಿ ಸಂಗ್ರಹಿಸಿ ಸ್ಥಳವಾದ ಮುಷ್ಟೂರ ಡಗ್ಗಿ ಕ್ಯಾಂಪ್ ಹತ್ತಿರ ಬರುವ ಕುಂಟೋಜಿ ಜಮೀನ ಸರ್ವೆ ನಂ: 90 ಕ್ಷ್ರೇತ್ರ 248 ಎಕರೆ ಕಾಯ್ದಿಟ್ಟ ಆರಣ್ಯ ಜಮೀನಿನಲ್ಲಿ 90 ಕ್ಯೂಬಿಕ್ ಮೀಟರ್ ಮರಳು ಅಂದಾಜು ಮೊತ್ತ 45,000/- ರೂ ಇದ್ದು ಶ್ರೀ ಟೀಕಯ್ಯ ತಂದೆ ಬಸವರಾಜ ಸಾ: ಡಣಾಪೂರ ಇವರು ಮರಳನ್ನು ಸಂಗ್ರಹಿಸಿದ್ದು ವಿಚಾರಣೆ ಮಾಡಲಾಗಿ ಸಂಗ್ರಹಣೆ ಬಗ್ಗೆ ದಾಖಲಾತಿಗಳನ್ನು ಕೇಳಲಾಗಿ ಯಾವುದೇ ದಾಖಲಾತಿಗಳನ್ನು ಹಾಜರಪಡಿಸಿರುವದಿಲ್ಲಾ. ಕಾರಣ ಆಕ್ರಮವಾಗಿ ಸಂಗ್ರಹಿಸಿದ ಮರಳನ್ನು ವಶಕ್ಕೆ ಪಡೆದುಕೊಂಡು ಶ್ರೀ ನಾಗರಾಜ ಸಹಾಯಕ ಅಭಿಯಂತರರು ಲೋಕಪಯೋಗಿ ಇಲಾಖೆ ಗಂಗಾವತಿ ರವರಲ್ಲಿ ಹಸ್ತಾಂತರಿಸಿ ರಶೀದಿಯನ್ನು ಪಡೆದುಕೊಂಡಿದ್ದು ಹಾಗೂ ಸರಕಾರದ ಯಾವುದೇ ಪ್ರಾಧಿಕಾರದ ಅನುಮತಿಯನ್ನು ಪಡೆಯದೇ ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಸಂಗ್ರಹಿಸಿಟ್ಟ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗಂಗಾವತಿ ಗ್ರಾಮೀಣ ಠಾಣೆ ಗುನ್ನೆ ನಂ: 229/2014 ಕಲಂ: 379 ಐಪಿಸಿ ಮತ್ತು KARNATAKA MINOR MINERAL CONSISTENT RULE 1994 (U/s 42) ಮತ್ತು MMDR (MINES AND MINERALS REGULATION OF DEVELOPMENT) ACT 1957 ( U/s 4(1),(1A) ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಹದ್ದಿ ಪ್ರಯುಕ್ತ ಕಾರಟಗಿ ಪೊಲೀಸ ಠಾಣೆಗೆ ಕಳಿಸಿದ್ದರಿಂದ ಕಾರಟಗಿ ಠಾಣೆ ಗುನ್ನೆ ನಂ. 292/2014 ಪ್ರಕಾರ ಗುನ್ನೆ ದಾಖಲು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008