ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಯಲಬುರ್ಗಾ ಪೊಲೀಸ್ ಠಾಣೆ
ಗುನ್ನೆ ನಂ. 124/2014 ಕಲಂ. 341, 324, 504 ಐ.ಪಿ.ಸಿ:.
ಈಗ್ಗೆ
ಒಂದು ತಿಂಗಳದ ಹಿಂದೆ ಪಿರ್ಯಾದಿದಾರನ ಅಳಿಯನಾದ ಆರೋಪಿತನು ಆತನ ಒಂದು ಕುರಿಯನ್ನು ಮಾರಿಕೊಂಡಿದ್ದು
ಇರುತ್ತದೆ. ದಿನಾಂಕ: 09-10-2014 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಪಿರ್ಯಾದಿದಾರನು
ತನ್ನ ಮನೆಯ ಮುಂದೆ ಇದ್ದಾಗ ಆರೋಪಿತನು
ಅಲ್ಲಿಗೆ ಬಂದಿದ್ದು, ಆಗ ಪಿರ್ಯಾದಿದಾರನು ಆರೋಪಿತನಿಗೆ ಕುರಿ ಮಾರಿದ ಬಗ್ಗೆ ವಿಚಾರಿಸಿದ್ದಕ್ಕೆ ಆರೋಪಿತನು
ಪಿರ್ಯಾದಿಯೊಂದಿಗೆ ಜಗಳ ತೆಗೆದು ಬಾಯಿಗೆ ಬಂದಂತೆ ಬೈದು ನಿನ್ನದು ಬಹಳ ಆಗಿದೆ ಅಂತಾ ಅಂದವನೆ ಮನೆಯ
ಮುಂದೆ ಬಿದ್ದಿದ್ದ ಕಟ್ಟಿಗೆ ಬಡಿಗೆ ತೆಗೆದುಕೊಂಡು ಪಿರ್ಯಾದಿದಾರನನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ
ಆತನ ತಲೆಯ ಹಿಂದೆ, ಮುಂದುಗಡೆ ಬಡಿದು ರಕ್ತಗಾಯ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇರುವ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಪ್ರಕರಣ
ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment