Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, October 19, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 128/2014 ಕಲಂ. 355, 353, 332, 504 ಐ.ಪಿ.ಸಿ:.
ದಿನಾಂಕ : 18-10-2014 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ಮಾನ್ಯ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾದ ಶ್ರೀ ಪರಮೇಶ್ವರ ನಾಯಕ ರವರು ಹಾಗೂ ಯಲಬುರ್ಗಾ ಕ್ಷೇತ್ರದ ಶಾಸಕರಾದ ಶ್ರೀ ಬಸವರಾಜ ರಾಯರೆಡ್ಡಿ ರವರು ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮುಧೋಳ ಗ್ರಾಮಕ್ಕೆ ಹೊಸದಾಗಿ ಮಂಜೂರಾಗಿರುವ .ಐ.ಟಿ.ಐ. ಕಾಲೇಜಿನ ಪ್ರಾರಂಭೋತ್ಸವದ ಕಾರ್ಯಕ್ರಮವನ್ನು ಮುಧೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಆವರಣದಲ್ಲಿ ಮಾಡಿ ನಂತರ ಸದರಿಯವರೆಲ್ಲರೂ ವೇದಿಕೆಯ ಮೇಲೆ ಕುಳಿತುಕೊಂಡಿದ್ದಾಗ ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಮನವಿ ಪತ್ರವನ್ನು ಸಲ್ಲಿಸುತ್ತಾ ಬಂದಿದ್ದು, ಆ ಸಮಯದಲ್ಲಿ ಆರೋಪಿತನಾದ ಬಸವರಾಜನು ವೇದಿಕೆಯ ಮೇಲೆ ಹತ್ತಿ ಶ್ರೀ ಬಸವರಾಜ ರಾಯರೆಡ್ಡಿ ಶಾಸಕರು ಯಲಬುರ್ಗಾರವರಿಗೆ ನಾನು ನಿನಗೆ ನನ್ನ ಸಮಸ್ಯೆ ಬಗ್ಗೆ ಮೂರು ನಾಲ್ಕು ಸಲ ಕೇಳಿಕೊಂಡರು ಕೂಡ ನೀನು ನನ್ನ ಸಮಸ್ಯೆಗೆ ಸ್ಪಂದಿಸಿರುವದಿಲ್ಲ. ಈಗ ಜನರ ಮುಂದೆ ನಿನ್ನ ಮರ್ಯಾದೆಯನ್ನು ತೆಗೆಯುತ್ತೇನೆ ಅಂತಾ ಅಂದವನೆ ತನ್ನ ಬಲಗಾಲ ಪಾದರಕ್ಷೆಯನ್ನು ಅವರಿಗೆ ಎಸೆದನು. ಆಗ ಅಲ್ಲಿಯೇ ಕರ್ತವ್ಯದ ಮೇಲಿದ್ದ ಎಸ್.ಬಿ. ಕಾನ್ಸಟೇಬಲ್ ವೆಂಕಟೇಶ ಪಿಸಿ-311 ರವರು ಅವನನ್ನು ಹಿಡಿದು ಎಳೆದುಕೊಂಡು ಬರುತ್ತಿರುವಾಗ ಸದರಿ ಆರೋಪಿತನು ಅವಾಚ್ಯ ಶಬ್ದಗಳಿಂದ ಬೈದು ಕೈಮುಷ್ಟಿ ಮಾಡಿ ವೆಂಕಟೇಶನ ಹೊಟ್ಟೆಗೆ ಜೋರಾಗಿ ಗುದ್ದಿ ಅವನ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿದ್ದು ಮತ್ತು ಶಾಸಕರಾದ ಬಸವರಾಜ ರಾಯರೆಡ್ಡಿ ಇವರಿಗೆ ಪಾದರಕ್ಷೆಯಿಂದ ಒಗೆದು ಅವಮಾನಗೊಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೇನು.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 178/2014 ಕಲಂ. 279, 337, 338  ಐ.ಪಿ.ಸಿ:.
ದಿನಾಂಕ 18-10-2014 ರಂದು ಬೆಳಿಗ್ಗೆ 8-15 ಗಂಟೆಗೆ ಕುಷ್ಟಗಿ ಸರಕಾರಿ ಆಸ್ಪತ್ರೆಯಿಂದ ಫೊನ್ ಮೂಲಕ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಪ್ರತ್ಯಕ್ಷ ಸಾಕ್ಷಿದಾರರಾ ಶ್ರೀ ಸುಕುಮನಿ ತಂದೆ ಭೀಮಪ್ಪ ಹಾದಿಮನಿ ವಯ: 26 ಜಾ: ಮಾದಿಗ ಉ: ಒಕ್ಕಲುತನ ಸಾ: ನಿಡಶೇಶಿ  ರವರನ್ನು ವಿಚಾರಿಸಿ ಇವರ ಹೇಳಿಕೆ ಫಿರ್ಯಾದಿ ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ  ಇಂದು  ದಿನಾಂಕ 18-10-2014 ರಂದು ಬೆಳಿಗ್ಗೆ 7-30 ಗಂಟೆ ಸುಮಾರು ತಾನು ಮತ್ತು ತಮ್ಮೂರ ವೆಂಕಟೇಶ ತಂದೆ ಪಂಪಣ್ಣ ರವರ ಕೂಡಿ ನಿಡಶೇಸಿ ಬಸ್ ನಿಲ್ದಾಣದಿಂದ ಪಶ್ಚಿಮದ ಕಡೆಗೆ ತಂಬಿಗೆ ತೆಗೆದಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ನಮೂದಿತ ಆರೋಪಿತನು ತನ್ನ ಹಿರೊಹೊಂಡಾ ಸೈಕಲ್ ಮೋಟಾರ್ ನಂ ಕೆಎ 37/ಕೆ --2404  ನೇದ್ದನ್ನು ಅತಿವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರಸ್ತೆಯಲ್ಲಿ ಅಡ್ಡ ಬಂದ ಒಂದು ಹಂದಿಗೆ ಟಕ್ಕರ್ ಮಾಡಿ  ಬಿದ್ದಿರುತ್ತಾನೆ ಇದರಿಂದ ಆರೋಪಿತನಿಗೆ ಗಾಯಪೆಟ್ಟುಗಳನ್ನುಂಟು ಮಾಡಿಕೊಂಡಿದ್ದು ಅಂತಾ ಮುಂತಾಗಿದ್ದ ಹೇಳಿಕೆ ಪಿರ್ಯಾದಿ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 179/2014 ಕಲಂ. 279, 337, 338  ಐ.ಪಿ.ಸಿ:.
ಇಂದು ದಿನಾಂಕ: 18-10-2014 ರಂದು ರಾತ್ರಿ 07-45 ಗಂಟೆಗೆ ಸರ್ಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಬಂದ ಮೇರೆಗೆ ಗಾಯಾಳು ಶಂಕ್ರಪ್ಪ ತಂದೆ ಬಸಟೆಪ್ಪ ಸಜ್ಜನ ವಯ: 59, ಜಾ: ಲಂಗಾಯತ ಗಾಣಿಗ ಉ: ಕಿರಾಣಿ ಅಂಗಡಿ ಸಾ: ಹಿರೇ ವಂಕಲಕುಂಟಾ ಇವರ ಹೇಳಿಕೆ ಪಡೆದುಕೊಂಡ ಸಾರಾಂಶವಂದರೆ PÀĵÀÖV ಬಸನಿಲ್ದಾಣದಿಂದ ಬಸವೇಶ್ವರ ಸರ್ಕಲ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ 7-15 ಕ್ಕೆ ಮಾರುತಿ ಸರ್ಕಲ ಹತ್ತಿರ ಒಂದು ಸೋನಾಲಿಕ್ ಇಂಟರನ್ಯಾಶನಲ್ ಟ್ರಾಕ್ಟರ್ ನಂಬರ ಇಲ್ಲದರ ಚಾಲಕ ಬಸವೇಶ್ವರ ಸರ್ಕಲದಿಂದ ಅತೀವೇಗ ಅಲಕ್ಷತನದಿಂದ ನಡೆಸಿಕೊಂಡು ಬಂದು ಬಲಕ್ಕೆ ತಿರುಗಿಸಿ ನಡೆದುಕೊಂಡು ಹೊರಟ ಫಿರ್ಯಾದಿಯ ಎಡಗಾಲಿಗೆ ಟಕ್ಕರ ಪಡಿಸಿದ್ದು ಎಡಗಾಲಿಗೆ ಮೀನ ಗಂಡಕ್ಕೆ ತೀವ್ರ ಸ್ವರೂಪದ ಗಾಯವಾಗಿ ಬಾವು  ಬಂದಿದ್ದು ಅಂತಾ ಫಿರ್ಯಾದಿಯ ಸಾರಾಂಶದಿಂದ ವಾಪಸ್ ಠಾಣೆಗೆ ಬಂದು ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.     
4) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 185/2014 ಕಲಂ. 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ. 18-10-2014 ರಂದು ಬೆಳಗಿನ ಜಾವ 4-00 ರಿಂದ 6-00 ಗಂಟೆಯ ಅವಧಿಯೊಳಗೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಕಿರ್ಲೊಸ್ಕರ ಪಕ್ಕದಲ್ಲಿ ಕೊಪ್ಪಳ ಹೊಸಪೇಟೆ ಎನ್.ಹೆಚ್. 63 ರಸ್ತೆಯ ಪಕ್ಕದಲ್ಲಿ ಕಿರ್ಲೊಸ್ಕತ ಪ್ಯಾಕ್ಟಿಗೆ ಬಂದ ರಾತ್ರಿ ನಿಲ್ಲಿಸಲು ಮಾಡಿದ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಯಾವುದೋ ಒಂದು ಲಾರಿ ಕೆಳಗೆ ಮಲಗಿಕೊಂಡಿದ್ದು, ಸದರ ಲಾರಿ ಚಾಲಕನು ಬೆಳಗಿನ ಜಾವ ಅಪರಿಚಿತ ವ್ಯಕ್ತಿ ಮಲಗಿಕೊಂಡಿರುವದು ನೋಡದೆ ನಿರ್ಲಕ್ಷತನದಿಂದ ಲಾರಿಯನ್ನು ಚಲಾಯಿಸಿಕೊಂಡು ಅಪರಿಚಿತ ವ್ಯಕ್ತಿಯ ತಲೆಯ ಮೇಲೆ ಹಾಯಿಸಿಕೊಂಡು ಹೋಗಿದ್ದರಿಂದ ಅಪರಿಚಿತ ವ್ಯಕ್ತಿಯ ತಲೆ ಸಂಪೂರ್ಣ ಚಚ್ಚಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
5) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 127/2014 ಕಲಂ. 279, 337, 338 ಐ.ಪಿ.ಸಿ

ದಿನಾಂಕ : 17-10-2014 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ಪಿರ್ಯಾದಿ ಮತ್ತು ಸಾಕ್ಷಿದಾರರಾದ ನಾಗಪ್ಪ ಸವದತ್ತಿ, ಸಿದ್ದಪ್ಪ ನರಹಟ್ಟಿ, ಹಾಗೂ ಗಾಯಳು ನಿಂಗಪ್ಪ ಹರಕಿ ರವರೊಂದಿಗೆ ಮುದೋಳ ಸೀಮಾದಲ್ಲಿ ಕುರಿ ಹಟ್ಟಿ ತರಬಿಸಿದ್ದ ಅಜ್ಜಪ್ಪ ನರಹಟ್ಟಿ ಈವರ ಕುರಿ ಹಟ್ಟಿಗೆ ಹೋಗಿ ಕುರಿ ಕೂದಲುಗಳನ್ನು ಸಾಯಕಾಲ 5-00 ಗಂಟೆಯ ವರೆಗೆ ಕತ್ತರಿಸಿ ನಂತರ ರಾತ್ರಿ ಊಟ ಮಾಡಿದ ನಂತರ ಫಿರ್ಯಾದಿ ಹಾಗೂ ಸಿದ್ದಪ್ಪ ನರಹಟ್ಟಿ, ಇಬ್ಬರೂ ತಮ್ಮ ಮೋಟಾರ್ ಸೈಕಲ್ ಮೇಲೆ ಅದರಂತೆ ನಾಗಪ್ಪ ಸವದತ್ತಿ, ನಿಂಗಪ್ಪ ಹರಕಿ ಇವರೆಲ್ಲರೂ ತಮ್ಮ ತಮ್ಮ ಹಟ್ಟಿಗಳಿಗೆ ಮೋಟಾರ್ ಸೈಕಲ್ ಮೇಲೆ ಮರಳಿ ಹೋಗುತ್ತಿದ್ದಾಗ ಪಿರ್ಯಾದಿ ಮತ್ತು ಸಿದ್ದಪ್ಪ ನರಹಟ್ಟಿ ಹಾಗೂ ನಾಗಪ್ಪ ಸವದತ್ತಿ, ನಿಂಗಪ್ಪ ಹರಕಿ ಇವರು ಯಲಬುರ್ಗಾ-ಮುದೊಳ ರಸ್ತೆಯ ಮೇಲೆ ಯಲಬುರ್ಗಾದಿಂದ ಮುದೋಳ ಕಡೆಗೆ ಸುಮಾರು 02 ಕೀಮಿ ಅಂತರದಲ್ಲಿ ರಸ್ತಯೆ ಮಗ್ಗಲು ಮಾತನಾಡುತ್ತಾ ನಿಂತುಕೊಂಡಿದ್ದು ಇರುತ್ತದೆ. ದಿನಾಂಕ 18-10-2014 ರಂದು ಬೆಳಗಿನ ಜಾವ 00-10 ಸುಮಾರಿಗೆ ಯಲಬುರ್ಗಾ ಕಡೆಯಿಂದ ಮುದೋಳ ಗ್ರಾಮದ ಕಡೆಗೆ ಆರೋಪಿತನು ತನ್ನ ಮೋಟಾರ್ ಸೈಕಲ್ ನಂ ಕೆ.ಎ-18/ಯು-9360 ನೇದ್ದನ್ನು ಅತಿ ಜೋರಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಮಗ್ಗಲು ಮೋಟಾರ್ ಸೈಕಲ್ ಮೇಲೆ ಕುಳಿತಿದ್ದ ನಿಂಗಪ್ಪ ಹರಕಿ ಇವನಿಗೆ ಜೋರಾಗಿ ಟಕ್ಕರ್ ಕೊಟ್ಟು ಅಪಘಾತ ಪಡಿಸಿದ್ದರಿಂದ ನಿಂಗಪ್ಪ ಹರಕಿ ಈತನ ಎಡಹಣೆಗೆ, ಎಡಗಣ್ಣಿನ ಕೆಳಗೆ, ರಕ್ತಗಾಯ ಹಾಗೂ ತೆಲೆಗೆ ಒಳಪೆಟ್ಟಾಗಿದ್ದು ಇರುತ್ತದೆ. ಹಾಗೂ ಆರೋಪಿತನ ಬಲಬುಜಕ್ಕೆ ಭಾರಿ ಒಳಪೆಟ್ಟು ಬಿದ್ದಿದ್ದು, ಬಲಹಣೆಗೆ, ಬಲಗಣ್ಣಿನ ಕೆಳಗೆ ರಕ್ತಗಾಯ ಹಾಗೂ ಬಲಗಾಲ ಹೆಬ್ಬರಳಿಗೂ ಕೂಡಾ ಗಾಯವಾಗಿದ್ದು ಹಾಗೂ ಆರೋಪಿತನ ಮೋಟಾರ್ ಸೈಕಲ್ ನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಪ್ರಕಾಶ ಹಿರೇಮಠ ಈತನ ಎಡಹಣೆಗೆ ಒಳಪೆಟ್ಟು, ತೆಲೆಗೆ ರಕ್ತಗಾಯ, ಬಲ ಎದೆಗೆ ಒಳಪೆಟ್ಟಾಗಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008