ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕಾರಟಗಿ ಪೊಲೀಸ್ ಠಾಣೆ
ಗುನ್ನೆ ನಂ. 301/2014 ಕಲಂ. 279, 337, 338, 283 ಐ.ಪಿ.ಸಿ:.
ದಿನಾಂಕ- 20-10-2014 ರಂದು ಸಾಯಂಕಾಲ 7-45
ಗಂಟೆಯ ಸುಮಾರಿಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದ ಕೂಡಲೇ ಕಾರಟಗಿ
ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ವಿಚಾರಿಸಿ ಸದರಿ
ಗಾಯಾಳುವಿನ ಪೈಕಿ ಶ್ರೀಮತಿ ಹುಲಿಗೆಮ್ಮ ಗಂಡ
ಪಂಪಾಪತಿ ವಡ್ರ ಸಾ. ನಾಗನಕಲ್ ಇವರು ಒಂದು ಲಿಖಿತ ಪಿರ್ಯಾದಿಯನ್ನು ಹಾಜರುಪಡಿಸಿದ್ದು
ಸದರಿ ಪಿರ್ಯಾದಿಯ ಸಾರಾಂಶವೆನಂದರೆ ಇಂದು ದಿನಾಂಕ:-20-10-2014 ರಂದು ಬೆಳಿಗ್ಗೆ 1)
ಪಿರ್ಯಾದಿದಾರರು ಮತ್ತು ತಮ್ಮ ಗ್ರಾಮದ 2) ಗಂಗಮ್ಮ ಗದ್ದಿ, 3) ಸಂದೀಪ್ ವಡ್ರ 4) ರೇಣುಕಮ್ಮ
ವಡ್ರ 5) ಶ್ಯಾಮಮ್ಮ 6) ಚೆನ್ನಮ್ಮ ನಾಯಕ 7) ರಾಜಾಭೀ ಆರಾಳ 8) ರೇಖಾ ಮದಿನಾಳ,9) ಗೀತಾ, 10)
ರಾಜಮ್ಮ ನವಲಿ 11) ಗಂಗಮ್ಮ 12) ರತ್ನಮ್ಮ 13) ನೀರ್ಮಲಾ 14) ಹುಸೇನ ಬೀ 15) ಮುನ್ನಾ ಬೀ 16)
ವಲಿಯಮ್ಮ 17) ಚಾಂದ ಬೀ 18) ರೇಷ್ಮಾ 19)
ಹಂಪಮ್ಮ ಸಾ. ಎಲ್ಲರೂ ನಾಗನಕಲ್ ಎಲ್ಲರೂ ಕೂಡಿಕೊಂಡು ಸಿಂದನೂರು ತಾಲೂಕಿನ ಪಲದಿನ್ನಿ
ಗ್ರಾಮಕ್ಕೆ ಹೊಲದ ಕಸ ತೆಗಯುವು ಕೂಲಿ ಕೆಲಸಕ್ಕೆಂದು ನಾಗನಕಲ್ ಗ್ರಾಮದ ಮಹೇಂದ್ರ ಮ್ಯಾಗ್ಝಿಮೋ
ವಾಹನ ನಂ. ಕೆ.ಎ-37 ಎ-3660 ನೆದ್ದರಲ್ಲಿ ಹೋಗಿ ವಾಪಾಸ್ ನಾಗನಕಲ್ ಕಡೆಗೆ ಹೋಗುತ್ತಿರುವುವಾಗ್ಗೆ
ಸದರಿ ವಾಹನದ ಚಾಲಕ ಬಸವರಾಜ ಸಾ. ಸೋಮನಾಳ ಇತನು ತನ್ನ ವಾಹನವನ್ನು ಅತೀ ವೇಗ ಅಲಕ್ಷತನದಿಂದ
ಚಲಾಯಿಸಿಕೊಂಡು ಹೋಗಿ ಕಾರಟಗಿ-ನವಲಿ ರಸ್ತೆಯ ನಾಗನಕಲ್ ಹತ್ತಿರದ ಐ.ಬಿ ಹತ್ತಿರ, ಯಲ್ಲಪ್ಪ ಹರಿಜನ
ಸಾ. ಕಾರಟಗಿ ರವರು ತಮಗೆ ಸಂಬಂದಿಸಿದ ಸಜ್ಜಿಯ ತೆನೆಗಳನ್ನು ರಸ್ತೆಯಲ್ಲಿ ಸಂಚಾರಕ್ಕೆ
ಅಡತಡೆಯಾಗುವಂತೆ ಹಾಕಿರುವುದನ್ನು ಗಮನಿಸದೇ ಓಡಿಸಿಕೊಂಡು ಹೋಗಿ ಒಮ್ಮಿಂದೊಮ್ಮಲೇ ರಸ್ತೆಯ ಎಡಕ್ಕೆ
ತಿರುವಿಕೊಂಡಿದ್ದರಿಂದ ಸದರಿ ವಾಹನ ಪಲ್ಟಿ ಹೊಡೆದು ಅಪಘಾತವಾಗಿದ್ದರಿಂದ ಸದರಿವಾಹನದಲ್ಲಿ ಇದ್ದ
ಗಂಗಮ್ಮ ಗದ್ದಿ, ಗಂಗಮ್ಮ ಮಾದಿನಾಳ, ರೇಖಾ, ರಾಜಾಬಿ ಹಾರಾಳ ವರಿಗೆ ತೀವ್ರಗಾಯಗಳಾಗಿ ವಾಹದನಲ್ಲಿ
ಇದ್ದ ತರರಿಗೆ ಕೈಕಾಲು, ಮತ್ತು ಇತರೆ ಕಡೆಗೆ ಒಳಪೆಟ್ಟಾಗಿದ್ದು ಇರುತ್ತದೆ ಸದರಿ ಅಫಘಾತಕ್ಕೆ
ಮಹೇಂದ್ರ ಮ್ಯಾಗ್ಝಿಮೋ ವಾಹನ ನಂ. ಕೆ.ಎ-37 ಎ-3660 ನೆದ್ದರ ಚಾಲಕ ಬಸವರಾಜ ಮತ್ತು ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗುವ ರೀತಿಯಲ್ಲಿ
ಸಜ್ಜಿ ತೆನೆಗಳನ್ನು ಹಾಕಿದ ಯಲ್ಲಪ್ಪ ಹರಿಜನ ರವರೇ ಕಾರಣರಿರುತ್ತಾರೆ ಅಂತಾ ಮುಂತಾಗಿ ನೀಡಿದ
ಪಿರ್ಯಾದಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ.
230/2014 ಕಲಂ. 216 ಜೀತ ಪದ್ದತಿ ನಿಮೂðಲನಾ ಕಾಯ್ದೆ 1976
ದಿ: 20-10-2014 ರಂದು ರಾತ್ರಿ 09-15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಪುಟ್ಟರಾಮಯ್ಯ ತಹಶೀಲ್ದಾರರು ಕೊಪ್ಪಳ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ, ಈಗ್ಗೆ ಸಮಾರು 02 ವರ್ಷಗಳಿಂದ ಕೊಪ್ಪಳದ ಭಾಗ್ಯನಗರ ರಸ್ತೆಯ ಪಕ್ಕದಲ್ಲಿ ಸಾಯಿ ಮಂದಿರ ಹತ್ತಿರ ಜೋಪಡಿ ಹಾಕಿಕೊಂಡು ವಾಸವಾಗಿರುವ ಸುಂಕಪ್ಪ ತಂದೆ ಹನುಮಂತಪ್ಪ ಮೋಟಾರ ಸಾ// ಗಾಂದಿ ನಗರ, ಕೊಪ್ಪಳ ಇವರು ಯಲ್ಲಪ್ಪ ಕಟ್ಟಿಮನಿ ಮತ್ತು ಹನುಮಂತಪ್ಪ ಸೀತಾಮನಿಸಾ// ಗಾಂದಿನಗರ ಕೊಪ್ಪಳ ಇವರಲ್ಲಿ ತಲಾ 20,000 ರೂಗಳನ್ನು ಸಾಲವಾಗಿ ಪಡೆದಿದ್ದು ಈ ಸಾಲವನ್ನು ತೀರಿಸಲು ಸದರಿ ಯಲ್ಲಪ್ಪ ಕಟ್ಟಿಮನಿ ಮತ್ತು ಹನುಮಂತಪ್ಪ ಸೀತಾಮನಿ ಸಾ// ಗಾಂದಿನಗರ ಕೊಪ್ಪಳ ಇವರು ಜೀತಕ್ಕೆ ಇಟ್ಟುಕೊಂಡು ಹಂದಿ ಕಾಯುವಂತೆ ಮಾಡಿರುತ್ತಾರೆ ಎಂದು ಸುಂಕಪ್ಪ ತಂದೆ ಹನುಮಂತಪ್ಪ ಮೋಟಾರ ಹೇಳಿಕೆ ನೀಡಿರುತ್ತಾರೆ. ಆದ್ದರಿಂದ ಸುಂಕಪ್ಪ ತಂದೆ ಹನುಮಂತಪ್ಪ ಮೋಟಾರ ನನ್ನು ಜೀತಕ್ಕೆ ಇಟ್ಟಕೊಂಡ ವ್ಯಕ್ತಿಗಳಾದ ಯಲ್ಲಪ್ಪ ಕಟ್ಟಿಮನಿ ಮತ್ತು ಹನುಮಂತಪ್ಪ ಸೀತಾಮನಿ ಸಾ// ಗಾಂದಿನಗರ ಕೊಪ್ಪಳ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 230/2014 ಕಲಂ: 16 ಜೀತ ಪದ್ದತಿ ನಿರ್ಮೂಲನೆ ಅಧಿ ನಿಯಮ 1976 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment