Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, October 22, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 231/2014 ಕಲಂ. 87 ಕೆ.ಪಿ. ಕಾಯ್ದೆ:.
ದಿ: 21-10-2014 ರಂದು ರಾತ್ರಿ 11-00 ಗಂಟೆಗೆ ನೇತ್ರಾವತಿ ಪಿ.ಎಸ್.ಐ [ಅಪರಾಧ ವಿಭಾಗ] ನಗರ ಠಾಣೆ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರು ಹಾಗೂ ಇಸ್ಪೀಟ ಜೂಜಾಟದ ದಾಳಿ ಪಂಚನಾಮೆ ಮತ್ತು ಮುದ್ದೇಮಾಲು ಹಾಗೂ 29 ಜನ ಆರೋಪಿತರೊಂದಿಗೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು ದೂರಿನ ಸಾರಾಂಶವೇನೆಂದರೆ, ಇಂದು ರಾತ್ರಿ 9-00 ಗಂಟೆಗೆ ದೇವರಾಜ ಅರಸ ಕಾಲೋನಿಯಲ್ಲಿ ಹನುಮಂತ ದೇವಾಲಯದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದಾ ಅಂದರ ಬಾಹರ ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾಗ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಪಂಚರ ಸಮಕ್ಷಮ 29  ಜನ ಆರೋಪಿತರಿಂದ ಜೂಜಾಟದ ನಗದು ಹಣ 6,165=00, ಮತ್ತು 52 ಇಸ್ಪೀಟ ಎಲೆಗಳು ಹಾಗೂ ಒಂದು ಹಾಳೆಯ ಚೀಲವನ್ನು ಜಪ್ತಿ ಮಾಡಿಕೊಂಡು ಬಂದು ಹಾಜರಪಡಿಸಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ:231/2014. ಕಲಂ: 87 ಕೆಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 302/2014 ಕಲಂ. 143, 147, 448, 341, 323, 354, 504 ಸಹಿತ 149 ಐ.ಪಿ.ಸಿ:.
ದಿನಾಂಕ : 21-10-2014 ರಂದು  ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀಮತಿ  ಮಮತಾಜಬಿ ಗಂಡ  ಹುಸೇನಸಾಬ ವಕ್ರಾಣಿ ಸಾ: ನಾಗನಕಲ್ಲ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆನಾನು ಕೂಲಿ ಕೆಲಸ ಮಾಡಿಕೊಂಡು  ವಾಸವಾಗಿರುತ್ತೇವೆ. ನನ್ನ ಮಗನಾದ ಮಹ್ಮದರಫೀ ಇತನು  ನಾಗನಕಲ್ಲ ಗ್ರಾಮದ  ಹುಸೇನಸಾಬ ಇವರ ಮಗಳಾದ  ಚಾಂದಬಿ ಇಕೆಯನ್ನು ಪ್ರೀತಿಸಿ ಮದುವೆಯಾಗಿರುತ್ತಾನೆ.  ಮದುವೆಯಾದಾಗಿನಿಂದ  ಹುಸೇನಸಾಬ ತಂದಿ ಚಾಟಿ ಹುಸೇನಸಾಬ  ಹಾಗೂ ಅವರ ಮನೆಯವರಾದ  ಹುಸೇನಬಿ ಗಂಡ ಹುಸೇನಸಾಬ, 3) ಮಾಬುಷಾ ತಂದಿ ಹುಸೇನಸಾಬ, 4) ರಾಜಮ್ಮ ಗಂಡ ಫೀರಸಾಬ ಗುಂಜಳ್ಳಿ 5) ಫೀರಸಾಬ ಗುಂಜಳ್ಳಿ ಇವರು ನಮ್ಮ ಮೇಲೆ ಆಗಾಗ್ಗೆ ದ್ವೇಷ ಸಾದಿಸುತ್ತಾ  ಬಂದಿದ್ದರು ನಂತರ ಅವರು  ಏನಾದರು ಮಾಡಿ ನಮ್ಮೊಂದಿಗೆ ಜಗಳಾ ಮಾಡುವ ಉದ್ದೇಶದಿಂದ ಇದ್ದರು.  ನಿನ್ನೆ ದಿನಾಂಕ : 20-10-2014 ರಂದು  ನಾನು ಮತ್ತು ನನ್ನ ಮಗಳು ಶಬಿನಾಬೇಗಂ ಮತ್ತು ಸೊಸೆ ಚಾಂದಬೀ ಕೂಡಿಕೊಂಡು ಕೂಲಿ ಕೆಲಸಕ್ಕೆ  ಹೊಗಿ ಬರುತ್ತಿರುವಾಗ್ಗೆ ವಾಹನ ಅಪಘಾತದಲ್ಲಿ  ನಮಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ.  ಇಂದು ದಿನಾಂಕ : 21-10-2014 ರಂದು ಬೆಳಗ್ಗೆ 10-30 ಗಂಟೆಯ ಸುಮಾರಿಗೆ  ಹುಸೇನಸಾಬ  ಹಾಗೂ ಮೇಲ್ಕಂಡ ಆರೋಪಿತರು ಸಮಾನ ಉದ್ದೇಶದಿಂದ ನಮ್ಮ ಮನೆಯೊಳಗೆ ಅತೀಕ್ರಮ ಪ್ರವೇಶ ಮಾಡಿ ನನಗೆ ನಿಲ್ಲಿಸಿ ಏನಲೇ ಸೂಳೇ ನೀನು ನಮ್ಮ ಮಗಳನ್ನು ಏಕೆ ಕೆಲಸಕ್ಕೆ ಕರೆದುಕೊಂಡು ಹೊಗುತ್ತಿ ಅಂತಾ ಅಂದು ನನಗೆ ಮತ್ತು ನನ್ನ ಮಗಳು ಶಬಿನಾಬೇಗಂ ಇಬ್ಬರಿಗೂ  ಕೈಯಿಂದ ಹೊಡೆ ಬಡಿ ಮಾಡ ಹತ್ತಿದರು. ನನ್ನ ಮಗಳ ಶಬೀನಾಬೇಗಂ ಇಕೆಯು ಬಿಡಿಸಲು ಬಂದಾಗ ಆಕೆಗೂ ಸಹ ಹುಸೇನಸಾಬ ಇತನು ಎಳೆದಾಡಿ ಕೈ ಮೈ ಮುಟ್ಟಿ ಎಳೆದಾಡಿ ಮಹಿಳೆಯ ಮಾನಕ್ಕೆ ಕುಂದುಂಟಾಗುವ ರೀತಿಯಲ್ಲಿ  ವರ್ತಿಸುತ್ತಿದ್ದಾಗ ನಾನು ಬಿಡಿಸಿಕೊಳ್ಳು ಹೊದಾಗ ನನಗೆ ಎಡಕಪಾಳಕ್ಕೆ  ಹಾಗೂ ಇತರ ಕಡೆಗೆ ಕೈಯಿಂದ ಹೊಡೆ ಬಡಿ ಮಾಡಿ ಇನ್ನೊಮ್ಮೆ ನಮ್ಮ ಮಗಳನ್ನು ಕೂಲಿ ಕೆಲಸಕ್ಕೆ ಹೊದರೆ ನೋಡು ನಿಮ್ಮ ಜೀವ ಸಹಿತಿ ಬಿಡುವುದಿಲ್ಲ ಅಂತಾ ಬೈದಾಡಿ ಹೊಗಿದ್ದು ಇರುತ್ತದೆ ಅಂತಾ ಮುಂತಾಗಿ ಲಿಖಿತ ಫಿರ್ಯದಿ ಕೊಟ್ಟಿದ್ದು ಇರುತ್ತದೆ.
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 303/2014 ಕಲಂ. 143, 147, 341, 324, 354, 504, 506 ಸಹಿತ 149 ಐ.ಪಿ.ಸಿ:.

ದಿನಾಂಕ-21-10-2014 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿ ಹಾಜರುಪಡಿಸಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ಪಿರ್ಯಾದಿದಾರರ ಮಗಳಾದ ಚಾಂದಬೀ ಈಕೆಯು ಈಗ್ಗೆ 3-4 ತಿಂಗಳ ಹಿಂದೆ ನಾಗನಕಲ್ ಗ್ರಾಮದ ಹಿರೇಹುಸೇನ್ ಸಾಬ ವಕ್ರಾಣಿ ಇವರ ಮಗನಾದ ಮೊಹಮ್ಮದ ರಫಿ ಇತನೊಂದಿಗೆ ಪ್ರೀತಿಸಿ ಮದುವೆ ಮಾಡಿಕೊಂಡಿದ್ದರಿಂದ ಪಿರ್ಯಾದಿದಾರರಿಗೆ ಮನಸಿಗೆ ದುಖಃವಾಗಿ ಇಷ್ಟುದಿನ ಮಾತನಾಡಿಸುವುದನ್ನು ಬಿಟ್ಟಿದ್ದು ನಿನ್ನೆ ದಿನಾಂಕ-20-10-2014 ರಂದು ಪಿರ್ಯಾದಿದಾರರ  ಮಗಳು ಚಾಂದಬೀ ಇಕೆಯು ವಾಹನ ಅಪಘಾತದಲ್ಲಿ ಗಾಯಗೊಂಡಿದ್ದರಿಂದ ಇಂದು ದಿನಾಂಕ-21-10-2014 ರಂದು ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರು ಅಕ್ಕ ಶ್ರೀಮತಿ ರಾಜಮ್ಮ ಇಬ್ಬರು ಕೂಡಿ ಹಿರೇ ಹುಸೇನ್ ಸಾಬ ವಕ್ರಾಣಿ ಇವರ ಮನೆಗೆ ಹೋಗಿ ತಮ್ಮ ಮಗಳನ್ನು ಮಾತನಾಡಿಸಿಕೊಂಡು ವಾಪಾಸ್ ತಮ್ಮ ಮನೆಗೆ ಬಂದಿದ್ದು ಮದ್ಯಾಹ್ಣಾ 4-30 ಗಂಟೆಯ ಸುಮಾರಿಗೆ ತಮ್ಮ ಮನೆಯ ಮುಂದೆ ಪಿರ್ಯಾದಿದಾರರು ಮತ್ತು ತಮ್ಮ ಅಕ್ಕ ರಾಜಮ್ಮ ಮಾತನಾಡುತ್ತಾ ಕುಳಿತುಕೊಂಡಿದ್ದಾಗ್ಗೆ ಆರೋಪಿತರೆಲ್ಲರೂ ಅಕ್ರಮ ಕೂಟ ಕಟ್ಟಿಕೊಂಡು ಬಂದು ಅವಛ್ಯಶಬ್ದಗಳಿಂದ ಬೈದಾಡಿ ಸೀರೆ ಹಿಡಿದು ಎಳೆದು ಕೈಯಿಂದ ಮತ್ತು ಕಟ್ಟಿಗೆಯಿಂದ ಬಡಿದು ಕಾಲಿನಿಂದ ಒದ್ದು ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಮುಂತಾಗಿ ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

4) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 304/2014 ಕಲಂ. 279, 337 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.

ದಿನಾಂಕ-21-10-2014 ರಂದು ರಾತ್ರಿ -9-45 ಗಂಟೆಯ ಸುಮಾರಿಗೆ ಪಿರ್ಯಾದಿದಾರರಾದ ಶ್ರೀ ರಾಜು ತಂದಿ ಶಂಕ್ರಪ್ಪ ಕಂಬಾರ ವಯಾ : 30 ವರ್ಷ ಜಾ: ಕಂಬಾರ ಸಾ: ಸಾಲೋಣಿ ಕಾರಟಗಿ  ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿ ನೀಡಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ಪಿರ್ಯಾದಿದಾರರ ಚಿಕ್ಕಪ್ಪನಾದ ಸೊಮಣ್ಣ ತಂದಿ ಕೃಷ್ಣಪ್ಪ  ಕಂಬಾರ ಇತನು ದಿಪಾವಳಿ ಹಬ್ಬದ ಪ್ರಯುಕ್ತ ಕಿರಾಣಿ ಸಂತೆ ಮಾಡಿಕೊಂಡು ಬರಲೆಂದು ಕಾರಟಗಿಗೆ ಬಂದು ಕಿರಾಣಿ ಸಂತೆ ಮುಗಿಸಿಕೊಂಡು ವಾಪಾಸ್ ಊರಿಗೆ ಹೊಗಲೆಂದು ವಾಹನದ ಹಾದಿ ಕಾಯುತ್ತಾ ಕಾರಟಗಿಯ ಸೋಮಲಾಪೂ್ರ ಇವರ ಬಿಲ್ಡಿಂಗ್ ಹತ್ತಿರ ರಸ್ತೆಯ ಬದಿಗೆ ನಿಂತುಕೊಂಡಿದ್ದಾಗ್ಗೆ ಕಾರಟಗಿಯ ನವಲಿ ಕ್ರಾಸ್ ಕಡೆಯಿಂದ ಒಬ್ಬ ಮೊಟಾರ್ ಸೈಕಲ್ ಸವಾರ ತನ್ನ ಮೊಟಾರ್ ಸೈಕಲ್ಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಫಿರ್ಯಾದಿದಾರರ ಚಿಕ್ಕಪ್ಪನಾದ ಸೊಮಣ್ಣ ಇವರಿಗೆ ಟಕ್ಕರ ಕೊಟ್ಟು ಅಪಘಾತಪಡಿಸಿ ಮೊಟಾರ್ ಸೈಕಲ್ ನಿಲ್ಲಿಸದೆ ಹಾಗೆ ಹೊಗಿದ್ದು ಇರುತ್ತದೆ.  ಈ ಘಟನೆಯಿಂದ ಸೊಮಣ್ಣ ಇವರಿಗೆ ಬಲಗಾಲಿಗೆ ಮೂಳೆ ಮುರಿತವಾಗಿ ಭಾರೀ ಗಾಯವಾಗಿರುತ್ತದೆ  ಈ ಬಗ್ಗೆ ಮೊಟಾರ್ ಸೈಕಲ್ ಚಾಲಕನನ್ನು ಪತ್ತೆ ಮಾಡಿ ಕಾನೂನಿನ ಪ್ರಕಾರ ಕ್ರಮ ಜರುಗಿಸಲು ವಿನಂತಿಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008