ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ.
233/2014 ಕಲಂ. 143, 147, 323, 341, 504, 506, 109 ಸಹಿತ 34 ಐ.ಪಿ.ಸಿ:.
ದಿ:22-10-2014 ರಂದು ಮಧ್ಯಾಹ್ನ
12-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀಮತಿ ಫಕೀರಮ್ಮ ಮಿರಗನತಂಡಿ ಸಾ: ಗಾಂಧಿನಗರ ಕೊಪ್ಪಳ
ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ಇಂದು ದಿ:22-10-2014 ರಂದು ಬೆಳಿಗ್ಗೆ
8-10 ಗಂಟೆಯ ಸುಮಾರಿಗೆ ಗಾಂಧಿನಗರದ ತಮ್ಮ ಮನೆಯ ಮುಂದೆ ಆರೋಪಿತರು ಗುಂಪು ಕಟ್ಟಿಕೊಂಡು ಬಂದು ಈ ಹಿಂದೆ
ದುರುಗಪ್ಪ ಕುಕನೂರ ಇತನಿಂದ ನಮ್ಮ ಮೇಲೆ ಕಂಪ್ಲೇಟ ಮಾಡಿಸಿದ್ದಿಯಾ ಅದಕ್ಕಾಗಿ ನೀವು ಕೊರ್ರಮ್ಮ ಗುಡಿಯ
ಹತ್ತಿರ ಪಂಚಾಯ್ತಗೆ ಬರ್ರಿ ಅಂತಾ ಕರೆದಿದ್ದು ಬರದಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈಯ್ದು, ಮಹಿಳೆಯರು
ಸೀರೆ ಸೆರಗು ಹಿಡಿದು ಎಳೆದಾಡಿದ್ದು, ಅಲ್ಲದೆ ತನ್ನ ಗಂಡನಿಗೆ ತಡೆದು ನಿಲ್ಲಿಸಿ ಕೈಯಿಂದ ಹೊಡೆಬಡಿ
ಮಾಡಿದ್ದು ಅಲ್ಲದೆ ಉಳಿದ ಆರೋಪಿತರು ಕುಮ್ಮಕ್ಕು ನೀಡಿದ್ದು ಅಲ್ಲದೆ ಆರೋಪಿತರು ತಮ್ಮ ಕುಟುಂಬವನ್ನು
ಹೊಡೆದು ಸಾಯಿಸಬೇಕೆಂದು ಜೀವದ ಭಯ ಹಾಕಿರುತ್ತಾರೆ. ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ
ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 233/2014 ಕಲಂ:
143,147,323,341,504,109,506 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು
ಅದೆ.
0 comments:
Post a Comment