ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ.
245/2014 ಕಲಂ. 302, 201 ಐ.ಪಿ.ಸಿ:.
ದಿನಾಂಕ
29-10-2014 ರಂದು ಮುಂಜಾನೆ 09-30 ಗಂಟೆಗೆ ಶ್ರೀ ಚಾಂದಪಾಷಾ @ ರಬ್ಬಾನಿ ತಂದೆ ಆಲಂಸಾಬ ವಯ 55
ವರ್ಷ ಜಾ: ಮುಸ್ಲಿಂ ಉ: ಲಾರಿ ಮಾಲೀಕ & ಚಾಲಕ ಸಾ: ಎ.ಪಿ.ಎಂ.ಸಿ. ರೈತಭವನ ಕಂಪೌಂಡ್
ಪಕ್ಕದಲ್ಲಿ ಸಿ.ಬಿ.ಎಸ್. ಗಂಜ್ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು
ಅದರ ಸಾರಂಶವೇನೆಂದರೆ, ದಿನಾಂಕ 28-10-2014 ರಂದು ರಾತ್ರಿ ವೇಳೆಯಲ್ಲಿ ಯಾರೋ ದುಷ್ಕರ್ಮಿಗಳು
ಗಂಗಾವತಿ ನಗರದ ಎ.ಪಿ.ಎಂ.ಸಿ. ಜಾಗೆಯಲ್ಲಿ ಅಂ. 30 ರಿಂದ 32 ವರ್ಷ ವಯಸ್ಸಿನ ಮಹಿಳೆಯ ಕುತ್ತಿಗೆ
ಕೊಯ್ದು ದೇಹದಿಂದ ರುಂಡವನ್ನು ಬೇರೆ ಮಾಡಿದ್ದು, ರುಂಡವು ಹತ್ತಿರದಲ್ಲಿಯ ಮುಳ್ಳಿನ
ಗಿಡದಲ್ಲಿ ಬಿದ್ದಿರುತ್ತದೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ
ಗುನ್ನೆ ನಂ. 245/14 ಕಲಂ. 302, 201 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ.
239/2014 ಕಲಂ. 3 & 7 ಇ.ಸಿ. ಕಾಯ್ದೆ 1955 ಮತ್ತು 18 ಪಿ.ಡಿ.ಸಿ ಆದೇಶ:.
ದಿ:29-10-2014
ರಂದು 21-30 ಪಿ.ಎಮ್. ಕ್ಕೆ ಫಿರ್ಯಾದಿದಾರರಾದ ಶ್ರೀ ಮಲ್ಲಪ್ಪ ಹಳ್ಯಾಳ ಆಹಾರ ನಿರೀಕ್ಷಕರು ತಹಶೀಲ ಕಾರ್ಯಾಲಯ ಕೊಪ್ಪಳ ರವರು ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಇಂದು ಬೆಳಗ್ಗೆ
10-00 ಗಂಟೆಗೆ ಪಡಿತರ ಗೋದಿ ಹಾಗೂ ಅಕ್ಕಿ ಅಕ್ರಮವಾಗಿ ಸಾಗಾಣಿಕೆಯಲ್ಲಿ ತೊಡಗಿರುವ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ತಮ್ಮ ಅಧಿಕಾರಿಗಳೊಂದಿಗೆ ನಗರದ ಎ.ಪಿ.ಎಮ್, ಸಿ. ಯಾರ್ಡನಲ್ಲಿರುವ ವಿನಾಯಕ ಡ್ರೇಡಿಂಗ್ ಕಂಪನಿಯ ಎದುರಿಗೆ ಇದ್ದ ವಿ.ಆರ್.ಎಲ್. ಲಾರಿ ನಂ: ಕೆ.ಎ-25/ಎ-2415
ನೇದ್ದರಲ್ಲಿದ್ದ 102.50 ಕ್ವಿಂಟಲ್ ಪಡಿತರ ಗೋದಿ ಅಂಕಿ:
82,000/- ಲೋಡ್ ಮಾಡಿದ್ದು ಹಾಗೂ ಕಿರಣ ಟ್ರೇಡರ್ಸ ಗೋದಾಮಿನಲ್ಲಿದ್ದ 75 ಕ್ವಿಂಟಲ್ ಪಡಿತರ ಅಕ್ಕಿ ಅಂಕಿ:
75000/- ನೇದ್ದನ್ನು ಸಂಗ್ರಹಿಸಿ ಆರೋಪಿತರು ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರವನ್ನು ಸಾಗಾಟ ಮಾಡುತ್ತಿದ್ದಾಗ ಆರೋಪಿತರಿಂದ ಪಡಿತರ ಮತ್ತು ಲಾರಿ ಹಾಗೂ ತೂಕದ ಯಂತ್ರ ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿ ಮುಂದಿನ ಕ್ರಮಕ್ಕಾಗಿ ಫಿರ್ಯಾದಿಯೊಂದಿಗೆ ಪಂಚನಾಮೆ ಮತ್ತು ಆರೋಪಿ ಹೇಳಿಕೆ ಮತ್ತು ಲಾರಿಯನ್ನು ಹಾಗೂ ಚಾಲಕನನ್ನು ಹಾಜರುಪಡಿಸಿದ್ದು, ಸದರಿ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ:
239/2014 ಕಂ: 3 ಸಹಿತ 7 ಈ.ಸಿ. ಕಾಯ್ದೆ ಹಾಗೂ ಕಲಂ: 18
ಪಿ.ಡಿ.ಎಸ್. ಕಾಯ್ದೆ
1992 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಯು.ಡಿ.ಆರ ನಂ. 18/2014 ಕಲಂ. 174 (ಸಿ) ಸಿ.ಆರ್.ಪಿ.ಸಿ.:
ದಿ:
29-10-201041 ರಂದು 11-30 ಗಂಟೆಗೆ ಫಿರ್ಯಾದಿದಾರರಾದ ಪರಶುರಾಮ ಮೇಘರಾಜ ಸಾ: ಭಾಗ್ಯನಗರ ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ, ಕಳೆದ 4-5 ದಿನಗಳಿಂದ ಇಂದು ಬೆಳಗ್ಗೆ
09-00 ಗಂಟೆಯ ಅವಧಿಯಲ್ಲಿ ಸುಮಾರು
35-40 ವರ್ಷ ವಯಸ್ಸಿನ ಓರ್ವ ಗಂಡಸು ಭಾಗ್ಯನಗರದಿಂದ ನವನಗರಕ್ಕೆ ಹೋಗುವ ರಸ್ತೆಯ ಬಾಜೂ ಶ್ರೀ ಅಜ್ಜಪ್ಪ ಗುಡಿಯ ಹತ್ತಿರ ಬಾಜೂ ರಾಜು ಪವಾರ ಇವರ ಹೊಸ ಮನೆ ಕಟ್ಟಡದಲ್ಲಿ ಮೃತಪಟ್ಟಿದ್ದು ಇರುತ್ತದೆ. ಸದರಿ ಶವವು ಗುರುತು ಸಿಗದಂತೆ ಆಗಿದ್ದು, ಮೃತನ ಸಾವಿನಲ್ಲಿ ಸಂಶಯ ಇರುತ್ತದೆ. ಕಾರಣ ಮಾನ್ಯರವರು ಮುಂದಿನ ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಯು.ಡಿ.ಆರ್. ನಂ:
18/2014 ಕಲಂ: 174 [ಸಿ] ಸಿ.ಆರ್.ಪಿಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment