ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ.
188/2014 ಕಲಂ. 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ 14-10-2014 ರಂದು ರಾತ್ರಿ 9-30 ಗಂಟೆ ಸುಮಾರು ನಿಂಗಾಪೂರ
ಹತ್ತಿರ ಅಡುಗೆ ಮಾಡಿಕೊಳ್ಳಲು ಕಿರಾಣಿ ಸಾಮಾನುಗಳನ್ನು ತರಲೆಂದು ಹೊಸಪೇಟ-ಕುಷ್ಟಗಿ ಎನ್.ಹೆಚ್-13
ಒನ್-ವೇ ರಸ್ತೆಯನ್ನು ನಡೆದುಕೊಂಡು ದಾಟುತ್ತಿದ್ದ ಷಣ್ಮುಗಂ ಈತನಿಗೆ ಕುಷ್ಟಗಿ ಕಡೆಯಿಂದ ಯಾವುದೋ
ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು
ಠಕ್ಕರ ಕೊಟ್ಟು ಅಪಘಾತಪಡಿಸಿದ್ದು, ಇದರಿಂದ ಷಣ್ಮುಗಂ ಈತನು ರಸ್ತೆಯ ವಿಭಾಜಕಕ್ಕೆ ಬಿದ್ದು,
ಬಲಗಡೆ ಪಕ್ಕಡಿ ಹತ್ತಿರ ಭಾರಿ
ಒಳಪೆಟ್ಟಾಗಿದ್ದು ಇಲಾಜ ಕುರಿತು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು
ದಾಖಲು ಮಾಡಿದ್ದಾಗ ಇಂದು ದಿನಾಂಕ 30-10-2014 ರಂದು ಬೆಳಿಗ್ಗೆ 10-30 ಗಂಟೆಗೆ ಮೃತಪಟ್ಟಿದ್ದು
ಇರುತ್ತದೆ ಮತ್ತು ಅಪಘಾತಪಡಿಸಿದ ನಂತರ ಲಾರಿ ಚಾಲಕನು ತನ್ನ ಲಾರಿಯನ್ನು ನಿಲ್ಲಿಸದೇ ಹಾಗೆಯೇ
ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಾಗಿದ್ದು
ಇರುತ್ತದೆ.
2) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 116/2014 ಕಲಂ. 279, 304(ಎ) ಐ.ಪಿ.ಸಿ:.
ದಿನಾಂಕ:30-10-2014
ರಂದು ªÀÄzÁåºÀß 3-30
UÀAmÉUÉ oÁuÉUÉ ¦ügÁå¢zÁgÀgÁzÀ ಶಿವಲಿಂಗಪ್ಪ ತಂದೆ ಹುಲ್ಲಪ್ಪ ಮೇಲಸಕ್ರಿ ಸಾ: ಸೇಬಿನಕಟ್ಟಿ ಹಾ:ವ:
ಹನಮಸಾಗರ ಇಂದು ದಿನಾಂಕ: 30-10-2014
ರಂದು ಮದ್ಯಾಹ್ನ ಫಿರ್ಯಾದಿದಾರರು ಮದ್ಯಾಹ್ನ 2-30 ಗಂಟೆಯ ಸುಮಾರಿಗೆ
ಇದ್ದಾಗ ಶರಣಪ್ಪ
ಕೋರಿ ಈತನು ಮೋಟಾರ ಸೈಕಲ ನಂ: ಕೆ.ಎ-36
ಎಲ್.-976 ನೇದ್ದರ
ಮೇಲೆ ಹನಮಸಾಗರದಿಂದ ಹನಮನಾಳಕಡೆಗೆ ಹೊರಟಾಗ ಹನಮನಾಳ ಕಡೆಯಿಂದ ರೋಡಿನಲ್ಲಿ ಒಬ್ಬ ಮೋಟಾರ ಸೈಕಲ್
ಸವಾರನು ತನ್ನ ಮೋಟಾರ ಸೈಕಲನ್ನು ಆತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದವನೆ ಎದುರಿಗೆ
ಮೋಟಾರ ಸೈಕಲ ಮೇಲೆ ರೋಡಿನ ಎಡಗಡೆ ಹೊರಟ ಶರಣಪ್ಪ ಕೋರಿಯ ಮೋಟಾರ ಸೈಕಲಗೆ ಟಕ್ಕರ ಕೊಟ್ಟು ಅಪಘಾತ
ಪಡಿಸಿದಾಗ ಶರಣಪ್ಪ ಕೋರಿ ಈತನ ಮೋಟಾರ ಸೈಕಲ್ ರೋಡಿಗೆ ಬಿದ್ದು ಅದರ ಮೇಲೆ ಆತನು ಬಿದ್ದು ಮೋಟಾರ
ಸೈಕಲ್ ರೋಡಿಗೆ ಗೀಚಿಕೊಂಡು ರೋಡಿನ ಮುಂದೆ ಹೋಯಿತು. ಮತ್ತು ಹನಮನಾಳ ಕಡೆಯಿಂದ ಬಂದ ಮೋಟಾರ ಸೈಕಲ್
ಸವಾರನು ಕೂಡ ರೋಡಿನಲ್ಲಿ ಬಿದ್ದು ಆತನ ಮೋಟಾರ ಸಹ ಗೀಚಿಕೊಂಡು ರೋಡಿನ ಎಡಗಡೆ ಹೋಗಿ ಬಿದ್ದಿದ್ದು
ಫಿರ್ಯಾದಿ ಗಾಭರಿಯಾಗಿ ಅಲ್ಲಿಗೆ ಓಡಿ ಹೋಗಿ ನೋಡಲು ಶರಣಪ್ಪ ಕೋರಿ ಈತನಿಗೆ ತಲೆಗೆ ಭಾರಿ
ಪೆಟ್ಟಾಗಿ ಮೂಗಿನಲಿ ಮತ್ತು ಕಿವಿಯಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ನಂತರ
ಇನ್ನೊಬ್ಬ ಮೋಟಾರ ಸೈಕಲ್ ಸವಾರನನ್ನು ನೋಡಲು ಆತನಿಗೆ ಎಡಗೈ, ಎಡಗಾಲಿಗೆ ಭಾರಿ
ರಕ್ತಗಾಯಗಳಾಗಿ ಬಿದ್ದಿದ್ದು ಆತನ ಹೆಸರು ವಿಳಾಸ ವಿಚಾರಿಸಲು ಶರಣಪ್ಪ ತಂದೆ ಕರಿಯಪ್ಪ ಕಳಸಾದ ಸಾ:
ಯರಗೇರಾ ಅಂತಾ ಹೇಳಿದ್ದು ಆತನ ಮೋಟಾರ ಸೈಕಲನ್ನು ನೋಡಲು ಅದು ಬಜಾಜ ಕಂಪನಿಯ ಪ್ಲಾಟೀನಾ ನಂ:
ಕೆ.ಎ-37/ಯು-1671 ಅಂತಾ ಇದ್ದು ಶರಣಪ್ಪ
ಕೋರಿ ನಡೆಸಿದ ಮೋಟಾರ ಸೈಕಲ್ ನೋಡಲು ಹಿರೋಹೊಂಡಾ ಕಂಪನಿಯ ಸಿ.ಡಿ ಡಾನ ನಂ ಕೆ.ಎ-36-ಎಲ್-976 ಅಂತಾ ಇದ್ದು ಎರಡು
ಮೋಟಾರ ಸೈಕಲಗಳು ಅಪಘಾತದಲ್ಲಿ ಜಖಂಗೊಂಡಿರುತ್ತವೆ ಅಲ್ಲಿ ಹನಮಸಾಗರ ಗ್ರಾಮದ ಚೆನ್ನಬಸಯ್ಯ ಅವತಾರಿ
ಆಕಳ ಹೊಡೆದುಕೊಂಡು ಹೊಲಕ್ಕೆ ಹೊರಟಿದ್ದು ಆತ ನಾನು ಸೇರಿ ಯರಿಗೇರಿ ಶರಣಪ್ಪನಿಗೆ ನೀರು ಹಾಕಿದ್ದು
ನಂತರ 108 ಅಂಬುಲೆಸ್ನ್ನಲ್ಲಿ
ಹಾಕಿ ಉಪಚಾರ ಕುರಿತು ಇಲಕಲಗೆ ಕಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
0 comments:
Post a Comment