ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 332/2014 ಕಲಂ. 302 ಸಹಿತ 34
ಐ.ಪಿ.ಸಿ:
ದಿನಾಂಕ:24-12-2014 ರಂದು ಮಧ್ಯಾಹ್ನ 2:15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರಾಮಚಂದ್ರಪ್ಪ ತಂದೆ ಸೋಮಪ್ಪ ದೇಸಾಯಿ
ವಯಸ್ಸು: 40 ವರ್ಷ ಜಾತಿ: ನಾಯಕ, ಸಾ ಇರಕಲ್ ಗಡ ತಾ:ಕೊಪ್ಪಳ ಇವರು ಠಾಣೆಗೆ ಹಾಜರಾಗಿ ತಮ್ಮ ಗಣಕೀಕರಣ
ಮಾಡಿಸಿದ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. " ತಮ್ಮನಾದ ದೇವರಾಜ
ತಂದೆ ಸೋಮಪ್ಪ ವಯಸ್ಸು: 32 ವರ್ಷ ಈತನಿಗೆ ಈಗ್ಗೆ
ಸುಮಾರು 8-9 ವರ್ಷಗಳಿಂದ ಗಂಗಾವತಿ
ತಾಲೂಕಿನ ಮಲ್ಲಾಪೂರ ಗ್ರಾಮದ ದಿ: ಹನುಮಂತಪ್ಪ ಪೊಲೀಸ್ ಎಂಬುವರ ಮಗಳಾದ ಶ್ರೀ ರತ್ನಮ್ಮ
ಎಂಬುವಳೊಂದಿಗೆ ಮದುವೆ ಮಾಡಿದ್ದು ನಂತರ ಗಂಡ ಹೆಂಡತಿ ಇಬ್ಬರೂ ಈಗ್ಗೆ 7 ವರ್ಷಗಳಿಂದ ಮಲ್ಲಾಪೂರದಲ್ಲಿಯೇ ವಾಸವಾಗಿದ್ದು ಅಂದಿನಿಂದ ಗಂಡ ಹೆಂಡತಿ
ಇಬ್ಬರೂ ಕಿರಿಕಿರಿಯಿಂದಲೇ ಜೀವನವನ್ನು ಸಾಗಿಸುತ್ತಾ ಇದ್ದರು. ಇದರ ಮಧ್ಯದಲ್ಲಿ ಅನೇಕ ಸಾರಿ ಗಂಡ
ಹೆಂಡತಿಯರ ನಡುವೆ ಜಗಳವಾಗಿ ನಮ್ಮ ತಮ್ಮನು 2-3 ಸಾರಿ ನಮ್ಮಲ್ಲಿಗೆ ಬಂದು ಸದರಿ ಜಗಳದ ಬಗ್ಗೆ ಹೇಳಿಕೊಳ್ಳುತ್ತಿದ್ದನು. ಅದಕ್ಕೆ ನಮ್ಮವರು
ನೀನು ನಿನ್ನ ಹೆಂಡತಿಯನ್ನು ಕರೆದುಕೊಂಡು ನಮ್ಮೂರಿಗೆ ಬಂದು ಇರು ಅಂತಾ ಹೇಳಿದ್ದೆವು. ಈ
ವಿಷಯವನ್ನು ಕುರಿತು ಸದರಿ ನಮ್ಮ ತಮ್ಮನು ನಿನ್ನೆ ದಿನಾಂಕ: 23-12-2014
ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ಇರಕಲ್ ಗಡದಿಂದ ಮಲ್ಲಾಪೂರ ಗ್ರಾಮಕ್ಕೆ ಬಂದಿದ್ದು ಆಗ ಗಂಡ ಹೆಂಡತಿ
ಇಬ್ಬರೂ ಜಗಳ ಮಾಡಿಕೊಂಡಿದ್ದರ ಹಿನ್ನಲೆಯಲ್ಲಿ ಮುಖ್ಯ ಕಾಲುವೆಯ ಪಕ್ಕದಲ್ಲಿ (1) ಪಾಂಡುರಂಗ ತಂದೆ ಹನುಮಂತಪ್ಪ ಪೊಲೀಸ್ (2) ಹನುಮೇಶ ತಂದೆ ಹನುಮಂತಪ್ಪ ಪೊಲೀಸ್ (3) ಮಂಜುನಾಥ ತಂದೆ ಹನುಮಂತಪ್ಪ ಪೊಲೀಸ್ (4) ದುರುಗಮ್ಮ ಗಂಡ ಹನುಮಂತಪ್ಪ ಪೊಲೀಸ್ ಇವರೆಲ್ಲರೂ ಸೇರಿಕೊಂಡು ಮರಣಾಂತಿಕ ಹಲ್ಲೆ ಮಾಡಿ ನಂತರ
ಗಂಗಾವತಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ಸದರುಇ
ನನ್ನ ತಮ್ಮನನ್ನು ಗಂಡ ಹೆಂಡತಿಯರ ವಿಷಯದಲ್ಲಿ ಕ್ಷುಲಕ ವಿಷಯವನ್ನು ಗಂಭೀರವಾಗಿ ತಗೆದುಕೊಂಡು
ಆರೋಪಿತರು ಕೊಲೆ ಮಾಡಿದ್ದು ಇರುತ್ತದೆ. ಕಾರಣ ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ
ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 332/2014
ಕಲಂ: 302 ರಡ್ ವಿತ್ 34 ಐಪಿಸಿ ಅಡಿ ಪ್ರಕರಣ ದಾಖಲು
ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
0 comments:
Post a Comment