ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 270/2014 ಕಲಂ. 337, 338, 304(ಎ)
ಐ.ಪಿ.ಸಿ:
ದಿ: 25-12-2014 ರಂದು ಸಂಜೆ 07-30 ಗಂಟೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಿರ್ಯಾದಿ ರೋಬಿಯಾ ತಂದೆ ಕಲಾಮಶೇಖ ಸಾ: ಗಿರಿಧರಪುರ ನಾದಿಯಾ ಜಿಲ್ಲೆ [ಪ.ಬಂ] ಇವರು ನೀಡಿದ ಹೇಳಿಕೆ ಫಿರ್ಯಾದಿಯ ಸಾರಾಂಶವೇನೆಂದರೆ, ದಿ: 25-12-2014 ರಂದು ಮಧ್ಯಾಹ್ನ 03-45 ಗಂಟೆಗೆ ಕೊಪ್ಪಳ ನಗರದ ಕಿನ್ನಾಳ ರಸ್ತೆ ಟೀಚರ್ಸ ಕಾಲೋನಿ [ಎನ್.ಜಿ.ಓ. ಕಾಲೋನಿ] ಯಲ್ಲಿ ನಾನು ಮತ್ತು ಮೃತಪಟ್ಟ 02 ಜನ ಹಾಗೂ 04 ಗಾಯಾಳುಗಳು ಹೀಗೆ ಒಟ್ಟು 07 ಜನರು ಕೂಡಿಕೊಂಡು ನಿರ್ಮಾಣ ಹಂತದಲ್ಲಿರುವ ನೀರಿನ ಟ್ಯಾಂಕಿನ ಸಾಪ್ಟವಾಲ್ ಪ್ಲಾಸ್ಟರ್ ಮಾಡುತ್ತಿದ್ದೆವು. ಟ್ಯಾಂಕಿಗೆ ನೀರು ತುಂಬುವ ಕೆಲಸವು ನಡೆಯುತ್ತಿತ್ತು ಆಗ ಕಾಲಕ್ಕೆ ನೀರಿನ ಟ್ಯಾಂಕ ಒಮ್ಮೇಲೆ ಕುಸಿದು ಬಿದ್ದಿತು. ಕೆಲಸ ಮಾಡುತ್ತಿದ್ದ ನಾವುಗಳು ಸಹ ಅದರೊಂದಿಗೆ ಕೆಳಗೆ ಬಿದ್ದಿದ್ದು, ಅದರಲ್ಲಿ ಬಾಯಿತ್ತುಲ್ಲಾ, ಕುರ್ಮಾನಶೇಖ, ಮಿಕಾಯಿ ಶೇಖ, ಜಾಕೀರಶೇಖ, ಐತುಲ್ಲಾ ಇವರಿಗೆ ಭಾರಿ ರಕ್ತ ಗಾಯವಾಗಿದ್ದು, ನನಗೆ ಮತ್ತು ಹಬೀಲ್ ಮುಂಡೋಲಾ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ. ನಂತರ ನಮಗೆಲ್ಲರಿಗೂ ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಸೇರಿಸಿದ್ದು, ಗಾಯಾಳುಗಳಲ್ಲಿ ಬಾಯಿತುಲ್ಲಾ ಮುಂಡೊಲಾ ಮತ್ತು ಕುರ್ಮಾನ ಶೇಖ ಇಬ್ಬರೂ ಚಿಕಿತ್ಸೆ ಫಲೀಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಉಳಿದ ಮಿಕಾಯಿಶೇಖ, ಜಾಕೀರಶೇಖ, ಐತುಲ್ಲಾ ಮುಂಡೋಲ ಇವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಎಸ್.ಡಿ.ಎಮ್. ಧಾರವಾಡಕ್ಕೆ ಕಳುಹಿಸಿದ್ದು ಇರುತ್ತದೆ. ಸದರಿ ವಾಟರ್ ಟ್ಯಾಂಕ ನಿರ್ಮಾಣ ಕೆಲಸ ಮಾಡಿಸುವ ಮೇಘಾ ಇಂಜಿನೀಯರಿಂಗ್ ಹೈದ್ರಾಬಾದ್ ಕಂಪನಿ ಹಾಗೂ ಉಸ್ತುವಾರಿ ನೋಡಿಕೊಳ್ಳುವ ಇಂಜಿನೀಯರಗಳು ಯಾವುದೇ ಸುರಕ್ಷಿತ ಕ್ರಮಗಳನ್ನು ಅನುಸರಿಸದೇ ನಿರ್ಲಕ್ಷತನ ಮಾಡಿದ್ದರಿಂದ ಈ ಅವಘಡ ಸಂಭವಿಸಿದ್ದು, ಸದರಿ ಕಂಪನಿ ಹಾಗೂ ಇಂಜಿನೀಯರ್ ಮತ್ತು ಇತರರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 270/2014 ಕಲಂ: 337,
338, 304 [ಎ] ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment