Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, January 23, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 19/2015 ಕಲಂ. 78(3) ಕೆ.ಪಿ. ಕಾಯ್ದೆ ಮತ್ತು 420 ಐ.ಪಿ.ಸಿ.
ದಿನಾಂಕ: 22-01-2015 ರಂದು  21-30 ಗಂಟೆಗೆ ಶ್ರೀ ಈ. ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ನಗರ ಪೊಲೀಸ್ ಠಾಣೆ ರವರು ಮಟಕಾ ಜೂಜಾಟದಲ್ಲಿ ತೊಡಗಿದ್ದ 04 ಜನರೊಂದಿಗೆ ಅವರ ಮೇಲೆ  ಕ್ರಮ ಜರುಗಿಸಲು ಒಂದು ವರದಿ ನೀಡಿದ್ದು ಅದರ ಸಾರಾಂಶವೇನೆಂದರೆ ಇಂದು ದಿನಾಂಕ: 22-01-2015 ರಂದು ರಾತ್ರಿ 8-15 ಗಂಟೆಗೆ ಆರೋಪಿತರಾದ (01) ಉಸ್ಮಾನಬೇಗ್ (02) ಮಹಾಂತೇಶ. (03) ಮಹಿಬೂಬಪಾಷಾ ಮತ್ತು (04) ಮೀನಜ ರವರು ಗಂಗಾವತಿ ನಗರದ ಅಂಬೇಡ್ಕರ ನಗರದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಜನರನ್ನು ಪ್ರಚೋದಿಸುತ್ತಾ ಮೋಸತನದಿಂದ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರುಗಳ ಚೀಟಿಯನ್ನು ಬರೆದುಕೊಳ್ಳುತ್ತಿರುವಾಗ ಮಾನ್ಯ ಪಿ.ಐ. ಸಾಹೇಬರು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವರಿಂದ  (01) ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 4,050-00. (02) ಮಟಕ ನಂಬರ ಬರೆದ 04 ಚೀಟಿಗಳು. (03) ನಾಲ್ಕು ಬಾಲ್ ಪೆನ್ನುಗಳು. (04) ಒಂದು ಸ್ಯಾಮಸಂಗ್ ಮೊಬೈಲ್. (05) ಒಂದು ಕಾರ್ಬನ್ ಮೊಬೈಲ್ ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಈ ಬಗ್ಗೆ ಪಂಚರ ಸಮಕ್ಷಮ 8-15 ಪಿ.ಎಂ. ದಿಂದ 9-15 ಪಿ.ಎಂ.ದ ವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 07/2015  ಕಲಂ 279, 338, 304 (ಎ) ಐ.ಪಿ.ಸಿ:.
ದಿನಾಂಕ: 17-10-2014 ರಂದು ಪಿರ್ಯಾದಿ ಮತ್ತು ಆರೋಪಿತನು ಕೂಡಿಕೊಂಡು ಮೋಟಾರ ಸೈಕಲ ನಂ: ಕೆ.ಎ-18/ಯು-9360 ನೇದ್ದರ ಮೇಲೆ ಅದರಂತೆ ಸಾಕ್ಷಿದಾರ ಶ್ರೀ ರಾಕೇಶ ಶರ್ಮಾ ಇವರು ಸಹ ಒಂದು ಮೋಟಾರ ಸೈಕಲ ನಂ: ಕೆ.ಎ-18/ಈಎ-2945 ನೇದ್ದರ ಮೇಲೆ ತಮ್ಮ ವಯಕ್ತಿಕ ಹಾಗೂ ಕಛೇರಿಯ ಕೆಲಸ ಸಲುವಾಗಿ ಮುಧೋಳ ಗ್ರಾಮದಿಂದ ಯಲಬುರ್ಗಾಕ್ಕೆ ಬಂದಿದ್ದು, ಸದ್ರಿಯವರೆಲ್ಲರೂ ಕೂಡಿಕೊಂಡು ಯಲಬುರ್ಗಾದಲ್ಲಿ ತಮ್ಮ ವಯಕ್ತಿಕ ಹಾಗೂ ಕಛೇರಿಯ ಕೆಲಸವನ್ನು ಮುಗಿಸಿಕೊಂಡು ಯಲಬುರ್ಗಾದಲ್ಲಿ ಊಟ ಮಾಡಿಕೊಂಡು ಮರಳಿ ಯಲಬುರ್ಗಾದಿಂದ ಮುಧೋಳ ಗ್ರಾಮಕ್ಕೆ ಯಲಬುರ್ಗಾ-ಮುಧೋಳ ರಸ್ತೆಯ ಮೇಲೆ ಆರೋಪಿತನು ತಾನು ನಡೆಯಿಸುತ್ತಿದ್ದ ಮೋಟಾರ ಸೈಕಲ ನಂ: ಕೆ.ಎ-18/ಯು-9360 ನೇದ್ದರ ಹಿಂದೆ ಪಿರ್ಯಾದಿದಾರನನ್ನು ಕೂಡಿಸಿಕೊಂಡು ಅತೀಜೋರಾಗಿ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುತ್ತಿದ್ದಾಗ ಪಿರ್ಯಾದಿದಾರನು ಆರೋಪಿತನಿಗೆ ಮೋಟಾರ ಸೈಕಲನ್ನು ನಿಧಾನವಾಗಿ ನಡೆಯಿಸಿಕೊಂಡು ಹೋಗುವಂತೆ ಹೇಳಿದಾಗ್ಯೂ ಕೂಡಾ ಆರೋಪಿತನು ಪಿರ್ಯಾದಿದಾರನ ಮಾತನ್ನು ಲೇಕ್ಕಿಸದೇ ಮೋಟಾರ ಸೈಕಲನ್ನು ಹಾಗೆಯೇ ಜೋರಾಗಿ ನಡೆಯಿಸಿಕೊಂಡು ದಿನಾಂಕ-18-10-2014 ರಂದು ಬೆಳಗಿನ ಜಾವ 0010 ಗಂಟೆಯ ಸುಮಾರಿಗೆ ಯಲಬುರ್ಗಾದಿಂದ ಮುಧೋಳ ಕಡೆಗೆ ಸುಮಾರು 2 ಕಿಲೋ ಮೀಟರ ಅಂತರದಲ್ಲಿ ಯಲಬುರ್ಗಾ ಸೀಮಾದಲ್ಲಿ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಮೋಟಾರ ಸೈಕಲ ನಂ: ಕೆ.ಎ-27/ಈಬಿ-7586 ನೇದ್ದರ ಸವಾರನಾದ ನಿಂಗಪ್ಪ ಎಂಬುವವನು ಒಮ್ಮಿಂದೊಮ್ಮೇಲೆ ರಸ್ತೆಯ ಮೇಲೆ ಬಂದಿದ್ದು ಆಗ ಸದ್ರಿ ಆರೋಪಿತನು ಮೋಟಾರ ಸೈಕಲ ನಂ: ಕೆ.ಎ-27/ಈಬಿ-7586 ನೇದ್ದನ್ನು ಮತ್ತು ಅದರ ಸವಾರನಾದ ನಿಂಗಪ್ಪನಿಗೆ ಲೇಕ್ಕಿಸದೇ ಜೋರಾಗಿ ಠಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಪಿರ್ಯಾದಿದಾರನಿಗೆ ಮತ್ತು ಆರೋಪಿನಿಗೆ ಹಾಗೂ ನಿಂಗಪ್ಪನಿಗೆ ಭಾರಿ ಸ್ವರೂಪ ಗಾಯಗಳಾಗಿದ್ದು ಇರುತ್ತದೆ.  ಸದ್ರಿಯವರನ್ನು ಅದೇ ದಿವಸ ಚಿಕಿತ್ಸೆಗಾಗಿ ಯಲಬುರ್ಗಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲ ಮಾಡಿದ್ದು ನಂತರ ಸದ್ರಿ ಗಾಯಾಳುಗಳು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗಳಿಗೆ ಹೋಗಿದ್ದು ಇರುತ್ತದೆ. ನಂತರ ನಿಂಗಪ್ಪನು ಮೃತ ಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ನ್ಯಾಯಾಲಯದ ಖಾಸಗಿ ಪಿರ್ಯಾದಿಯ ಸಂ-03/2015 ನೇದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3)  ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 7/2015 ಕಲಂ. ಕಲಂ. 279, 337, 338 ಐ.ಪಿ.ಸಿ ಸಹಿತ 187 ಎಂ.ವಿ. ಕಾಯ್ದೆ:.

ದಿನಾಂಕ. 22-01-2015 ರಂದು ಸಂಜೆ 7-10 ಗಂಟೆಗೆ ಕೊಪ್ಪಳ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಮತ್ತು ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುತ್ತಿರುವ ಫಿರ್ಯಾದಿದಾರರಾದ ಯಮನೂರಪ್ಪ ಮಹದೇವಪ್ಪ ಬೋದೂರು ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ 22-01-2015 ರಂದು ತಾನು ಮತ್ತು ತನ್ನ ಟೇಲರಿಂಗ್ ಅಂಗಡಿಯಲ್ಲಿ ಕೆಲಸ ಮಾಡುವ ವಿರೇಶ ಹುಳ್ಳಿ ಇತನನ್ನು ತನ್ನ ಡಿಸ್ಕವರಿ ಮೋಟಾರ್ ಸೈಕಲ್ ಹಿಂದೆ ಕೂಡಿಸಿಕೊಂಡು ರಾಟಿಯ ಮಶಿನ್ನಿನ ಒಂದು ಸಾಮಾನು ತರಲು ಕೊಪ್ಪಳಕ್ಕೆ ಬಂದು ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಮೇಲೆ ಪ್ರವಾಸಿ ಮಂದಿರ ಸಮೀಪ ಕೊಪ್ಪಳದ ನಗರದಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಕಾರ ನಂಬರ KA-37/A-3945 ನೆದ್ದರ ಚಾಲಕನು ಕಾರನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲ್ ಟಕ್ಕರಮಾಡಿ ಅಪಘಾತಮಾಡಿ, ನಂತರ ಸ್ಲ್ಪ ಮುಂದೆ ಹೋಗಿ ಟಿ.ವಿ.ಎಸ್. ಎಕ್ಸಲ್ ಮೇಲೆ ಹೊರಟಿದ್ದ ವಿರೇಶಪ್ಪ ಮತ್ತು ಆತನ ಹೆಂಡತಿ ಶಾಂತಮ್ಮ ಈಕೆಗೆ ಟಕ್ಕರಮಾಡಿ ಅಪಘಾತಮಾಡಿದ್ದು, ಇದರಿಂದ ನನಗೆ ಎಡಗಡೆ ಕಾಲಿಗೆ ಪಕ್ಕಡಿಗೆ ಒಳಪೆಟ್ಟು, ವಿರೇಶ ಇತನಿಗೆ ಸೊಂಟಕ್ಕೆ ಒಳಪೆಟ್ಟು ಮತ್ತು ವಿರೇಶಪ್ಪನಿಗೆ ಬಲಗೈ ಮತ್ತು ಎಡಗೈಗೆ ಬಾರಿ ರಕ್ತಗಾಯ, ಎರಡೂ ಮೋಣಕಾಲಿಗೆ ಮತ್ತು ಪಾದಕ್ಕೆ ತೆರಚಿದಗಾಯಗಳು ಆತನ ಹೆಂಡತಿ ಶಾಂತಮ್ಮ ಈಕೆಗೆ ತೆಲೆಗೆ ಒಳಪೆಟ್ಟು ಮತ್ತು ಬಲಗೈ, ಎಡಕಾಲಿಗೆ ತೆರಚಿದ ಗಾಯಗಳು ಆಗಿರುತ್ತವೆ. ಈ ಅಪಘಾತಮಾಡಿದ ಕಾರ ಚಾಲಕನು ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಮುಂತಾಗಿದ್ದ ಫಿರ್ಯಾದಿಯ ಹೇಳಿಕೆಯನ್ನು ರಾತ್ರಿ 7-30 ಗಂಟೆಯಿಂದ 8-30 ಗಂಟೆಯವರೆ ಪಡೆದುಕೊಂಡು ವಾಪಾಸ ಠಾಣೆಗೆ ರಾತ್ರಿ 9-00 ಗಂಟೆಗೆ ಬಂದು, ಸದರ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ 07/2014 ಕಲಂ. 279, 337, 338 ಐ.ಪಿ.ಸಿ ರೆ/ವಿ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣವನ್ನು ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008