ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ
ಗುನ್ನೆ ನಂ. 21/2015 ಕಲಂ. 333, 504, 506 ಐ.ಪಿ.ಸಿ:.
ದಿ:27-01-2015
ರಂದು 01-30 ಎ.ಎಮ್
ಕ್ಕೆ ಫಿರ್ಯಾದಿದಾರರಾದ
ಶ್ರೀ ಕೆ.
ಬಸವರಾಜ ಡಿಪೋ
ಮ್ಯಾನೇಜರ್ ಎನ್.ಇ.ಕೆ.ಎಸ್.ಆರ್.ಟಿ.ಸಿ
ಘಟಕ ಕೊಪ್ಪಳ
ಇವರು ಠಾಣೆಗೆ
ಹಾಜರಾಗಿ ನೀಡಿದ
ಲಿಖಿತ ದೂರಿನ
ಸಾರಾಂಶವೇನೆಂದರೇ, ನಿನ್ನೆ
ದಿ:26-01-2015 ರಂದು
ರಾತ್ರಿ
9-25 ಗಂಟೆಯ ಸುಮಾರಿಗೆ
ಕೊಪ್ಪಳ ಘಟಕದ
ಬಸ್ ಡಿಪೋದಲ್ಲಿ
ಫಿರ್ಯಾದಿದಾರರು ಸರ್ಕಾರಿ
ಕರ್ತವ್ಯದಲ್ಲಿರುವಾಗ ಚಾಲಕ
& ನಿರ್ವಾಹಕ ಬಿಲ್ಲೆ
ಸಂ:621 ರಾಜಕುಮಾರ.
ಎಸ್. ಪಾಟೀಲ
ಕೊಪ್ಪಳ ಡಿಪೋ
ಇತನು ಹಿಂದಿನಿಂದ
ಬಂದು ಫಿರ್ಯಾದಿಗೆ
ಸಿಮೆಂಟ್ ಇಟ್ಟಂಗಿಯಿಂದ
ತಲೆಗೆ ಹೊಡೆದು
ಹಲ್ಲೆ ಮಾಡಿದ್ದು
ಅಲ್ಲದೇ ಕೈಗೆ
ಸಹ ಹೊಡೆದು
ತೀರ್ವಗಾಯ ಗೊಳಿಸಿ,
ಒಂದು ವಾರ
ರಜೆ ಕೇಳಿದರೆ
3 ದಿನ ರಜೆ
ನೀಡಿಯೇನಲೇ ಭೋಸೂಡಿ
ಮಗನೇ ನಿನ್ನದ
ಡಿಪೋ ನಿಮ್ಮಪ್ಪಂದು
ಎಂದು ಅವಾಚ್ಯ
ಶಬ್ದಗಳಿಂದ ಬೈದು,
ನಿನ್ನನ್ನು ಸುಟ್ಟುಬಿಡುತ್ತೇನೆ.
ಮತ್ತು ನಿನ್ನನ್ನು
ಹೊಡೆದು ಮುಗಿಸಿಬಿಡುತ್ತೇನೆ
ಅಂತಾ ಬೆದರಿಕೆ
ಹಾಕಿ ಕರ್ತವ್ಯ
ನಿರ್ವಹಿಸದಂತೆ ಅಡ್ಡಿಪಡಿಸಿ
ಹಲ್ಲೆ ಮಾಡಿದ
ರಾಜಕುಮಾರ ಪಾಟೀಲ
ಇತನ ಮೇಲೆ
ಸೂಕ್ತ ಕಾನೂನು
ಕ್ರಮ ಕೈಗೊಳ್ಳುವಂತೆ
ನೀಡಿದ ದೂರಿನ
ಮೇಲಿಂದ ಕೊಪ್ಪಳ
ನಗರ ಠಾಣೆ
ಗುನ್ನೆ ನಂ:
21/2015 ಕಲಂ:
333,504,506 ಐಪಿಸಿ ಅಡಿಯಲ್ಲಿ
ಪ್ರಕರಣವನ್ನು ದಾಖಲಿಸಿ
ತನಿಖೆ ಕೈಗೊಂಡೆನು.
2) ಗಂಗಾವತಿ ನಗರ ಪೊಲೀಸ್ ಠಾಣೆ
ಗುನ್ನೆ ನಂ. 22/2015 ಕಲಂ. 323, 324, 504, 506 ಸಹಿತ ಐ.ಪಿ.ಸಿ:.
ದಿನಾಂಕ 26-01-2015 ರಂದು ರಾತ್ರಿ 8-30 ಗಂಟೆಗೆ ಹುಲಗೇಶ ತಂದೆ ದೊಡ್ಡಪರಸಪ್ಪ ಸುಣಗಾರ ವಯ 32 ವರ್ಷ ಜಾ: ಕಬ್ಬೇರ ಉ:
ಮೇಷನ್ ಕೆಲಸ ಸಾ: ವಾರ್ಡ ನಂ. 24 ಸುಣ್ಣದ ಬಟ್ಟಿ ಲಕ್ಷ್ಮೀಕ್ಯಾಂಪ್, ಗಂಗಾವತಿ
ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ
26-01-2015 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಲಕ್ಷ್ಮೀಕ್ಯಾಂಪಿನಲ್ಲಿ ಫಿರ್ಯಾದಿದಾರರ
ಅಳಿಯನಾದ ಮಹಾಂತೇಶ ಇತನೊಂದಿಗೆ ಆರೋಪಿತರಾದ ಹುಸೇನಿ ಮತ್ತು ಹುಚ್ಚುಸಾಬ ಇವರು ಬಾಯಿ ಮಾತಿನ ಜಗಳ
ಮಾಡುತ್ತಿದ್ದರಿಂದ ಫಿರ್ಯಾದಿಯು ಹೋಗಿ ಅವರಿಗೆ ಜಗಳ ಮಾಡಬೇಡಿರೆಂದು ತನ್ನ ಅಳಿಯ ಮಹಾಂತೇಶ
ಇತನಿಗೆ ಸಂಗಡ ಕರೆದುಕೊಂಡು ಮನೆಗೆ ಬರಬೇಕೆನ್ನುವಷ್ಟರಲ್ಲಿ ಆರೋಪಿತರಿಬ್ಬರು ಕೂಡಿಕೊಂಡು
ಫಿರ್ಯಾದಿಗೆ ಲೇ ಸೂಳೇಮಗನೆ ನೀನ್ಯಾಕ ಇದರಲ್ಲಿ ನಡುಕ ಬರುತ್ತೀಯಾ ಮಗನೆ ನಿನಗೆ ಜೀವ ಸಹಿತ
ಉಳಿಸುವುದಿಲ್ಲ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಜೀವದ ಬೆದರಿಕೆ ಹಾಕುತ್ತಾ
ಹುಚ್ಚುಸಾಬ ಇತನು ಒಂದು ಹಿಡಿಗಾತ್ರದ ಕಲ್ಲಿನಿಂದ ಎಡಗಡೆಯ ಕಣ್ಣಿನ ಹತ್ತಿರ ಹೊಡೆದು
ರಕ್ತಗಾಯಗೊಳಿಸಿದ್ದು ಅಲ್ಲದೇ ಹುಸೇನಿ ಇವನು ಕೈಯಿಂದ ಹೊಟ್ಟೆಗೆ ಮತ್ತು ಎದೆಗೆ
ಗುದ್ದಿರುತ್ತಾನೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ.
22/15 ಕಲಂ. 323, 324, 504, 506 ಸಹಿತ 34 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment