ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ
ಗುನ್ನೆ ನಂ. 40/2015 ಕಲಂ. 498(ಎ), 506, 507, 509 ಸಹಿತ 34 ಐ.ಪಿ.ಸಿ ಹಾಗೂ 3 & 4
ವರದಕ್ಷಿಣೆ ನಿಷೇಧ ಕಾಯ್ದೆ ಮತ್ತು 66-ಎ ಐ.ಟಿ. ಕಾಯ್ದೆ:
ದಿ:26-02-2015 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಪೂರ್ಣಿಮಾ ಗಂಡ ಅಂಕಿತಕುಮಾರ ಸಾ: ಬೆಂಗಳೂರ ಹಾವ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ನನ್ನ ತಂದೆ-ತಾಯಿಯವರು ನನ್ನನ್ನು ಕಳೆದ ದಿ:15-09-2013 ರಂದು ಬೆಂಗಳೂರ ಚಾಮರಾಜಪೇಟೆ ನಿವಾಸಿ ಅಂಕಿತಕುಮಾರ ಎಂಬುವವರಿಗೆ ಗುರುಹಿರಿಯರ ಸಮಕ್ಷಮ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ಸುಮಾರು 02 ತಿಂಗಳ ನಂತರ ನನ್ನ ಗಂಡ ಅಂಕಿತಕುಮಾರ ಇವರು ನನಗೆ ಸರಿಯಾಗಿ ನೋಡಿಕೊಳ್ಳದೇ ನಿಮ್ಮ ತಂದೆ ತಹಶೀಲ್ದಾರ ಇದ್ದಾರೆ ಅದಕ್ಕೆ ನೀನು ನಿಮ್ಮ ತವರುಮನೆಯಿಂದ ಹಣ, ಒಡವೆ ತೆಗೆದುಕೊಂಡು ಬಾ ಎಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ವರದಕ್ಷಿಣೆ ಕಿರುಕುಳ ನೀಡಲು ಪ್ರಾರಂಭಿಸಿದನು. ಅಲ್ಲದೇ ವರದಕ್ಷಿಣೆ ತೆಗೆದುಕೊಂಡು ಬರದಿದ್ದರೆ ನಿನಗೆ ಹೊಡೆದು ಮುಗಿಸುತ್ತೇನೆಂದು ಜೀವದ ಬೆದರಿಕೆ ಹಾಕಿ ತಮ್ಮ ಮನೆಯಿಂದ ಹೊರಗಡೆ ಕಳುಹಿಸಿದ್ದರಿಂದ ಕೊಪ್ಪಳಕ್ಕೆ ಬಂದು ತಂದೆಯ ಮನೆಯಲ್ಲಿ ವಾಸವಾಗಿದ್ದೇನೆ. ನಂತರ ವರದಕ್ಷಿಣೆ ಹಣ, ಒಡವೆ ತೆಗೆದುಕೊಂಡು ಬರಲಿಲ್ಲ ಅಂತಾ ಸಿಟ್ಟು ಮಾಡಿಕೊಂಡು ನಮ್ಮ ತಾಯಿ ಶ್ರೀಮತಿ ಚಂದ್ರಮ್ಮ ಇವರ ಮೊಬೈಲ್ ನಂ:7353404520 ಗೆ ತನ್ನ ಮೊಬೈಲ್ ನಂ: 9886913123 ದಿಂದಾ ಕರೆ ಮಾಡಿ ಬೆದರಿಕೆ ಕೊಡುತ್ತಿದ್ದಾನೆ. ನನ್ನ ಪೋಟೋವನ್ನು ತನ್ನ ಮೊಬೈಲ್ದಲ್ಲಿ ಹಾಕಿಕೊಂಡು ತನ್ನ ಮೊಬೈಲ್ ನಂಬರದಲ್ಲಿ ವಿಜಯವರ್ಧನ ವಿಕ್ಟರಿ ಹಾಗೂ ರಾಜವರ್ಧನ್ ಅಂತಾ ಬೇರೆ ಬೇರೆ ಹೆಸರಿನಲ್ಲಿ ಅಕೌಂಟ್ ಕ್ರಿಯೇಟ ಮಾಡಿಕೊಂಡು ಇತರೆಯವರ ಮೊಬೈಲ್ ನಂಬರಗಳಿಗೆ ವ್ಯಾಟ್ಸಪ್ ಮೂಲಕ ಚಾಟಿಂಗ್ ಮಾಡುತ್ತಾ ಬೆದರಿಕೆ ಹಾಕಿ ಆತಂಕ ಸೃಷ್ಟಿಸುತ್ತಿದ್ದಾನೆ. ಅಲ್ಲದೇ ನಮ್ಮ ತಾಯಿಯ ಮೊಬೈಲ್ ನಂಬರಿಗೆ ಇತರೆ ಅಪರಿಚಿತ ಮೊಬೈಲ್ ನಂಬರಗಳಾದ 1] 9632030679, 2] 8095037434,
ಮತ್ತು 3] 9449026275 ನಂಬರಗಳಿಂದ ಬೇರೆ ಬೇರೆ ಗಂಡಸು ವ್ಯಕ್ತಿಗಳು ಕರೆ ಮಾಡಿ ನನ್ನನ್ನು ನನ್ನ ಗಂಡನ ಹತ್ತಿರ ಕಳುಹಿಸದೇ ಹೋದರೆ ನಿಮ್ಮನ್ನು ಕೊಲೆ ಮಾಡುತ್ತೇವೆಂದು ನಮ್ಮ ತಾಯಿಗೆ ಜೀವದ ಬೆದರಿಕೆ ಹಾಕುತ್ತಿದ್ದಾರೆ. ನಂತರ ಕಳೆದ 02 ತಿಂಗಳಿನಿಂದ ಪದೇ ಪದೇ ನಮ್ಮ ತಂದೆಯ ಮೊಬೈಲ್ ನಂ: 9986321917 ನೇದ್ದಕ್ಕೆ ನನ್ನ ಗಂಡ ಅಂಕಿತಕುಮಾರ ಇವನು ತನ್ನ ಮೊಬೈಲ್ ನಂ: 9886913123 ದಿಂದಾ ಕರೆ ಮಾಡಿ ನನ್ನನ್ನು ಹಣ, ಒಡವೆ ಸಹಿತ ಕಳುಹಿಸಿಕೊಡು ಇಲ್ಲದಿದ್ದರೇ ನಿಮ್ಮನ್ನು ಕೊಲೆ ಮಾಡಿ ಮುಗಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕುತ್ತಿದ್ದಾನೆ.
ಕಾರಣ ಸದರಿ 1] ಅಂಕಿತಕುಮಾರ ಹಾಗೂ ಅವರ ತಮ್ಮ 2] ವಿನಯಕುಮಾರ ತಂದೆ ಮುದ್ದುಲಿಂಗೇಶ್ವರ. ಇಬ್ಬರೂ ಸಾ: ಚಾಮರಾಜಪೇಟೆ ಬೆಂಗಳೂರ. ಹಾಗೂ ಇತರರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಹನುಮಸಾಗರ ಪೊಲೀಸ್ ಠಾಣೆ
ಗುನ್ನೆ ನಂ. 11/2015 ಕಲಂ. 323, 324, 353, 504, 506 ಐ.ಪಿ.ಸಿ:
ಫಿರ್ಯಾದಿದಾರರು ಇಂದು ದಿನಾಂಕ: 26-02-2015 ರಂದು ರಾತ್ರಿ 8-30 ಗಂಟೆಗೆ ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದು ಸದರಿ ಫಿರ್ಯಾದಿ
ಸಾರಾಂಶವೇನೆಂದರೆ,
ಪ್ರತಿ ದಿನದಂತೆ ಇಂದು ದಿನಾಂಕ 26-02-2015 ರಂದು ಮುಂಜಾನೆ 10-30 ಗಂಟೆಗೆ ತುಗ್ಗಲಡೋಣಿ ಗ್ರಾಮ
ಪಂಚಾಯತಗೆ ಹೋಗಿ ಎಂದಿನಂತೆ ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನು. ಮುಂಜಾನೆ 11-30 ಗಂಟೆಯ ಸುಮಾರಿಗೆ ಗ್ರಾಮ ಪಂಚಾಯತ ಸದಸ್ಯರಾದ ಮಲ್ಲವ್ವ ಗಂಡ ಚಾಳಪ್ಪ ಹರಿಜನ ರವರ ಗಂಡನಾದ
ಚಾಳಪ್ಪ ತಂದಿ ದುರಗಪ್ಪ ಹರಿಜನ ಇವರು ಗ್ರಾಮ ಪಂಚಾಯತಿಗೆ ಬಂದು ತುಗ್ಗಲಡೋಣಿ ಗ್ರಾಮದಿಂದ
ನೀರಲಕೊಪ್ಪ ಗ್ರಾಮಕ್ಕೆ ಹೋಗುವ ದೇವರ ದಾರಿಯ ಕಾಮಗಾರಿ ಬಿಲ್ ಕೊಡುವಂತೆ ಕೇಳಿದರು. ಸದ್ಯಕ್ಕೆ
ಗ್ರಾಮ ಪಂಚಾಯತ ಸದಸ್ಯರಾದ ಪರಸಪ್ಪ ಕಿನ್ನೂರಿ ಸಾ: ತುಗ್ಗಲಡೋಣಿ ರವರು ಬಿಲ್ ಕೊಡಬೇಡಿರಿ ಅಂತಾ
ತಕರಾರು ಮಾಡಿರುತ್ತಾರೆ ಅದಕ್ಕಾಗಿ ಉಪಾದ್ಯಕ್ಷರನ್ನು ಕೇಳಿ ಕೊಡುತ್ತೇನೆ ಅಂತಾ ಗ್ರಾಮ ಪಂಚಾಯತ
ಉಪಾದ್ಯಕ್ಷರಾದ ಹನಮಂತಪ್ಪ ತಂದಿ ಪರಸಪ್ಪ ಕುಣಮಿಂಚಿ ರವರನ್ನು ಕರೆಯಿಸಿದೆನು. ಪರಸಪ್ಪ ಕಿನ್ನೂರ
ಈತನು ಇಂದು ದಿನಾಂಕ 26-02-2015 ರಂದು ಕುಷ್ಟಗಿಗೆ ತರಭೇತಿ
ಕುರಿತು ಹೋಗಿರುತ್ತಾರೆ ಅವರು ಬಂದ ನಂತರ ವಿಚಾರಿಸೋಣ ಅಂತಾ ಹನಮಂತಪ್ಪ ಕುಣಮಿಂಚಿ ರವರು ತಿಳಿ
ಹೇಳಿ ಕಳುಹಿಸಿದರು. ನಂತರ ಸಾಯಂಕಾಲ 4-00 ಗಂಟೆಯ ಸುಮಾರಿಗೆ
ನಾನು ಗ್ರಾಮ ಪಂಚಾಯತಿಯಲ್ಲಿ ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಗ್ರಾಮ ಪಂಚಾಯತ ಸಿಪಾಯಿ
ಯಲ್ಲಪ್ಪ ತಂದಿ ಶರಣಪ್ಪ ಬೆನ್ನಿ ಇವರು ಗ್ರಾಮ ಪಂಚಾಯತಿಯಲ್ಲಿ ಇದ್ದರು ಅದೇ ವೇಳೆಗೆ ಚಾಳಪ್ಪ
ಹರಿಜನ ಮತ್ತು ಕರ ವಸೂಲಿಗಾರ ಯಂಕಪ್ಪ ವತ್ತಿ ಕೂಡಿ ಗ್ರಾಮ ಪಂಚಾಯತಿಗೆ ಬಂದು ತುಗ್ಗಲಡೋಣಿ
ಗ್ರಾಮದಿಂದ ನೀರಲಕೊಪ್ಪ ಗ್ರಾಮಕ್ಕೆ ಹೋಗುವ ದೇವರ ದಾರಿಯ ಕಾಮಗಾರಿ ಬಿಲ್ ಕೊಡುವಲ್ಲಿ ಈಗ
ತುಗ್ಗಲಡೋಣಿ ಮತ್ತು ಶ್ಯಾಡಲಗೇರಿ ಗ್ರಾಮದ ಡಿಮ್ಯಾಂಡ ರಜಿಷ್ಟರನ್ನು ಯಂಕಪ್ಪ ವತ್ತಿ ಈತನಿಗೆ
ಕೊಡು ಅಂತಾ ನನಗೆ ಹೇಳಿದರು. ಅದಕ್ಕೆ ನಾನು ಈ ವಾರ ಗ್ರಾಮ ಪಂಚಾಯತಿಯ ಎಲ್ಲಾ ಅದ್ಯಕ್ಷ ಮತ್ತು
ಉಪಾದ್ಯಕರ ಹಾಗೂ ಸರ್ವ ಸದಸ್ಯರ ಸಾಮಾನ್ಯ ಸಭೆ ಕರೆದು ಸಭೆಯಲ್ಲಿ ಚರ್ಚಿಸಿ ಕೊಡುವದಾಗಿ
ತಿಳಿಸಿದೆನು. ಆಗ ಚಾಳಪ್ಪ ಈತನು ಒಮ್ಮೆಲೇ ಸಿಟ್ಟಿನಿಂದ ಯಾವ ಸಾಮಾನ್ಯ ಸಭೆ ಕರೆಯುತ್ತೀಲೇ
ಬೋಸುಡಿ ಮಗನ ಅಂತಾ ಅವಾಚ್ಯ ಶಬ್ದಗಳಿಂದ ಒದರಾಡ ಹತ್ತಿದನು ಬಾಯಿ ಮಾಡುವ ದ್ವನಿಯನ್ನು ಕೇಳಿ
ಅಲ್ಲಿಗೆ ಹನಮಪ್ಪ ತಂದಿ ಹುಲ್ಲಪ್ಪ ಗದ್ದಿ, ರವರು ಬಂದರು ಆಗ ಚಾಳಪ್ಪ ಈತನು ನನಗೆ ನಿನ್ನ ಬಿಡುವದಿಲ್ಲ ಮಗನ ಅಂದವರೆ ಕೈಯಿಂದ ನನ್ನ
ಕಪಾಳಕ್ಕೆ ಬಡಿದು ನೀನು ಇಲ್ಲಿ ಹೇಗೆ ಕೆಲಸ ಮಾಡುತ್ತಿ ಮಗನ ನಾನು ನೋಡಿಯೇ ಬಿಡುತ್ತೇನೆ ಅಂತಾ
ನನ್ನ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಅಲ್ಲೇ ಟೇಬಲ್ ಮೇಲೆ ಇಟ್ಟಿದ್ದ ಪೇಪರವೇಟ ಸಾಮಾನನ್ನು
ತೆಗೆದುಕೊಂಡು ನನ್ನ ಎದೆಗೆ ಒಗಿದನು, ಆಗ ಯಲ್ಲಪ್ಪ ತಂದಿ ಶರಣಪ್ಪ ಬೆನ್ನಿ, ಹನಮಪ್ಪ ತಂದಿ ಹುಲ್ಲಪ್ಪ
ಗದ್ದಿ,
ರವರು ಬಿಡಿಸಿದರು ಆಗ ಚಾಳಪ್ಪನು ಇನ್ನ ಮ್ಯಾಗಿಂದ ಗ್ರಾಮ ಪಂಚಾಯತಿಗೆ
ಬಂದು ಹೇಗೆ ಕೆಲಸ ಮಾಡುತ್ತಿ ಮಗನ ನಿನ್ನ ಇಲ್ಲಿಯೇ ಮರ್ಡರ ಮಾಡಿ ಮುಗಿಸಿ ಬಿಡುತ್ತೇನೆ ಅಂತಾ
ನನಗೆ ಜೀವದ ಬೆದರಿಕೆಯನ್ನು ಹಾಕಿದರು. ಆಗ ಯಲ್ಲಪ್ಪ ಬೆನ್ನಿ, ಹನಮಪ್ಪ ಗದ್ದಿ, ರವರು ಚಾಳಪ್ಪನಿಗೆ ಹೊರಗೆ
ಕರೆದುಕೊಂಡು ಹೋದರು ತುಗ್ಗಲಡೋಣಿ ಗ್ರಾಮದಿಂದ ನೀರಲಕೊಪ್ಪ ಗ್ರಾಮಕ್ಕೆ ಹೋಗುವ ದೇವರ ದಾರಿಯ
ಕಾಮಗಾರಿ ಬಿಲ್ ಸಂಬಂಧ ಅದೇ ಸಿಟ್ಟನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಗ್ರಾಮ ಪಂಚಾಯತಿಗೆ ಬಂದು
ನನಗೆ ಅವಾಚ್ಯವಾಗಿ ಬೈದು ಸರ್ಕಾರಿ ಕೆಲಸಕ್ಕೆ ಅಡಿಪಡಿಸಿ ಕೈಯಿಂದ ಬಡಿದು ಮತ್ತು ಪೇಪರವೇಟ
ಸಾಮಾನಿನಿಂದ ಒಗೆದು ಜೀವದ ಬೆದರಿಕೆ ಹಾಕಿದ ಚಾಳಪ್ಪ ಹರಿಜನ ಈತನ ವಿರುದ್ದ ಕಾನೂನು ಕ್ರಮ
ಜರುಗಿಸಲು ವಿನಂತಿ. ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು
ತಪಾಸಣೆ ಕೈಗೊಂಡೆನು.
3) ಗಂಗಾವತಿ ನಗರ ಪೊಲೀಸ್ ಠಾಣೆ
ಗುನ್ನೆ ನಂ. 48/2015 ಕಲಂ. 143, 147, 323, 504, 506 ಸಹಿತ 149 ಐ.ಪಿ.ಸಿ:
ದಿನಾಂಕ 26-02-2015 ರಂದು 9-00 ಪಿ.ಎಂ.ಕ್ಕೆ ಶ್ರೀ
ಮಲ್ಲಿಕಾರ್ಜುನ ಗೌಡ ತಂದೆ ವಿರುಪಾಕ್ಷಗೌಡ ಹೊಸಮನಿ, ವಯಾ: 33 ವರ್ಷ, ಜಾ: ರೆಡ್ಡಿ, ಉ:
ಪತ್ರಕರ್ತ, ಸಾ: ಸಿದ್ದಾಪುರ, ತಾ: ಗಂಗಾವತಿ ತಾ: ಗಂಗಾವತಿ.ರವರು ಠಾಣೆಗೆ ಬಂದು
ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಫಿರ್ಯಾದಿದಾರರು “ಕಲ್ಯಾಣ
ರಾಜ್ಯ” ಎಂಬ ಕನ್ನಡ ಮಾಸ
ಪತ್ರಿಕೆಯ ಸಂಪಾದಕರಿದ್ದು ಈ ತಿಂಗಳ ಪೆಭ್ರುವರಿ ಸಂಚಿಕೆಯಲ್ಲಿ ನಮ್ಮ ಕಲ್ಯಾಣ ರಾಜ್ಯ ಮಾಸ
ಪತ್ರಿಕೆಯಲ್ಲಿ “ಬ್ಲಾಕ್ ಮೇಲರ್ ಡಾನ್ ಶರಣ ಅಲಿಯಾಸ ಶರಣೆಗೌಡ” ಎಂಬ ಶೀರ್ಷಿಕೆ ಅಡಿಯಲ್ಲಿ ಶರಣೆಗೌಡನ ಬಗ್ಗೆ ಪತ್ರಿಕೆಯಲ್ಲಿ ವರದಿ
ಪ್ರಕಟಿಸಿದ್ದು ಇಂದು ದಿನಾಂಕ 26-02-2015 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ
ಫಿರ್ಯಾಧಿದಾರರು ಕೋರ್ಟ ಆವರಣದ ಕ್ಯಾಂಟೀನ್ ಪಕ್ಕದಲ್ಲಿ ನಿಂತಿದ್ದಾಗ ಶರಣೆಗೌಡ ತಂದೆ ಚಂದ್ರಗೌಡ
ಮಾಲಿಪಾಟೀಲ್, ಸಾ: ಕೆಸರಟ್ಟಿ ಹಾಗೂ ಇತರೇ 5 ಜನರು. ಅಕ್ರಮ ಗುಂಪು ಕಟ್ಟಿಕೊಂಡು ಬಂದು
ಫಿರ್ಯಾದಿದಾರನಿಗೆ ಪತ್ರಕೆಯಲ್ಲಿ ತನ್ನ ಬಗ್ಗೆ ಬರೆದಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು
ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿತ್ತಾರೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment