Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, February 6, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 11/2015  ಕಲಂ 279, 337, 338, 304(ಎ) ಐ.ಪಿ.ಸಿ:.
05-02-2015 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ಫಿರ್ಯಾದಿ ಹನಮಪ್ಪ ಕುರಿ ಹಾಗೂ ಆರೋಪಿ ಗಾಯಾಳು ಶಶಿಕುಮಾರ ಎಮ್ಮಿಗುಡ್ಡದ ಸಾ: ಯಲಬುರ್ಗಾ ಇಬ್ಬರೂ ಕೂಡಿಕೊಂಡು ಟ್ರ್ಯಾಕ್ಸ ನಂ-ಕೆಎ-37/9643 ನೇದ್ದರಲ್ಲಿ ಬಾಡಿಗೆ ಮುಗಿಸಿಕೊಂಡು ವಾಪಸ್ ಯಲಬುರ್ಗಾಕ್ಕೆ ಬಂದು ಯಲಬುರ್ಗಾ- ಬೇವೂರ ರಸ್ತೆಯ ಮೇಲೆ ಫಿರ್ಯಾದಿಯ ಊರಾದ ಕುಡಕುಂಟಿ ಗ್ರಾಮಕ್ಕೆ ಹೋಗುತ್ತಿದ್ದಾಗ ಸದರಿ ಟ್ರ್ಯಾಕ್ಸ್ ನ್ನು  ಆರೋಪಿತನಾದ ಶಶಿಕುಮಾರ ಎಮ್ಮಿಗುಡ್ಡದ ಸಾ: ಯಲಬುರ್ಗಾ ಈತನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ಮಲಕಸಮುದ್ರ ದಾಟಿ ಕುಡಗುಂಟಿ ಗ್ರಾಮಕ್ಕೆ ಹೋಗುತ್ತಿದ್ದಾಗ ಕುಡಗುಂಟಿ ಸೀಮಾದಲ್ಲಿ ವಾಹನದ ಚಾಲಕನು ವಾಹನದ ವೇಗದ ಮೇಲೆ ನಿಯಂತ್ರಣ ತಪ್ಪಿ ರಸ್ತೆಯ ಎಡ ಮಗ್ಗಲು ಪಲ್ಟಿ ಹೊಡೆಯಿಸಿ ಅಫಘಾತ ಮಾಡಿದ್ದರಿಂದ, ಫಿರ್ಯಾದಿಗೆ ಬಲಗಡೆಯ ಹಣೆಯ ಮೇಲ್ಬಾಗದಲ್ಲಿ, ಬಲ ಕಪಾಳಕ್ಕೆ, ಬಲಗೈ ಮೋಣ ಕೈ ಚಿಪ್ಪಿನ ಹತ್ತಿರ ಭಾರಿ ಒಳಪೆಟ್ಟಾಗಿದ್ದು ಇರುತ್ತದೆ. ಅಲ್ಲದೇ ಆರೋಪಿತನಾದ ಶಶಿಕುಮಾರ ತಂದೆ ರಾಮಣ್ಣ ಎಮ್ಮಿಗುಡ್ಡದ ಸಾ: ಯಲಬುರ್ಗಾ ಈತನಿಗೆ ತಲೆಯ ಎಡಭಾಗದಲ್ಲಿ ಭಾರಿ ಸ್ವರೂಪದ ರಕ್ತಗಾಯವಾಗಿದ್ದು, ಬಲ ಕಿವಿಯಿಂದ ರಕ್ತ ಬಂದಿರುತ್ತದೆ. ಅಲ್ಲದೇ ಆರೋಪಿತನು ಪ್ರಜ್ಞಾಹಿನ ಸ್ಥಿತಿಯಲ್ಲಿ ಇರುತ್ತಾನೆ. ಸದರಿ ಅಫಘಾತವು ಆರೋಪಿತನಾದ ಶಶಿಕುಮಾರ ತಂದೆ ರಾಮಣ್ಣ ಎಮ್ಮಿಗುಡ್ಡದ ಸಾ: ಯಲಬುರ್ಗಾ ಈತನ ನಿರ್ಲಕ್ಷತನದಿಂದ ಹಾಗೂ ಬೇಜವಾಬ್ದಾರಿತನದಿಂದ ಜರುಗಿದ್ದು ಇರುತ್ತದೆ. ಕಾರಣ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂಪ್ರಕರಣ ದಾಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ದಿನಾಂಕ: 06-02-2015 ರಂದು ಮುಂಜಾನೆ 5-50 ಗಂಟೆಗೆ ಎಸ್.ಹೆಚ್.ಓ. ಬೇಟಗೇರಿ ಪೊಲೀಸ್ ಠಾಣೆಯಿಂದ ಒಂದು ನಿಸ್ತಂತು ಸಂದೇಶ ಸ್ವೀಕೃತಗೊಂಡಿದ್ದು ಅದರಲ್ಲಿ ಸದರ ಪ್ರಕರಣದಲ್ಲಿ ಗಾಯಗೊಂಡ ಗಾಯಾಳು ಶಶಿಕುಮಾರ ತಂದೆ ರಾಮಣ್ಣ ಮ್ಮಿಗುಡದ : ಟ್ರ್ಯಾಕ್ಸ ನಂ: ಕೆಎ-37/9643  ನೇದ್ದರ ಕ್ಲೀನರ ಸಾ: ಯಲಬುರ್ಗಾ ಈತನಿಗೆ ಚಿಕಿತ್ಸೆಗಾಗಿ ಜರ್ಮನ ಆಸ್ಪತ್ರೆಗೆ ದಾಖಲಾಗಿದ್ದು, ಉಪಚಾರ ಫಲಿಸದೇ ಮೃತ ಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ನಮೂದಿಸಿದ್ದು ಇರುತ್ತದೆ. ಸದ್ರಿ ಎಮ್.ಎಲ್.ಸಿ. ಆಧಾರದ ಮೇಲಿಂದ ಸದರ ಪ್ರಕರಣದ ಕಲಂ: 279, 337, 338 ಐ.ಪಿ.ಸಿ. ಜೊತೆಗೆ ಕಲಂ: 304 (ಎ) ಐ.ಪಿ.ಸಿ. ನೇದ್ದನ್ನು ಸೇರ್ಪಡೆ ಮಾಡಿಕೊಳ್ಳುವಂತೆ ಮಾನ್ಯ ನ್ಯಾಯಾಲಯಕ್ಕೆ ಯಾದಿ ಮೂಲಕ ವಿನಂತಿಸಿಕೊಂಡಿದ್ದು ಇರುತ್ತದೆ. 
2)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 28/2015 ಕಲಂ.  279, 337, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ 05.02.2015 ರಂದು ಮದ್ಯಾನ 12:30 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಚಿಲಕಮುಖಿ-ಹೊಸೂರು ರಸ್ತೆ ಚಿಲಕಮುಖಿ ಸೀಮಾರ ರಸ್ತೆ ತಿರುವಿನಲ್ಲಿ ಆರೋಪಿತನು ತನ್ನ ಟ್ರ್ಯಾಕ್ಸ ನಂ ಕೆ.ಎ-34/ಎಮ್-5861 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡಗಡೆಗೆ ಇರುವ ತೆಗ್ಗಿನಲ್ಲಿ ತನ್ನ ನಿಯಂತ್ರಣ ತಪ್ಪಿ ಪಲ್ಟಿ ಮಾಡಿದ್ದರಿಂ ಟ್ರ್ಯಾಕ್ಸನಲ್ಲಿದ್ದ 15 ಜನರಿಗೆ ಸಾದಾ ಹಾಗೂ ಭಾರಿಗಾಯವಾಗಿದ್ದು ಇರುತ್ತದೆ. ನಂತರ ಟ್ರ್ಯಾಕ್ಸನ್ನು ಸ್ಥಳದಲ್ಲಿಯೇ ನಿಲ್ಲಿಸಿ ಟ್ರ್ಯಾಕ್ಸ ಚಾಲಕನು ಓಡಿಹೋಗಿದ್ದು ಇರುತ್ತದೆ ಕಾರಣ ಮುಂದಿನ ಕಾನೂನು ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿದ್ದು ಇರುತ್ತದೆ.
3)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 28/2015 ಕಲಂ.  279, 338, 283 ಐ.ಪಿ.ಸಿ:.
ದಿನಾಂಕ  05-02-2015 ರಂದು ರಾತ್ರಿ 7:00 ಗಂಟೆಯ ಸುಮಾರಿಗೆ ಕೊಪ್ಪಳ-ಕುಷ್ಟಗಿ ರಸ್ತೆ ಟಣಕನಕಲ್ ಗ್ರಾಮದ ಹತ್ತಿರ ಆರೋಪಿತನು ತನ್ನ ಮೋಟಾರ ಸೈಕಲ್ ನಂ ಕೆ.ಎ-37/ವಾಯ್ -2190 ನೇದ್ದನ್ನು ಅತಿಜೋರಾಗಿ, ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ರಸ್ತೆಯ ಮದ್ಯದಲ್ಲಿ ನಿಂತಿದ್ದ ಒಂದು ಡ್ರೀಲ್ಲಿಂಗ್ ಮಾಡುವ ಟ್ರ್ಯಾಕ್ಟರ ಇಂಜೆನ್ನಿನ ಹಿಂದುಗಡೆಗೆ ಜೋರಾಗಿ ಟಕ್ಕರಕೊಟ್ಟು ಮೋ.ಸೈ ಮೇಲಿಂದ ರಸ್ತೆಯ ಮೇಲೆ ಬಿದ್ದು  ಭಾರಿಗಾಯಹೊಂದಿದ್ದು ಇರುತ್ತದೆ. ಮತ್ತು ಇನ್ನೊಬ್ಬ ಆರೋಪಿ ಚಾಲಕನು ತನ್ನ ಟ್ರ್ಯಾಕ್ಟರ ನಂಬರ  ಕೆ.ಎ-35/ಟಿ-5046 ನೇದ್ದನ್ನು ರಸ್ತೆಯ ಮದ್ಯದಲ್ಲಿ ನಿಲ್ಲಿಸಿ ಸಂಚಾರ ಸುರಕ್ಷತೆಯ ಬಗ್ಗೆ ಯಾವುದೇ ಸೂಚನೆಯನ್ನು ಅಳವಡಿಸದೇ ಮತ್ತು ಇಂಡಿಕೇಟರಗಳನ್ನು ಹಾಕದೇ ಮತ್ತು ಯಾವುದೇ ಸುರಕ್ಷತೆಯನ್ನು ತೆಗೆದುಕೊಳ್ಳದೇ ನಿಲ್ಲಿಸಿ ಹೋಗಿದ್ದು ಇರುತ್ತದೆ. ಕಾರಣ ಇಬ್ಬರೂ ವಾಹನಗಳ ಚಾಲಕರುಗಳ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶ ಇರುತ್ತದೆ.
4) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 28/2015 ಕಲಂ. 279, 337 ಐ.ಪಿ.ಸಿ:.

ದಿನಾಂಕ:- 05-02-2015 ರಂದು ಸಂಜೆ 7:00 ಗಂಟೆಗೆ ಗಂಗಾವತಿ ಉಪವಿಭಾಗ ಆಸ್ಪತ್ರೆಯಿಂದ ಎಂ.ಎಲ್.ಸಿ. ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀ ಮಲ್ಲಿಕಾರ್ಜುನ ತಂದೆ ಚನ್ನಪ್ಪ, ವಯಸ್ಸು 23 ವರ್ಷ, ಜಾತಿ: ಲಿಂಗಾಯತ ಉ: ಆಟೋ ಚಾಲಕ ಸಾ: ಚಿಕ್ಕಜಂತಕಲ್ ತಾ: ಗಂಗಾವತಿ ಇವರ ನುಡಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. "ನಾನು ಚಿಕ್ಕಜಂತಕಲ್ ಗ್ರಾಮದ ನಿವಾಸಿ ಇದ್ದು, ಮೂರು ಗಾಲಿಯ ಮಹೀಂದ್ರ ಕಂಪನಿಯ ಅಲ್ಫಾ ಪ್ಯಾಸೆಂಜರ್ ಅಟೋ ನಂಬರ್ ಕೆ.ಎ-35/ಎ-7854 ನೇದ್ದರ ಚಾಲಕ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ. ಇಂದು ದಿನಾಂಕ:-05-02-2015 ರಂದು ಸಾಯಂಕಾಲ ನನ್ನ ಅಟೋ ತಗೆದುಕೊಂಡು ಗಂಗಾವತಿಯಿಂದ ಶ್ರೀರಾಮನಗರಕ್ಕೆ ಪ್ರಗತಿನಗರದಲ್ಲಿ ಇಬ್ಬರೂ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿರುವಾಗ ಸಾಯಂಕಾಲ 5:00 ಗಂಟೆಯ ಸುಮಾರಿಗೆ ಶ್ರೀರಾಮನಗರದ ಹತ್ತಿರ ಗಂಗಾವತಿ-ಸಿಂಧನೂರ ಮುಖ್ಯ ರಸ್ತೆಯಲ್ಲಿ ಸಿಂಧನೂರ ಕಡೆಯಿಂದ ಬಂದ ಒಬ್ಬ ಇನೊವಾ ಕಾರ್ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ತನ್ನ ಎಡಗಡೆ ಬರದೇ ಬಲಗಡೆ ಬಂದು ನನ್ನ ಅಟೋಕ್ಕೆ ಟಕ್ಕರು ಕೊಟ್ಟು ಅಪಘಾತ ಮಾಡಿದನು. ಇದರಿಂದಾಗಿ ನನ್ನ ಅಟೋ ಡ್ಯಾಮೇಜ ಆಗಿ ರಸ್ತೆಯ ಬದಿಯಲ್ಲಿ ತಿರುಗಿ ನಿಂತಿದ್ದು ಇದರಿಂದಾಗಿ ನನಗೆ ಬಲಗಾಲು ಮೊಣಕಾಲಿಗೆ ಒಳಪೆಟ್ಟಾಗಿದ್ದು ಅಟೋದಲ್ಲಿದ್ದ ಪ್ರಯಾಣಿಕರನ್ನು ವಿಚಾರಿಸಲು ಒಬ್ಬರ ಹೆಸರು ಟಿ. ವೀರಯ್ಯಶೆಟ್ಟಿ ತಂದೆ ಗೋವಿಂದಯ್ಯಶೆಟ್ಟಿ ವಯಸ್ಸು: 60 ವರ್ಷ ಸಾ: ಪ್ರಗತಿನಗರ ಇದ್ದು ಅವರಿಗೆ ಎಡಗಾಲು ತೊಡೆಗೆ ರಕ್ತ ಗಾಯವಾಗಿ ಎಡಗಾಲು ಮೊಣಕಾಲು ಕೆಳಗೆ ಒಳಪೆಟ್ಟಾಗಿದ್ದು ಇನ್ನೊಬ್ಬನ ಹೆಸರು ವಿಚಾರಿಸಲು ಒಡಿಕೆಪ್ಪ ತಂದೆ ದುರುಗಪ್ಪ ವಡಗೇರ, ವಯಸ್ಸು: 14 ವರ್ಷ ಸಾ: ಪ್ರಗತಿನಗರ ಅಂತಾ ಇದ್ದು ಅವನಿಗೆ ಬಲಭುಜಕ್ಕೆ ಒಳಪೆಟ್ಟಾಗಿ ಎಡಗೈ ಹತ್ತಿರ ಗಾಯವಾಗಿದ್ದು ಇತ್ತು. ನಂತರ ನಮ್ಮ ಆಟೋಕ್ಕೆ ಟಕ್ಕರು ಕೊಟ್ಟ ಇನೋವಾ ಕಾರ್ ನಂಬರ್ ನೋಡಲಾಗಿ ಕೆ.ಎ-04/ಎಂಜೆ-4581 ಅಂತಾ ಇದ್ದು ಅದರ ಚಾಲಕನನ್ನು ವಿಚಾರಿಸಲು ರಾಜಾಸಾಬ ತಂದೆ ಮಲಿಕಸಾಬ ನಧಾಪ್ 26 ವರ್ಷ ಸಾ: ಎಡಹಳ್ಳಿ ತಾ: ಬಾಗಲಕೋಟೆ ಅಂತಾ ತಿಳಿಸಿದನು. ಕೂಡಲೇ ಯಾರೋ 108 ವಾಹನಕ್ಕೆ ಪೋನ್ ಮಾಡಿದ್ದು ವಾಹನ ಬಂದ ನಂತರ ಅದರಲ್ಲಿ ಚಿಕಿತ್ಸೆ ಕುರಿತು ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ಕಾರಣ ಈ ಅಪಘಾತಕ್ಕೆ ಕಾರಣನಾದ ಇನೋವಾ ಕಾರ್ ನಂಬರ್ ಕೆ.ಎ-04/ಎಂಜೆ-4581 ನೇದ್ದರ ಚಾಲಕ ರಾಜಾಸಾಬ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ" ಅಂತಾ ನೀಡಿದ ಹೇಳಿಕೆಯನ್ನು ಪಡೆದುಕೊಂಡು ವಾಪಸ್ ರಾತ್ರಿ 8:00 ಗಂಟೆಗೆ ಠಾಣೆಗೆ ಬಂದು ಹೇಳಿಕೆ ಸಾರಾಂಶದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಗುನ್ನೆ ನಂ: 28/2015 ಕಲಂ 279, 337 ಐ.ಪಿ.ಸಿ. ಅಡಿ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.

0 comments:

 
Will Smith Visitors
Since 01/02/2008