ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ
ನಂ. 18/2015 ಕಲಂ. 279, 337 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ. 10-03-2015 ರಾತ್ರಿ 8-30 ಗಂಟೆಗೆ ಠಾಣೆಯ ದೇವಪ್ಪ ಸಿ.ಹೆಚ್.ಸಿ 86 ರವರು ಹುಬ್ಬಳ್ಳಿ ಕಿಮ್ಸ ಸ್ಪತ್ರೆಯಿಂದ ಠಾಣೆಗೆ ಬಂದು ಹೇಳಿಕೆ ಫಿರ್ಯಾದಿಯನ್ನು ಹಾಜರಪಡಿಸಿದ್ದು ಸದರಿ ಹೇಳಿಕೆ ಫಿರ್ಯಾದಿಯ ಸಾರಾಂಶ ವೆನೆಂದರೆ
ನಿನ್ನೆ ದಿನಾಂಕ. 09-03-2015 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿ ಕೆಲಸದ ನಿಮಿತ್ಯ ಡಿ.ಸಿ ಆಫೀಸಗೆ ಹೊಗಲು ತನ್ನ
ಸೈಕಲ್ ತುಳಿದುಕೊಂಡು ಕೊಪ್ಪಳ ನಗರದ ಹೂವಿನಾಳ
ರಸ್ತೆಯ ಮೇಲೆ ಅಮೃತೇಶ್ವರ ದೇವಸ್ಥಾನದ ಸಮೀಪ ಕೊಪ್ಪಳದ ಕಡೆಗೆ ಹೊಗುತ್ತಿರುವಾಗ, ಹಿಂದಿನಿಂದ ಒಬ್ಬ ಮೋಟಾರ್ ಸೈಕಲ್ ಸವಾರನು ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ
ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಠಕ್ಕರಮಾಡಿ
ಅಪಘಾಥಮಾಡಿದ್ದರಿಂದ ಫಿರ್ಯಾದಿಗೆ ಬಲಕಾಲ ಚಪ್ಪಿಗೆ ಮತ್ತು ಬಲಗಡೆ ಸೊಂಟಕ್ಕೆ ಒಳಪೆಟ್ಟು ಬಿದ್ದಿರುತ್ತದೆ ಮತ್ತು ಅಪಘಾತಮಾಡಿದ ಮೋಟಾರ್ ಸೈಕಲ್
ಸವಾರನು ಮೋಟಾರ್ ಸೈಕಲ್ ವಾಹನವನ್ನು ನಿಲ್ಲಿಸದೇ ಹಾಗೇ ಹೊರಟು ಹೊಗಿರುತ್ತಾನೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 18/2015 ಕಲಂ. 279, 337 ಐ.ಪಿ.ಸಿ ರೆ/ವಿ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣವನ್ನು ದಾಖಲುಮಾಡಿಕೊಂಡು
ತನಿಖೆಯನ್ನು ಕೈಕೊಂಡೆನು.
2) ಗಂಗಾತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 54/2015 ಕಲಂ. 353, 504
ಐ.ಪಿ.ಸಿ:.
ದಿನಾಂಕ:- 10-03-2015 ರಂದು ರಾತ್ರಿ 8:15 ಗಂಟೆಗೆ ಫಿರ್ಯಾದಿದಾರ ಶ್ರೀ ಹನುಮಂತಪ್ಪ, ಕಂದಾಯ ನಿರೀಕ್ಷಕರು, ಮರಳಿ ಇವರ ಪತ್ನಿಯಾದ ಶ್ರೀಮತಿ ಕೆ. ಕಾವೇರಮ್ಮ ಗಂಡ ಹನುಮಂತಪ್ಪ ಸಾ: ಮರಳಿ ತಾ: ಗಂಗಾವತಿ
ಇವರ ಮುಖಾಂತರ ಗಣಕೀಕರಣ ಮಾಡಿಸಿದ ದೂರನ್ನು ಠಾಣೆಗೆ ಕಳುಹಿಸಿಕೊಟ್ಟಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ:- 10-03-2015 ರಂದು ಬೆಳಿಗ್ಗೆ 10:30 ಗಂಟೆಯ ಸುಮಾರಿಗೆ ನಾನು ಹೇರೂರು ಗ್ರಾಮದಲ್ಲಿ ಶ್ರೀಮತಿ ಲಿಂಗಮ್ಮ ಗಂಡ
ಬಸವರಡ್ಡೆಪ್ಪ ಸಾ: ಹೇರೂರು ಇವರಲ್ಲಿ ಮರಕುಂಬಿ ಗ್ರಾಮದ ಸರ್ವೆ ನಂ: 339/1 33/1/1 ಈ ಜಮೀನುಗಳ ವರ್ಗಾವಣೆಯ ಪ್ರಕ್ರೀಯೆಗೆ ನಿರಾಕ್ಷೇಪಣೆಯನ್ನು ಪಡೆಯಲು ಹೋಗಿರುವ ಸಮಯದಲ್ಲಿ
ಶರಣೇಗೌಡ ತಂದೆ ವಿರುಪಾಕ್ಷಗೌಡ ಎಂಬ ವ್ಯಕ್ತಿಯು ಸರ್ವೆ ನಂ: 33/1/1 ನೇದ್ದನ್ನು ಮೊದಲು ವರ್ಗಾವಣೆ ಮಾಡಬೇಕು ಎಂಬ ಕಾರಣಕ್ಕಾಗಿ ನನ್ನೊಂದಿಗೆ ಬಹಳ ಅನಾಗರಿಕವಾಗಿ
ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿ, ಲಂಚವನ್ನು ನೀಡುತ್ತಾರೆ
ಅದಕ್ಕಾಗಿ ನೀನು ಒತ್ತಾಯಿಸುತ್ತೀಯಾ ಎಂದು ನನ್ನ ಮೇಲೆ ಒಬ್ಬ ರೌಡಿಯಂತೆ ಎರಗಿ ಕೈಗಳಿಂದ ನನ್ನ
ಮೇಲೆ ಬಲ ಪ್ರಯೋಗ ಮಾಡಿ ಬಡಿದು ಕಾಲಿಂದ ಒದ್ದು ಸರಕಾರಿ ಕೆಲಸಕ್ಕೆ ಅಡ್ಡಿ ಮಾಡಿರುತ್ತಾನೆ. ಕಾರಣ
ಶರಣೇಗೌಡನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ಮುಂತಾಗಿ ಇದ್ದ ದೂರಿನ
ಸಾರಾಂಶದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 54/2015 ಕಲಂ 353,
504 ಐ.ಪಿ.ಸಿ. ಅಡಿ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
0 comments:
Post a Comment