Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, March 27, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 70/2015 ಕಲಂ. 78(3) Karnataka Police Act:.
 ದಿನಾಂಕ: 26-03-2015 ರಂದು ರಾತ್ರಿ 8:00 ಗಂಟೆಗೆ ಮಾನ್ಯ ಶ್ರೀ ಹನುಮರಡ್ಡೆಪ್ಪ, ಪಿ.ಎಸ್.ಐ.ಗಂಗಾವತಿ ಗ್ರಾಮೀಣ ಠಾಣೆ ರವರು ಠಾಣೆಗೆ ಹಾಜರಾಗಿ ಮೂಲ ಪಂಚನಾಮೆಯೊಂದಿಗೆ ವರದಿಯನ್ನು ಲಗತ್ತು ಮಾಡಿ ಆರೋಪಿ ಹಾಗೂ ಮುದ್ದೆಮಾಲನ್ನು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ.  ಇಂದು ದಿನಾಂಕ:- 26-03-2015 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ದಾಸನಾಳ ಗ್ರಾಮದ ಕಸ್ತೂರಬಾ ಶಾಲೆಗೆ ಹೋಗುವ ಕ್ರಾಸ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಪಿ.ಸಿ. 378, 129, 160, 323 ಎ.ಪಿ.ಸಿ. 77 ಇವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಮಾನ್ಯ ಡಿ.ಎಸ್.ಪಿ.ಸಾಹೇಬರು ಹಾಗೂ ಸಿ.ಪಿಐ. ಗಂಗಾವತಿ (ಗ್ರಾ) ವೃತ್ತರವರ ಮಾರ್ಗದರ್ಶನದಂತೆ ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ನೇದ್ದರಲ್ಲಿ ಠಾಣೆಯಿಂದ ಸಂಜೆ 6:00 ಗಂಟೆಗೆ ಹೊರಟು ದಾಸನಾಳ ಗ್ರಾಮದ ಊರ ಮುಂದೆ ಜೀಪನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ಅಲ್ಲಿ ಒಂದು ಕ್ರಾಸಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ಕುಳಿತುಕೊಂಡು ಜನರಿಗೆ 1 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ, ಅದೃಷ್ಟದ ಮಟಕಾ ನಂಬರಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು ಅವರಿಂದ ಹಣವನ್ನು ಪಡೆದು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ಸಮಯ ಸಂಜೆ 6:30 ಗಂಟೆಯಾಗಿದ್ದು ಕೂಡಲೇ ಅವರ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕಿಬಿದ್ದವನನ್ನು ವಿಚಾರಿಸಲಾಗಿ ತನ್ನ ಹೆಸರು  ಜಿಲಾನಿ ತಂದೆ ಮಹ್ಮದ್ ಖಾನ್, ವಯಸ್ಸು 55 ವರ್ಷ, ಜಾತಿ: ಮುಸ್ಲೀಂ ಉ: ಕೂಲಿ ಕೆಲಸ ಸಾ: ದಾಸನಾಳ ತಾ: ಗಂಗಾವತಿ ಅಂತಾ ತಿಳಿಸಿದ್ದು, ಪರಿಶೀಲಿಸಲಾಗಿ ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 560/- ರೂಪಾಯಿಗಳು, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆಯಿತು. ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ಅಂತಾ ವಿಚಾರಿಸಲು ಮಟಕಾ ಪಟ್ಟಿಯನ್ನು ಯಾರಿಗೂ ಕೊಡುವುದಿಲ್ಲಾ ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದನು. ಈ ಬಗ್ಗೆ ರಾತ್ರಿ 6:30 ರಿಂದ 7:30 ಗಂಟೆಯವರೆಗೆ ಸ್ಥಳದಲ್ಲಿಯೇ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತನೊಂದಿಗೆ ಠಾಣೆಗೆ ವಾಪಸ್ ಬಂದಿದ್ದು, ಸದರಿ ಆರೋಪಿತನ ವಿರುದ್ಧ ಕಲಂ 78(iii) ಕೆ.ಪಿ. ಆ್ಯಕ್ಟ್ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದು, ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ದೂರಿನ ಸಾರಾಂಶದ ಮೇಲಿಂದ ರಾತ್ರಿ 8:30 ಗಂಟೆಗೆ ಠಾಣೆ ಗುನ್ನೆ ನಂ: 70/2015 ಕಲಂ: 78 (iii) ಕೆ.ಪಿ. ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಳ್ಳಲಾಯಿತು.
2) ಕೊಪ್ಪಳ ಪೊಲೀಸ್ ಠಾಣೆ ಗುನ್ನೆ ನಂ. 61/2015 ಕಲಂ. 78(3) Karnataka Police Act:.
¢£ÁAPÀ: 26-03-2015 gÀAzÀÄ gÁwæ 8:15 UÀAmÉUÉ PÉÆ¥Àà¼À UÁæ«ÄÃt ¥Éưøï oÁuÁ ªÁå¦ÛAiÀÄ, ¯ÁZÀ£ÀPÉÃj UÁæªÀÄzÀ §¸À ¤¯ÁÝtzÀ ºÀwÛgÀ ¸ÁªÀðd¤PÀ ¸ÀܼÀzÀ°è DgÉÆævÀgÀÄ §gÀ ºÉÆÃUÀĪÀ ¸ÁªÀðd¤ÃPÀjUÉ ¤ÃªÀÅ §gɬĹzÀ £À²§zÀ £ÀA§gÀ ºÀwÛzÀ°è 1 gÀÆ¥Á¬ÄUÉ 80 gÀÆ¥Á¬ÄUÀ¼À£ÀÄß PÉÆqÀÄvÉÛÃ£É CAvÁ PÀÆUÀÄvÁÛ ªÀÄlPÁ £À²§zÀ dÆeÁlzÀ°è vÉÆqÀVzÁÝUÀ ²æÃ. ¦.©. ¤Ã®UÁgÀ ¦.J¸ï.L ºÁUÀÆ ¹§âA¢UÀ¼ÀÄ zÁ½ ªÀiÁr DgÉÆævÀjAzÀ £ÀUÀzÀÄ ºÀt gÀÆ 1050=00 gÀÆ, MAzÀÄ ªÀÄlPÁ £ÀA§gÀ §gÉzÀ aÃn, MAzÀÄ ¨Á¯ï ¥É£ï EªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ §AzÀÄ ¤ÃrzÀ ªÀgÀ¢ ¸ÁgÀA±ÀzÀ ªÉÄðAzÀ ¥ÀæPÀgÀt zÁR°¹PÉÆAqÀÄ vÀ¤SÉÉAiÀÄ£ÀÄß PÉÊ UÉÆArzÀÄÝ EgÀÄvÀÛzÉ.
3) ಕುಷ್ಟಗಿ ಪೊಲೀಸ್ ಠಾಣಾ ಗುನ್ನೆ ನಂ. 35/2015  ಕಲಂ 279, 337, 338, 304(ಎ) ಐ.ಪಿ.ಸಿ:.
ದಿನಾಂಕ 26-03-2015 ರಂದು ರಾತ್ರಿ 9-15 ಗಂಟೆಗೆ ಪಿರ್ಯಾದಿದಾರರಾದ ನಾಗಪ್ಪ ತಂದೆ ನಿಂಗನಗೌಡ ಮರಿಸಿದ್ದಣ್ಣನವರ ವಯ: 45 ಜಾ: ಲಿಂಗಾಯತ ಉ: ಒಕ್ಕಲತನ ಸಾ: ಹಿರೇಬನ್ನಿಗೋಳ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ನುಡಿ ಹೇಳಿಕೆ ಪಿರ್ಯಾದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ  ಈ ದಿನ ಮದ್ಯಾಹ್ನ 3-30 ಗಂಟೆಗೆ ಹಿರೇಬನ್ನಿಗೋಳ - ಹಿರೇಬನ್ನಿಗೋಳ ಕ್ರಾಸ್ ರಸ್ತೆಯಲ್ಲಿ ಹಿರೇಬನ್ನಿಗೋಳ ಗ್ರಾಮದಿಂದ 1 ಕೀ.ಮೀ ದೂರದಲ್ಲಿ ನಮೂದಿತ ಆರೋಪಿತರಾದ ಮಲ್ಲಿಕಾರ್ಜುನ ಈತನು ತನ್ನ ಮೋ.ಸೈ ನಂ GA 07/B 6297  ನೇದ್ದನ್ನು ಹಿರೇಬನ್ನಿಗೋಳದಿಂದ ಅತಿವೇಗವಾಗಿ ಅಲಕ್ಷತನದಿಂದ ನಡೆಯಿಸಿಕೊಂಡು ಬಂದಿದ್ದು ಅದೇ ರೀತಿ ಆರೋಪಿ ಶರಣಪ್ಪ ಈತನು  ತನ್ನ ಮೋ.ಸೈ ನಂ KA 37/R 9552  ನೇದ್ದರ ಹಿಂದೆ ದೊಡ್ಡಪ್ಪ ಈತನನ್ನು ಕೂಡಿಸಿಕೊಂಡು  ಹಿರೇಬನ್ನಿಗೋಳ ಕ್ರಾಸದಿಂದ ಅತಿವೇಗವಾಗಿ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಒಬ್ಬರಿಗೊಬ್ಬರು ಟಕ್ಕರ ಕೊಟ್ಟು ಅಪಘಾತ ಪಡಿಸಿಕೊಂಡು ತೀವ್ರಸ್ವರೂಪದ ಗಾಯಗಳನ್ನುಂಟು ಮಾಡಿಕೊಂಡಿದ್ದು ನಂತರ ಸದರಿ ಮೂರು ಜನರನ್ನು 108 ಅಂಬುಲೆನ್ಸಿನಲ್ಲಿ ನೇರವಾಗಿ ಇಲಕಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿ ಆರೋಪಿ ಶರಣಪ್ಪ ಮತ್ತು ಆತನ ಹಿಂದೆ ಕುಳೀತ ದೊಡ್ಡಪ್ಪ ಇವರಿಗೆ ಇಲಾಜು ಕುರಿತು ಸೇರಿಕೆ ಮಾಡಿ ವೈದ್ಯರು ಆರೋಪಿ ಮಲ್ಲಿಕಾರ್ಜುನ ಈತನಿಗೆ ಭಾರಿಗಾಯವಾಗಿದೆ ಬಾಗಲಕೋಟೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಅದೇ ವಾಹನದಲ್ಲಿ ಅಲ್ಲಿಗೆ ಹೋಗುತ್ತಿದ್ದಾಗ ಬಾಗಲಕೋಟೆಯ ಸಮೀಪ ಸಂಜೆ 6-15 ಗಂಟೆಗೆ ಮಲ್ಲಿಕಾರ್ಜುನ ಈತನು ತನಗಾದ ಗಾಯದ ಬಾದೆಯಿಂದ  ಮೃತಪಟ್ಟಿದ್ದು ನಂತರ ಮಲ್ಲಿಕಾರ್ಜುನ ಈತನ ಶವವನ್ನು ಬೇರೆ ವಾಹನದಲ್ಲಿ ಹಾಕಿಕೊಂಡು ಬಂದು ಸರಕಾರಿ ಆಸ್ಪತ್ರೆ ಕುಷ್ಟಗಿಗೆ ತಂದಿದ್ದು ಅಂತಾ ವಗೈರೆ ಪಿರ್ಯಾದಿ ಮೇಲಿಂದ ಠಾಣಾ ಗುನ್ನೆ ನಂ 35/2015 ಕಲಂ 279,337,338,304[ಎ] ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.  
4) ಹನುಮಸಾಗರ ಪೊಲೀಸ್ ಠಾಣಾ ಗುನ್ನೆ ನಂ. 15/2015  ಕಲಂ 279, 337, 338 ಐ.ಪಿ.ಸಿ:.
ದಿನಾಂಕ: 26-03-2015 ರಂದು ಮದ್ಯಾಹ್ನ 13-30 ಗಂಟೆಯ ಸುಮಾರು ಫಿರ್ಯಾದಿದಾರರಾದ ಅಮೀನಸಾಬ ತಂದೆ ಬುಡ್ನೆಸಾಬ ಬಾಗವಾನ ಸಾ: ನಿಲೋಗಲ್ ರವರು ಠಾಣೆಗೆ ಹಾಜರಾಗಿ ಒಂದು ನುಡಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ನಿನ್ನೆ ದಿವಸ ದಿನಾಂಕ: 25-03-2015 ರಂದು ಬೆಳಿಗ್ಗೆ 08-30 ಗಂಟೆಗೆ ಗುಡೂರಿಗೆ ಕೂಲಿಕೆಲಸಕ್ಕೆ ಹೋಗಿದ್ದು ಇರುತ್ತದೆ. ನಾವು ವಾಪಸ್ ನಮ್ಮೂರಿಗೆ ಕೆಲಸ ಮುಗಿಸಿಕೊಂಡು ಮದ್ಯಾಹ್ನ 12-20 ಕ್ಕೆ ವಾಪಸ್ ಬರಲು ನಮ್ಮೂರ ಭಗೀರಥ ಸಮುದಾಯ ಭವನದ ಮುಂದೆ ಜನ ಸೇರಿದ್ದು ಹೋಗಿ ನೋಡಲು ಅತಘಾತವಾಗಿದ್ದು ಅಲ್ಲಿ ನಮ್ಮ ಮಗನಾದ ಫಯಾಜ್ ಅಹಮದ ಈತನಿಗೆ ನೀರು ಹಾಕಿ ನಮ್ಮೂರ ಖಾಜೇಸಾಬ ತಂದೆ ಗುಡಸಾಬ ಬಾಗವಾನ ಈತನು ಹೆಗಲ ಮೇಲೆ ಹೊತ್ತುಕೊಂಡು ಅಲ್ಲಿ ಖಾಸಗಿಯಾಗಿ ಇರುವ ಆಸ್ಪತ್ರೆಗೆ ಹೊರಟಿದ್ದು ಗಾಬರಿಯಾಗಿ ಏನು ಅಂತಾ ವಿಚಾರಿಸಲು ಅಲ್ಲೆ ಇದ್ದ ನಮ್ಮ ಸಂಬಂದಿಕನಾದ ಮಹೆಬುಬ ತಂದೆ ಬಾಷುಸಾಬ ಮೂಲಿಮನಿ ಈತನು ಹೇಳಿದ್ದೇನೆಂದರೆ, ದಿನಾಂಕ:25-03-2015 ಮದ್ಯಾಹ್ನ 12-15 ಗಂಟೆಯ ಸುಮಾರಿಗೆ ನಿಮ್ಮ ಮಗನಾದ ಫಯಾಜಅಹಮದ ಶಾಲೆಯಿಂದ ವಾಪಸ್ ಮನೆಗೆ ಬರುವಾಗ ಜಾಳಿಹಾಳ ಕಡೆಯಿಂದ ಗುಡೂರಿಗೆ ಕಡೆಗೆ ಅತೀ ವೇಗ ಹಾಗೂ ಆಲಕ್ಷತನದಿಂದ ಬುಲೇರೋ ಮ್ಯಾಕ್ಸ್ ಪಿಕಅಪ್ ವಾಹನ ಚಾಲಕನು ತನ್ನ ವಾಹನವನ್ನು ನಡೆಸಿಕೊಂಡು ರೋಡಿನ ಬಾಜು ಹೊರಟ ಫಯಾಜಅಹಮದನಿಗೆ ಹಿಂದಿನಿಂದ ಟಕ್ಕರ ಕೊಟ್ಟು ಅಪಘಾತಪಡಿಸಿದ್ದು ಆಗ ನಾನು ಹಾಗೂ ಜನರು ಸೇರಿ ನೀರು ಹಾಕಿದ್ದು ಆತನ ಎಡಗಾಲು ಹಿಂಬಡದ ಮೇಲೆ ಮುರಿದು ಪಾದಕ್ಕೆ ಭಾರಿ ರಕ್ತಗಾಯವಾಗಿರುತ್ತದೆ. ನಂತರ ನಾನು ಅಪಘಾತಪಡಿಸಿದ ಬುಲೆರೋ ಮ್ಯಾಕ್ಸ್ ಪಿಕಅಪ್ ವಾಹನವನ್ನು ನೋಡಲು ಅದರ ನಂ: ಕೆ.ಎ-29-ಎ-4165 ಅಂತಾ ಇದ್ದು ಚಾಲಕನ ಹೆಸರು ವಿಚಾರಿಸಲು ಅಮೀನಸಾಬ ತಂದೆ ಅಟೆಲಸಾಬ ಬಾಗೇವಾಡಿ ಸಾ: ಅಮೀನಗಡ ಅಂತಾ ತಿಳಿಸಿದನು ನಂತರ ನಾನು ನಮ್ಮ ತಮ್ಮ ಹಾಗೂ ನಮ್ಮ ಸೊಸೆ ದಿಲ್ಷಾನಬಿ ರವರು ಕೂಡಿ ಹುಡುಗನನ್ನು ಬಾಗಲಕೋಡ ಕಟ್ಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿ ನಾನು ಊರಿಗೆ ವಾಪಸ್ ಬಂದು ಸಂಬಂದಿಕರನ್ನು ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಫಿರ್ಯಾದಿ ಅರ್ಜಿಯನ್ನು ಸಲ್ಲಿಸಿದ್ದು ಇರುತ್ತದೆ.   
5) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 69/2015  ಕಲಂ 279, 337, 338 ಐ.ಪಿ.ಸಿ:.
ದಿನಾಂಕ:- 26-03-2015 ರಂದು ಮಧ್ಯಾಹ್ನ 3:00 ಗಂಟೆಗೆ ಫಿರ್ಯಾದಿ ವೀರೇಶ ತಂದೆ ಸಿದ್ದಲಿಂಗಪ್ಪ ನಡುವಲಮನಿ, 19 ವರ್ಷ, ಸಾ: ಕುಂಟೋಜಿ ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ಕುಂಟೋಜಿ ಗ್ರಾಮದ ನಿವಾಸಿ ಇದ್ದು, ಮೇಸನ್ ಮಾಡಿಕೊಂಡಿರುತ್ತೇನೆ. ಇಂದು ದಿನಾಂಕ: 26-03-2015 ರಂದು ಬೆಳಿಗ್ಗೆ ನಾನು ಮತ್ತು ನಮ್ಮ ಸಂಬಂಧಿಕ ಸಿದ್ದಲಿಂಗಪ್ಪ ತಂದೆ ಈರಣ್ಣ ಕೊಟ್ನೆಕಲ್, 20 ವರ್ಷ ಇಬ್ಬರೂ ಕೂಡಿ ನಮ್ಮ ಸ್ವಂತ ಕೆಲಸದ ನಿಮಿತ್ಯ ಗಂಗಾವತಿಗೆ ಬರಲು ಮೊದಲು ಕುಂಟೋಜಿಯಿಂದ ಶ್ರೀರಾಮನಗರಕ್ಕೆ ಬಂದಿದ್ದು, ಬಸ್ಗಾಗಿ ಕಾಯುತ್ತಿರುವಾಗ ಒಂದು  ಪ್ಯಾಸೆಂಜರ್ ಅಪೆ ಅಟೋ ನಂಬರ್: ಕೆ.ಎ-37/ 8147 ನೇದ್ದು ಬಂದಿದ್ದು, ಅದರಲ್ಲಿ ನಾವು ಹತ್ತಿದೆವು. ನಮ್ಮಂತೆ ಆಟೋದಲ್ಲಿ ಇನ್ನೂ 3 ಜನ ಪ್ರಯಾಣಿಕರು ಹತ್ತಿದರು. ನಾವು ಮಧ್ಯಾಹ್ನ 12:00 ಗಂಟೆಯ ಸುಮಾರಿಗೆ ಶ್ರೀರಾಮನಗರದಿಂದ ಹೊರಟೆವು. ನಾವು ಗಂಗಾವತಿ-ಸಿಂಧನೂರ ಮುಖ್ಯ ರಸ್ತೆಯಲ್ಲಿ ಶ್ರೀರಾಮನಗರ ಸೀಮಾದಲ್ಲಿ ಮಧ್ಯಾಹ್ನ 12:15 ಗಂಟೆಯ ಸುಮಾರಿಗೆ ರಸ್ತೆಯಲ್ಲಿ ಎಡಗಡೆ ನಿಧಾನವಾಗಿ ಬರುತ್ತಿರುವಾಗ ನಮ್ಮ ಎದುರುಗಡೆ ಗಂಗಾವತಿ ಕಡೆಯಿಂದ ಒಂದು ಮಹೇಂದ್ರ ಅಲ್ಪಾ ಗೂಡ್ಸ್ ವಾಹನ ಚಾಲಕನು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಒಮ್ಮೆಲೇ ನಾವು ಹೊರಟಿದ್ದ ಪ್ಯಾಸೆಂಜರ್ ಆಟೋಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು. ಇದರಿಂದ ನಮ್ಮ ಆಟೋ ರಸ್ತೆಯ ಬಾಜು ಬಲಗಡೆ ಹೋಗಿ ಪಲ್ಟಿಯಾಗಿದ್ದು ಇರುತ್ತದೆ. ಇದರಿಂದಾಗಿ ನನಗೆ ಎಡಗಣ್ಣಿನ, ಮೂಗಿನ, ಬಲಗೈ ಬೆರಳಿಗೆ ಮತ್ತು ಎಡಗೈ ಮುಂಗೈ ಹತ್ತಿರ ರಕ್ತಗಾಯವಾಗಿದ್ದು ಮತ್ತು ಸಿದ್ದಲಿಂಗಪ್ಪನಿಗೆ ಬಲಗಡೆ ತಲೆಗೆ ಎಡಗೈ ಮತ್ತು ಬಲಗೈಗೆ ರಕ್ತ ಗಾಯಗಳಾದವು. ನಮ್ಮ ಸಂಗಡ ಇದ್ದವರಿಗೆ ಸಹ ಗಾಯಗಳಾಗಿದ್ದು, ವಿಚಾರಿಸಲು ಅವರ ಹೆಸರು 1] ಇಬ್ರಾಹಿಂಸಾಬ ತಂದೆ ರಾಜಸಾಬ 55 ವರ್ಷ ಸಾ: ಪ್ರಗತಿನಗರ ಅಂತಾ ಇದ್ದು ಎಡ ಪಕ್ಕಡಿಗೆ ಹಾಗೂ ಬಲಮೊಣಕಾಲಿಗೆ ತೀವ್ರ ಒಳಪೆಟ್ಟಾಗಿದ್ದು 2] ವಿರುಪಣ್ಣ ತಂದೆ ಸಿದ್ರಾಮಪ್ಪ ಕುಂಬಾರ, 55 ವರ್ಷ ಸಾ: ಪ್ರಗತಿನಗರ ಇವರಿಗೆ ಎಡಬುಜಕ್ಕೆ ಬಲಗೈ ಮುಂಗೈ ಹತ್ತಿರ ಒಳಪೆಟ್ಟಾಗಿದ್ದು 3] ರಮೇಶ ತಂದೆ ಬಸಪ್ಪ ಪೋತನಾಳ, 16 ವರ್ಷ ಸಾ: ಮುಳ್ಳೂರ ತಾ: ಸಿಂಧನೂರ ಅಂತಾ ಇದ್ದು ಬಲಗೈ ಮೊಣಕೈ ಹತ್ತಿರ ಮತ್ತು ಮುಂಗೈ, ಬಲಗಾಲು ಮೊಣಕಾಲು ಹತ್ತಿರ ರಕ್ತಗಾಯವಾಗಿದ್ದು ಇತ್ತು. ನಮ್ಮ ಪ್ಯಾಸೆಂಜರ್ ಆಟೋ ಚಾಲಕನಿಗೆ ವಿಚಾರಿಸಲು ಆತನ ಹೆಸರು ಶಫಿ ತಂದೆ ನಬಿಸಾಬ ವಯಸ್ಸು: 22 ವರ್ಷ ಸಾ: ಗಂಗಾವತಿ ಅಂತಾ ತಿಳಿಸಿದ್ದು, ಆತನಿಗೆ ಸಹ ತಲೆಯ ಎಡಗಡೆ, ಹಣೆಯ ಹತ್ತಿರ ರಕ್ತಗಾಯವಾಗಿ ಎಡ ಕಪಾಳಕ್ಕೆ ತೆರಚಿದ ಗಾಯ, ಸೊಂಟಕ್ಕೆ ಒಳಪೆಟ್ಟಾಗಿದ್ದವು. ಅಪಘಾತ ಮಾಡಿದ ಗೂಡ್ಸ್ ವಾಹನ ನೋಡಲು ಅದರ ನಂಬರ್: ಕೆ.ಎ.-37/ಎ-5369 ಅಂತಾ ಇದ್ದು, ಅದರ ಚಾಲಕನ ಹೆಸರು ವಿಚಾರಿಸಲು ಜಮೀರ ತಂದೆ ನಬಿಸಾಬ ಸಾ: ಕಿಲ್ಲಾ ಏರಿಯಾ ಗಂಗಾವತಿ ಅಂತಾ ತಿಳಿಸಿದನು. ಆತನಿಗೆ ಸಹ ಸಣ್ಣ ಪುಟ್ಟ ಗಾಯಗಳಾಗಿದ್ದವು. ನಂತರ ಎಲ್ಲರೂ ಕೂಡಿ ಚಿಕಿತ್ಸೆ ಕುರಿತು ಗಂಗಾವತಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ನಾನು ಚಿಕಿತ್ಸೆ ಪಡೆದುಕೊಂಡು ಬಂದು ಈಗ ತಡವಾಗಿ ಠಾಣೆಗೆ ಬಂದು ಈ ನನ್ನ ಹೇಳಿಕೆ ಫಿರ್ಯಾದಿಯನ್ನು ಕೊಟ್ಟಿರುತ್ತೇನೆ. ಕಾರಣ  ಈ ಅಪಘಾತಕ್ಕೆ ಕಾರಣನಾದ ಮಹೇಂದ್ರ ಅಲ್ಪಾ ಗೂಡ್ಸ್ ವಾಹನ ನಂ: ಕೆ.ಎ.-37/ಎ-5369 ನೇದ್ದರ ಚಾಲಕ ಜಮೀರ್ ತಂದೆ ನಬಿಸಾಬ ಸಾ: ಕಿಲ್ಲಾ ಏರಿಯಾ ಗಂಗಾವತಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ." ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 69/2015 ಕಲಂ 279, 337, 338 ಐ.ಪಿ.ಸಿ. ಅಡಿ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
6) ಕಾರಟಗಿ ಪೊಲೀಸ್ ಠಾಣಾ ಗುನ್ನೆ ನಂ. 50/2015  ಕಲಂ 279, 337, 338 ಐ.ಪಿ.ಸಿ:.

ದಿನಾಂಕ : 26-03-2015 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತದ ಬಗ್ಗೆ ಎಮ್.ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಬೇಟಿಕೊಟ್ಟು ಅಲ್ಲಿ ಗಾಯಾಳು  ಪರಶುರಾಮ ಇವರಿಗೆ ವಿಚಾರಿಸಿ ಅವರ ಲಿಖಿತ ಫಿರ್ಯಾದಿ ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆನನ್ನ ಅಣ್ಣ ಮಂಜುನಾಥ ಇವರದು ಹೆಚ್.ಎಫ್. ಡಿಲಕ್ಸ ಮೊಟಾರ್ ಸೈಕಲ್ ನಂ : ಕೆ.ಎ-37 / ವೈ- 4236 ನೇದ್ದು ಇದ್ದು ಇದನ್ನು ತೆಗೆದುಕೊಂಡು ನಾನು ಮತ್ತು ನನ್ನ ತಾಯಿ ಗಂಗಮ್ಮ ಬೆನ್ನೂರ ವಯಾ-49 ವಷಱ ಕೂಡಿಕೊಂಡು ಮರ್ಲಾನಹಳ್ಳಿಯ ಪಂಚಾಯತಿಯಲ್ಲಿ  ಕೆಲಸವಿದ್ದರಿಂದ ನಾನು ಹೊಗಿ ಮರ್ಲಾನಹಳ್ಳಿಯ ಪಂಚಾಯತಿ ಮುಂದಗಡ ಕಾರಟಗ- ಗಂಗಾವತಿ ರಸ್ತೆಯ ಬದಿಯಲ್ಲಿ ನುಂತುಕೊಂಡಿದ್ದಾಗ್ಗೆ ಕಾರಟಗಿ ಕಡೆಯಿಂದ ಬ್ಬ ಕಾರ ಚಾಲಕ ತನ್ನ ಕಲಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಮೇಲೆ  ಆಕಡೆ ಈ ಕಡೆ ಓಡಿಸುತ್ತಾ ಬಂದು  ರಸ್ತೆಯ ಪೂರ್ವಬದಿಯಲ್ಲಿ  ನಾವು ನಮ್ಮ ಮೊಟಾರ್ ಸೈಕಲ್ಲ ಮೇಲೆ ನಿಂತುಕೊಂಡಿದ್ದನ್ನು ಸದರ್ ಕಾರ ಚಾಲಕ ನಮ್ಮ ಮೊಟಾರ್ ಸೈಕಕ್ಲಿಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರ ಪರಿಣಾಮವಾಗಿ ನಾವು ನಮ್ಮ  ಮೊಟಾರ್ ಸೈಕಲ್ಲ ಸಮೇತ ಕೆಳಗೆ ಬಿದ್ದಿದ್ದರಿಂದ ನನಗೆ ಮೂಗಿಗೆ  ತಲೆಗೆ ಕಪಾಳಕ್ಕೆ ಹಾಗೂ ಎದೆಗೆ ಹೊಟ್ಟೆಗೆ ರಕ್ತಗಾಯ ಹಾಗೂ ಒಳಪೆಟ್ಟುಗಳಾಗಿದ್ದುನನ್ನ ತಾಯಿ ಗಂಗಮ್ಮ Eಕೆಗೆ ಬಲಗಾಲು ಮೊಣಕಾಲಯು ಕೆಳಗೆ ಎಡಮೊಣಕೈಗೆ ಎರಡೂ ಕಾಲಿನ ಹಿಂಬಡಿಗೆ ರಕ್ತಗಾಯ ಮತ್ತು ಒಳಪೆಟ್ಟಾಗಿದ್ದು, ಹಾಗೂ ಮೂಳೆ ಮುರಿತವಾಗಿದ್ದು ಇರುತ್ತದೆ ಅಪಘಾತಪಡಿಸಿದ ಕಾರ್ ನಂಬರ್ ನೋಡಲು ಕೆ.ಎ- 36 / ಎಮ್- 4075 ಅಂತಾ ಇದ್ದು ಚಾಲಕನ ಬಗ್ಗೆ ವಿಚಾರಿಸಲಾಗಿ ಲಿಂಗಯ್ಯಸ್ವಾಮಿ ತಂದಿ ರೇವಣಸಿದ್ದಯ್ಯಸ್ವಾಮಿ  ಸಾ- ಬಸವೇಶ್ವರ ನಗರ ಕಾರಟಗಿ  ಅಂತಾ ಗೊತ್ತಾಗಿದ್ದು ಇರುತ್ತದೆ. ಈ ಅಪಘಾತವಾದಾಗ್ಗೆ ಸಾಯಂಕಾಲ 4-00 ಗಂಟೆ ಆಗಿತ್ತು.  ಅಪಘಾತವಾದ ನಂತರ ಗಾಯಗೊಂಡ ನಮ್ಮನ್ನು ಚಿಕಿತ್ಸೆಗಾಗಿ  ಮುಕ್ಕಣ್ಣ ಇತನು ಇಲಾಜ ಕುರಿತು 108 ಅಂಬುಲೆನ್ಸದಲ್ಲಿ ಚಿಕಿತ್ಸೆಗಾಗಿ ಕಾರಟಗಿ  ಸರಕಾರಿ ಆಸ್ಪತ್ರೆಗೆ ಬಂದು ದಾಖಲು ಮಾಡಿರುತ್ತಾರೆ. ಈ ಘಟನೆಗೆ ಕಾರಣನಾದ  ಕಾರ ಚಾಲಕ  ಲಿಂಗಯ್ಯಸ್ವಾಮಿ ಇತನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಲಿಖಿತ ಫಿರ್ಯಾದಿಯನ್ನು ಪಡೆದುಕೊಂಡು ವಾಪಾಸ್ ಠಾಣೆಗೆ ಸಾಯಂಕಾಲ 5-30 ಗಂಟೆಗೆ ಬಂದು ಸದರ್ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008