ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 34/2015 ಕಲಂ 78(3) Karnataka Police Act.
ದಿನಾಂಕ: 15-04-2015 ರಂದು ರಾತ್ರಿ 8-10 ಗಂಟೆಗೆ ಹಗೇದಾಳ ಗ್ರಾಮದ 01 ನೇ ಆರೋಪಿತನ ಅಂಗಡಿಯ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ರಸ್ತೆಯ ಮೇಲೆ ಬೀದಿ ದೀಪದ ಬೆಳಕಿನಲ್ಲಿ
ಆರೋಪಿತನು ಜನರಿಗೆ ಒಂದು ರೂಪಾಯಿಗೆ 80 ಅಂತಾ ಕೂಗುತ್ತಾ ಮಟ್ಕಾ
ಜೂಜಾಟದಲ್ಲಿ ತೊಡಗಿದ್ದಾಗ ಸಿಕ್ಕಿಬಿದಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತನ ಅಂಗ ಜಪ್ತಿ ಮಾಡಲಾಗಿ
1] 655-00 ರೂ. ನಗದು ಹಣ, 2] 02 ಮಟ್ಕಾ ಚೀಟಿ ಅಂ.ಕಿ. ಇಲ್ಲ, 3] ಒಂದು ನೋಟಬುಕ್ ಅಂ.ಕಿ. ಇಲ್ಲ 4) ಒಂದು ಬಾಲ ಪೆನ್ ಅಂ.ಕಿ ಇಲ್ಲ 5) ಒಂದು ನೊಕೀಯಾ ಕಂಪನಿಯ
ಮೊಬೈಲ್ ಅಂ.ಕಿ. 200/- ರೂ. 6) ಒಂದು ಐಸೇಲ್ ಕಂಪನಿಯ ಮೊಬೈಲ್ ಅಂ.ಕಿ. 200/- ರೂ.ಸಾಮಗ್ರಿಗಳು ಸಿಕ್ಕಿದ್ದು
ಇರುತ್ತದೆ. 01 ನೇ ಆರೋಪಿತನು ಪ್ರತಿ ದಿವಸ ರಾತ್ರಿ ಸುಮಾರಿಗೆ ಸಾರ್ವಜನಿಕರು
ಬರೆಯಿಸಿದ ಓಸಿ ಮಟಕಾ ನಂಬರಗಳನ್ನು 02 ನೇ ಆರೋಪಿತನ ಮೊಬೈಲ್ ನಂಬರಿಗೆ ಕರೆ ಮಾಡಿ ತಿಳಿಸುತಿದ್ದು,
ಪ್ರತಿ ರವಿವಾರಕ್ಕೊಮ್ಮೆ 02 ನೇ ಆರೋಪಿತನು ಹಗೇದಾಳ ಗ್ರಾಮಕ್ಕೆ ಹೋಗಿ ಮಟಕಾ ಜೂಜಾಟದ ನಗದು ಹಣ ತೆಗೆದುಕೊಂಡು
ಬರುತ್ತಾನೆ ಅಂತಾ ಮುಂತಾಗಿ ವರದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ.
2) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 22/2015 ಕಲಂ. 341, 323, 324, 324, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ 15-04-2015
ರಂದು ಮದ್ಯಾಹ್ನ 3-00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ನುಡಿ ಹೇಳಿಕೆ ಫಿರ್ಯಾದಿ ಏನೆಂದರೆ, ನನ್ನದು
ನಿಲೋಗಲ್ಲ ಸೀಮಾದಲ್ಲಿ 6 ಎಕರೆ 20
ಗುಂಟೆ ಜಮೀನು ಇದ್ದು ನಮ್ಮ ಜಮೀನ ಪಕ್ಕದಲ್ಲಿ ನಮ್ಮೂರ ಯಮನಪ್ಪ ತಂದಿ
ಕಾಡಪ್ಪ ದಮ್ಮೂರ ರವರ ಜಮೀನು ಇರುತ್ತದೆ. ಈ ಹಿಂದೆ ನಮ್ಮ ಹಾಗೂ ಅವರ ಜಮೀನದ ಹುದುವಿನ ಬದುವಿನ
ಸಂಬಂಧ ವೈಮನಸ್ಸು ಆಗಿದ್ದು ಇತ್ತು. ಇಂದು ದಿನಾಂಕ 15-04-2015 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ನಾನು ನಮ್ಮ
ಮನೆಯಿಂದ ನಮ್ಮ ಬಸಾಪೂರ ಹತ್ತಿರ ಇರುವ ನಮ್ಮ ಇನ್ನೊಂದು ಹೊಲಕ್ಕೆ ಹೋಗುವ ಕುರಿತು ಬಸಾಪೂರ ರಸ್ತೆ
ಹಿಡಿದು ಹೊರಟಿದ್ದು ರಸ್ತೆಯ ಪಕ್ಕ ನೀರಿನ ಪಂಪ ಹತ್ತಿರ ಹೊರಟಾಗ ನಮ್ಮೂರ ಹನಮಪ್ಪ ತಂದಿ ಯಮನಪ್ಪ
ದಮ್ಮೂರ ಮತ್ತು ಕಾಡಪ್ಪ ತಂದಿ ಯಮನಪ್ಪ ದಮ್ಮೂರ ರವರು ಬಂದು ಲೇ ಕಾಳ್ಯ ಮಗನ ನಮ್ಮ ಹೊಲದ ಬದುವಿನ
ಕಲ್ಲು ಕಿತ್ತಿಯೇನಲೇ ಸೂಳೇಮಗನ ಅಂತಾ ಅವಾಚ್ಯವಾಗಿ ಬೈದು ತಡೆದು ನಿಲ್ಲಿಸಿದರು, ನಾನು ಯಾವ ಕಲ್ಲನ್ನು ಕಿತ್ತಿರುವದಿಲ್ಲ ನೀವು ನೋಡಿ ಮಾತನಾಡಿರಿ ಅಂತಾ ಅಂದಾಗ ಲೇ ಸೂಳೇಮಗನ
ನಿನ್ನದು ಬಹಳ ಆಗಿದೆ ಮಗನ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತಾ ಅಂದು ಅಲ್ಲೆ ಬಿದ್ದಿದ್ದ ಒಂದು
ಕಟ್ಟಿಗೆಯಿಂದ ಹನಮಪ್ಪ ಈತನು ನನ್ನ ತಲೆಗೆ ಹೊಡಿಯಲು ಬಂದಾಗ ನಾನು ಬಾಗಿ ಕೈ ಮೇಲೆ ಎತ್ತಿದ್ದರಿಂದ
ನನ್ನ ಬಲಗಡೆ ಹೆಬ್ಬೆರಳಿಗೆ ಏಟು ಬಿದ್ದಿದ್ದು ಇರುತ್ತದೆ. ಕಾಡಪ್ಪ ಈತನು ನನ್ನೊಂದಿಗೆ ತೆಕ್ಕಿ
ಬಿದ್ದು ನೆಲಕ್ಕೆ ಕೆಡವಿ ಕೈಯಿಂದ ನನ್ನ ಬೆನ್ನಿಗೆ ಹೊಡಿ ಬಡಿ ಮಾಡಿದರು ಆಗ ವಾಹನದಲ್ಲಿ
ಹೊರಟಿದ್ದ ನಮ್ಮೂರ 1] ಬಾಲಪ್ಪ ಬಾವಂಜಿ 2] ಬಸಪ್ಪ ಹಾನಾಪೂರ ಸಾ: ಬೊಮ್ಮನಾಳ 3] ನಾಗಪ್ಪ
ಕಿಳ್ಳಿಕ್ಯಾತರ ಸಾ: ಬಿಳೇಕಲ್ಲ ರವರು ಬಂದು ಜಗಳ ಬಿಡಿಸಿದರು. ಇವತ್ತು ಉಳಿದು ಕೊಂಡಿ ಮಗನ
ಇನ್ನೊಮ್ಮೆ ಸಿಕ್ಕಾಗ ನಿನಗೆ ಜೀವಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿಹೋದರು. ಕಾರಣ ಈ ಮೇಲ್ಕಂಡವರು ನನಗೆ ತಡೆದು ನಿಲ್ಲಿಸಿ ಅವಾಚ್ಯ ಬೈದಾಡಿ ಕಟ್ಟಿಗೆಯಿಂದ ಹೊಡೆದು ಜೀವದ
ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ನೀಡಿದ
ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ಬಂದು 1435 ಗಂಟೆಗೆ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 22/2015 ಕಲಂ:341,
323, 324, 504, 506 ಸ/ವಾ 34 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
3) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ
ನಂ. 23/2015 ಕಲಂ. 447, 323, 324, 504, 506 ಸಹಿತ 34 ಐ.ಪಿ.ಸಿ:.
ಇಂದು ದಿನಾಂಕ 15-04-2015 ರಂದು ಸಂಜೆ 4-30
ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿ
ಏನೆಂದರೆ,
ನಮ್ಮದು ನಿಲೋಗಲ್ಲ ಸೀಮಾದಲ್ಲಿ ಸರ್ವೆ ನಂ: 23 ನೇದ್ದರಲ್ಲಿ 19 ಎಕರೆ
14 ಗುಂಟೆ ಜಮೀನು ಇದ್ದು ನಮ್ಮ ಜಮೀನ ಪಕ್ಕದಲ್ಲಿ ನಮ್ಮೂರ ಕಾಳಪ್ಪ ಆಡೀನ ರವರ ಜಮೀನು ಇರುತ್ತದೆ. ಈ ಹಿಂದೆ ನಮ್ಮ ಹಾಗೂ ಅವರ ಜಮೀನದ ಹದ್ದಬಂದ ಬದುವಿನ ಸಂಬಂಧ ವೈಮನಸ್ಸು ಆಗಿದ್ದು ಇತ್ತು. ಈ ಹಿಂದೆ ಅಂದರೆ ಸುಮಾರು 8 ತಿಂಗಳ ಹಿಂದೆ ನಮ್ಮ ಜಮೀನನ್ನು ಸರ್ವೆ ಮಾಡಿಸಿದ್ದು ಸರ್ವೆ ಕಾಲಕ್ಕೆ ಕಲ್ಲುಗಳನ್ನು ಹಾಕಿ ಹದ್ದ ಬಂದ್ ಮಾಡಿದ್ದು ಇರುತ್ತದೆ. ಇಂದು ದಿನಾಂಕ 15-04-2015 ರಂದು ಮುಂಜಾನೆ 10-30 ಗಂಟೆಯ ಸುಮಾರಿಗೆ ನಾನು ನಮ್ಮ ಹೊಲಕ್ಕೆ ಹೋಗಿ ನೋಡಲು ನಮ್ಮ ಜಮೀನದಲ್ಲಿ ಹದ್ದು ಬಂದ ಸಲುವಾಗಿ ಹಾಕಿದ ಕಲ್ಲುಗಳು ಕಿತ್ತಿದ್ದು 1] ಕಾಳಪ್ಪ ಮತ್ತು ಅವನ ಮಕ್ಕಳಾದ
2] ಹೊನ್ನಪ್ಪ ಮತ್ತು 3] ಬಾಲಪ್ಪ,
4] ಮಲ್ಲಪ್ಪ ರವರು ಇನ್ನುಳಿದ ಕಲ್ಲುಗಳನ್ನು ಕೀಳುತ್ತಿದ್ದರು ನಾನು ಕಾಳಪ್ಪ ಮತ್ತು ಅವನ ಮಕ್ಕಳಾದ ಹೊನ್ನಪ್ಪ ಮತ್ತು ಬಾಲಪ್ಪ, ಮಲ್ಲಪ್ಪ ರವರಿಗೆ ನಮ್ಮ ಜಮೀನದಲ್ಲಿ ಹದ್ದಬಂದ ಸಲುವಾಗಿ ಹಾಕಿದ ಕಲ್ಲುಗಳನ್ನು ಯಾಕೆ ಕಿತ್ತಿರುತ್ತೀರಿ ಅಂತಾ ಕೇಳಲು ಲೇ ಬೋಸುಡಿ ಮಕ್ಕಳ ನಿಮ್ಮದು ಬಹಳ ಆಗಿದೆ ಹದ್ದಬಂದ ಕಲ್ಲುಗಳು ನಮ್ಮ ಜಮೀನದಲ್ಲಿರುತ್ತವೆ ಅವುಗಳನ್ನು ನಾವು ಕಿತ್ತುತ್ತೇವೆ ಏನ ಸೆಂಟ ಹರಿದುಕೊಳ್ಳುತ್ತೀರಿ ಅಂತಾ ಅವಾಚ್ಯವಾಗಿ ಬೈದಾಡ ಹತ್ತಿದರು. ಅವುಗಳನ್ನು ಅಳತೆ ಮಾಡಿ ಹಾಕಿರುತ್ತದೆ ಅವುಗಳನ್ನು ಕಿತ್ತಬೇಡಿರಿ ಮತ್ತು ನಮಗೆ ಅವಾಚ್ಯವಾಗಿ ಬೈದಾಡ ಬೇಡಿರಿ ಅಂತಾ ಅನ್ನಲು ಸೂಳೇಮಕ್ಕಳ ನಿಮ್ಮ ತಿಂಡಿನ ಬಹಳ ಆಗಿದೆ ನಿಮ್ಮನ್ನ ಹಾಗೆ ಬಿಡುವದಿಲ್ಲ ಮಗನ ಅಂತಾ ಅಂದವರೆ ಕಾಳಪ್ಪ ಮತ್ತು ಅವನ ಮಕ್ಕಳಾದ ಹೊನ್ನಪ್ಪ ಮತ್ತು ಬಾಲಪ್ಪ, ಮಲ್ಲಪ್ಪ ರವರು ನಮ್ಮ ಜಮೀನದಲ್ಲಿ ಅಕ್ರಮ ಪ್ರವೇಶ ಮಾಡಿ ಹೊನ್ನಪ್ಪ ಈತನು ಕೈಯಲ್ಲಿ ತಂದಿದ್ದ ಒಂದು ಕಟ್ಟಿಗೆಯಿಂದ ನನ್ನ ಬಲಗಡೆ ಕಿವಿಗೆ ಜೋರಾಗಿ ಹೊಡೆದು ರಕ್ತಗಾಯಮಾಡಿದನು. ಆಗ ಕಾಳಪ್ಪ ಈತನು ಅಲ್ಲೆ ಇದ್ದ ಒಂದು ಹಿಡಿಗಾತ್ರದ ಕಲ್ಲಿನಿಂದ ನನ್ನ ತಲೆಯ ಹಿಂದೆ
ಜಜ್ಜಿದನು ಮತ್ತು ಬಾಲಪ್ಪ ಈತನು ನನ್ನ ಸಂಗಡ ತೆಕ್ಕಿ ಬಿದ್ದು ನನಗೆ ನೆಲಕ್ಕೆ ಕೆಡವಿ ಕೈಯಿಂದ ಹೊಡಿಬಡಿ ಮಾಡಿ ಕಾಲಿನಿಂದ ಒದ್ದರು. ನಾವು ಚೀರಾಡುವ ದ್ವನಿಯನ್ನು ಕೇಳಿ ಅಲ್ಲೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ತಾಯಿ ನಾಗಮ್ಮ ಮತ್ತು ನಮ್ಮ ಅಣ್ಣನಾದ ಕಾಡಪ್ಪ ರವರು ಓಡಿ ಬಂದು ಜಗಳ ಬಿಡಿಸುವಷ್ಟರಲ್ಲಿ ಮಲ್ಲಪ್ಪ ರವರು ನಮ್ಮ ತಾಯಿಗೆ ಮತ್ತು ಕಾಡಪ್ಪನಿಗೆ ಕೈಯಿಂದ ಹೊಡಿಬಡಿ ಮಾಡಹತ್ತಿದರು. ಆಗ ನಾವು ಜಳಗ ಮಾಡುವ ಬಾಯಿಕೇಳಿ ಅಲ್ಲಿಗೆ ಬಂದ ಜಗಳ ನೋಡಿದ
1] ಶಿವಪ್ಪ ತಂದಿ ಹನಮಪ್ಪ ಗೋಸಾವಿ 2] ಉಮೇಶ ತಂದಿ ಯಂಕಪ್ಪ ಬಂಡಾರಿ ರವರು ಜಗಳ ಬಿಡಿಸಿ ತಿಳಿ ಹೇಳಿದರು ಆಗ ಕಾಳಪ್ಪ ಮತ್ತು ಹೊನ್ನಪ್ಪ, ಬಾಲಪ್ಪ,
ಮಲ್ಲಪ್ಪ ರವರು ಲೇ ಬೋಸುಡಿ ಮಕ್ಕಳ ಇವತ್ತು ಜನರು ಬಂದರು ಉಳಿದುಕೊಂಡಿರಿ ಮಕ್ಕಳ ಇನ್ನೊಮ್ಮೆ ಸಿಕ್ಕಾಗಿ ನಿಮ್ಮನ್ನ ಜೀವಸಹಿತ ಬಿಡುವದಿಲ್ಲ ಅಂತಾ ಹೇಳಿ ಜೀವದ ಬೆದರಿಕೆ ಹಾಕಿ ಹೋದರು. ಕಾರಣ ಈ ಮೇಲ್ಕಂಡವರು ನಮ್ಮ ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ಬೈದಾಡಿ ಕಟ್ಟಿಗೆಯಿಂದ, ಕೈಯಿಂದ ನಮಗೆ ಹೊಡಿಬಡಿ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಮನೆಯಲ್ಲಿ ವಿಚಾರ ಮಾಡಿ
ತಡವಾಗಿ ಬಂದು ಫಿರ್ಯಾದಿ ಸಲ್ಲಿಸಿದ್ದು ಅದೆ. . ಅಂತಾ ಮುಂತಾಗಿ ನೀಡಿದ ಫಿರ್ಯಾದಿಯನ್ನು
ಪಡೆದುಕೊಂಡು ವಾಪಸ್ ಠಾಣೆಗೆ ಬಂದು ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿದ್ದು ಅದೆ.
0 comments:
Post a Comment