Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, April 18, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 71/2015  ಕಲಂ 279, 304(ಎ) ಐ.ಪಿ.ಸಿ.:
ದಿನಾಂಕ : 17-04-2015 ರಂದು  ಸಾಯಂಕಾಲ 7-00 ಗಂಟೆಗೆ  ಕಾರಟಗಿಯ ಶರಣಬಸವಶ್ವರ ಸ್ಕೂಲ್  ಹತ್ತಿರ ರಸ್ತೆಯ ಮೇಲೆ ವಾಹನ ಅಪಘಾತವಾದ ಬಗ್ಗೆ ಪೋನ್ ಮೂಲಕ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಬೇಟಿ ನೀಡಿ ಅಲ್ಲಿ ಪ್ರತ್ಯಕ್ಷ ಸಾಕ್ಷಿದಾರರಾದ ಶ್ರೀ ಪರಶುರಾಮ ತಂದಿ ಕಂಪ್ಲೆಪ್ಪ ಡಂಕನಕಲ್ಲ  ವಯಾ- 27 ವರ್ಷ ಜಾ- ನಾಯಕ ಸಾ- ಬಸವೇಶ್ವರ ನಗರ ಕಾರಟಗಿ ಇತನು ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,  ಇಂದು ದಿನಾಂಕ-17-03-2015 ರಂದು ಸಾಯಂಕಾಲ 6-55 ರಿಂದಾ 7-00 ಗಂಟೆಯ ಸಮಯದಲ್ಲಿ ಕಾರಟಗಿ- ಸಿಂಧನೂರ ರಸ್ತೆಯ ಪಕ್ಕದಲ್ಲಿ ಶ್ರೀ ಶರಣಬಸವೇಶ್ವರ ಸ್ಕೂಲ್ ಹತ್ತಿರ ನಾನು ಮತ್ತು ನನಗೆ ಪರಿಚಯಸ್ಥರಾದ  ಹನುಮಂತ  ಮೇಗೂರ್ ಇಬ್ಬರು ಕೂಡಿ ಮಾತನಾಡಿಕೊಂಡು ಎ.ಪಿ.ಎಮ್.ಸಿ ಕಡೆಗೆ ಹೊರಟಿದ್ದಾಗ್ಗೆ ಸಿಂಧನೂರ ಕಡೆಯಿಂದ ಒಂದು ಹೆಚ್.ಎಫ್.ಡಿಲಕ್ಸ ಮೊಟಾರ್ ಸೈಕಲ್  ಚಾಲಕ ತನ್ನ ಮೊಟಾರ್ ಸೈಕಲ್ಲನ್ನು ರಸ್ತೆಯ ಎಡಬದಿಗೆ ನಡೆಸಿಕೊಂಡು ಕಾರಟಗಿಯ ಕಡೆಗೆ ಬರುತ್ತಿದ್ದನು ಅದೇ ವೇಳೆಗೆ ಕಾರಟಗಿ ಕಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ತನ್ನ ಬಸ್ಸನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ಹೊಗಿ ಬರುವ ವಾಹನಗಳನ್ನು ಓವರ ಟೇಕ್ ಮಾಡುತ್ತಾ ರಾಂಗ್ ಸೈಡಿಗೆ ಬಂದು ರಸ್ತೆಯ ಬದಿಯಲ್ಲಿ ಹೊರಟಿದ್ದ ಮೊಟಾರ್ ಸೈಕಲ್ಲ ಸವಾರನಿಗೆ ಟಕ್ಕರ್ ಕೊಟ್ಟು ಪರಿಣಾಮವಾಗಿ ಆತನ ತಲೆಗೆ  ಹಾಗೂ ಕಾಲುಗಳಿಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು  ಆತನ ಮೊಟಾರ್ ಸೈಕಲ್ ನಂಬರ್ ನೋಡಲು ಕೆ.ಎ- 36 / ಇ.ಡಿ- 9664  ಅಂತಾ ಇದ್ದು  ಮೃತಪಟ್ಟ  ವ್ಯಕ್ತಿಯನ್ನು ನೋಡಲು  ಹನಮಂತ ಮೇಗೂರು ಇವರಿಗೆ ಪರಿಚಯಸ್ಥನಿದ್ದು ಅವನ ಹೆಸರು  ಚತ್ರಪ್ಪ ತಂದಿ  ತಿಮ್ಮಪ್ಪ  ಕುರಬರ ನಾಗರಬೆಂಚಿ  ವಯಾ-28 ವರ್ಷ ಸಾ- ಛತ್ರ  ಅಂತಾ ಗೊತ್ತಾಯಿತು. ಅಪಘಾತಪಡಿಸಿದ ಕೆ.ಎಸ್.ಆರ್.ಟಿ.ಸಿ. ಬಸ್ ನಂಬರ್ ನೋಡಲು ಕೆ.ಎ-36/ಎಫ್-1029 ಅಂತಾ ಇದ್ದು ಚಾಲಕನ ಬಗ್ಗೆ ವಿಚಾರಿಸಲಾಗಿ ಲಕ್ಷ್ಮೀನಾರಾಯಣ ತಂದಿ ಬೋಡಯ್ಯ  ವಯಾ-57 ವರ್ಷ ಜಾ-ಈಳಿಗೇರ ಸಿಂಧನೂರ ಡಿಪೋ ಅಂತಾ ಗೊತ್ತಾಯಿತು. ಈ ಘಟನೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ಅಜಾಗರೂಕತೆಯಿಂದ ಓಡಿಸಿದ್ದರಿಂದ  ಈ ಘಟನೆ ಜರುಗಿದ್ದು ಇರುತ್ತದೆ.  ಈ ಘಟನೆಯನ್ನು ಅಲ್ಲಿ ನಿಂತಿಂದ್ದ ಇನ್ನೂ ಕೆಲವು ಜನರು ಸಹ ನೋಡಿರುತ್ತಾರೆ. ಈ ಘಟನೆಯ ಬಗ್ಗೆ  ಛತ್ರಪ್ಪನ ಸಂಭಂದಿಕರಿಗೆ ಸಂಪರ್ಕಿಸಿ ವಿಷಯ ತಿಳಿಸಿದ್ದು ಇರುತ್ತದೆ. ಕಾರಣ  ಈ ಘಟನೆಗೆ ಕಾರಣನಾದ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ಕೊಟ್ಟ ಲಿಖಿತ ಪಿರ್ಯಾದಿಯನ್ನು ಸ್ಥಳದಲ್ಲಿಯೇ ಪಡೆದುಕೊಂಡು ವಾಪಾಸ್ ಠಾಣೆಗೆ ರಾತ್ರಿ 8-45 ಗಂಟೆಗೆ ಬಂದು ಸದರ್ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
2)  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 72/2015  ಕಲಂ 279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ.:
ದಿನಾಂಕ - 17-04-2015 ರಂದು ರಾತ್ರಿ 10-45 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ  ಹೆಚ್.ಎಮ್. ಸಂಗನಬಸಯಯ ತಂದಿ ಹೆಚ್.ಎಮ್ ಕೊಟ್ರಯಯ ಹೊಸಮಠ ವಯಾ-  40 ವರ್ಷ ಜಾ-ಜಂಗಮ ಉ- ಕೆ.ಎಸ್.ಆರ್.ಟಿ.ಸಇ. ಬಸ್  ಚಾಲಕ ವಿಬಾಘೀಯ ಉಗ್ರಾಣ ಹೊಸಪೇಟೆ ಸಾ- ಉತ್ತಂಗಿ ಗ್ರಾಮ ತಾ- ಹೂವಿನಹಡಗಲಿ  ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶವೆನೆಂದರೆನಿನ್ನೆ ದಿವಸ ದಿನಾಂಕ - 16-04-2015 ರಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ನಮ್ಮ ಬಿಭಾಗಿಯ ಕಾಯಾಗಾರದ ವಾಹನ ಸಂಖ್ಯೆ-ಕೆ.ಎ- 35ಯ ಎಪ್-104 ಕ್ರೇನ್ ಜೊತೆಗೆ ಅಪಘಾತವಾಗಿರುವಂತಹ  ವಾಹನವನ್ನು ವಿಭಾಗೀಯ ತಾಂತ್ರಿಕ  ಶಿಲ್ಪಿಯ ಆದೇಶದ ಮೇರೆಗೆ ಯಾದಗಿರಿ(ಆರ್.ಡಬ್ಲು.ಎಸ್) ಯಲ್ಲಿ ಬಿಟ್ಟ ನಂತರ ವಾಪಾಸ್ ಈ ದಿನ ಮದ್ಯಾನ್ಹ 17-4-2015 ರಂದು 2-30 ಗಂಟೆಯ ಸುಮಾರಿಗೆ ಯಾದಗಿರಿಯನ್ನು  ಬಿಟ್ಟು ಹೊಸಪೇಟೆಗೆ ವಾಹನ ಸಂಕ್ಯೆ ಎಪ್- 1017 ನೇದ್ದನ್ನು ತೆಗೆದುಕೊಂಡುಬರುವಾಗೀ ದಿನ ರಾತ್ರಿ 9-00 ಗಂಟೆಗೆ ಕಾರಟಗಿಗೆ ಬಂದು ಕಾರಟಗಿಯಲ್ಲಿ ನವಲಿ ಕ್ರಾಸ್ ಸಮೀಪ ಖಾನಾವಳಿಮುಂದೆ ಬಂದು ಕಾರಟಗಿಯಲ್ಲಿ ಸರಕಾರಿ ಆಸ್ಪತ್ರೆಯ ಕ್ರಾಸ್ ಹತ್ತಿರ  ವಾಹನವನ್ನು ಎಡಗಡೆಯ ಬದಿಯಲ್ಲಿ ನೀಲ್ಲಿಸಿ ಊಟ ಮಾಡುವ ಸಲುವಾಗಿ ವಾಹನದಿದಂದಕೆಳಗಿಳಿದು ಖಾನಾವಳಿಯ ಹೊಗುತ್ತಿರುವಾಗ ಗಂಗಾವತಿ ಕಡೆಯಿಂದ ಒಬ್ಬ ಮೊಟಾರ್ ಸೈಕಲ್ ಸವಾರ ತನಾನು ನಡೆಸುತ್ತಿದ್ದ ವಾಹನವನ್ನು ಜೋರಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಎಡರಸ್ತೆಯಲ್ಲಿ ನಡೆದುಕೊಂಡು  ಹೊರಟ ನನಗೆ ಟಕ್ಕರ್ ಕೊಟ್ಟು  ಅಪಘಾತ ಮಾಡಿರುತ್ತಾನೆ.  ಇದರಿಂದ ನನಗೆ ಎಡಗೈ ಮುಂಬಾಗ ಒಳಪೆಟ್ಟಾಗಿ ಬಾವು ಬಂದಿದ್ದು ಇರುತ್ತದೆ.  ಮೊಟಾರ್ ಸೈಕಲ್ ಸವಾರನಿಗೆ ನೋಡಲು ಆತನುವಾಹನದ ಸಮೇತ ಕೆಳಗೆ ಬಿದ್ದಿರುತ್ತಾನೆ.  ಮೊಟಾರ್ ಸೈಕಲ್ ನಂಬರ್ ನೋಡಲು ಕೆ.ಎ- 37 / ಡಬ್ಲು-8242 ಅಂತಾ ಇದ್ದು  ಅಪಘಾತಪಡಿಸಿದ ನಂತರ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ.  ನಂತರ ನಾನು ಅಲ್ಲಿಯೇ ಹತ್ತಿರ ಇದ್ದ  ಸರಕಾರಿ ಆಸ್ಪತ್ರೆಗೆ ಹೊಗಿ  ವೈದ್ಯಾಧೀಕಾರಿಗಳ ಬಳಿ ತೊರಿಸಿಕೊಂಡು ಬಂದು ನಮ್ಮ ಮೇಲಾಧೀಕಾರಿಗಳಿಗೆ ವಿಷಯ ತಿಳಿಸಿ ಸದರಿ ವಿಷಯದ ಬಗ್ಗೆ ದೂರು ಸಲ್ಲಿಸಿದ್ದು ಇರುತ್ತದೆ  ಘಟನೆ ಜರುಗಿದಾಗ್ಗೆ ದಿನಾಂಕ -17-4-2015 ರಂದು ರಾತ್ರಿ 9-20 ಗಂಟೆಯಾಗಿರಬಹುದು. ಕಾರಣ ಸದರ್ ಅಪಘಾತಪಡಿಸಿದ ಮೊಟಾರ್ ಸೈಕಲ್ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.       

0 comments:

 
Will Smith Visitors
Since 01/02/2008