ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಷ್ಟಗಿ ಪೊಲೀಸ್ ಠಾಣೆ
ಗುನ್ನೆ ನಂ. 48/2015 ಕಲಂ 78(3) Karnataka Police Act.
ದಿನಾಂಕ: 30-04-2015 ರಂದು ಸಂಜೆ 06-30. ಗಂಟೆಗೆ ಮಾನ್ಯ ಸಿಪಿಐ ಸಾಹೇಬರು ಕುಷ್ಟಗಿ
ವೃತ್ತರವರು ಠಾಣೆಗೆ ಹಾಜರಾಗಿ ತಮ್ಮ ಒಂದು ವರದಿ ಮಟಕಾ ಜೂಜಾಟ ದಾಳಿ ಪಂಚನಾಮೆ ಮಟಕಾ ಜೂಜಾಟಾ ಹಣ
6,960=00 ಒಂದು ವಾಲ್ ಪೆನ್, ಮಟಕಾ ಚೀಟಿ ಹಾಗೂ ನಮೋದಿತ ಆರೊಫಿ ಈಶಪ್ಪ ಪಟ್ಟಣಶೆಟ್ಟಿರ ಸಾ:
ಗುಮಗೇರಿ ಇತನ್ನು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ಈ ದಿನ ತಾವು ಕಛೇರಿಯಲ್ಲಿದ್ದಾಗ 04-35
ಗಂಟೆಗೆ ಖಚಿತ ಬಾತ್ಮಿ ಬಂದಿದ್ದೇನೆಂದರೆ ಕುಷ್ಟಗಿ ಪಟ್ಟಣ ಚೆಸ್ಕಾಂ ಕಛೇರಿ ಕಂಪೌಂಡ ಹತ್ತಿರ
ಒಂದು ಪಾನ ಡಬ್ಬಿಯಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಗೆ ಬಂದು
ಇಬ್ಬರು ಪಂಚರನ್ನು ಠಾಣೆಗೆ 04-45 ಗಂಟೆಗೆ ಕರೆಸಿಕೊಂಡು ಶ್ರೀ ಯಲ್ಲಪ್ಪ ಘೋರ್ಪಡೆ ಪಿಎಸ್ಐ
ಕುಷ್ಟಗಿ ಠಾಣೆ ಹಾಗೂ ಸಿಬ್ಬಂದಿಯವರಾದ ಪಿಸಿ 381, 332, 202 ಕರೆದುಕೊಂಡು ಠಾಣೆಯಿಂದ 04-45
ಗಂಟೆಗೆ ಸರ್ಕಾರಿ ಜೀಪಿನಲ್ಲಿ ಹೋಗಿ ನೋಡಲಾಗಿ ಒಂದು ಡಬ್ಬಿಯಲ್ಲಿ ಮಟಕಾ ಜೂಜಾಟ ನಡೆದಿದ್ದು
ಎಲ್ಲರೂ ಕೂಡಿ ರೇಡ್ ಮಾಡಿದಾಗ ಮಟಕಾ ಬರೆಸುತ್ತಿದ್ದವರು ಓಡಿ ಹೋಗಿದ್ದು ಮಟಕಾ ಬರೆಯುತ್ತಿದ್ದ
ಆರೋಫಿ ಸಿಕ್ಕಿಬಿದ್ದಿದ್ದು ಆತನ ವಶದಿಂದ ಮಟಕಾ ಜೂಜಾಟದ ಹಣ 6,960-00 ರೂ ಮಟಕಾ ಸಾಮಗ್ರಿಗಳನ್ನು
ಜಪ್ತ ಪಡಿಸಿಕೊಂಡು ಸದರಿಯವನು ಮಟಕಾ ಚೀಟಿಗಳನ್ನು ರಮೇಶ ತಾಯಿ ನಾಗಮ್ಮ ಇಂಡಿ ಸಾ: ಅಂಬೇಡ್ಕರ ನಗರ
ಕುಷ್ಟಗಿ ರವರಿಗೆ ಕೊಡುವುದಾಗಿ ತಿಳಿಸಿದ್ದು ಅಂತಾ ವಗೈರಾ ಪಿರ್ಯಾದಿಯಿಂದ ಸಾರಾಶಂದ ಮೇಲಿಂದ
ಠಾಣಾ ಗುನ್ನೆ ನಂ 48/2015 ಕಲಂ 78[3] ಕೆ.ಪಿ.ಯ್ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ. 98/2015 ಕಲಂ 78(3) Karnataka Police Act.
ದಿನಾಂಕ:- 30-04-2015 ರಂದು ರಾತ್ರಿ 8:00 ಗಂಟೆಗೆ ಶ್ರೀ ಹನುಮರಡ್ಡೆಪ್ಪ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ
ಸ್ವಂತ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ.
" ಇಂದು ದಿನಾಂಕ:-30-04-2015 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ
ಗ್ರಾಮದ ಗಡ್ಡಿ ಗ್ರಾಮದ ಹೊಸ ಬಸ್ ನಿಲ್ದಾಣದ ಹತ್ತಿರ ಒಂದು ಪಾನ್ ಶಾಪ್ ಮುಂದೆ ಸಾರ್ವಜನಿಕ
ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಪಿ.ಸಿ. 131, 429,
86, 386, 323 ಎ.ಪಿ.ಸಿ.77 ಇವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಮಾನ್ಯ
ಡಿ.ಎಸ್.ಪಿ.ಸಾಹೇಬರು ಗಂಗಾವತಿ ಇವರ ಮಾರ್ಗದರ್ಶನದಲ್ಲಿ ಸರಕಾರಿ ಜೀಪ್ ನಂ: ಕೆ.ಎ-37/ ಜಿ-307
ನೇದ್ದರಲ್ಲಿ ಠಾಣೆಯಿಂದ ಸಂಜೆ 6:00 ಗಂಟೆಗೆ ಹೊರಟು ಗಡ್ಡಿ ಗ್ರಾಮ ಊರ ಮುಂದೆ ಜೀಪ್ನ್ನು
ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ಅಲ್ಲಿ ಬಸ್ ನಿಲ್ದಾಣದ ಹತ್ತಿರ ಒಂದು ಪಾನ್
ಶಾಪ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ಪಾನ್ ಶಾಪ್ನ ಲೈಟಿನ ಬೆಳಕಿನಲ್ಲಿ ಕುಳಿತುಕೊಂಡು ಜನರಿಗೆ 1
ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ, ಅದೃಷ್ಟದ ಮಟಕಾ ನಂಬರ್ಗಳಿಗೆ
ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು ಅವರಿಂದ ಹಣವನ್ನು
ಪಡೆದುಕೊಳ್ಳುತ್ತಿದ್ದು ಮತ್ತೊಬ್ಬನು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು
ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ಸಮಯ ರಾತ್ರಿ 6:30 ಗಂಟೆಯಾಗಿದ್ದು
ಕೂಡಲೇ ಅವರ ದಾಳಿ ಮಾಡಲಾಗಿ ಇಬ್ಬರೂ ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕಿಬಿದ್ದವರ ಪೈಕಿ ಕೂಗುತ್ತಿದ್ದವನ ಹೆಸರು
ವಿಚಾರಿಸಲಾಗಿ ತನ್ನ ಹೆಸರು ತಿಪ್ಪಣ್ಣ ತಂದೆ ಯಮನೂರಪ್ಪ ಬನ್ನೆಟ್ಟಿ ವಯಸ್ಸು: 45 ವರ್ಷ ಜಾತಿ:
ನಾಯಕ, ಉ: ಒಕ್ಕಲತನ ಸಾ: ಉಡುಮಕಲ್ ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಬಳಿ ನಗದು ಹಣ 1000 /-
ರೂ ಸಿಕ್ಕಿದ್ದು ನಂತರ ಮಟ್ಕಾ ಪಟ್ಟಿ ಬರೆದುಕೊಳ್ಳುತ್ತಿದ್ದವನ ಹೆಸರು
ವಿಚಾರಿಸಲು ಅವನ ಹೆಸರು ನಾಗರಾಜ ತಂದೆ ಹನುಮಂತಪ್ಪ ಮಡಿವಾಳರ, ವಯಸ್ಸು: 26 ವರ್ಷ ಜಾತಿ: ಮಡಿವಾಳರ, ಉ: ಟೇಲರಿಂಗ ಸಾ: ವೆಂಕಟಗಿರಿ
ತಾ: ಗಂಗಾವತಿ ಅಂತಾ ತಿಳಿಸಿದ್ದು ಪರಿಶೀಲಿಸಲಾಗಿ ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ 750/- ರೂಪಾಯಿ ಸಿಕ್ಕಿದ್ದು ಹೀಗೆ ಒಟ್ಟು ಮಟ್ಕಾ ಜೂಜಾಟದ ನಗದು ಹಣ ರೂ 1750/- ರೂಪಾಯಿಗಳು, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆತಿದ್ದು ಇದೆ. ನಂತರ ಅವರಿಗೆ ಮಟಕಾ ಪಟ್ಟಿಯನ್ನು ಯಾರಿಗೆ
ಕೊಡುತ್ತೀರಾ ? ಅಂತಾ ವಿಚಾರಿಸಲು ಮಟಕಾ ಪಟ್ಟಿಯನ್ನು ಯಾರಿಗೂ ಕೊಡುವುದಿಲ್ಲಾ ತಾವೇ
ಇಟ್ಟುಕೊಳ್ಳುವುದಾಗಿ ತಿಳಿಸಿದರು. ಈ ಬಗ್ಗೆ ರಾತ್ರಿ 6:30 ರಿಂದ 7:30 ಗಂಟೆಯವರೆಗೆ
ಸ್ಥಳದಲ್ಲಿಯೇ ಪಂಚನಾಮೆ ನಿರ್ವಹಿಸಿ ನಂತರ ಆರೋಪಿತರೊಂದಿಗೆ ರಾತ್ರಿ 8:00 ಗಂಟೆಗೆ ಠಾಣೆಗೆ ವಾಪಸ್ ಬಂದಿದ್ದು, ಸದರಿ ಆರೋಪಿತರ ವಿರುದ್ಧ ಕಲಂ 78() ಕೆ.ಪಿ. ಆ್ಯಕ್ಟ್ ಪ್ರಕರಣ ದಾಖಲು ಮಾಡುವ ಕುರಿತು
ವರದಿಯನ್ನು ಸಲ್ಲಿಸಿದ್ದು ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದು, ಕಾರಣ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ರಾತ್ರಿ 8:30 ಗಂಟೆಗೆ
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 98/2015 ಕಲಂ 78(iii) ಕೆ.ಪಿ. ಆ್ಯಕ್ಟ್ ಅಡಿ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
3) ತಾವರಗೇರಾ ಪೊಲೀಸ್ ಠಾಣೆ
ಗುನ್ನೆ ನಂ 80/2015 ಕಲಂ 279, 337, 338 ಐ.ಪಿ.ಸಿ:
ದಿನಾಂಕ : 1-5-2015 ರಂದು 00-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರಾಘವೇಂದ್ರರಾವ ತಂದಿ ಮಾಧವರಾವ್ ಕುಲಕರ್ಣೀ ವಯಾ- 36 ವರ್ಷ ಜಾ- ಬ್ರಾಹ್ಮಣ ಉ- ಗುತ್ತೇದಾರರು ಹಾಗೂ ಕಾರ್ ನಂ. ಕೆ.ಎ.-22-ಎನ್-4390
ನೇದ್ದರ ಚಾಲಕ ಸಾ- ಅಡವಿಭಾವಿ ತಾ- ಲಿಂಗಸೂರ ಹಾ.ವ. ದಿರಾ ಕಾಲೋನಿ ನಾಗಶೆಟ್ಟಿಕೊಪ್ಪ ಹುಬ್ಬಳ್ಳಿ ಇವರು ಠಾಣೆಗೆ ಬಂದು ಒಂದು ಲಿಖಿತ ಫಿರ್ಯಾದಿ ಕೊಟ್ಟಿದ್ದು ಅದರ ಸಾರಂಶವೆನಂದರೆ, ನಾನು ಗುತ್ತೇದಾರ ಕೆಲಸ ಮಾಡಿಕೊಂಡಿದ್ದು ದಿನಾಂಕ – 30-04-2015 ರಂದು ನಾನು ಮತ್ತು ನನ್ನ ಗೆಳೆಯ ಶಂಕರ ತಂದಿ ಗೋಮದಿನಾಯಗಮ್ ಸಾ; ಹುಬ್ಬಳ್ಳಿ ಕೂಡಿಕೊಂಡು ನಮ್ಮ ಇನೋವಾ ಕಾರ್ ನಂ- ಕೆ.ಎ- 22 / ಎನ್- 4390 ನೇದ್ದರಲ್ಲಿ ಸಿಂಧನೂರಿನಿಂದ ಹುಬ್ಬಳ್ಳಿಗೆ ಹೊಗಲೆಂದು ಕಾರಟಗಿ ಧನಲಕ್ಷ್ಮೀ ರೈಸ್ ಮಿಲ್ಲದ
ಹತ್ತಿರ ಬರುತಿರುವಾಗ್ಗೆ ಸದರ್ ವಾಹನವನ್ನು ನಾನು ನನ್ನ ಸೈಡಿನಲ್ಲಿ ಬರುವಾಗ್ಗೆ ನಮ್ಮ ಹಿಂದುಗಡೆಯಿಂದ ದು ಸ್ವಿಪ್ಟ ಕಾರ್ ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ನೋವಾ ಕಾರಿನ ಹಿಂಬಾಗಕ್ಕೆ ಅಪಘಾತಪಡಿಸಿದ್ದರಿಂದ ನಮ್ಮ ಕಾರು ನಿಯಂತ್ರಣ ಕಳೆದುಕೊಂಡು ಬ್ರಿಡ್ಜ ಕೆಳಗೆ ಹೊಗಿ
ಬಿದ್ದಿದ್ದು, ನಮ್ಮ ಇನೋವಾ ಕಾರಿಗೆ ಅಪಘಾತಪಡಿಸಿದ ಕಾರ್ ಕೂಡಾ ಮುಂದೆ ತೆಗೆಗಿನಲ್ಲಿ ಹೊಗಿ ನಿಂತಿದ್ದು, ಈ ಘಟನೆಯಲ್ಲಿ ನನಗೆ ತಲೆಗೆ ಹಾಗೂ ಕೈಗಳಿಗೆ ತೆರಚಿದ ಗಾಯಗಳಾಗಿದ್ದು, ನನ್ನ ಪಕ್ಕದಲ್ಲಿ ಕುಳಿತಿದ್ದ ಶಂಕರ್ ಇವರಿಗೆ ಮುಖಕ್ಕೆ, ಎಡಗೈಗೆ, ಹಾಗೂ ಎರಡೂ ಕೈಗಳಿಗೆ ರಕ್ತಘಾಯವಾಗಿದ್ದು ಹಾಗೂ ಒಳಪೆಟ್ಟಾಗಿದ್ದು ಇರುತ್ತದೆ. ಈ
ಅಪಘಾತವಾದಾಗ್ಗೆ ರಾತ್ರಿ 9-00 ಗಂಟೆಯಾಗಿತ್ತು. ಅಪಘಾತವಾದ ನಂತರ ನಾವು ನಮ್ಮ ಕಾರಿನಿಂದ ಹೊರ ಬಂದು ನಮ್ಮ ಕಾರಿಗೆ ಅಪಘಾತಪಡಿಸಿದ ಕಾರ್ ನಂಬರ್ ನೋಡಲು ಕೆ.ಎ- 36 / ಎನ್- 2297 ಅಂತಾ ಇದ್ದು ಅದರ ಚಾಲಕನ ಬಗ್ಗೆ ವಿಚಾರಿಸಲಾಗಿ ರಾಮಕೃಷ್ಣ ರಾವ್ ತಂದಿ ಸತ್ಯನಾರಾಯಣ ಮದ್ಯಪಾಟಿ ಸಾ- ರಾಯಚೂರ ಅಂತಾ ಗೊತ್ತಾಯಿತು. ಸದರಿ ಕಾರಿನಲ್ಲಿ ನರೇಶ ಮತ್ತು ಸುಬ್ರಮಣ್ಯ ಅಂತಾ ಇದ್ದು ಅವರಿಗೆ ಆರೋಪಿಗೆ ಯಾವುದೇ ಗಾಯಗಳು ಆಗಿರುವದಿಲ್ಲ. ಅಪಘಾತಕ್ಕೆ ಕಾರಣನಾದ ಕಾರ್ ನಂ- ಕೆ.ಎ- 36 / ಎನ್- 2297 ನೇದ್ದರ ಚಾಲಕ
ರಾಮಕೃಷ್ಣ ತನ ಮೇಲೆ ಕಾನೂನು ರೀತಿ ಕ್ರಮ
ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment