Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, June 9, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಷ್ಟಗಿ ಪೊಲೀಸ್ ಠಾಣಾ ಗುನ್ನೆ ನಂ. 93/2015  ಕಲಂ 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ 08-06-2015 ರಂದು ಮುಂಜಾನೆ 9-00 ಗಂಟೆಗೆ ಕುಷ್ಟಗಿ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೆ ಸರಕಾರಿ ಆಸ್ಪತ್ರೆಗೆ ಭೇಟಿಕೊಟ್ಟು ಆಸ್ಪತ್ರೆಯಲ್ಲಿ ಇಲಾಜು ಪಡೆಯುತ್ತಿದ್ದ ಪಿರ್ಯಾದಿ ಗಾಯಾಳು ಅಬ್ದುಲ್ ರಜಾಕ ತಂದೆ ಬಡೇಸಾಬ ಅತ್ತಾರ ವಯ: 57 ಜಾ: ಮುಸ್ಲಿಂ ಉ: ಎಲೆಕ್ಟ್ರೀಶಿಯನ್  ಸಾ: ಮನಗುಳಿ ಅಗಸಿ ವಿಜಯಪೂ ರವರ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶ ವೆನೆಂದರೆ ಚಿಕ್ಕಬಳ್ಳಾಪೂರದಲ್ಲಿ ಎಲೆಕ್ಟ್ರಿಶಿಯನ ಸಾಮಾನುಗಳನ್ನು ತರುವ ಕುರಿತು ಟಾ.ಟಾ ಎ.ಸಿ ನಂ ಕೆಎ 28/ಬಿ-0755 ನೇದ್ದನ್ನು ಬಾಡಿಗೆಗೆ ತೆಗೆದುಕೊಂಡಿದ್ದು  ಅದರ ಚಾಲಕ ರಾಜಶೇಖರ ತಂದೆ ಬಸವರಾಜ ಪಾಟೀಲ್ ಸಾ: ಜಲನಗರ ವಿಜಯಪೂರ ಅಂತಾ ಇದ್ದು ಸದರಿ ಸಾಮಾನುಗಳನ್ನು ತೆಗೆದುಕೊಂಡು ಬರುವ ಕುರಿತು ಟಾ.ಟಾ ಎ.ಸಿ ವಾಹನದಲ್ಲಿ ನಾನು ಮತ್ತು ಟಾ.ಟಾ ಎ.ಸಿ ಮಾಲೀಕರಾದ ನಂದೀಶ ಹಾಗೂ ತನ್ನ ಮಗ ಮಹಿಬೂಬ ಎಲ್ಲರೂ ಕೂಡಿ ಇಂದು ಬೆಳಗು ಜಾವ 12-30 ಗಂಟೆಗೆ ವಿಜಯಪೂರವನ್ನು ಬಿಟ್ಟೆವು ಸದರಿ ವಾಹನವನ್ನು ಅದರ ಚಾಲಕ ರಾಜಶೇಖರ ಈತನು ನಡೆಯಿಸುತ್ತಿದ್ದನು ನಾವು ಇಲಕಲ್ ಕುಷ್ಟಗಿ ಮಾರ್ಗವಾಗಿ ಹೊಸಪೇಟೆ ಕಡೆಗೆ ಹೋಗುತ್ತಿದ್ದಾಗ ನಮ್ಮ ಟಾ.ಟಾ ಎ.ಸಿ ಚಾಲಕ ವಾಹನವನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಯಿಸಿಕೊಂಡು ಹೊರಟಿದ್ದು ಕುಷ್ಟಗಿ ದಾಟಿ ಹೊಸಪೇಟೆ ಕಡೆಗೆ ಹೋಗುತ್ತಿದ್ದಾಗ ಬೆಳಗುಜಾವ 3-30 ಗಂಟೆ ಸುಮಾರಿಗೆ ರಾಮದೇವ ಡಾಬಾದಿಂದ ಸ್ವಲ್ಪ ಮುಂದೆ ಹೊಸಪೇಟೆ ಕಡೆಗೆ ಮುಂದೆ ಹೋಗುತ್ತಿದ್ದ ಯಾವುದೋ ಒಂದು ವಾಹನಕ್ಕೆ ಹಿಂದಿನಿಂದ ಟಕ್ಕರಕೊಟ್ಟು ಅಪಘಾತ ಪಡಿಸಿ ಸ್ವಲ್ಪ ಮುಂದೆ ಹೋಗಿ ವಾಹನವನ್ನು ನಿಲ್ಲಿಸಿದನು ನಮ್ಮ ವಾಹನ ಅಪಘಾತ ಪಡಿಸಿದ ವಾಹನ ಹಾಗೆಯೇ ಹೊರಟು ಹೋಗಿದ್ದು ಅದು ಯಾವುದು ಅಂತಾ ಗೊತ್ತಾಗಿರುವದಿಲ್ಲಾ ನೋಡಲಾಗಿ ನನಗೆ ಸದರಿ ಅಪಘಾತದಿಂದ ಬಲಗೈಗೆ,ಮತ್ತು ಎಡಗೈಗೆ ತೆರಚಿದಗಾಯ ಹಾಗೂ ಕಿವಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿತ್ತು ಮತ್ತು ನಮ್ಮ ವಾಹನದಲ್ಲಿದ್ದ ವಾಹನದ ಮಾಲೀಕ ನಂದಿಶನಿಗೆ ಮತ್ತು ನನ್ನ ಮಗ ಮಹಿಬೂಬನಿಗೆ  ಯಾವುದೇ ಗಾಯವಗೈರೆ ಆಗಿರುವದಿಲ್ಲಾ ನಂತರ ಅಪಘಾತ ಪಡಿಸಿದ ನಂತರ ಅದರ ಚಾಲಕ ರಾಜಶೇಖರ ಈತನು ವಾಹನವನ್ನು ಬಿಟ್ಟು ಓಡಿ ಹೋಗಿದ್ದು ಅಲ್ಲಿಗೆ ಬಂದ ಯಾವುದೋ ಒಂದು ಖಾಸಗಿ ವಾಹನದಲ್ಲಿ ಇಲಾಜಕ್ಕಾಗಿ ಬಂದು ಸೇರಿಕೆಯಾಗಿದ್ದು ಇರುತ್ತದೆ ಕಾರಣ ಸದರಿ ಟಾ.ಟಾ ಎ.ಸಿ ಚಾಲಕ ರಾಜಶೇಖರ ಈತನ ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ವಿನಂತಿ ಅಂತಾ ಮುಂತಾಗಿದ್ದ ಹೇಳಿಕೆ ಪಿರ್ಯಾದಿಯನ್ನು ಆಸ್ಪತ್ರೆಯಲ್ಲಿ ಪಡೆದುಕೊಂಡು ವಾಪಾಸ್ ಠಾಣೆಗೆ 10-30 ಗಂಟೆಗೆ ಬಂದು ಇದರ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 93/2015 ಕಲಂ 279,337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 138/2015  ಕಲಂ 279, 337, 338 ಐ.ಪಿ.ಸಿ
ದಿ:08-06-2015 ರಂದು ಸಾಯಂಕಾಲ 4-15 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ದುಖಾಃಪಾತಗೊಂಡವರು ಚಿಕಿತ್ಸೆಗೆ ದಾಖಲಾದ ಬಗ್ಗೆ ಎಮ್.ಎಲ್.ಸಿ ಸ್ವೀಕೃತವಾಗಿದ್ದು, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶರಣಪ್ಪ ಗೋಡೆಕಾರ ಸಾ: ಮಸಬಹಂಚಿನಾಳ ಇವರನ್ನು ವಿಚಾರಿಸಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ದೂರಿನ ಸಾರಾಂಶವೇನೆಂದರೇ, ಇಂದು ದಿ:08-06-2015 ರಂದು ಮಧ್ಯಾಹ್ನ ನನ್ನ ಸ್ನೇಹಿತ ಹನುಮರೆಡ್ಡಿ ಇತನು ಕೊಪ್ಪಳದಲ್ಲಿ ಕೆಲಸವಿದೆ ಅಂತಾ ಹೇಳಿ ಹನುಮರೆಡ್ಡಿ ಇವರ ಮೋಟಾರ ಸೈಕಲ್ ನಂ: ಕೆಎ-35/ಆರ್-2863 ನೇದ್ದರಲ್ಲಿ ಕುಳಿತುಕೊಂಡು ಕೊಪ್ಪಳಕ್ಕೆ ಬರುತ್ತಿದ್ದೆವು. ಹನುಮರೆಡ್ಡಿ ಇತನು ಮೋಟಾರ ಸೈಕಲ್ ಚಾಲನೆ ಮಾಡುತ್ತಿದ್ದನು. ನಂತರ ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ಗದಗ-ಕೊಪ್ಪಳ ಎನ್,.ಎಚ್-63 ರಸ್ತೆಯ ಹಲಿಗೇರಿ ಸಮೀಪ ಹೊರಟಿದ್ದಾಗ, ಅದೇವೇಳೆಗೆ ಕೊಪ್ಪಳ ಕಡೆಯಿಂದ ಟಾಟಾ ಜಿಪ್ ನಂ: ಕೆಎ-37/ಎ-2900 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದಾ ಓಡಿಸಿಕೊಂಡು ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಓಡಿಸುತ್ತಾ ಒಮ್ಮಲೆ ರಾಂಗಸೈಡ್ ಬಂದವನೇ ನಮ್ಮ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಢಿದ್ದರಿಂದ ಈ ಅಪಘಾತದಲ್ಲಿ ನನಗೆ ಬಲಕಾಲತೊಡೆಗೆ ಭಾರಿ ರಕ್ತಗಾಯವಾಗಿ ಮೂಳೆ ಮುರಿದಂತಾಗಿರುತ್ತದೆ. ಮತ್ತು ಸ್ನೇಹಿತ ಹನುಮರೆಡ್ಡಿ ಇತನ ತಲೆಗೆ ಭಾರಿ ರಕ್ತಗಾಯವಾಗಿದ್ದು, ಅಲ್ಲದೇ ಬಲಗಡೆ ರಟ್ಟೆಗೆ ಮತ್ತು ಎದೆಯ ಎಡಭಾಗದಲ್ಲಿ ರಕ್ತಗಾಯವಾಗಿರುತ್ತದೆ. ಕಾರಣ ಅಪಘಾತ ಮಾಡಿದ ಟಾಟಾ ಜಿಪ್ ನಂ: ಕೆಎ-37/ಎ2900 ನೇದ್ದರ ಚಾಲಕ ಶಿವಕುಮಾರ ಕೊಟಗಿ ಸಾ: ಹಳ್ಳಿಕೇರಿ ತಾ: ಮುಂಡರಗಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಸಾಯಂಕಾಲ 5-30 ಗಂಟೆಗೆ ಪಡೆದುಕೊಂಡು ವಾಪಾಸ್ ಠಾಣೆಗೆ ಸಾಯಂಕಾಲ 6-00 ಗಂಟೆಗೆ ಬಂದು ಸದರಿ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 59/2015  ಕಲಂ 279, 338 ಐ.ಪಿ.ಸಿ:
ದಿನಾಂಕ: 08-06-2015 ರಂದು ಮುಂಜಾನೆ 11-15 ಗಂಟೆ ಸುಮಾರಿಗೆ ಪಿರ್ಯಾದಿದಾರನು ತನ್ನ ಮೋಟಾರ್ ಸೈಕಲ್ ನಂ. ಕೆಎ-26/ಯು-5361 ನೇದ್ದರ ಮೇಲೆ ಗಜೇಂದ್ರಗಡದಿಂದ ಚಿಕ್ಕಬೋಮ್ಮನಾಳ, ಹಿರೇಬಿಮ್ಮನಾಳ, ಉಪ್ಪಲದಿನ್ನಿ ಮುಂತಾದ ಗ್ರಾಮಗಳಲ್ಲಿಯ ಹತ್ತಿ ಪ್ಲಾಟಗಳನ್ನು ಪರಿವೀಕ್ಷಣೆ ಮಾಡಲು ವಜ್ರಬಂಡಿ ಮುಖಾಂತರ ವಜ್ರಬಂಡಿ-ಮಂಡಲಮರಿ ರಸ್ತೆಯ ಮೇಲೆ ವಜ್ರಬಂಡಿ ಸೀಮಾದಲ್ಲಿಯ ಶರಣಪ್ಪ ಹುಡೇದ ಇವರ ಹೋಲದ ಹತ್ತಿರ ಸಾಲಭಾವಿ ಕ್ರಾಸನಿಂದ 200 ಮೀಟರ್ ಪೂರ್ವದಲ್ಲಿ ತಿರುವಿನಲ್ಲಿ ಹೋಗುತಿದ್ದಾಗ ಅದೇವೇಳೆಗೆ ಆರೋಪಿತನು ತಾನು ಚಲಾಯಿಸುತಿದ್ದ ಜೀಪ್ ನಂ. ಕೆಎ-23/ಎಂ-4452 ನೇದ್ದನ್ನು ಮಂಡಲಮರಿ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಎದುರುಗಡೆಯಿಂದ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು ಇರುತ್ತದೆ. ಇದರಿಂದ ಪಿರ್ಯಾದಿದಾರನಿಗೆ ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ಪಿರ್ಯಾದಿಯ  ಸಾರಾಂಶದ ಯಲಬುರ್ಗಾ ಠಾಣೆ ಗುನ್ನೆ ನಂ: 59/2015 ಕಲಂ. 279, 338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 164/2015  ಕಲಂ 114, 415, 417, 420, 463, 468, 469 ಸಹಿತ 34 ಐ.ಪಿ.ಸಿ:

ದಿನಾಂಕ: 08-06-2015 ರಂದು ಸಂಜೆ 5:00 ಗಂಟೆಗೆ ಮಾನ್ಯ ಸಿಪಿಐ ಸಾಹೇಬರು ಗಂಗಾವತಿ ಗ್ರಾಮೀಣ ವೃತ್ತ ರವರ ಜ್ಞಾಪನ ಪತ್ರ ಸಂ: /ಉ.ಪ್ರ/2015461 ದಿನಾಂಕ: 05-06-2015 ರನ್ವಯ ಮಾನ್ಯ ನ್ಯಾಯಲಯದ ಖಾಸಗಿ ಫಿರ್ಯಾದಿ ಸಂ: 137/2015 ನೇದ್ದು ಸ್ವೀಕೃತವಾಗಿದ್ದು ಸದರಿ ದೂರನ್ನು ಶ್ರೀ ರಮೇಶ ಮ್ಯಾದರ ತಂದೆ ನೀಲಪ್ಪ ಮ್ಯಾದಾರ, 40 ವರ್ಷ, ವ್ಯಾಪಾರ ಸಾ: ಕಾರಟಗಿ ತಾ: ಗಂಗಾವತಿ ಇವರು ಸಲ್ಲಿಸಿದ್ದು, ಅದರ ಸಾರಾಂಶ ಏನಂದರೆ, ಶ್ರೀರಾಮನಗರದಲ್ಲಿ ಆರೋಪಿತರಾದ (1) ಶ್ರೀಮತಿ ಯಮುನಾಬಾಯಿ ಗಂಡ ಬೇಲೂರಪ್ಪ 60 ವರ್ಷ, ಸಾ: ಶ್ರೀರಾಮನಗರ (2) ಬೇಲೂರಪ್ಪ 65 ವರ್ಷ, ಸಾ: ಶ್ರೀರಾಮನಗರ ಮತ್ತು (3) ಸುಬಾಸ ತಂದೆ ಬೇಲೂರಪ್ಪ 30 ವರ್ಷ, ಸಾ: ಶ್ರೀರಾಮನಗರ ಇವರುಗಳು ತಮ್ಮ ಪ್ಲಾಟ್ ನಂ: 58/12, 58/13, 58/15, 58/16, 58/17 ನೇದ್ದವುಗಳನ್ನು ಫಿರ್ಯಾದಿದಾರರಿಗೆ ಮಾರಾಟ ಮಾಡಿ ದಿನಾಂಕ: 15-3-2013 ರಂದು  ನೊಂದಣಿ ಸಂ: 98/13-14 ರನ್ವಯ 22 ಲಕ್ಷ ರೂಪಾಯಿಗಳಿಗೆ ಖರೀದಿ ಕರಾರು ಪತ್ರ ಬರೆದುಕೊಟ್ಟು ಮುಂಗಡವಾಗಿ 1 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದು, ಆದರೆ ಆರೋಪಿತರು ಇದಕ್ಕೂ ಮುಂಚಿತವಾಗಿ  ದಿನಾಂಕ: 05-04-2010 ರಂದು  ಇವೇ ಪ್ಲಾಟುಗಳನ್ನು ಮ್ಯಾನೇಜರ್ ಶ್ರೀರಾಮ ಸಿಟಿ ಯೂನಿಯನ್ ಫೈನಾನ್ಸ್ ಲಿಮಿಟೆಡ್, ಸಿಂಧನೂರು ಇವರಿಗೆ ಒತ್ತೆ ಹಾಕಿ (Mortgage), ಫಿರ್ಯಾದಿದಾರರಿಗೆ ತಿಳಿಯದಂತೆ ಅವರಿಗೆ ಪ್ಲಾಟಗಳನ್ನು ಮಾರಾಟ ಮಾಡಿ ಹಣ ಪಡೆದು ಮೋಸ ಮಾಡಿರುತ್ತಾರೆ. ಕಾರಣ ಆರೋಫಿತರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ಮುಂತಾಗಿ ಇದ್ದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ಪ್ರಕರಣದ ತನಿಖೆ ಕೈಗೊಳ್ಳಲಾಯಿತು.

0 comments:

 
Will Smith Visitors
Since 01/02/2008