ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಬೇವೂರ ಪೊಲೀಸ್ ಠಾಣಾ ಗುನ್ನೆ ನಂ. 69/2015
ಕಲಂ 279, 304(ಎ) ಐ.ಪಿ.ಸಿ :
ದಿನಾಂಕ: 26-06-2015 ರಂದು ಸಂಜೆ 7-00 ಗಂಟೆಯ ಸುಮಾರಿಗೆ ಮೃತ ಶರಣಪ್ಪ ತಂದೆ ಪಕೀರಪ್ಪ
ಚಿಕ್ಕಗೌಡ್ರ ವಯ: 35 ವರ್ಷ ಜಾತಿ: ಕುರಬರ ಉ: ಜೇಸ್ಕಾಂ ಕಂಪನಿಯ 33 ಕೆ.ವಿ. ವಿದ್ಯುತ್ ಉಪಕೇಂದ್ರದಲ್ಲಿ
ಕೆಲಸ ಹಾಗೂ ಮೋಟಾರ ಸೈಕಲ ನಂ: ಕೆ.ಎ-37/ಎಕ್ಷ-5919 ನೇದ್ದರ ಸವಾರ
ಸಾ: ವಜ್ರಬಂಡಿ ತಾ: ಯಲಬುರ್ಗಾ ಜಿ: ಕೊಪ್ಪಳ. ಆರೋಪಿತನು ತಾನು ನಡೆಯಿಸುತ್ತಿದ್ದ ಮೋಟಾರ ಸೈಕಲ ನಂ: ಕೆ.ಎ-37/ಎಕ್ಷ-5919
ನೇದ್ದನ್ನು ದಮ್ಮೂರು-ಜೀ. ಜರಕುಂಟಿ ರಸ್ತೆಯ ಮೇಲೆ ಸದರಿ ಮೋಟಾರ್ ಸೈಕಲನ್ನು ದಮ್ಮೂರು ಗ್ರಾಮದ
ಕಡೆಯಿಂದ ಜೀ. ಜರಕುಂಟಿ ಗ್ರಾಮದ ಕಡೆಗೆ ಅತೀಜೋರಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ದಮ್ಮೂರು
ಸೀಮಾದಲ್ಲಿಯ ಪರಸಪ್ಪ ಕುಡಗುಂಟಿ ಇವರ ಹೋಲದ ಹತ್ತಿರ ಬರುತ್ತಿರುವಾಗ ಮೋಟಾರ್ ಸೈಕಲ್ ನಿಯಂತ್ರಣ
ತಪ್ಪಿ ರಸ್ತೆಯ ಮೇಲೆ ಬಿದ್ದಿದ್ದರಿಂದ ಸದರಿಯವನ ಹಣೆಗೆ ಮತ್ತು ತಲೆಗೆ ಭಾರಿ ಸ್ವರೂಪದ ಗಾಯ ಹಾಗೂ
ಕೈ-ಕಾಲುಗಳಿಗೆ ತೆರಚಿದ ನಮೂನೆಯ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ
ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 137/2015 ಕಲಂ
78(3) Karnataka Police Act
ದಿನಾಂಕ. 26-06-2015 ರಂದು 09-00 ಪಿ.ಎಂ.ಕ್ಕೆ ಫಿರ್ಯಾದಿದಾರರಾದ ಮಾನ್ಯ ಕೆ.ಜಯಪ್ರಕಾಶ
ಪಿ.ಎಸ್.ಐ. ಮುನಿರಾಬಾದ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ನೀಡಿದ್ದು
ಸಾರಾಂಶವೆನಂದರೆ. ದಿನಾಂಕ. 26-06-2015 ರಂದು 6-45 ಪಿ.ಎಂ.ಕ್ಕೆ ಫಿರ್ಯಾದಿದಾರರು ಮತ್ತು ತಮ್ಮ
ಸಿಬ್ಬಂದಿಯವರು ಹಿರೇ ಬಗನಾಳ ಗ್ರಾಮದ ದುರ್ಗಾ ದೇವಿ ದೇವಸ್ಥಾದ ಹತ್ತಿರ ಮಟಕಾ ಜೂಜಾಜ ನಡೆದ
ಬಗ್ಗೆ ಮಾಹಿತಿ ಇದ್ದ ಪ್ರಕಾರ ಅಲ್ಲಿಗೆ ಹೋಗಿ ಸಿಬ್ಬಂದಿ ಮತ್ತು ಪಂಚರೊಂದಿಗೆ ಮಟಕಾ ಜೂಜನಾಟದಲ್ಲಿ
ತೊಡಿಗಿದ್ದ ಆರೋಪಿತನಿಗೆ ದಾಳಿ ಮಾಡಿ ಹಿಡಿದುಕೊಂಡು ಆರೋಪಿ ನಿಂಗಪ್ಪ ತಾಯಿ
ಹುಲಿಗೆವ್ವ ಮಾದಿನೂರ ಸಾ: ಹಿರೇಬಗನಾಳ ಕೊಪ್ಪಳ ಇತನಿಂದ ಜೂಜಾಟದ ಸಾಮಗ್ರಿಗಳಾದ ಮಟನಾ ನಂಬರ 1 ಮಟಕಾ ನಂಬರ ಬರೆದ ಚೀಟಿ, ಒಂದು ಬಾಲಪೆನ್ನು ಮತ್ತು ಜೂಜಾಟದ ನಗದು ಹಣ 2310 - 00 ರೂ. ಗಳನ್ನು ಜಪ್ತ ಮಾಡಿಕೊಂಡು
ಠಾಣೆಗೆ ಬಂದು ಆರೋಪಿತನ ವಿರುದ್ದ ಕ್ರಮ ಜರುಗಿಸಲು ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
3) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 71/2015 ಕಲಂ 279, 337, 338 ಐ.ಪಿ.ಸಿ :
ದಿನಾಂಕ: 26-06-2015 ರಂದು ಮಧ್ಯಾಹ್ನ 5-00 ಗಂಟೆಗೆ ಮೈನಳ್ಳಿ
ಕ್ರಾಸ್ ಹತ್ತಿರ ರಸ್ತೆ ಅಫಘಾತವಾದ ಬಗ್ಗೆ ಪೋನ್ ಮುಖಾಂತರ ಮಾಹಿತಿ ಬಂದ ಮೇರೆಗೆ ಕೂಡಲೇ ಘಟನಾ ಸ್ಥಳಕ್ಕೆ
ಬೇಟಿ ನೀಡಿ, ಪರಿಶೀಲಿಸಿದ್ದು, ಆರೋಪಿತನಿಗೆ ಭಾರಿ ಸ್ವರೂಪದ ರಕ್ತಗಾಯ ವಾಗಿದ್ದು ಇರುತ್ತದೆ. ನಂತರ
ಗಾಯಾಳುವಿಗೆ 108 ವಾಹನದಲ್ಲಿ ಹಾಕಿ ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದು,
ನಂತರ ಅಲ್ಲಿಯೇ ಇದ್ದ ಘಟನೆಯ ಪ್ರತ್ಯೇಕ್ಷದಶರ್ಿಯಾದ ಫಿರ್ಯಾದಿದಾರರು ತಮ್ಮ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶವೆನೆಂದರೆ,
ಇಂದು ದಿನಾಂಕ: 26-06-2015 ರಂದು ಮಧ್ಯಾಹ್ನ 4-30 ಗಂಟೆಯ ಸುಮಾರಿಗೆ ತಾನು ಅಳವಂಡಿ-ಹಿರೇಸಿಂದೋಗಿ
ರಸ್ತೆಗೆ ಹೊಂದಿಕೊಂಡಿರುವ ತಮ್ಮ ಹೊದಲ್ಲಿ ಕೆಲಸ ಮಾಡುತ್ತಿದ್ದಾಗ, ಅಳವಂಡಿ ಕಡೆಯಿಂದ ಆರೋಪಿತನು ತಾನು
ನಡೆಸುತ್ತಿದ್ದ ಮೋಟರ್ ಸೈಕಲ್ ನಂ: ಕೆಎ-37 ಎಕ್ಸ್-3591 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ
ನಡೆಸಿಕೊಂಡು ಬಂದು ವೇಗದ ಮೇಲೆ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಜೋರಾಗಿ ಬಿದ್ದ ಪರಿಣಾಮ, ಆರೋಪಿನಿಗೆ
ಬಲಗಡೆ ಕಣ್ಣಿನ ಮೇಲೆ ಹುಬ್ಬಿಗೆ, ಬಲಗಡೆಯ ಹಣೆಯ ಮೇಲೆ ತಲೆಗೆ ಭಾರಿ ರಕ್ತಗಾಯವಾಗಿದ್ದು, ಅಲ್ಲದೇ
ಎರಡೂ ಕೈಗಳಿಗೆ, ಮೂಗಿಗೆ, ಹೊಟ್ಟೆಗೆ, ಎರಡೂ ಕಾಲುಗಳಿಗೆ ತೆರಚಿದ ರಕ್ತಗಾಯವಾಗಿದ್ದು ಇರುತ್ತದೆ.
ಕಾರಣ ಸದರಿ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯನ್ನು ಪಡೆದುಕೊಂಡು ಸಂಜೆ 8-30 ಗಂಟೆಗೆ
ವಾಪಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 152/2015 ಕಲಂ 279,
338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ 26.06.2015 ರಂದು ಸಾಯಂಕಾಲ 5:00 ಗಂಟೆಗೆ
ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ದಾಖಲಾಗಿದ್ದ ಪಿರ್ಯಾದಿದಾರರಾದ ಯಮನಪ್ಪ
ಕನ್ಯಾಹಾಳ್ ಸಾ: ಗಾಣದಾಳ ಇವರು ನೀಡಿದ ಹೇಳಿಕೆ ಪಿರ್ಯಾದಿ ಸಾರಾಂಶವೇನೆಂದರೆ ಇಂದು ದಿನಾಂಕ
26.06.2015 ರಂದು ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ತನ್ನ ಹೊಸ ಹಿರೋ
ಸ್ಲಂಡೆರ್ ಪ್ಲಸ್ ಮೋ.ಸೈ ಹಿಂದೆ ಹುಚ್ಚಪ್ಪ ಇತನನ್ನು ಕೂಡಿಸಿಕೊಂಡು ಕೊಪ್ಪಳದಿಂದ ಇರಕಲಗಡಾ
ಗ್ರಾಮದ ಕಡೆಗೆ ಹೊರಟಿದ್ದಾಗ ಓಜನಹಳ್ಳಿ ಕ್ರಾಸ್ ಹತ್ತಿರ ಎದುರುಗಡೆಯಿಂದ ಒಬ್ಬ ಟಾಟಾ ಏಸಿ ನಂ
ಕೆ.ಎ-37/ಎ-938 ನೇದ್ದರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ರಾಂಗ್ ಸೈಡಗೆ
ಬಂದು ಪಿರ್ಯಾದಿಯ ಮೋ.ಸೈಗೆ ಟಕ್ಕರಕೊಟ್ಟು ಅಪಘಾತ ಮಾಡಿದ್ದರಿಂದ ಮೋ.ಸೈ ಚಲಾಯಿಸುತ್ತಿದ್ದ
ಪಿರ್ಯಾಧಿಗೆ ಭಾರಿ ಸ್ವರೂಪದ ಗಾಯವಾಗಿದ್ದು ಇರುತ್ತದೆ. ಅಪಘಾತ ಪಡಿಸಿದ ನಂತರ ಟಾಟಾ ಏಸಿ
ಚಾಲಕನ್ನು ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದು ಇರುತ್ತದೆ. ಕಾರಣ ಆರೋಪಿತನ ಮೇಲೆ ಕಾನೂನು ಕ್ರಮ
ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯನ್ನು ಪಡೆದುಕೊಂಡು ವಾಪಾಸ ಠಾಣೆಗೆ ಸಾಯಂಕಾಲ 5:30 ಗಂಟೆಗೆ
ಬಂದು ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 152/2015 ಕಲಂ 279, 338 ಐ.ಪಿ.ಸಿ ಸಹಿತ 187 ಐ.ಎಮ್.ವಿ ಕಾಯ್ದೆ ನೇದ್ದರಲ್ಲಿ ಪ್ರಕರಣ
ದಾಖಲಿಸಿ ತನಿಖೆಕೈಗೊಂಡಿದ್ದು ಇರುತ್ತದೆ.
5) ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 24/2015
ಕಲಂ 279, 337, 338 ಐ.ಪಿ.ಸಿ
ದಿನಾಂಕ 26-06-2015 ರಂದು ಬೆಳಗ್ಗೆ 08-45 ಗಂಟೆಗೆ ನಾನು
ಆರಾಳ ಗ್ರಾಮದಿಂದ ವಡ್ಡರಹಟ್ಟಿ ಕ್ಯಾಂಪ್ಗೆ ಬಂದು ಅಲ್ಲಿ ವಾಸವಿರುವ 8 ಮಕ್ಕಳನ್ನು ಪ್ರತಿ ದಿನ ಸದರಿ
ಮಕ್ಕಳು ವಿದ್ಯಾಭ್ಯಾಸ ಮಾಡುವ ಗಂಗಾವತಿಯಲ್ಲಿರುವ ಶಾಲೆಗಳಿಗೆ ಬಿಡುತ್ತೆನೆ ಪ್ರತಿ ದಿನದಂತೆ ನಾನು
ಇಂದು ಬೆಳಗ್ಗೆ 09-00 ಗೆ ವಡ್ಡರಹಟ್ಟಿ ಕ್ಯಾಂಪ್ ನಲ್ಲಿರುವ ಮಕ್ಕಳನ್ನು ನನ್ನ ಆಟೋ ಕೆಎ37
-8939 ನೇದ್ದರಲ್ಲಿ ಕರೆದುಕೊಂಡು ನನ್ನ ವಾಹನವನ್ನು ಚಾಲಾಯಿಸಿಕೊಂಡು ವಡ್ಡರಹಟ್ಟಿಯಿಂದ ಗಂಗಾವತಿಯ
ಕಡೆಗೆ ಅಶೋಕ ಹೋಟಲ್ ಹತ್ತಿರ ಬರುವಾಗ ಸಿಬಿಎಸ್ ವೃತ್ತದ ಕಡೆ ಇಂದ ಮಾರುತಿ ಸುಜಿಕಿ ಸಿಫ್ಟ್ ಕಾರು
ಕೆಎ 37 ಎಮ್ 8409 ನೇದ್ದರ ಚಾಲಕನಾದ ಬಸವರಾಜ ಸಾ:ಮರಳಿ ಇತನು ತನ್ನ ವಾಹನವನ್ನು ಅತೀಜೋರಾಗಿ ಮತ್ತು
ಅಲಕ್ಪ್ಷತನದಿಂದ ಚಾಲನೆ ಮಾಡಿಕೊಂಡು ಅಶೋಕ ಹೋಟಲ್ ಒಳಗಡೆ ಹೋಗಲು ತನ್ನ ವಾಹನವನ್ನು ಬಲಕ್ಕೆ ತಿರುಗಿಸಿ ನನ್ನ ಆಟೋದ ಬಲ ಭಾಗಕ್ಕೆ ಟಕ್ಕರ್ ಕೊಟ್ಟಿದ್ದರಿಂದ
ಅದರಲ್ಲಿ ಇದ್ದ 8 ಶಾಲೆ ಮಕ್ಕಳಲ್ಲಿ 3 ಮಕ್ಕಳಾದ 1] ಉಷಾ ತಂದೆ ಕೆ.ದೇವರಾಜ ವ;11 ಜಾ: ಕುಂಬಾರ ಸಾ:
ವಡ್ಡಹಟ್ಟಿ ಕ್ಯಾಂಪ್, ಇವಳಿಗೆ ಬಲಗಣ್ಣಿನ ಹತ್ತಿರ ರಕ್ತಗಾಯವಾಗಿದ್ದು 2] ಅನೀಲ್ ಕುಮಾರ ತಂದೆ ಕೆ
ನಾಗೇಶ ವ:10 ಜಾ: ಕುಂಬಾರ ಸಾ: ವಡ್ಡಹಟ್ಟಿ ಕ್ಯಾಂಪ್, ಇವನಿಗೆ ಬಲಗಾಲ ಮೊಣಕಾಲ ಕೆಳಗೆ ರಕ್ತಗಾಯವಾಗಿದ್ದು
ಇರುತ್ತದೆ.3] ನವೀನ್ ಕುಮಾರ ವ:10 ,ರವರಿಗೆ ಸಾದಾ ಮತು ಗಂಭೀರವಾದ ಗಾಯವಾಗಿದ್ದು ಕೂಡಲೆ ನಾನು ಸದರಿ
ಗಾಯವಾದ ಮಕ್ಕಳ ಪಾಲಕರಿಗೆ ಪೊನ್ ಮುಖಂತರ ವಿಷಯ ತಿಳಿಸಿದೆನು ನಂತರ ಅಲ್ಲಿ ಹಾಜರಿದ್ದ ರುದ್ರೇಶ ತಂದೆ
ಶರಣಪ್ಪ ಆಟೋ ಚಾಲಕ 108 ವಾಹನಕ್ಕೆ ಪೊನ್ ಮಾಡಿ ತಿಳಿಸಿದನು ಅಷ್ಟರಲ್ಲಿ ಉಷಾಳ ಪಾಲಕರು ಸ್ಥಳಕ್ಕೆ ಬಂದು ಗಂಭೀರ ಸ್ವರೂಪದ ಗಾಯವಾಗಿದ್ದ
ಉಷಾ ಮತ್ತು ಅನೀಲ್ ಕುಮಾರ ರವರನ್ನು ಚಿನಿವಾಲ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ದಾಖಲು ಮಾಡಿದ್ದು
ಹಾಗು ಸಾದ ಸ್ವರೂಪದ ಗಾಯವಾಗಿದ್ದ ನವೀನ್ ನನ್ನು 108 ವಾಹನದಲ್ಲಿ ಕರೆದುಕೊಂಡು ಬಂದು ಸರಕಾರಿ ಆಸ್ಪತ್ರೆಗೆ
ದಾಖಲು ಮಾಡಿದ್ದು ಇರುತ್ತದೆ. ಸದರಿ ಘಟಣೆಗೆ ಕಾರಣವಾದ
ಮಾರುತಿ ಸುಜಿಕಿ ಸಿಫ್ಟ್ ಕಾರು ಕೆಎ 37 ಎಮ್ 8409 ನೇದ್ದರ ಚಾಲಕ ಬಸವರಾಜ ಸಾ: ಮರಳಿ ತನ್ನ ವಾಹನವನ್ನು
ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಸದರಿ
ಅಪಘಾತ ಮಾಡಿದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು
ವಿನಂತಿ. ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ತನಿಖೆಕೈಗೊಂಡಿದ್ದು
ಇರುತ್ತದೆ.
6) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 151/2015 ಕಲಂ 379 ಐ.ಪಿ.ಸಿ:.
ದಿನಾಂಕ
26.06.2015 ರಂದು ಮದ್ಯಾನ 1:45 ಗಂಟೆಯ ಸುಮಾರಿಗೆ ಪಿರ್ಯಾದಿದಾರ ತಿರುಮಲನ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರು ಪಡಿಸಿದ್ದು ಅದರ
ಸಾರಾಂಶವೇನೆಂದರೆ ದಿನಾಂಕ 25.06.2015 ರಂದು ರಾತ್ರಿ 8:30 ಗಂಟೆಯಿಂದ ರಾತ್ರಿ 08:42 ಗಂಟೆಯ
ನಡುವಿನ ಅವಧಿಯಲ್ಲಿ ಕಲ್ಯಾಣಿ ಫ್ಯಾಕ್ಟ್ರಿಯ ಆವರಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರ
ನಂ ಕೆ.ಎ-37/ಎಮ್.ಎ-0949 ಅ.ಕಿ 3 ಲಕ್ಷ
ರೂಪಾಯಿಗಳಷ್ಟು ಕಿಮ್ಮತ್ತಿನವುಗಳನ್ನು ಯಾರೋ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು
ಹೋಗಿದ್ದು ಇರುತ್ತದೆ. ಕಾರಣ ಕಳುವಾದ ಕಾರ ಮತ್ತು ಕಳುವು ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ
ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment