ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 140/2015 ಕಲಂ. 279, 304(ಎ) ಐ.ಪಿ.ಸಿ:.
ದಿನಾಂಕ
30-06-2015 ರಂದು ಮೃತ
ಕುಲದೀಪ ಸಿಂಗ
ಮದ್ಯಾನ
03-45 ಗಂಟೆ ಸುಮಾರಿಗೆ
ಸಿಮ್ಲಾ ಕ್ರಾಸ
ಹತ್ತಿರ ತನ್ನ
ಮೋ.ಸೈ.ನಂ
ಕೆ.ಎ.35/ವಾಯ್
1288 ನೇದ್ದರಲ್ಲಿ ಹೋಗುತ್ತಿರುವಾಗ
ಕೆ.ಎಸ್.ಆರ್.ಟಿ.ಸಿ.ಬಸ್ಸ್
ನಂ.ಕೆ.ಎ.35/ಎಫ್,70
ಮೇದ್ದರ ಚಾಲಕನು
ಅತೀ ವೇಗ
ಅಲಕ್ಷತನದಿಂದ ರಾಂಗ
ರೂಟಿನಲ್ಲಿ ಚಲಾಯಿಸಿಕೊಂಡು
ಬಂದು ಮೋಸೈಗೆ
ಡಿಕ್ಕಿಕೊಟ್ಟು ಅಪಘಾತ
ಮಾಡಿದ್ದರಿಂದ
ಕುಲದೀಪಸಿಂಗ ಇವನಿಗೆ
ತಲೆಗೆ ಬಾರಿ
ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ
ಅಂತಾ ಮುಂತಾಗಿದ್ದ
ಪಿರ್ಯಾದಿ ಸಾರಾಂಶದ
ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ
ಕೈಗೊಲ್ಳಲಾಗಿದೆ.
2) ಕುಕನೂರ ಪೊಲೀಸ್ ಠಾಣೆ ಯು.ಡಿ.ಆರ್.ನಂ. 15/2015 ಕಲಂ 174 ಸಿ.ಆರ್.ಪಿ.ಸಿ:.
ದಿನಾಂಕ:
01/07/2015 ರಂದು 8-15 ಎ ಎಂ ಕ್ಕೆ ವರದಿದಾರನಾದ ಶೇಖಪ್ಪ ತಂದೆ ನಾಗಪ್ಪ ಯಡ್ಡೊಣಿ ವಯಾ: 32 ವರ್ಷ,
ಜಾ: ಗಾಣಿಗ ಉ:ಒಕ್ಕಲುತನ ಸಾ: ರ್ಯಾವಣಕಿ ಇವರು ಠಾಣೆಗೆ ಹಾಜರಾಗಿ ತನ್ನ ಲಿಖಿತ
ವರದಿಯನ್ನು ನೀಡಿದ್ದು, ಅದರ ಸಾರಾಂಶವೇನೆಂದರೆ, ವರದಿದಾರನ ಅಣ್ಣನಾದ ಶಿವಶಾಂತಪ್ಪ ಇವನು ದಿನಾಂಕ: 22-06-2015 ರಂದು ಸಾಯಂಕಾಲ 3-00 ಪಿ.ಎಂ.ಕ್ಕೆ ಬಾಲಾಪೂರ ಸೀಮಾದಲ್ಲಿರುವ ತಮ್ಮ
ತೋಟದ ಜಮೀನದಲ್ಲಿ ಹತ್ತಿ ಬೆಳೆಗೆ ನೀರು ಹಾಯಿಸುತ್ತಿರುವಾಗ ಅವನಿಗೆ ಹಾವು ಕಚ್ಚಿದ್ದು, ಚಿಕಿತ್ಸೆ ಕುರಿತು ಕೊಪ್ಪಳ
ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿದ್ದು ಅಲ್ಲಿ ಗುಣಮುಖ ವಾಗದ್ದಕ್ಕೆ ವೈದ್ಯರು
ಅಲ್ಲಿಂದ ಬಳ್ಳಾರಿ ವಿಮ್ಸ ಆಸ್ಪತ್ರೆಗೆ ರೇಫರ್ ಮಾಡಿದ್ದರಿಂದ ಶಿವಶಾಂತಪ್ಪನಿಗೆ ಬಳ್ಳಾರಿ ವಿಮ್ಸ ಆಸ್ಪತ್ರೆಗೆ
ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಚಿಕಿತ್ಸೆ ಮಾಡಿಸುತ್ತಿರುವಾಗ ತನ್ನ ಅಣ್ಣ ಶಿವಶಾಂತಪ್ಪ ಇವನು ದಿನಾಂಕ 30/06/2015 ರಂದು ರಾತ್ರಿ 11-15 ಗಂಟೆಯ ಸುಮಾರು ಚಿಕಿತ್ಸೆ
ಫಲಕಾರಿಯಾಗದೇ ಮೃತಪಟ್ಟಿದ್ದು, ಸದರಿಯವನ ಮರಣದಲ್ಲಿ ಯಾರ ಮೇಲೂ ಯಾವುದೇ ರೀತಿಯ
ಸಂಶಯ ವಗೈರೆ ಇರುವುದಿಲ್ಲಾ. ಕಾರಣ, ಕಾನೂನು ರೀತಿಯ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ
ಇದ್ದ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment