Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, July 2, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಸಂಚಾರ ಪೊಲೀಸ್ ಠಾಣೆ ಕೊಪ್ಪಳ  ಗುನ್ನೆ ನಂ. 41/2015  ಕಲಂ 279, 304(ಎ) ಐ.ಪಿ.ಸಿ:.
ದಿನಾಂಕ. 01-07-2015 ರಂದು ಮದ್ಯಾಹ್ನ 12-40 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಎಸ್. ಶರಣಪ್ಪ ತಂದೆ ಶಿವಪ್ಪ ಡೊಂಬರ ವಯ. 27 ಜಾತಿ. ಡೊಂಬರ ಉ. ಪೊಲೀಸ್ ಕಾನಸ್ಟೇಬಲ್ ಸಾ: ದಿವಟರ ಕ್ರಾಸ್ ಹತ್ತಿರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಅವರು ನೀಡಿದ ಹೇಳಿಕೆಯನ್ನು ಗಣಕೀಕರಣ ಮಾಡಿಕೊಂಡಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 01-07-2015 ರಂದು ಬೆಳಿಗ್ಗೆ 11-45 ಗಂಟೆಗೆ ಫಿರ್ಯಾದಿ ತನ್ನ ಮೋಟಾರ್ ಸೈಕಲ್ ನಂಬರ KA-36/R-2227 ಹಿಂದೆ ಮೃತ ಶಂಕ್ರಯ್ಯ ಅಬ್ಬಿಗೇರಿ ಇವರನ್ನು ಕೂಡಿಸಿಕೊಂಡು ಕೊಪ್ಪಳದ ನ್ಯಾಯಾಲಯದಿಂದ ಬಸವೇಶ್ವರ ಸರ್ಕಲಗೆ ಬರುತ್ತಿರುವಾಗ ಫಿರ್ಯಾದಿಗೆ ಒಂದು ಪೋನ ಬಂದಿದ್ದು ಫಿರ್ಯಾದಿ ಮೋಟಾರ್ ಸೈಕಲನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದಾಗ ಎದರುಗಡೆಯಿಂದ ಒಂದು ಕ್ಯಾಂಟರ ವಾಹನದ ಚಾಲಕನು ತಾನು ಚಲಾಯಿಸುತ್ತಿರುವ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಫಿರ್ಯಾದಿಯ ಮೇಲೆ ಬಂದಿದ್ದರಿಂದ ಮೋಟಾರ್ ಸೈಕಲ್ ಹಿಂದೆ ಕುಳಿತುಕೊಂಡ ಮೃತ ಶಂಕ್ರಯ್ಯ ಇತನಿಗೆ ಕ್ಯಾಂಟರಿನ ಎಡಗಡೆಯ ಭಾಗ ಟಕ್ಕರ್ ಆಗಿದ್ದರಿಂದ ಆತನು ಕೆಳಗೆ ಬಿದ್ದನು ನಂತರ ಕ್ಯಾಂಟರಿನ ಎಡಗಡೆಯ ಹಿಂದಿನ ಎಡಗಾಲಿಯು ಶಂಕ್ರಯ್ಯ ಇವರ ಎದೆಗೆ ಒತ್ತಿದ್ದರಿಂದ, ಎದೆಗೆ ಭಾರಿ ಒಳಪೆಟ್ಟು ಆಗಿ ಮೂಗಿನಿಂದ ಮತ್ತು ಬಾಯಿಂದ ರಕ್ತ ಬಂದಿದ್ದು ಚಿಕಿತ್ಸೆ ಕುರಿತು ಕೊಪ್ಪಳದ ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಚಿಕಿತ್ಸೆ ಮಾಡಿದ ವೈದ್ಯಾಧಿಕಾರಿಗಳು ಶಂಕ್ರಯ್ಯ ಇವರು ಮೃತಪಟ್ಟಿರುತ್ತಾರೆ ಅಂತಾ ತಿಳಿಸಿರುತ್ತಾರೆ ಅಂತಾ ಮುಂತಾಗಿದ್ದ ಗಣಕೀಕರಣದ ಹೇಳಿಕೆಯ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 141/2015  ಕಲಂ 279, 337 ಐ.ಪಿ.ಸಿ:.
ದಿನಾಂಕ. 30-06-2015 ರಂದು 06-30 ಪಿ.ಎಂ.ಕ್ಕೆ ಫಿರ್ಯಾದಿದಾರರು ಹಾಗೂ ಶರಣಪ್ಪ ಇವರು ಕೂಡಿಕೊಂಡು ಮೋ.ಸೈ. ನಂಬರ ಕೆ.ಎ.34/ವಿ.409 ನೇದ್ದರಲ್ಲಿ ಹುಲಗಿಯಿಂದ ಬಾದನಹಟ್ಟಿ ಗ್ರಾಮಕ್ಕೆ ಹೋಗುತ್ತಿರುವಾಗ ಹುಲಗಿ ಹೊಳೆಮುದ್ದಲಾಪುರ ರಸ್ತೆಯ ಮೇಲೆ ಮುದ್ಲಾಪುರ ಸಮೀಪ ಎದರುಗಡೆಯಿಂದ ಒಂದು ಆಟೋ ಚಾಲಕನು ಆಟೋವನ್ನು ಅತಿವೇಗವಾಗಿ ಹಾಗೂ ನಿರ್ಲಕ್ಷತನದಿಂದ ಅಡ್ಡಾದಿಡ್ಡ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ.ಸೈ. ಗೆ ಠಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಫಿರ್ಯಾದಿಗೆ ಮತ್ತು ಹಿಂದೆ ಕುಳಿತ ಶರಣಪ್ಪ ಇವರಿಗೆ ರಕ್ರಗಾಯ ಒಳಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
3) ಕಾರಟಗಿ  ಪೊಲೀಸ್ ಠಾಣೆ ಗುನ್ನೆ ನಂ. 144/2015 ಕಲಂ. 78(3) Karnataka Police Act.
ದಿನಾಂಕ- 01-07-2015 ರಂದು 10-00 ಪಿ.ಎಮ್. ಸುಮಾರಿಗೆ ಮರ್ಲಾನಹಳ್ಳಿಯ ಎಸ್.ಕೆ. ಟೇಲರ್ ಅಂಗಡಿಯ ಮುಂದೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಸಾರ್ವಜನಿಕರಿಗೆ ಕೂಗಿ ಮಟ್ಕಾ ನಂಬರುಗಳನ್ನು ಬರೆಸುವವರು ಬರೆಸಿರಿ ನಿಮ್ಮ ಲಕ್ಕಿ ನಂಬರ್ ಬಂದರೆ 1-00 ರೂಪಾಯಿಗೆ 80=00 ರೂಪಾಯಿ ಕೊಡುತ್ತೇವೆ ಅಂತಾ ಕೂಗಿ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ನಂಬರ ಬರೆದುಕೊಳ್ಳುತ್ತಿರುವಾಗ್ಗೆ ಮಾನ್ಯ ಪಿ.ಎಸ್.ಐ ಕಾರಟಗಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷದಲ್ಲಿ ದಾಳಿ ಮಾಡಲು ಆರೋಪಿ ನಂ 1 ಸಿಕ್ಕಿ ಬಿದ್ದಿದ್ದು ಆರೋಪಿ ನಂ 2 ಓಡಿ ಹೋಗಿದ್ದು ಆರೋಪಿ 1 ಈತನಿಂದ ಮಟ್ಕಾ ಜೂಜಾಟದ ಸಾಮಾಗ್ರಿಗಳು ಮತ್ತು ನಗದು ಹಣ ರೂ. 2310=00- ಗಳನ್ನು ಜಪ್ತ ಮಾಡಿಕೊಂಡಿದ್ದು ಬಂದು ಮೂಲ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದರ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ.ನಂ. 64/2015  ಕಲಂ 447, 427, 504, 506 ಸಹಿತ 34 ಐ.ಪಿ.ಸಿ:
ದಿನಾಂಕ 01/07/2015 ರಂದು ಸಂಜೆ 4-00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯ ಸಾರಾಂಶವೇನೆಂದರೆ, ನಾನು ನರಸಾಪೂರ ಗ್ರಾಮದ ಖಾಯಂ ನಿವಾಸಿಯಾಗಿದ್ದು ನನ್ನ ತಂದೆ ದ್ಯಾಮಪ್ಪ ತಂದಿ ಭೀಮಪ್ಪ ಬೇವಿನಕಟ್ಟೆ ಇವರಿಗೆ 4 ಜನ ಅಣ್ಣ ತಮ್ಮಂದಿರರು ಇರುವರು ನಮ್ಮ ತಂದೆ ಜೀವಂತ ಇರುವಾಗ ಅವನ ಮೇಲೆ ಅವನ ಸಹೋದರರು ಈ ಜಮೀನಿನ ಬಗ್ಗೆ ಕೇಸು ಮಾಡಿದ್ದರು ಆ ಕೇಸು ನಮ್ಮ ತಂದೆಯ ಪರವಾಗಿ ಆಗಿರುತ್ತದೆ. ನಂತರ ಅವರು ಮಾಡಿದ ಅಫೀಲ ಕೂಡಾ ವಜಾಗೊಂಡಿರುತ್ತದೆ. ನಂತರ ನಮ್ಮ ತಂದೆ ದಿನಾಂಕ 12/12/2008 ರಂದು ಮೃತನಾಗಿದ್ದು ನಮ್ಮ ತಂದೆಗೆ ನಾವು 3 ಜನ ಗಂಡು ಮಕ್ಕಳು 1] ನಾನು ಮಲ್ಲಪ್ಪ 2] ಭೀಮಪ್ಪ 3] ಜಾಣಪ್ಪ ಈ ಪ್ರಕಾರ ಇದ್ದು ನಮ್ಮ ತಾಯಿ ರುದ್ರಮ್ಮ ಇರುವಳು, ಸದರಿ ಕಳಕಪ್ಪ ತಂದೆ ಭೀಮಪ್ಪ ಬೇವಿನಕಟ್ಟಿ ಈತನು ಮತ್ತು ಇತರರು ನಮ್ಮ ಜಮೀನಿನ ಕಬ್ಜಾ ವಹಿವಾಟಿಗೆ ತೊಂದರೆ ಕೊಟ್ಟಾಗ ನಾವು ಅವರ ಮೇಲೆ ಕುಷ್ಟಗಿ ಸಿವ್ಹಿಲ್ ನ್ಯಾಯಾಲಯದಲ್ಲಿ ಮೂಲ ದಾವೆ ಸಂಖ್ಯೆ: 02/2012 ಮಾಡಿ ನಮ್ಮ ಕಬ್ಜಾ ವಹಿವಾಟಿಗೆ ಕಳಕಪ್ಪ ತಂದಿ ಭೀಮಪ್ಪ ಬೇವಿನ ಕಟ್ಟಿ ಈತನು ಮತ್ತು ಇತರರು ತೊಂದರೆ ಮಾಡದಂತೆ ಸ್ಟೇ ತೆಗೆದುಕೊಂಡಿರುತ್ತೇವೆ. ನಮ್ಮ ಕೇಸಿನಲ್ಲಿ ಸದರಿ ಜಮೀನಿನಲ್ಲಿ ಕಳಕಪ್ಪ ತಂದಿ ಭೀಮಪ್ಪ ಬೇವಿನಕಟ್ಟಿ ಇವರಾಗಲೀ ಇವರ ಸಂಬಂಧಿಕರಾಗಲೀ ನಮ್ಮ ಕಬ್ಜಾ ವಹಿವಾಟಿಗೆ ತೊಂದರೆ ಮಾಡಬಾರದು ಎಂದು ಮಾನ್ಯ ನ್ಯಾಯಾಲಯ ಕೊಟ್ಟ ಹುಕುಂ ಚಾಲ್ತಿಯಲ್ಲಿರುತ್ತದೆ,. ಈ ವರ್ಷ ನಮ್ಮ ಜಮೀನಿನಲ್ಲಿ ಸಾಲ ಸೂಲ ಮಾಡಿ ಗೋವಿನ ಜೋಳದ ಬೀಜವನ್ನು ಮತ್ತು ಗೊಬ್ಬರವನ್ನು ಬಿತ್ತಿ ತದನಂತರ ಒಂದುವರೆ ಅಡಿ ಎತ್ತರ ಬೆಳೆಯುವವರೆಗೂ ಸುಮ್ಮನೇ ಇದ್ದು ನಮ್ಮನ್ನು ಉದ್ದೇಶ ಪೂರ್ವಕ ನಾಶ ಮಾಡಬೇಕೆಂದು ಗೋವಿನ ಜೋಳದ ಬೆಳೆಯನ್ನು ಸ್ವತಃ ಕಳಕಪ್ಪ ಮತ್ತು ಅವನ ಹೆಂಡತಿ ಸೇರಿ ದಿನಾಂಕ 28/06/2015 ರಂದು ಮದ್ಯಾಹ್ನ 12-00 ಗಂಟೆಯ ಸಮಯ ನಾನು ನಮ್ಮ ತಮ್ಮನಾದ ಭೀಮಪ್ಪ ನಮ್ಮ ತಾಯಿ ರುದ್ರಮ್ಮ ಕೆಲಸ ಮಾಡುತ್ತಿರುವಾಗ ನಮ್ಮ ಕಣ್ಣೆದುರಿಗೆ ನಮ್ಮ ಜಮೀನಿನಲ್ಲಿ ನಿಂತ ಬೆಳೆಯನ್ನು ತಮ್ಮ ಎತ್ತುಗಳಿಂದ ಗಳೇ ಹೂಡಿ ಅಡ್ಡಲಾಗಿ ನಾಶಮಾಡಿಬಿಟ್ಟಿರುತ್ತಾರೆ. ಇವರು ನಮ್ಮ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಮಾನ್ಯ ಘನ ನ್ಯಾಯಾಲಯದ ದೇಶವನ್ನು ದಿಕ್ಕರಿಸಿ ಅಂದಾಜ ನಷ್ಟ ರೂ-30000/- (ಮೂವತ್ತು ಸಾವಿರ) ಬೆಳೆಯನ್ನು ಹಾಳು ಮಾಡಿರುತ್ತಾರೆ. ನಾವು ಈ ರೀತಿ ಮಾಡಬೇಡಿರಿ ಕೋರ್ಟಿನ ಸ್ಞೇ ಚಾಲ್ತಿಯಲ್ಲಿರುತ್ತದೆ ಎಂದು ಹೇಳಿದಾಗ ಅದನ್ನು ತೆಗೆದುಕೊಂಡು ಉಪ್ಪು ಹಾಕಿ ನೆಕ್ಕಿಕೋ ನಾನು ಗೋವಿನ ಜೋಳ ಲುಕ್ಷಾನಿ ಮಾಡಿರುತ್ತೇನೆ. ನೀನು ಏನ ಹರಕಂತಿ ಹರಕೋ ಹೋಗು ಲೇ ಮಕ್ಕಳ  ಈ ಸಾರೆ ಮೆಕ್ಕೆ ಜೋಳ ನಾಶ ಮಾಡಿರುವೇ ಮುಂದಿನ ಸಲ ನಿಮ್ಮನ್ನೆ ಕೊಲೆ ಮಾಡಿಬಿಡುತ್ತೇನೆ ಎಂದು ಜೀವದ ಬೆದರಿಕೆ ಒಡ್ಡಿರುತ್ತಾರೆ. ನನಗೆ ಮತ್ತು ನನ್ನ ಸೋದರರಿಗೆ ನನ್ನ ತಾಯಿಗೆ ನೀವು ಫೀರ್ಯಾದಿ ಕೊಟ್ಟರೆ ನಿಮ್ಮ ಮನೆಗೆ ಬೆಂಕಿ ಹಚ್ಚಿ ಸುಟ್ಟು ಸಾಯಿಸುತ್ತೇನೆ ಎಂದು ಜೀವದ ಬೆದರಿಕೆ ಹಾಕಿದ್ದರಿಂದ ನಾವು ಫೀರ್ಯಾದಿಯನ್ನು ಕೊಡಲು ತಡವಾಗಿರುತ್ತದೆ. ಕಳಕಪ್ಪ ಬೇವಿನಕಟ್ಟಿ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ  
5) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ.ನಂ. 117/2015  ಕಲಂ 379 ಐ.ಪಿ.ಸಿ:

ದಿನಾಂಕ: 01-07-2015 ರಂದು ರಾತ್ರಿ 10-45 ಗಂಟೆಗೆ ಫಿರ್ಯಾದಿದಾರರಾದ ಸಮರ್ಥ ತಂದೆ ಈರಪ್ಪ ಹುಲಿ ವಯಾ: 28 ವರ್ಷ ಜಾ: ಪತ್ತಾರ ಉ: ಮಾಲಸ ಸಿಲ್ವರ ಶಾಫಿ ಅಂಗಡಿಯಲ್ಲಿ ಕೆಲಸ ಸಾ: ಜವಳಿಸಾಲ ಹುಬ್ಬಳ್ಳಿ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆೆ, ಫಿಯರ್ಾದಿದಾರು ತಾವು ಕೆಲಸ ಮಾಡುವ ಅಂಗಡಿಯ ಮಾಲಿಕರು ಕೊಪ್ಪಳಕೆ ಹೋಗಿ ಪೇಮೆಂಟನ್ನು ತೆಗೆದುಕೊಂಡು ಬರುವಂತೆ ಹೇಳಿದ್ದರಿಂದ ಫಿರ್ಯಾದಿದಾರರು ಕೊಪ್ಪಳಕ್ಕೆ ಬಂದು ಕೂಕುಂಪಳ್ಳಿಯ ಮಹಾಂತೇಶ ಇವರು ಕೊಟ್ಟ ಹಣ ರೂ 1,00,000=00 ಗಳನ್ನ ಮತ್ತು ಕೊಪ್ಪಳದ ಮಂಜುನಾಥ ಇವರು ಕೊಟ್ಟ ಹಣ ರೂ 1,70,000=00 ಗಳು ಒಟ್ಟು ನಗದು ಹಣ ರೂ 2,70,000=00 ಗಳನ್ನು ತಾವು ತೆಗೆದುಕೊಂಡು ಬಂದಿದ್ದ ಕೈಚೀಲದಲ್ಲಿ ಇಟ್ಟುಕೊಂಡು ಅದರ ಜೀಪ್ನ್ನು ಹಾಕಿಕೊಂಡು ಬಸ್ ನಿಲ್ದಾಣಕ್ಕೆ ಬಂದು ಬಸ್ ನಿಲ್ದಾಣದಲ್ಲಿ ಕುಳಿತು ತನ್ನ ಚೀಲದಲ್ಲಿ ಹಣವನ್ನು ನೋಡಿದಾಗ ಅದರಲ್ಲಿ ಹಣ ಇರುವುದು ಕಂಡುಬಂದಿರುತ್ತದೆ. ನಂತರ ರಾತ್ರಿ 7-20 ಗಂಟೆಯ ಸುಮಾರಿಗೆ ಹುಬ್ಬಳ್ಳಿಗೆ ಹೋಗುವ ಬಸ್ ಬಂದಿದ್ದರಿಂದ ತಾನು ಆ ಬಸ್ನ್ನು ಹತ್ತುತ್ತಿರುವಾಗ ಗದ್ದಲದಲ್ಲಿ ದುಕಾಡಿಕೊಂಡು ಬಸ್ ಹತ್ತಿ ಬಸ್ನಲ್ಲಿ ಕುಳಿತುಕೊಂಡಾಗ ತನ್ನ ಕೈಚೀಲದ ಬಾರ ಕಡಿಮೆಯಾಗಿದ್ದು ತಕ್ಷಣ ತಾನು ತನ್ನ  ಕೈಚೀಲವನ್ನ ನೋಡಿದಾಗ ಕೈಚೀಲದ ಎರಡೂ ಸೈಡಿಗೆ ಬ್ಲೇಡದಿಂದ ಕಟ್ಟಾಗಿರುವುದು ಕಂಡುಬಂದಿದ್ದು, ಕೂಡಲೇ ತಾನು ಗಾಬರಿಯಾಗಿ ಕೈಚೀಲದ ಜೀಪ್ನ್ನು ತೆಗೆದು ಹಣವನ್ನು ನೋಡಿಕೊಳ್ಳಲು ತನ್ನ ಕೈಚೀಲದಲ್ಲಿದ್ದ ನಗದು ಹಣ ರೂ 2,70,000=00 ಗಳು ಕಂಡುಬರಲಿಲ್ಲಾ. ಕೂಡಲೇ ತಾನು ಗಾಭರಿಯಾಗಿ ಬಸ್ನಲ್ಲಿದ್ದ ಜನರನ್ನು ವಿಚಾರಿಸಲು ಏನು ತಿಳಿದುಬರಲಿಲ್ಲಾ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನ ಮಾಡಿದ ಯಾರೋ ಕಳ್ಳರನ್ನು ಪತ್ತೇ ಮಾಡಿ ಕಳ್ಳತನವಾದ ನನ್ನ ಹಣವನ್ನು ಮರಳಿ ಕೊಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಇರುವ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008