ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 78/2015
ಕಲಂ 87 Karnataka Police
Act.
ದಿನಾಂಕ: 15-07-2015 ರಂದು ಸಾಯಂಕಾಲ 6-20 ಗಂಟೆಯ ಸುಮಾರಿಗೆ
ಕಲ್ಲೂರು ಗ್ರಾಮದ ಹೊರವಲಯದಲ್ಲಿರುವ ಸರಕಾರಿ ಹಿರಿಯ
ಪ್ರಾಥಮಿಕ ಶಾಲೆಯ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಸಿರಸಲ ಗಿಡದ ಕೆಳಗೆ ಆರೋಪಿತರೆಲ್ಲರೂ ಕೂಡಿಕೊಂಡು
ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ
ಶ್ರೀ. ವಿನಾಯಕ ಪಿ.ಎಸ್.ಐ. ಸಿಬ್ಬಂದಿ ಸಮೇತ ದಾಳಿ ಮಾಡಿ ಹಿಡಿದಿದ್ದು 6 ಜನರು ಸಿಕ್ಕಿ ಬಿದ್ದಿದ್ದು
2 ಜನ ಆರೋಪಿತರು ಓಡಿ ಹೋಗಿದ್ದು ಇರುತ್ತದೆ. ಸಿಕ್ಕಿ
ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 3,000=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಹಳೆ ಪಟಾಪಟಿ ಲುಂಗಿ ಅಂ.ಕಿ. ಇಲ್ಲ. ಇವುಗಳು ಸಿಕ್ಕಿದ್ದು
ಇರುತ್ತದೆ.
2) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 71/2015
ಕಲಂ 279, 337, 338 ಐ.ಪಿ.ಸಿ:
ದಿನಾಂಕ: 15-07-2015 ರಂದು ಸಂಜೆ 18-30
ಗಂಟೆಗೆ ಕಠಾರೆ ಆಸ್ಪತ್ರೆಯಲ್ಲಿ ಇಲಾಜು ಪಡೆಯುತ್ತಿದ್ದ ಚಂದಪ್ಪ ಕಾಡದ
ಸಾ: ನರಸಾಪೂರ ಇವರು ಫೋನ ಮೂಲಕ ಕರೆಯಿಸಿ ನೀಡಿರುವ ಲಿಖಿತ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ ಠಾಣೆಗೆ
ಬಂದಿದ್ದು,
ಸದರ ಫಿರ್ಯಾದಿಯ ಸಾರಾಂಶ ಏನೆಂದರೆ, ದಿನಾಂಕ: 13-07-2015
ರಂದು ರಾತ್ರಿ 9-15 ಗಂಟೆಯ ಸುಮಾರಿಗೆ ಫಿರ್ಯಾದಿ ಹಾಗೂ ಆತನ ಪರಿಚಯಸ್ಥರಾದ ಚಂದನಗೌಡ ತಂದೆ ಬಸನಗೌಡ ಅಯ್ಯನಗೌಡ್ರ
ಇವರ ಮೋ/ಸೈ ನಂ: ಕೆಎ37/ಎಕ್ಸ-5804 ನೇದ್ದನ್ನು ಚಲಾಯಿಸಿಕೊಂಡು ಹಿರೇಗೊಣ್ಣಾಗರದಲ್ಲಿ ಜೆ.ಸಿ.ಬಿ. ಕೆಲಸ ಮಾಡಿದ ಹಣ ತೆಗೆದುಕೊಂಡು
ಬರುವ ಕುರಿತು ಹೋಗುವಾಗ ಚಿಕ್ಕಗೊಣ್ಣಗಾರ ಕ್ರಾಸ್ ದಾಟಿ ಹಿರೇಗೊಣ್ಣಾಗರ ನಡುವಿನ ಹಳ್ಳದ ಹತ್ತಿರ ಹಿರೇಗೊಣ್ಣಾಗರ
ಕಡೆಯಿಂದ ಮೋ/ಸೈ ನಂ: ಕೆಎ43/ಎ-4679 ನೇದ್ದರ ಚಾಲಕನಾದ ಮಲ್ಲೇಶಪ್ಪ ತಂದೆ ಶಂಕ್ರಪ್ಪ ಮಡಿವಾಳರ ಸಾ: ಚಿಕ್ಕಗೊಣ್ಣಾಗರ ಈತನು ಮೋ/ಸೈನ್ನು
ಅತೀವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಎಡಬದಿಗೆ ಹೊರಟಿದ್ದ ಫಿರ್ಯಾದಿದಾರರ
ಮೋಟಾರ ಸೈಕಲಗೆ ಟಕ್ಕರ ಕೊಟ್ಟು ಅಪಘಾತಪಡಿಸಿದ್ದು, ಈ ಅಪಘಾತದಲ್ಲಿ ಫಿರ್ಯಾದಿದಾರರ ಬಲಲಗಾಲು ಪಾದದ ಗಿಣಕಿ ಹತ್ತಿರ ಮುರಿದು ಭಾರಿ ರಕ್ತಗಾಯವಾಗಿದ್ದು
ಹಾಗೂ ಮೊಣಕಾಲಿಗೆ ಸಾದಾ ಗಾಯವಾಗಿ, ಸೊಂಟಕ್ಕೆ ಒಳಪೆಟ್ಟಾಗಿದ್ದು, ಎಡಗಣ್ಣಿನ ಹತ್ತಿರ, ಎಡ ಮೊಣಕಾಲ ಹತ್ತಿರ ತೆರೆಚಿದ
ಗಾಯವಾಗಿದ್ದು ಇರುತ್ತದೆ ಹಾಗೂ ಚಂದನಗೌಡ ಈತನಿಗೆ ಬಲಗೈ ಕಿರುಬೆರಳು ಒಳಪೆಟ್ಟಾಗಿದ್ದು, ಟಕ್ಕರ ಕೊಟ್ಟ ಮೋಟಾರ ಸೈಕಲ್ ಚಾಲಕನಿಗೆ ಗದ್ದಕ್ಕೆ ರಕ್ತಗಾಯವಾಗಿದ್ದು, ಎಡಮಲಕಿಗೆ,
ಬಲ ಮೊಣಕಾಲು, ಬಲ ತೊಡೆಗೆ, ಬಲಗೈ ಮುಂಗೈಗೆ ಮೊಣಕೈಗೆ ಹಾಗೂ ರಟ್ಟೆಗೆ ತೆರೆಚಿದ ಗಾಯಗಳಾಗಿದ್ದು ಇರುತ್ತದೆ. ಈತನ ಹಿಂದೆ ಕುಳಿತ
ಮಂಜುನಾಥ ತಂದೆ ರಾಮಣ್ಣ ಬಡಿಗೇರ ಸಾ: ವಾರಿಕಲ ಈತನಿಗೆ ಯಾವುದೇ ಗಾಯ ವಗೈರೆ ಆಗಿರುವುದಿಲ್ಲಾ. ನಂತರ
108
ಅಂಬ್ಯೂಲೆನ್ಸದಲ್ಲಿ ಉಪಚಾರ ಕುರಿತು ಇಲಕಲ ಕಠಾರೆ ಆಸ್ಪತ್ರೆಗೆ ಬಂದು ದಾಖಲಾದೇವು. ಕಾರಣ ನಮಗೆ ಅಪಘಾತಪಡಿಸಿ ಗಾಯಗೊಳಿಸಿದ
ಮೋಟಾರ ಸೈಕಲ್ ನಂ: ಕೆಎ43/ಎ-4679 ನೇದ್ದರ ಚಾಲಕನಾದ ಮಲ್ಲೇಶಪ್ಪ ಮಡಿವಾಳರ ಸಾ:
ಚಿಕ್ಕಗೊಣ್ಣಾಗರ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇರುವ ಫಿರ್ಯಾದಿ ಸಾರಾಂಶದ
ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 110/2015
ಕಲಂ 420 ಐಪಿಸಿ ಹಾಗೂ 3 ಮತ್ತು 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ
ಅಧಿನಿಯ 2004.
ದಿನಾಂಕ. 15-07-2015 ರಂದು ರಾತ್ರಿ 9-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಬಿಂದು ಮಾಧವರಾವ್ ತಂದೆ ತಿರುಮಲರಾವ್ ದೇಸಾಯಿ ವಯಾ 66 ವರ್ಷ ಉ.ನಿವೃತ್ತ ನೌಕರ ಸಾ.ಕೃಷ್ಣಗಿರಿ ಕಾಲೋನಿ ಕುಷ್ಟಗಿ ರವರು
ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು, ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರರು ದಿನಾಂಕ 01-08-2009 ರಂದು ಗಂಗಾವತಿಯ ಅಜಯ್ ಫೈನಾನ್ಸ್ ನ ಶ್ರೀ ಮಲ್ಲಿಕಾರ್ಜುನ ಬಿಚ್ಚಾಲಿ
ರವರ ಕಡೆಯಿಂದ 25 ಲಕ್ಷ ರೂಪಾಯಿ ಸಾಲ ರೂಪದಲ್ಲಿ ಪಡೆದು ಅಡವಾಗಿ ಗಂಗಾವತಿಯ ಪಂಪಾನಗರದಲ್ಲಿರು ತಮ್ಮ ಮನೆ ನಂ. 1-1-158/ಎ ನೇದ್ದನ್ನು ರಜಿಸ್ಟರ್ ಮಾಡಿಕೊಟ್ಟಿದ್ದು ಸದರಿ ವೇಳೆಯಲ್ಲಿ ಸಾಲ ತೀರಿದ ನಂತರ ಮನೆಯನ್ನು
ವಾಪಸ್ ಬಿಟ್ಟುಕೊಡುವಂತೆ ಕರಾರು ಪತ್ರವನ್ನು ಮಾಡಿದ್ದು, ಸದರಿ ಮಲ್ಲಿಕಾರ್ಜುನ ಬಿಚ್ಚಾಲಿ ರವರು ಕರಾರನ್ನು ತಮ್ಮ ಪತ್ನಿಯಾದ ಶ್ರೀಮತಿ ಸುಜಾತಾ
ಬಿಚ್ಚಾಲಿ ರವರ ಹೆಸರಿನಲ್ಲಿ ಮಾಡಿಕೊಂಡಿದ್ದು ಇರುತ್ತದೆ, ಸದರಿ ವ್ಯವಹಾರವು ಶ್ರೀ ರಾಮಕೃಷ್ಣ ಜಾಗೀರದಾರ ರವರ ಮುಖಾಂತರ ನಡೆದಿರುತ್ತದೆ,
ನಂತರ ಸದರಿ ಮಲ್ಲಿಕಾರ್ಜುನ ಬಿಚ್ಚಾಲಿ ರವರಿಗೆ ಕಂತುಗಳ ರೂಪದಲ್ಲಿ ಹಣ
ಪಾವತಿಸಿದ್ದು, ಆದರೆ ಸದರಿಯವರು ಈಗಾಗಲೇ
ಫಿರ್ಯಾದಿದಾರರಿಂದ ಖಾಲಿ ಕಾಗದ ಪತ್ರಗಳ ಮೇಲೆ ಸಹಿ ಪಡೆದಿದ್ದರ ಆಧಾರದ ಮೇಲಿಂದ ಸಾಲವನ್ನು ಒಟ್ಟು
70 ಲಕ್ಷ ರೂಪಾಯಿ ಕೊಡಬೇಕಾಗಿದೆ ಅಂತಾ ಹೇಳಿ ಸನ್ 2013 ನೇ ಸಾಲಿನಲ್ಲಿ ಸದರಿಯವರು ಫಿರ್ಯಾದಿದಾರರ ಮನೆಗೆ ಬಂದು ಜಗಳ ಮಾಡಿ
ಮನೆ ಖಾಲಿ ಮಾಡಿಸಿದ್ದು, ಹಾಗೂ ಸದರಿಯವರು ಫಿರ್ಯಾದಿದಾರರಿಗೆ ಕರಾರು ಪತ್ರದಲ್ಲಿ ಇರುವಂತೆ ಪ್ರತಿ ತಿಂಗಳಿಗೆ ನೂರು
ರೂಪಾಯಿಗೆ 2-00 ರೂ. ಗಳಂತೆ ಬಡ್ಡಿ ವಿಧಿಸಿದ್ದು ಅಲ್ಲದೇ ಹಣ ಲೇವಾದೇವಿಯಲ್ಲಿಇ ಮೋಸ ಮಾಡಿರುತ್ತಾರೆ ಅಂತಾ
ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 110/15 ಕಲಂ. 420 ಐಪಿಸಿ ಹಾಗೂ ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ
ಅಧಿನಿಯ 2004 ಕಲಂ. 3 ಮತ್ತು 4 ರವರ ಅನ್ವಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕ್ರಮ ಕೈಕೊಂಡೆನು.
0 comments:
Post a Comment