Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, July 15, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 138/2015  ಕಲಂ 78 (3) Karnataka Police Act & 420 IPC.
ದಿನಾಂಕ 14-07-2015 ರಂದು 21-00 ಗಂಟೆಗೆ ಶ್ರೀ ಈ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ತಮ್ಮದೊಂದು ವರದಿಯನ್ನು  ಜಪ್ತಿ ಪಂಚನಾಮೆ  ಹಾಗೂ ಮುದ್ದೇಮಾಲನ್ನು ಆರೋಪಿತನ  ಸಮೇತವಾಗಿ ಹಾಜರ ಪಡಿಸಿದ್ದು, ಸದರಿ ವರದಿಯ ಸಾರಂಶವೇನೆಂದರೆ,  ದಿನಾಂಕ 14-07-2015 ರಂದು 19-30 ಗಂಟೆಗೆ ಆರೋಪಿತನು ಗಂಗಾವತಿ ನಗರದ ಪುತ್ತೂರು ಆಸ್ಪತ್ರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಮೋಬೈಲ್ ದಲ್ಲಿ ಹಣವನ್ನು ಕಟ್ಟಿಸಿಕೊಳ್ಳುತ್ತಾ ಇರುವಾಗ ಸದರಿಯನ ಮೇಲೆ ಪಂಚರ ಸಮಕ್ಷಮ 19-30 ಗಂಟೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿತನಿಂದ 01] ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 1360. (02) ಒಂದು  ಮೈಕ್ರೋಮ್ಯಾಕ್ಸ್ ಕಂಪನಿಯ ಮೊಬೈಲ್ ದೊರೆತಿರುತ್ತದೆ.  ಇವುಗಳನ್ನು ಪಿ.ಐ. ರವರು ಪಂಚರ ಸಮಕ್ಷಮ 19-30 ಗಂಟೆಯಿಂದ 20-30 ಗಂಟೆಯವರೆಗೆ ಜಪ್ತಿ ಪಡಿಸಿಕೊಂಡು ಈ ಬಗ್ಗೆ ಜಪ್ತಿ ಪಂಚನಾಮೆ ಬರೆದುಕೊಂಡಿದ್ದು ಇರುತ್ತದೆ. ಹಾಗೂ ಸದರಿ ಆರೋಪಿತರು ಮಟಕ ನಂಬರ್ ಗಳನ್ನು ಕುಂಟ ಹುಸೇನಿ ಸಾ: ಇಸ್ಲಾಂಪುರ ಗಂಗಾವತಿ ಇವನಿಗೆ ಕೊಡುತ್ತಿದ್ದು ಇರುತ್ತದೆ.  ಸದರಿಯವರ ಮೇಲೆ ಪ್ರಕರಣ ದಾಖಲಿಸಲು ನೀಡಿದ ವರದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 173/2015  ಕಲಂ 279, 337, 304(ಎ) ಐ.ಪಿ.ಸಿ:
ದಿನಾಂಕ 14.07.2015 ರಂದು ಮದ್ಯಾನ 3:00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಪಿರ್ಯಾದಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆ ಇಂದು ದಿ:14-07-2015 ರಂದು ಬೆಳಿಗ್ಗೆ ನಾನು ನಮ್ಮ ಹೊಲದಲ್ಲಿ ಬೆಳೆದಿರುವ ಕೋತ್ತಂಬರಿ ಮಾರಾಟ ಮಾಡಲು ಅಂತಾ ಶ್ಯಾಂಪಲ್ ತೆಗೆದುಕೊಂಡು ಕೊಪ್ಪಳಕ್ಕೆ ಮಾರ್ಕೇಟಿಗೆ ಬಂದಿದ್ದೆನು. ನಂತರ ಮದ್ಯಾಹ್ನ 1-30 ಗಂಟೆಯ ಸುಮಾರಿಗೆ ನಾನು ಕೊಪ್ಪಳದಲ್ಲಿಯೇ ಇರುವಾಗ, ಜುಂಜಪ್ಪ ಹೊಸಮನಿ ಸಾ: ಮೆಳ್ಳಿಕೇರಿ ಇತನು ನನ್ನ ಮೊಬೈಲ್ ನಂಬರಿಗೆ ಕರೆ ಮಾಡಿ ಹೇಳಿದ್ದೆನೆಂದರೇ, ಇಂದು ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ನಾನು ನಮ್ಮೂರಿನಿಂದ ಕೊಪ್ಪಳಕ್ಕೆ ಅಂತಾ ನನ್ನ ಮೋಟಾರ ಸೈಕಲ್ ಓಡಿಸಿಕೊಂಡು ಬರುತ್ತಿದ್ದಾಗ ಬಹದ್ದೂರ ಬಂಡಿ ರಸ್ತೆಯ ಹ್ಯಾಟಿ ಗ್ರಾಮದ ಸಮೀಪ ಟಾಟಾ ಎಸಿಇ ಮಹಿಂದ್ರಾ ಮ್ಯಾಕ್ಸಿಮೋ ಚಾಲಕ ನಿಮ್ಮ ತಮ್ಮ ಅಶೋಕ ಹಾದಿಮನಿ ಇತನ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಆತನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕೂಡಲೇ ಸ್ಥಳಕ್ಕೆ ಬಾ ಅಂತಾ ಕರೆದನು. ಆಗ ನಾನು ಸ್ಥಳಕ್ಕೆ ಬಂದು ನೋಡಿದಾಗ ವಿಷಯ ನಿಜವಿತ್ತು. ನೋಡಲಾಗಿ ನಮ್ಮ ತಮ್ಮ ಅಶೋಕನ ಹಣೆಯಿಂದ ತಲೆಯವರೆಗೆ ಭಾರಿ ರಕ್ತಗಾಯವಾಗಿದ್ದು, ಅಲ್ಲದೇ ಬಲಕಾಲ ಮೊಣಕಾಲಿಗೆ ಮತ್ತು ಬಲಕಾಲ ಪಾದದ ಬೆರಳಿಗೆ ಭಾರಿ ರಕ್ತಗಾಯವಾಗಿತ್ತು. ನಂತರ ನಮ್ಮ ಅಶೋಕನ ಮೋಟಾರ ಸೈಕಲ್ ನೋಡಲಾಗಿ ಅದರ ನೊಂದಣಿ ಸಂಖ್ಯೆ ಇರುವುದಿಲ್ಲ. ಹೊಸ ಹಿರೋ ಸ್ಲ್ಪೆಂಡರ್ ಪ್ಲಸ್ ಗಾಡಿ ಇದ್ದು, ಇದರ ಚೆಸ್ಸಿ ನಂ: ಎಮ್ಬಿಎಲ್ಹೆಚ್ಎ10ಎಎಮ್ಇಹೆಚ್ಎಮ್74456. ಅಂತಾ ಇರುತ್ತದೆ. ಟಕ್ಕರ ಕೊಟ್ಟಿರುವ ಟಾಟಾ ಎಸಿಇ ಮಹಿಂದ್ರಾ ಮ್ಯಾಕ್ಸಿಮೋ ಬಿಳಿಯ ಬಣ್ಣದ್ದು ಇದ್ದು, ಅದರ ನಂ: ಕೆಎ-37/9869 ಅಂತಾ ಇರುತ್ತದೆ. ಅದರ ಚಾಲಕನ ಹೆಸರು ಬಾಳಪ್ಪ ಗ್ಯಾನಪ್ಪನವರ ಸಾ: ಬಹದ್ದೂರಬಂಡಿ ಗ್ರಾಮ ಅಂತಾ ಗೊತ್ತಾಗಿದ್ದು, ಅದರ ಚಾಲಕನಿಗೆ ಸಹ ಪೆಟ್ಟಾಗಿದ್ದವು.ನಂತರ ಅಲ್ಲಿಯೇ ಇದ್ದ ಜುಂಜಪ್ಪನಿಗೆ ಘಟನೆಯ ಬಗ್ಗೆ ಕೇಳಲಾಗಿ ಹೇಳಿದ್ದೇನೆಂದರೇ, ನಾನು ಮಧ್ಯಾಹ್ನ 1-00 ಗಂಟೆಗೆ ಮೆಳ್ಳಿಕೇರಿಯಿಂದ ಕೊಪ್ಪಳಕ್ಕೆ ಹೊರಟಿದ್ದಾಗ ಹ್ಯಾಟಿ ಸಮೀಪ ನನ್ನ ಮುಂದೆ ಮುಂದೆ ಅಶೋಕನು ತನ್ನ ಮೋಟಾರ ಸೈಕಲ್ನ್ನು ರಸ್ತೆಯ ಎಡಬಾಜು ಓಡಿಸಿಕೊಂಡು ಕೊಪ್ಪಳ ಕಡೆಗೆ ಹೊರಟಿದ್ದನು. ಅದೇವೇಳೆಗೆ ಎದುರುಗಡೆಯಿಂದ ಅಂದರೆ ಬಹದ್ದೂರಬಂಡಿ ಕಡೆಯಿಂದ ಟಾಟಾ ಎಸಿ ನಂ: ಕೆಎ-37/9869 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ರಾಂಗಸೈಡ್ ತನ್ನ ಬಲಕ್ಕೆ ತೆಗೆದುಕೊಂಡವನೇ ಅಶೋಕನ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟಿದ್ದರಿಂದ ಈ ಅಪಘಾತ ಸಂಭವಿಸಿದೆ. ಅಂತಾ ಹೇಳಿದನು.ನಂತರ ಈ ಅಪಘಾತದ ವಿಷಯವನ್ನು ಮೃತನ ಅಣ್ಣ ಮಾರುತಿ ಹಾದಿಮನಿ ಇವರಿಗೆ ಪೋನ ಮಾಡಿ ಬರಲು ತಿಳಿಸಿರುತ್ತೇನೆ. ಮೃತ ನಮ್ಮ ತಮ್ಮ ಅಶೋಕ ತಂದೆ ದುರುಗಪ್ಪ ಹಾದಿಮನಿ ವಯಾ: 28 ವರ್ಷ ಜಾ: ಹರಿಜನ ಉ: ಒಕ್ಕಲುತನ ಸಾ: ಗಜೇಂದ್ರಗಡ ಇತನ ಶವವನ್ನು ಮೆಳ್ಳಿಕೇರಿ ಗ್ರಾಮದ ಮೈಲಾರಪ್ಪ ಹರಿಜನ ಇವರ ಆಟೋದಲ್ಲಿ ಹಾಕಿಕೊಂಡು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ತಂದು ಶವಾಗಾರದಲ್ಲಿ ಸೇರಿಸಿರುತ್ತೇವೆ.ಕಾರಣ  ಸದರಿ ಟಾಟಾ ಎಸಿಇ ಮಹಿಂದ್ರಾ ಮ್ಯಾಕ್ಸಿಮೋ ನಂ:ಕೆಎ-37/9869 ನೇದ್ದರ ಚಾಲಕ ಬಾಳಪ್ಪ ಗ್ಯಾನಪ್ಪನವರ ಸಾ:ಬಹದ್ದೂರಬಂಡಿ ತಾ: ಕೊಪ್ಪಳ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 175/2015  ಕಲಂ 279, 337, 338 ಐ.ಪಿ.ಸಿ:
ಇಂದು ದಿ:14-07-2015 ರಂದು ರಾತ್ರಿ 9-15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರಾಮಣ್ಣ ಎ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ  ದೂರಿನ ಸಾರಾಂಶವೇನೆಂದರೇ, ಇಂದು ದಿ:14-07-2015 ರಂದು ಸಂಜೆ 5-15 ಗಂಟೆಯ ಸುಮಾರಿಗೆ ಕೊಪ್ಪಳ-ಹೊಸಪೇಟೆ ರಸ್ತೆಯ ಅಭಯ ಸಾಲ್ವೆಂಟ್ ಹತ್ತಿರ ಟಿವಿಎಸ್. ಮೋಟಾರ ಸೈಕಲ್ ನಂ: ಕೆಎ-37/ವಿ-7696 ನೇದ್ದರ ಚಾಲಕ ರಮೇಶಗೌಡ ಸಾ: ಹಟ್ಟಿ ಇತನು ತನ್ನ ವಾಹನವನ್ನು ಕೊಪ್ಪಳ ಕಡೆಯಿಂದ ಗಿಣಿಗೇರಿ ಕಡೆಗೆ ಅತಿವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ತನ್ನ ವಾಹನವನ್ನು ನಿಯಂತ್ರಿಸದೇ ರಸ್ತೆಯ ಎಡಬಾಜು ಕೆಡವಿದ್ದರಿಂದ ಮೋಟಾರ ಸೈಕಲ್ ಹಿಂದೆ ಕುಳಿತಿದ್ದ ಆರೋಪಿ ಚಾಲಕನ ಮಗ ಮಹೇಶಗೌಡ ವಯ: 9 ವರ್ಷ ಇವನಿಗೆ ಸಾದಾಗಾಯ ಹಾಗು ಆರೋಪಿತನಿಗೆ ಭಾರಿ ಸ್ವರೂಪದ ರಕ್ತಗಾಯವಾಗಿದೆ. ಕಾರಣ ಸದರಿ ಮೋಟಾರ ಸೈಕಲ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ: 175/2015. ಕಲಂ; 279,337,338 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 157/2015 ಕಲಂ. 498(ಎ), 323, 504, 506, 506(2) ಸಹಿತ 34 ಐ.ಪಿ.ಸಿ ಮತ್ತು 3, 4 ವರದಕ್ಷಿಣೆ ನಿಷೇಧ ಕಾಯ್ದೆ:.

ದಿನಾಂಕಃ-14-07-2015 ರಂದು ರಾತ್ರಿ 8-30 ಗಂಟೆಗೆ  ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿ ತಂದು ಹಾಜರುಪಡಿಸಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರ ಪಿರ್ಯಾದಿದಾರರು ಈಗ್ಗೆ 2 ವರ್ಷಗಳ ಹಿಂದೆ ಆರೋಪಿ ನಂ 1 ಹನುಮೇಶ ಈತನೊಂದಿಗೆ ಹಿರಿಯರ ಸಮಕ್ಷದಲ್ಲಿ ಮದುವೆ ಮಾಡಿಕೊಂಡಿದ್ದು ಆರೋಪಿತರು ಮದುವೆಯಾದ ಮೂರು ತಿಂಗಳು ಪಿರ್ಯಾದಿದಾರಿರಿಗೆ ಚನ್ನಾಗಿ ನೋಡಿಕೊಂಡು ನಂತರ ಪಿರ್ಯಾದಿದಾರರ ಗಂಡ ಮತ್ತು ಅವರ ತಾಯಿ ಮಲ್ಲಮ್ಮ ಮತ್ತು ಗಂಡನ ತಮ್ಮಂದಿರಾದ ಪರಸುರಾಮ , ಮಹೇಶ ಇವರು ಪಿರ್ಯಾದಿದಾರರಿಗೆ ಕೌಟುಂಬಿ ದೌರ್ಜನ್ಯ ಮಾಡಿ ತವರು ಮನೆಯಿಂದ ಹಣ ತೆಗೆದಕೊಂಡು ಬರಲು ಬೇಡಿ ಇಟ್ಟು ಇನ್ನೊಂದು ಮದುವೆಗೆ ಸಹಿ ಕೊಡುವಂತೆ ಒತ್ತಾಯ ಮಾಡಿದ್ದಲ್ಲದೇ ದಿನಾಂಕಃ- 11-07-2015 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ಪಿರ್ಯಾದಿದಾರರ ಗಂಡ ಮನೆಯ ಬಾಗಿಲ ಹಾಕಿಕೊಂಡು ಪಿರ್ಯಾದಿದಾರರಿಗೆ ಅವಚ್ಯವಾಗಿ ಬೈದು ಕೊಡಲಿ ಕಾವನ್ನು ಹಿಡಿದುಕೊಂಡು ಯಾವುದೋ ಮಾತ್ರೆಗಳನ್ನು ನುಂಗಲು ಹೇಳಿ ಜೀವ ಬೇದರಿಕೆ ಹಾಕಿರುತ್ತಾನೆ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008