Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, July 28, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 165/2015  ಕಲಂ 78(3) Karnataka Police Act & 420 ಐ.ಪಿ.ಸಿ.
ದಿನಾಂಕ 27-07-2015 ರಂದು 21-00 ಗಂಟೆಗೆ ಶ್ರೀ ಈ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ತಮ್ಮದೊಂದು ವರದಿಯನ್ನು  ಜಪ್ತಿ ಪಂಚನಾಮೆ  ಹಾಗೂ ಮುದ್ದೇಮಾಲನ್ನು ನಾಲ್ಕು ಜನ ಆರೋಪಿತರ ಸಮೇತವಾಗಿ ಹಾಜರ ಪಡಿಸಿದ್ದು, ಸದರಿ ವರದಿಯ ಸಾರಂಶವೇನೆಂದರೆ, ಇಂದು ದಿನಾಂಕ 27-07-2015 ರಂದು 19-00 ಗಂಟೆಗೆ ಆರೋಪಿತರಾದ ಶೇಖರಪ್ಪ ತಂದೆ ವೀರಭದ್ರಪ್ಪ ಇಂಗಳಗಿ, ವಯಾ: 56 ವರ್ಷ, ಜಾ: ಬಣಜಿಗ, ಸಾ: ಉಳ್ಳಿಡಗ್ಗಿ-ಗಂಗಾವತಿ ಇವನು ಗಂಗಾವತಿ ನಗರದ ಉಳ್ಳಿಡಗ್ಗಿ ಕ್ಯಾಂಪನ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣವನ್ನು ಕಟ್ಟಿಸಿಕೊಳ್ಳುತ್ತಾ ಮೋಬೈಲ್ ದಲ್ಲಿ ಮತ್ತು ಚೀಟಿಗಳಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ ಸದರಿಯರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿತರಿಂದ 01] ಮಟಕ ಜೂಜಾಟದಿಂದ ಸಂಗ್ರಹಿಸಿದ ಒಟ್ಟು ನಗದು ಹಣ ರೂ. 680-00. (02) ಒಂದು ನೋಕಿಯಾ ಕಂಪನಿಯ ಮೊಬೈಲ್. (03) ಐದು ಮಟಕಾ ನಂಬರ ಬರೆದ ಚೀಟಿಗಳು ಹಾಗೂ (04) ಒಂದು ಪೆನ್ನುನ್ನು ವಶಕ್ಕೆ ತೆಗೆದುಕೊಂಡು ಪಂಚರ ಸಮಕ್ಷಮ 19-00 ಗಂಟೆಯಿಂದ 20-00 ಗಂಟೆಯವರೆಗೆ ಜಪ್ತಿ ಪಡಿಸಿಕೊಂಡು ಈ ಬಗ್ಗೆ ಜಪ್ತಿ ಪಂಚನಾಮೆ ಬರೆದುಕೊಂಡಿದ್ದು ಇರುತ್ತದೆ. ಮತ್ತು ಸದರಿಯವನು ಮಟಕಾ ಪಟ್ಟಿಯನ್ನು ನಭೀಸಾಬ ಸಾ: ಗಂಗಾವತಿ ಇವನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ ಎಂದು ನೀಡಿದ ವರದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಸಂಚಾರ ಪೊಲೀಸ್ ಠಾಣಾ ಗುನ್ನೆ ನಂ. 46/2015  ಕಲಂ 279, 337 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ 27-07-2015 ರಂದು ರಾತ್ರಿ 9-10 ಗಂಟೆಗೆ ಕೊಪ್ಪಳದ ಮಹಾದೇವಿ ಎಲುಬು ಮತ್ತು ಕೀಲು ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಶ್ರೀ ಮನೋಹರಸಾ ಮೇರ್ವಾಡಿ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ 27-07-2015 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಮೋಟಾರ್ ಸೈಕಲ್ ನಂ. KA 33 / J 8769 ನೇದ್ದರ ಹಿಂದೆ ತಮ್ಮ ಹೆಂಡತಿ ಶ್ರೀಮತಿ ಗೀತಾಬಾಯಿ ಇವರನ್ನು ಕೂಡಿಸಿಕೊಂಡು ಹಸನ್ ರಸ್ತೆಯ ಮುಖಾಂತರ ಭಗವತಿ ಆಸ್ಪತ್ರೆಯ ಕಡೆಗೆ ಹೋಗುತ್ತಿರುವಾಗ ಎದುರುಗಡೆಯಿಂದ ಮೋಟಾರ್ ಸೈಕಲ್ ನಂಬರ್ KA 37 / U 0771 ನೇದ್ದರ ಸವಾರನು ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ್ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿದ್ದು, ಇದನ್ನು ನೋಡಿದ ಫಿರ್ಯಾದಿದಾರರು ತಮ್ಮ ಮೋಟಾರ್ ಸೈಕಲ್ ನ್ನು ಸೈಡಿಗೆ ತೆಗೆದುಕೊಂಡರೂ ಸಹ ಮೋಟಾರ್ ಸೈಕಲ್ ಸವಾರನು ಜೋರಾಗಿ ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಟಕ್ಕರ್ ಮಾಡಿ ಅಪಘಾತ ಮಾಡಿದ್ದು ಇದರಿಂದ ಫಿರ್ಯಾದಿದಾರರಿಗೆ ತಲೆಯ ಎಡಗಡೆ ಗಾಯ, ಎಡಗೈ ಬೆರಳುಗಳಿಗೆ ತೆರಚಿದ ಗಾಯ ಹಾಗೂ ಎಡಗಡೆ ಮೊಣಕಾಲಿನ ಹತ್ತಿರ ಒಳಪೆಟ್ಟು ಆಗಿದ್ದು ಹಾಗೂ ಫಿರ್ಯಾದಿಯ ಹೆಂಡತಿ ಗೀತಾಬಾಯಿಗೆ ಇವರಿಗೆ ಬಲ ಮಲಕಿನ ಹತ್ತಿರ ತೆರಚಿದ ಗಾಯ, ಬಲ ಮೊಣಕಾಲಿಗೆ ತೆರಚಿದ ಗಾಯ ಹಾಗೂ ಒಳಪೆಟ್ಟು ಬಿದ್ದಿದ್ದು, ಅಪಘಾತ ಮಾಡಿದ ನಂತರ ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿಯನ್ನು ರಾತ್ರಿ 9-20 ಗಂಟೆಯಿಂದ 10-10 ಗಂಟೆಯ ವರೆಗೆ ಪಡೆದುಕೊಂಡು ವಾಪಾಸ ಠಾಣೆಗೆ ರಾತ್ರಿ 10-20 ಗಂಟೆಗೆ ಬಂದು ಫಿರ್ಯಾದಿಯ ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡೆನು.
3) ಹನುಮಸಾಗರ ಪೊಲೀಸ್ ಠಾಣಾ ಯು.ಡಿ.ಆರ್ ನಂ. 15/2015  ಕಲಂ 174 ಸಿ.ಆರ್.ಪಿ.ಸಿ.
 ಫಿರ್ಯಾದಿ ಹುಚ್ಚಪ್ಪ ತಂದಿ ರಂಗಪ್ಪ ಇಲಾಳ ಸಾ: ಗುಡ್ಡದದೇವಲಾಪೂರ ಇವರು ಠಾಣೆಗೆ ಬಂದು ಲಿಖಿತ ದೂರು ನೀಡಿದ್ದು ಸಾರಾಂಶವೇನೆಂದರೆ, ನನಗೆ ಒಂದು ಹೆಣ್ಣುಮತ್ತು ಎರಡು ಗಂಡು ಮಕ್ಕಳು ಇದ್ದು 1] ಶ್ರೀದೇವಿ ಈಕೆಯನ್ನು ರಾಮತಾಳ ಗ್ರಾಮದ ಪಾಂಡುರಂಗ ವಾಲೀಕರ ವರಿಗೆ ಮದುವೆ ಮಾಡಿಕೊಟ್ಟಿದ್ದು ಗಂಡನ ಮನೆಯಲ್ಲಿ ಇರುತ್ತಾಳೆ 2] ಬಸವರಾಜ ಈತನು ಪಿ.,ಯು.ಸಿ. ಹನಮನಾಳ ಓದುತ್ತಿದ್ದು 3] ಅರ್ಜುನ ಈತನು ಎಸ್.ಎಸ.ಲ್.ಸಿ. ಓದುತ್ತಿದ್ದು ದಿನಾಲೂ ಹೋಗಿ ಬರುವದನ್ನು ಮಾಡುತ್ತಾರೆ. ನಮ್ಮ ಉಪ ಜೀವನಕ್ಕಾಗಿ ಮನೆಯಲ್ಲಿ 4 ಆಕಳುಗಳನ್ನು ಸಾಕಿದದು ಇರುತ್ತದೆ. ನಿನನೆ ದಿನಾಂಕ 26-07-2015 ರಂದು ರವಿವಾರ ಇದ್ದುದರಿಂದ ನನ್ನ ಹಿರಿಯ ಮಗನಾದ ಬಸವರಾಜ ಈತನು ದನಗಳನ್ನು ಮೇಯಿಸಿಕೊಂಡು ಬಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಮನೆಯಲಲಿ ದನಗನ್ನು ಕಟ್ಟಿ ಮನೆಯ ಪಕ್ಕದಲ್ಲಿರುವ ನಮ್ಮೂರ ಶರಣಪ್ಪ ತಂದಿ ರಂಗಪ್ಪ ನಾಯ್ಕರ ರವರ ಹೆಸರು ಹೊಲದಲ್ಲಿ ಮೇವು ಮಾಡಲು ಹೋಗಿ ನಸುಗು ಆಗುವವರೆಗೂ ಅಂದರೆ 700 ಗಂಟೆಗೆ ಮೇವು ಮಾಡಿಕೊಂಡು ಬದುವು ಹಿಡಿದು ಬರುವಾಗ ಎಡಗಾಲಿಗೆ ಏನೋ ಕಚ್ಚಿದಂತಾಗಿ ಸರ್ರ್ ಎಂದು ಹೋದ ಶಬ್ದ ಕೇಳಿದಂತಾಯಿತೆಂದು ಮನೆಯಲ್ಲಿ ನಮಗೆ ಹೇಳಿದ ದನಕ್ಕೆ ಮೇವು ಹಾಕಿ ಕೈ ಕಾಲು ತೊಳೆದು ಕೊಂಡು ಬಂದಾಗ ನಾನು ನನ್ನ ಹೆಂಡತಿ ನೋಡಲು ಸ್ವಲ್ಪ ತರೆಚಿದೆ ಎಂದು ಹೇಳಿ ರಾತ್ರಿ 8-30 ಗಂಟೆಗೆ ಊಟ ಮಾಡಿ ಮನೆಯ ಅಂಗಳದಲ್ಲಿ ಬಸವರಾಜ ಮಲಗಿದದನು ನಾನು ನನ್ನ ಹೆಂಡತಿ ನನ್ನ ಸಣ್ಣ ಮಗ ಅರ್ಜುನ ಮನೆಯಲ್ಲಿ ಮಲಗಿಕೊಂಡೆವು. ನಂತರ ಇಂದು ಮುಂಜಾನೆ 6-00 ಗಂಟೆ ಸುಮಾರಿಗೆ ನಾನು ಎದ್ದು ಕದವನ್ನು ತೆಗೆದು ಹೊರಗಡೆ ಮಲಗಿದ್ದ ಬಸವರಾಜನನ್ನು ಎಬ್ಬಿಸಲು ಹೋದಾಗ ಬಾಯಲ್ಲಿ ಬುರುಗು ಬಂದು ನೋಡಿ ನಾನು ಗಾಭರಿಯಾಗಿ ಬಸವ, ಬಸವ ದು ಮೈಮೇಲಿನ ಚಾದರ ಎಳೆದಾಗ ಕೈ ಕಾಲು ಮುಖ ಹಚ್ಚಗಾಗಿದದು ನೋಡಿ ನನ್ನ ಹೆಂಡತಿಗೆ ಬಸವರಾಜ ಏಳುವಲ್ಲ ಎಂದಾಗ  ನನ್ನ ಹೆಂಡತಿ ಕೂಡ ಎದ್ದು ಬಂದು ನಾವು ಹೊರಳಾಡಿಸಿ ನೋಡಲು ನನ್ನ ಮಗ ಮೃತಪಟಟಿದ್ದು ತಿಳಿದು ಬಂದಿತು ನನ್ನ ಮಗ ಬಸವರಾಜನು ನಿನ್ನೆ ಮೇವು ಮಾಡಿಕೊಂಡು ಹೊತ್ತುಕೊಂಡು ಬರುವಾಗ ಯಾವದೋ ವಿಷಕಾರಕ ವು ಕಚ್ಚಿದ್ದು ಅದು ನಮಗೆ ತಿಳಿಯದೆ ಹಾಗೆ ಇದ್ದುದರಿಂದ ನನ್ನ ಮಗ ಮೃತಪಟ್ಟಿದ್ದು ಈ ಮೇಲಿನ ಹೊರತಾಗಿ ಯಾರ ಮೇಲೆ ಯಾವದೇ ಸಂಶಯ ವಗೈರೆ ಇರುವದಿಲ್ಲ ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಯು.ಡಿ.ಆರ್,. ನಂ: 15/2015 ಕಲಂ: 174 ಸಿ.ಆರ್.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು
4) ಹನುಮಸಾಗರ ಪೊಲೀಸ್ ಠಾಣಾ ಯು.ಡಿ.ಆರ್ ನಂ. 16/2015  ಕಲಂ 174 ಸಿ.ಆರ್.ಪಿ.ಸಿ.

ಫಿರ್ಯಾದಿ ರೇಣುಕಾ ಗಂಡ ನಾಗಪ್ಪ @ ನಾಗನಗೌಡ ಅಮರಣ್ಣವರ ಸಾ: ಬಿಳೇಕಲ್ ಇವರು ಠಾಣೆಗೆ ಬಂದು ಲಿಖಿತ ದೂರು ನೀಡಿದ್ದು ಸಾರಾಂಶವೇನೆಂದರೆ, ತನಗೆ ಈಗ್ಗೆ 13 ವರ್ಷಗಳ ಹಿಂದೆ ಬಿಳೇಕಲ್ ಗ್ರಾಮದ ನಾಗಪ್ಪರವರಿಗೆ ಮದುವೆ ಮಾಡಿಕೊಟ್ಟಿದ್ದು ತಮಗೆ ಎರಡು ಗಂಡು ಮಕ್ಕಳು 1] ವಿರೇಶ 11 ವರ್ಷ, 2] ಶಿವಾನಂದ 7 ವರ್ಷ, ಹೀಗೆ ಎರಡು ಮಕ್ಕಳಿದ್ದು ಈತನು ಮದುವೆಯಾದಗಿನಿಂದ ಕುಡಿತದ ಚಟಕ್ಕೆ ಅಂಟಿಕೊಂಡಿದ್ದು ಇದರಿಂದಾಗಿ ಫಿರ್ಯಾದಿದಾರರು ತನ್ನ ತವರು ಮನೆಯಾದ ಯರಗೇರ ಗ್ರಾಮದಲ್ಲಿ ಇದ್ದು ಫೀರ್ಯಾದಿ ಗಂಡ ನಾಗಪ್ಪನು ಕುಷ್ಟಗಿಯಲ್ಲಿ ಜೆ.ಇ. ಹತ್ತಿರ ಕೆಲಸ ಮಾಡಿಕೊಂಡು ಬಂದು ಹೋಗಿ ಮಾಡುತ್ತಿದ್ದು ಇತ್ತೀಚೆಗೆ ಗ್ರಾಮ ಪಂಚಾಯತ ಚುನಾವಣಯಾದ ನಂತರ ಹಗಲು ರಾತ್ರಿ ಕುಡಿದು ಫಿರ್ಯಾದಿ ಸಂಗಡ ಪೇಚಾಡುವುದು ಹೊಡೆಬಡೆ ಮಾಡುವುದು ಈ  ಬಗ್ಗೆ ಊರಲ್ಲಿ ಹಿರಿಯರು ಹಾಗು ಫಿರ್ಯಾದಿ ಬುದ್ದಿವಾದ ಹೇಳಿದ್ದು ಮತ್ತು ಇಂದು ದಿನಾಂಕ: 27-07-2015 ರಂದು ಮದ್ಯಾಹ್ನ 1-30 ಗಂಟೆಯ ಸುಮಾರಿಗೆ ಕಂಠ ಪೂರ್ತಿ ಕುಡಿದು ಮನೆಗೆ ಬಂದು ಫಿರ್ಯಾದಿಗೆ ಮೃತ ನಾಗಪ್ಪನು ತಮ್ಮೂರ ಬಿಳೇಕಲಗೆ ಹೋಗುತ್ತೇನೆ ಎಂದು ಹೆಂಡತಿ ಸಂಗಡ ಪೇಚಾಡಿ ಪಾಸ್ಟಿಕ್ ಪ್ಯಾಂಟ ಶರ್ಟ ಇಟ್ಟುಕೊಂಡು ಹೋಗುವಾಗ ಫಿರ್ಯಾದಿ ಎಷ್ಟೇ ಬೇಡ ಅಂತಾ ಕೇಳಿಕೊಂಡರು ಆಕೆಯನ್ನು ತಳ್ಳಿ ನಡೆದುಕೊಂಡು ಗೊರೆಬಾಳ ದಾರಿಯನ್ನು ಹಿಡಿದುಕೊಂಡು ಹೋಗಿದ್ದು ಇರುತ್ತದೆ. ಇಂದು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ಬಾಲಪ್ಪ ಪೂಜಾರ ಈತನು ಹೊಲದಿಂದ ಊರಲ್ಲಿ ಬಂದು ಹಿರಿಯರಿಗೆ ನಾಗಪ್ಪ ಅಮರಣ್ಣವರ ವೆಂಕಟಪತಿ ಈಳಗೇರ ರವರ ಹೊಲದ ಬದುವಿಗೆ ಗಿಡಕ್ಕೆ ನೇಣು ಹಾಕಿಕೊಂಡು ಸತ್ತಿರುತ್ತಾನೆ ಅಂತಾ ಹೇಳುವುದನ್ನು ಕೇಳಿ ಫಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಲು ವಿಷಯ ನಿಜವಿದ್ದು ನಾಗಪ್ಪನು ಕುಡಿದ ಅಮಲಿನಲ್ಲಿ ತನ್ನ ಪ್ಯಾಂಟನಿಂದ ಗಿಡದ ಟೊಂಗೆಗೆ ನೇಣು ಮೃತಪಟ್ಟಿದ್ದು ಈ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.

0 comments:

 
Will Smith Visitors
Since 01/02/2008