Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, July 27, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 190/2015  ಕಲಂ 87 Karnataka Police Act.
ದಿನಾಂಕ 26.07.2015 ರಂದು ಸಾಯಂಕಾಲ 5:50 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಚಿಕ್ಕಸೂಳಿಕೇರಿ ಗ್ರಾಮದ ಗುಡ್ಡದ ಸಮೀಪ 11 ಜನ ಆರೋಪಿತರು ಸಾರ್ವಜನಿಕ ಸ್ಥಳೆದಲ್ಲಿ ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಎಸ್ಪೇಟ್ ಜೂಜಾಟದಲ್ಲಿ  ತೊಡಗಿದ್ದಾಗ ಶ್ರೀ. ಮೋಹನ ಪ್ರಸಾದ ಸಿ.ಪಿ.ಐ. ಕೊಪ್ಪಳ ಗ್ರಾಮೀಣ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 21,350=00 ರೂ ,ನಗದುಹಣ ಮತ್ತು 52 ಇಸ್ಪೇಟ್ ಎಲೆಗಳನ್ನು  ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2) ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ. 96/2015  ಕಲಂ 32, 34 Karnataka Excise Act.
ದಿನಾಂಕ:26-07-2015 ರಂದು 10-50 ಪಿಎಂಕ್ಕೆ ಶ್ರೀ ವಿಶ್ವನಾಥ ಹಿರೇಗೌಡರ, ಪಿ.ಎಸ್ಐ ಕುಕನೂರ ಠಾಣೆರವರು ಆರೋಪಿತರನ್ನು ಹಾಜರಪಡಿಸಿ, ತಮ್ಮ ವರದಿಯೊಂದಿಗೆ ದಾಳಿ ಪಂಚನಾಮೆ ಲಗತ್ತಿಸಿ, ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ,  ದಿನಾಂಕ:26-07-2015 ರಂದು 8-40 ಪಿ.ಎಂ.ಕ್ಕೆ ತಾವು ಠಾಣೆಯಲ್ಲಿದ್ದಾಗ ಬಿನ್ನಾಳ ಗ್ರಾಮದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಮಾನ್ಯ ಸಿಪಿಐ ಯಲಬುರ್ಗಾರವರ ಮಾರ್ಗದರ್ಶನದಲ್ಲಿ  ಕೂಡಲೇ ಇಬ್ಬರಿಗೆ ಪಂಚರಿಗೆ ಬರಮಾಡಿಕೊಂಡು ಅವರನ್ನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-122, ಪಿಸಿ-370,418,419, ಮಪಿಸಿ-29 ಹಾಗೂ ಜೀಪ ಚಾಲಕ ಎ.ಪಿಸಿ 192 ಇವರೊಂದಿಗೆ ಸರಕಾರಿ ಜೀಪ ನಂ: ಕೆ.ಎ.37/ಜಿ-427 ನೇದ್ದರಲ್ಲಿ ಕುಳಿತು ಠಾಣೆಯಿಂದ 8-50 ಪಿ.ಎಂ.ಕ್ಕೆ ಹೊರಟು 9-10 ಪಿ.ಎಂ.ಕ್ಕೆ ಬಿನ್ನಾಳ ಗ್ರಾಮ ತಲುಪಿ, ದುರಗಮ್ಮನ ಗುಡಿಯ ಸಮೀಪ ಮರೆಗೆ ಜೀಪ್ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು ಗುಡಿಯ ಗೋಡೆಯ ಮರೆಗೆ ನಿಂತು ನೋಡಲು ನಾಲ್ಕು ಜನರು ಒಂದು ಪ್ಲಾಸ್ಟಿಕ ಚೀಲದಲ್ಲಿಂದ ಸಾರ್ವಜನಿಕರಿಗೆ ಮದ್ಯದ ರಟ್ಟಿನ ಪಾಕೀಟ್ ಗಳನ್ನು ಮಾರಾಟ ಮಾಡುತ್ತಿದ್ದುದನ್ನು ನೋಡಿ ಹಾಜರಿದ್ದ ಪಂಚರ ಸಮಕ್ಷಮ ಪಿ.ಎಸ್.ಐ ರವರು & ಸಿಬ್ಬಂದಿಯವರು  ಸೇರಿ ಮದ್ಯದ ರಟ್ಟಿನ ಪಾಕೀಟ್ ಗಳನ್ನು ಮಾರಾಟ ಮಾಡುವವರಿಗೆ ಮುತ್ತಿಗೆ ಹಾಕಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಿ ಅವರ ಹತ್ತಿರ ಇದ್ದ ಚೀಲವನ್ನು ಪರಿಶಿಲಿಸಲು ಸದರ ಚೀಲದಲ್ಲಿ  90 ಎಂ.ಎಲ್.ದ ಹೈವಾರ್ಡ್ಸ ಚಿಯರ್ಸ ವಿಸ್ಕಿ ರಟ್ಟಿನ ಪಾಕೀಟ್ ಗಳು ಇದ್ದು,  ಒಂದಕ್ಕೆ  29.40 ರೂ. ಅಂತಾ ಇದ್ದು ಎಲ್ಲವುಗಳನ್ನು ಎಣಿಸಲಾಗಿ 90 ಎಂ.ಎಲ್.ದ ಹೈವಾರ್ಡ್ಸ ಚಿಯರ್ಸ ವಿಸ್ಕಿ ರಟ್ಟಿನ ಪಾಕೀಟ್ ಗಳು ಒಟ್ಟು 98 ಇದ್ದು ಅವುಗಳ ಒಟ್ಟು 12,881-00 ರೂಪಾಯಿ ಬೆಲೆ ಆಗುತ್ತದೆ. ಸದರ ವಿಸ್ಕಿ ರಟ್ಟಿನ ಪಾಕೀಟ್ ಗಳನ್ನು ಹೊಂದಿದ ಬಗ್ಗೆ ವಿಚಾರಿಸಿದ್ದು ಅವುಗಳ ಬಗ್ಗೆ ಯಾವ ಅದಿಕೃತ.ದಾಖಲಾತಿ ಇಲ್ಲ & ಅವುಗಳನ್ನು ಮುಚ್ಚುಮರೆಯಿಂದ ಮಾರಾಟ ಮಾಡಲು ತಂದಿದ್ದಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಆರೋಪಿತ ಮಹಾಂತೇಶ ಇವನ ಅಂಗಜಡ್ತಿಯಿಂದ ಮದ್ಯ ಮಾರಾಟದ ಹಣ 200-00 ರೂ. ಗಳನ್ನು ಜಪ್ತ ಪಡಿಸಿಕೊಂಡಿದ್ದು ಈ ಬಗ್ಗೆ ಇಂದು 9-20 ಪಿಎಂದಿಂದ 10-20 ಪಿಎಂದವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಆರೋಪಿತರನ್ನು ಮತ್ತು ದಾಳಿಕಾಲಕ್ಕೆ ಸಿಕ್ಕ ಮುದ್ದೆಮಾಲಿನೊಂದಿಗೆ ವರದಿ ಹಾಜರಪಡಿಸಿದ್ದು, ಮುಂದಿನ ಕಾನೂನು ಕ್ರಮಜರುಗಿಸಲು ತಿಳಿಸಿದೆ ಅಂತಾ ಮುಂತಾಗಿ ನೀಡಿದ ವರದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
3) ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ. 95/2015  ಕಲಂ 279, 337 ಐ.ಪಿ.ಸಿ:.

ದಿನಾಂಕ:26-07-2015 ರಂದು 09.00 ಪಿಎಂ.ಕ್ಕೆ ಪಿರ್ಯಾಧಿದಾರರು ಠಾಣೆಗೆ ಬಂದು ಒಂದು ಗಣಕೀಕರಣ ಮಾಡಿಸಿದ ವರದಿಯನ್ನು ಹಾಜರಪಡಸಿದ್ದು ಅದರ ಸಾರಾಂಶವೇನೆಂದರೆ, ನಾನು ಮತ್ತು ನಮ್ಮ ಮಾಲೀಕರೊಂದಿಗೆ ಆರೋಪಿತನು ಸೇರಿಕೊಂಡು ಹುಬ್ಬಳ್ಳಿಗೆ ಟ್ರಾನ್ಸ ಪೋರ್ಟ ಕೆಲಸದ ನಿಮಿತ್ಯ ಕಾರ ನಂ. KA 25 MA 8674 ರಲ್ಲಿ ಹೋಗಿ ದಿನಾಂಕ:26-07-2015 ರಂದು ಸಂಜೆ 04.00 ಗಂಟೆಗೆ ಹುಬ್ಬಳ್ಳಿಯಿಂದ ವಾಪಾಸ್ಸು ಅದೇ ಕಾರಿನಲ್ಲಿ ಬರುವಾಗ ಸಂಜೆ 07.15 ಗಂಟೆ ಸುಮಾರಿಗೆ ಬನ್ನಿಕೊಪ್ಪ ಸೀಮಾದಲ್ಲಿ ಪೆಟ್ರೋಲ್ ಬಂಕ್ ಸಮೀಪ ನಡೆಸುತ್ತಿದ್ದ ಕಾರನ್ನು ಗದಗ ಕಡೆಯಿಂದ ಕೊಪ್ಪಳ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುವಾಗ ಕಾರಿನ ಮುಂದಿನ ಎಡ ಚಕ್ರದ ಟೈರ್ ಬಸ್ಟ್ ಆಗಿ ನಿಯಂತ್ರಣ ತಪ್ಪಿ NH 63 ರಸ್ತೆಯ ಬಲಗಡೆಗೆ ಪಲ್ಟಿಯಾಗಿ ಬಿದ್ದಿದ್ದರಿಂದ ಟ್ರಾನ್ಸ ಪೋರ್ಟ ಮಾಲೀಕರಿಗೆ ಮತ್ತು ಆರೋಪಿತನಿಗೆ ಸಾದಾ ಗಾಯಗಳಾಗಿದ್ದು, ಯಾವುದೋ ಕಾರ ಚಾಲಕರು ಚಿಕಿತ್ಸೆಗೆ ತಳಕಲ್ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದು  ಕಾರಣ ಸದರ ಕಾರಿನ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ವಗೈರೆ ಇದ್ದ ವರದಿಯನ್ವಯ ಠಾಣಾ ಗುನ್ನೆ ನಂ: 95/2015 ಕಲಂ: 279. 337  ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು. 

0 comments:

 
Will Smith Visitors
Since 01/02/2008