Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, August 1, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಬೇವೂರ ಪೊಲೀಸ್ ಠಾಣಾ ಗುನ್ನೆ ನಂ. 50/2015  ಕಲಂ 87 Karnataka Police Act.
ದಿನಾಂಕ: 31.07.2015 ರಂದು ಮದ್ಯಾಹ್ನ 3:15 ಗಂಟೆಗೆ ಆರೋಪಿತರಾದ 1) ಶರಣಯ್ಯ ತಂದೆ ಈರಯ್ಯ ಒಲೆ ವ: 35 ವರ್ಷ ಜಾ: ಜಂಗಮ ಉ: ಒಕ್ಕಲುತನ 2) ಶಿವಪ್ಪ ಹನಮಂತಪ್ಪ ರ್ಯಾವಣಕಿ ವ:32 ಜಾ: ಲಿಂಗಾಯತ ಉ: ಆಡು ಕಾಯುವ ಕೆಲಸ 3) ಶರಣಪ್ಪ ತಂದೆ ದೇವಪ್ಪ ಕುಂಬಾರ ವ:28 ಜಾ: ಕುಂಬಾರ ಉ: ಕುಲ ಕಸಬು 4) ಸುರೇಶ ತಂದೆ ಬಸಪ್ಪ ಹುಲ್ಲೂರ ವ: 30 ಜಾ: ಲಿಂಗಾಯತ ಉ: ಒಕ್ಕಲುತರನ 5)ರಾಜೇಸಾಬ ತಂದೆ ಸುಲ್ತಾನಾಸಾಬ ಸಂಕನೂರ ವ: 35, ಜಾ: ಮುಸ್ಲಿಂ ಉ: ಒಕ್ಕಲುತನ 6) ಗುರಪ್ಪ ತಂದೆ ಬಸಪ್ಪ ಹಾದಿಮನಿ ವ: 50 ಜಾ:ಲಿಂಗಾಯತ ಉ: ಒಕ್ಕಲುತನ ಸಾ: ಎಲ್ಲರೂ ವಣಗೇರ ಗ್ರಾಮದ ಮಸೀದಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಹಣ ಪಣಕ್ಕೆ ಹಚ್ಚಿ ಅಂದರ-ಬಾಹರ ಎಂಬುವ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾಧಿದಾರರು ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಮೇಲ್ಕಾಣಿಸಿದ 6 ಜನರನ್ನು ವಶಕ್ಕೆ ತೆಗೆದುಕೊಂಡಿದ್ದು ಹಾಗೂ ಜೂಜಾಟದ ನಗದು ಹಣ ರೂ. 850/- ಮತ್ತು ಜೂಜಾಟದ ಸಾಮಗ್ರಿಗಳನ್ನು ಜಪ್ತ ಮಾಡಿ ಠಾಣೆಗೆ ಬಂದು ವರದಿ ನೀಡಿದ್ದರ ಸಾರಾಂಶದ ಮೇಲೆಂದ ಮೇಲಿನಂತೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣಾ ಗುನ್ನೆ ನಂ. 166/2015  ಕಲಂ 78(3) Karnataka Police Act.
ದಿನಾಂಕಃ31-07-2015 ರಂದು ಮದ್ಯಾಹ್ನ 14-30 ಗಂಟೆಗೆ ಕಾರಟಗಿ ಠಾಣಾ ವ್ಯಾಪ್ತಿಯ ಬಸವಣ್ನ ಕ್ಯಾಂಪ್ ಗ್ರಾಮದ ಉಣ್ಣಿಬಸವೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಆರೋಪಿ ನಂ 1 ಈತನು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಹಾಜರಿದ್ದ ಪಂಚರ ಸಮಕ್ಷದಲ್ಲಿ ದಾಳಿ ಮಾಡಿ ಮಟ್ಕಾ ಜೂಜಾಟದಲ್ಲಿ ತೊಡಗಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದವನಿಗೆ ಹಿಡಿದುಕೊಂಡು ಆತನಿಂದ ನಗದು ಹಣ ರೂ.3347/- ಮತ್ತು ಒಂದು ಬಾಲ್ ಪೆನ್ನು, ಮಟ್ಕಾ ನಂಬರ ಬರೆದ ಪಟ್ಟಿಗಳು ಮತ್ತು ಒಂದು ನೊಕಿಯಾ ಕಂಪನಿಯ ಮೋಬೈಲ್ ಜಪ್ತ ಮಾಡಿಕೊಂಡು ನಂತರ ಪಿ.ಎಸ್.ಐ ಸಾಹೇಬರು ಎ-1 ಈತನಿಗೆ ತಾನು ಬರೆದ ಮಟ್ಕಾ ನಂಬರ ಪಟ್ಟಿ ಮತ್ತು ಹಣವನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಲು ಸದರಿಯವನು ತಾನು ಬರೆದ ಮಟ್ಕಾ ನಂಬರ ಪಟ್ಟಿ ಮತ್ತು ಹಣವನ್ನು ಈರಣ್ಣ ಈಡಿಗೇರ ಸರಾಯಿ ಸಾ. ಬಸವಣ್ಣ ಕ್ಯಾಂಪ್ ಈತನಿಗೆ ಕೊಡುವುದಾಗಿ ತಿಳಿಸಿದ್ದು ನಂತರ ಸದರಿ ಸಾರ್ವಜನಿಕ ಸ್ಥಳದ ಪಂಚನಾಮೆ ಮುಗಿದ ನಂತರ ಪಿ.ಎಸ್.ಐ ಸಾಹೇಬರು ಠಾಣೆಗೆ ಬಂದು ಹಾಜರು ಪಡಿಸಿದ ಮೂಲ ಪಂಚನಾಮೆ ಮತ್ತು ವರದಿಯ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 151/2015  ಕಲಂ  186, 309 ಐ.ಪಿ.ಸಿ:
ದಿ: 31-07-2015 ರಂದು ಸಂಜೆ 5-30 ಗಂಟೆಗೆ ಫಿರ್ಯಾದಿ ಎಂ.ಡಿ. ಖಾಜಾಹುಸೇನ ಬೆಲಿಫ್ ಜಿಲ್ಲಾ ನ್ಯಾಯಾಲಯ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿ: 31-07-2015 ರಂದು ಮಧ್ಯಾಹ್ನ 2-30 ಗಂಟೆಗೆ ಭಾಗ್ಯನಗರದ ಓಜನಹಳ್ಳಿ ರಸ್ತೆಯಲ್ಲಿರುವ ಕಸ್ತೂರಿಬಾಯಿ ಇವರಿಗೆ ಸಂಬಂದಿಸಿದ ಜಾಗೆಯಲ್ಲಿ ಅನದೀಕೃತವಾಗಿ ಹಾಕಿಕೊಂಡ ತಗಡಿನ ಶೆಡಗಳನ್ನು ತೆರವುಗೊಳಿಸಲು ಮಾನ್ಯ ನ್ಯಾಯಾಲಯದ ಆದೇಶ ಈ.ಪಿ. ನಂ: 21/2007 ನೇದ್ದರ ಅಡಿಯಲ್ಲಿ ತೆರವು ಕಾರ್ಯಾಚರಣೆ ಕೈಗೊಂಡಾಗ ಮದ್ಯಾಹ್ನ 2-45 ಗಂಟೆ ಸುಮಾರಿಗೆ ಓರ್ವ ಮಹಿಳೆ ಸದರಿ ತಗಡಿನ ಶೆಡದಿಂದ ಒಂದು ಸೀಮೆಎಣ್ಣೆ ಡಬ್ಬಿಯನ್ನು ಹಿಡಿದುಕೊಂಡು ಬಂದವಳೆ ಏಕಾಏಕೀ ನೀವು ನಮ್ಮ ಮನೆಗಳನ್ನು ತೆರವು ಮಾಡದೇ ಇಲ್ಲಿಂದ ಹೋಗದಿದ್ದರೆ ಸೀಮೆಎಣ್ಣೆ ಮೈ ಮೇಲೆ ಸುರಿದುಕೊಂಡು ನಾನು ಬೆಂಕಿ ಹಚ್ಚಿಕೊಂಡು ಸಾಯುತ್ತೇನೆ ಅಂತಾ ಹೇಳಿ ಸರ್ಕಾರಿ ಕರ್ತವ್ಯದಲ್ಲಿದ್ದ ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ ತಾನು ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದ್ದಾಳೆ. ಸದರಿ ಹೆಣ್ಣು ಮಗಳ ಹೆಸರು ಶ್ರೀಮತಿ ಗೌರಮ್ಮ ಹುಗಾರ ಅಂತಾ ಗೊತ್ತಾಗಿದ್ದು, ಸದರಿಯವಳ ಮೇಲೆ ಕೊಪ್ಪಳ ನಗರ ಠಾಣೆ ಗುನ್ನೆ ನಂ 151/2015 ಕಲಂ 186, 309 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
4) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 192/2015  ಕಲಂ  379 ಐ.ಪಿ.ಸಿ:
ದಿ:31-07-2015 ರಂದು ಮದ್ಯಾಹ್ನ 12-15 ಗಂಟೆಗೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಪ್ಪಳ ರವರ ಜ್ಞಾಪನ ಪತ್ರ ಸಂ:5/ಡಿಸಿಅರ್ ಬಿ/2015. ದಿ: 29-07-2015 ರಲ್ಲಿ ಹುಬ್ಬಳ್ಳಿ ಶಹರ ಠಾಣೆ ಗುನ್ನೆ ನಂ: 252/2014 ನೇದ್ದರ ಪ್ರಕರಣವನ್ನು ಹದ್ದಿ ಪ್ರಯುಕ್ತ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲು ಕಡತದೊಂದಿಗೆ ಸ್ವೀಕೃತವಾಗಿದ್ದು, ಸದರಿ ದೂರಿನ ವಿವರಣೆ ಏನೇಂದರೇ, ದಿನಾಂಕ; 25/11/2014 ರಂದು 18-30 ಗಂಟೆಯ ಸುಮಾರಿಗೆ ಇದರಲ್ಲಿಯ ಸ/ತ/ಪಿ ಶ್ಯಾಂರಾಜ್‌ ಎಸ್‌ ಸಜ್ಜನ ಪೊಲೀಸ ಇನ್ಸಪೆಕ್ಟರ ಇವರು ಹುಬ್ಬಳ್ಳಿ ರೇಲ್ವೆ ಸ್ಟೇಷನ ಗೂಡಶೆಡ್‌ರೋಡ ನಾಕಾಬಂದಿ ಹತ್ತಿರ ದ್ವಿಚಕ್ರ ವಾಹನ ತಪಾಸಣೆ ಕಾಲಕ್ಕೆ ಇದರಲ್ಲಿಯ ಆರೋಪಿತ ಸುಧಾಕರ ತಂದೆ ಸ್ಯಾಮಸನಜಾನ ದಮ್ಮು ಇವನಿಗೆ ವಾಹನ ನಿಲ್ಲಿಸುವಂತೆ ಹೇಳಿದಾಗ ಅವನು ದ್ವಿಚಕ್ರ ವಾಹನವನ್ನು ನಿಲ್ಲಿಸಿ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಅವನಿಗೆ ಹಿಡಿದು ವಿಚಾರಿಸಿದಾಗ ತನ್ನ ಮೋಟಾರ ಸೈಕಲದಲ್ಲಿದ್ದ ಆರ್‌ ಸಿ ಬುಕ್ಕನ್ನು ಹಾಜರಪಡಿಸಿದ್ದು ಅದನ್ನು ಪರಿಶೀಲಸಿ ನೋಡಿದಾಗ ಆರ್‌ ಸಿ ಬುಕ್ಕದಲ್ಲಿ KA-25/X–2918 ಚೆಸ್ಸಿ ನಂಬರ 06A16C42792 & ಇಂಜೀನ ನಂಬರ 06A15M26906 ಅಂತಾ ಇದ್ದು ನಂತರ ಗಾಡಿ ನಂಬರ ಪ್ಲೇಟ ಮೇಲೆ  KA-25/X–2918 ಅಂತಾ ನಂಬರನ್ನು ಬರೆದಿದ್ದು ಆ ಗಾಡಿಯ ಚೆಸ್ಸಿ ನಂಬರ ಇಂಜೀನ ನಂಬರ ಪರಿಶೀಲಿಸಿದಾಗ ಚೆಸ್ಸಿ ನಂಬರ 02C20F48951 ಹಾಗೂ ಇಂಜೀನ ನಂಬರ 02C18E48318 ಅಂತಾ ಇದ್ದು ಇವನು ಮೋಟಾರ ಸೈಕಲನ್ನು ಎಲ್ಲಿಯೋ ಕಳ್ಳತನದಿಂದಾಗಲಿ ಕಪಟತನದಿಂದಾಗಲಿ ಸಂಪಾದಿಸಿಕೊಂಡು ತನ್ನ ತಾಬಾದಲ್ಲಿ ಇಟ್ಟುಕೊಂಡು ಓಡಿಸುತ್ತಿದ್ದಾಗ ಸಿಕ್ಕ ಅಪರಾಧ.
5) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 51/2015  ಕಲಂ  279, 338, 304(ಎ) ಐ.ಪಿ.ಸಿ:

ದಿನಾಂಕ: 31.07.2015 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಕೊಪ್ಪಳ - ಕುಷ್ಟಗಿ ರಸ್ತೆಯ ಮೇಲೆ ಬೇವೂರ ಸೀಮಾದಲ್ಲಿ ಆರೋಪಿತನು ತಾನು ನೆಡೆಸುತ್ತಿದ್ದ ಮೋಟಾರ್ ಸೈಕಲ್ ನಂ; ಕೆಎ:36 ಎಲ್: 0611 ನೇದ್ದರಲ್ಲಿ ತಮ್ಮೂರಿನ ಬಸುವರಾಜ ನೇಲಜೇರಿ ಎಂಬುವನನ್ನು ತನ್ನ ಹಿಂದೆ ಕೂಡ್ರಿಸಿಕೊಂಡು ಕೊಪ್ಪಳ ಕಡೆಯಿಂದ ಕುಷ್ಟಗಿ ಕಡೆಗೆ ಅತೀವೇಗವಾಗಿ ಹಾಗೂ ಆಲಕ್ಷತನದಿಂದ ಮಾನವ ಜೀವಕ್ಕೆ  ಅಪಾಯವಾಗುವ ರೀತಿಯಲ್ಲಿ ಮೋಟಾರ್ ಸೈಕಲನ್ನು ನೆಡೆಸಿಕೊಂಡು ಬಂದು ರಸ್ತೆಯ ಎಡಬದಿಗೆ ಹೊರಟಿದ್ದ ಪಿಯರ್ಾದಿದಾರನ ಎತ್ತಿನ ಬಂಡಿಗೆ ಹಿಂದಿನಿಂದ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಆರೋಪಿತನಿಗೆ ಹಾಗೂ ಅವನ ಹಿಂದೆ ಕುಳಿತಿದ್ದ ಬಸವರಾಜ ಎಂಬುವನಿಗೆ ಭಾರಿ ಸ್ವರೂಫದ ರಕ್ತಗಾಯ ಹಾಗೂ ಅಲ್ಲಲ್ಲಿ ಒಳಪೆಟ್ಟಾಗಳಾಗಿದ್ದು ಸದರಿಯವರನ್ನು ಚಿಕಿತ್ಸೆ ಕುರಿತು 108 ಅಂಬ್ಯೂಲೆನ್ಸನಲ್ಲಿ ಇಲಕಲ್ ಮಹಾಂತೇಶ ಅಕ್ಕಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕಾಲಕ್ಕೆ ಆಸ್ಪತ್ರೆಯನ್ನು ತಲುಪುವಷ್ಟರಲ್ಲಿ ಇಲಕಲ್ಲದಲ್ಲಿ ಮೊಟಾರ್ ಸೈಕಲ್ ಸವಾರನಾದ ಹನಮಂತಪ್ಪ ಹುಳ್ಳಿ ಇತನು ತನಗಾದ ಭಾರಿಗಾಯಗಳಿಂದ ರಾತ್ರಿ 9-00 ಗಂಟೆ ಸುಮಾರಿಗೆ ಹನಮಂತಪ್ಪ ಹುಳ್ಳಿ ಇತನು ಮೃತ ಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿಯರ್ಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008