Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, August 25, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 162/2015 ಕಲಂ  143, 147, 148, 448, 427, 504, 506, 307, 395 ಸಹಿತ 149 ಐ.ಪಿ.ಸಿ:.
ದಿ: 24-08-2015 ರಂದು ಮಧ್ಯಾಹ್ನ 2-10 ಗಂಟೆ ಸುಮಾರಿಗೆ ಫಿರ್ಯಾದಿ ಜಾಫರಖಾನ್ ತಂದೆ ಹಬೀಬಖಾನ್ ಸಾ: ಹಮಾಲರ ಕಾಲೋನಿ ಕೊಪ್ಪಳ ಇವರು ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ, ದಿ: 24-08-15 ರಂದು ಮುಂಜಾನೆ 8-00 ಗಂಟೆಯಿಂದ 8-10 ಗಂಟೆ ಸುಮಾರಿಗೆ ಫಿರ್ಯಾದಿದಾರರು ಹಾಗೂ ಅವರ ಮಕ್ಕಳು ಕೂಡಿಕೊಂಡು ನಗರದ ಶಾದಿ ಮಹಲ್ ಮುಂದೆ ಇರುವ ಜಾಗೆಯಲ್ಲಿ ಹಾಕಿದ್ದ ಹಣ್ಣಿನ ಅಂಗಡಿಯಲ್ಲಿದ್ದಾಗ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ಬೈಧಾಡುತ್ತಾ, ಫಿರ್ಯಾದಿದಾರರ ಮಕ್ಕಳಿಗೆ ಕೊಲೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಗಾಯಗೊಳಿಸಿ ನಂತರ ಎರಡು ಜೆ.ಸಿ.ಬಿ. ನಂ: ಕೆಎ-37/ಎ-1004 ಮತ್ತು ಕೆ.ಎ-26/ಎಂ-5710 ನೇದ್ದವುಗಳಿಂದ ಹಣ್ಣಿನ ಅಂಗಡಿಯನ್ನು ಮತ್ತು ಅಂಗಡಿಯಲ್ಲಿದ್ದ ಹಣ್ಣು ಹಂಪಲು ಸೇರಿ ಅಂದಾಜು 8,00,000/- ರೂ ಗಳಷ್ಟು ಕೆಡವಿ ಲುಕ್ಸಾನು ಮಾಡಿದ್ದು ಅಲ್ಲದೆ ಅರ್ಷದಖಾನ್ ಈತನ ಕೊರಳಲಿದ್ದ 2 ತೊಲೆ ಬಂಗಾರದ ಚೈನು, ಕೈಯಲ್ಲಿದ್ದ 1 ತೊಲೆ ಬ್ರಾಸಲೇಟ್ ಅಲ್ಲದೇ ಒಂದು ಐ-ಪೋನ್ ಕಂ. ಮೊಬೈಲ್ ನಂ: .06 [64 ಜಿ.ಬಿ.] ಇವುಗಳನ್ನು ಸೈಯ್ಯದ ಜಮಾಲುದ್ದಿನ ಮತ್ತು ರಾಜಾವಲಿ ಮುದ್ದಾ ಬಳ್ಳಿ ಇವರು ಬಲವಂತವಾಗಿ ದರೋಡೆ ಮಾಡಿದ್ದು ಹಾಗು ಅಂಗಡಿಯಲ್ಲಿದ್ದ 50,000/- ರೂಗಳ ನಗದನ್ನು ದರೋಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 163/2015 ಕಲಂ  143, 147, 148, 341, 324, 504, 506, 307 ಸಹಿತ 149 ಐ.ಪಿ.ಸಿ:.
ದಿ: 24-08-2015 ರಂದು ಮಧ್ಯಾಹ್ನ 3-15 ಗಂಟೆ ಸುಮಾರಿಗೆ ಫಿರ್ಯಾದಿ ಸಯ್ಯದ ಸಮೀರ ಹುಸೇನಿ ಸಾ: ತೆಗ್ಗಿನಕೇರಿ ಕೊಪ್ಪಳ ಇವರು ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ, ದಿ: 24-08-15 ರಂದು ಮುಂಜಾನೆ 7-45  ಗಂಟೆಗೆ ಫಿರ್ಯಾದಿದಾರರು ಹಾಗೂ ಮುಸ್ಲಿಂ ಸಮಾಜದ ಶಾದಿ ಮಹಲ್ ಕಮೀಟಿ ಸದಸ್ಯರು ಕೂಡಿಕೊಂಡು ಆರೋಪಿತರು ಅನದೀಕೃತವಾಗಿ ಶಾದಿ ಮಹಲ್ ಜಾಗೆಯಲ್ಲಿ ಹಾಕಕಿಕೊಂಡ ಹಣ್ಣಿನ ಅಂಗಡಿಯನ್ನು ತೆರೆವುಗೊಳಿಸುವಂತೆ ಆರೋಪಿ ಹಾಗೂ ಆತನ ಮಕ್ಕಳಿಗೆ ನೋಟಿಸ್ ನ್ನು ಜಾರಿ ಮಾಡಿ ಕಾಲಿ ಮಾಡಲು ಸಮಯಾವಕಾಶ ನೀಡಿ ಶಾದಿ ಮಹಲ್ ಮುಂದೆ ಇದ್ದ ವಿಜಯ ದರ್ಶಿನಿ ಹೊಟೇಲ್ ಮುಂದೆ ಚಹಾ ಕುಡಿಯಲು ಹೋಗಿದ್ದು, ಬೆಳಗ್ಗೆ 8-10 ಗಂಟೆ ಸುಮಾರಿಗೆ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ತಮ್ಮ ಕೈಗಳಲ್ಲಿ ಕಬ್ಬಿಣದ ರಾಡು ಹಾಗೂ ಕಟ್ಟಿಗೆ ಮತ್ತು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಫಿರ್ಯಾದಿ ಹಾಗೂ ಇತರರಿಗೆ ಒಮ್ಮಿಂದೊಮ್ಮೆಲೆ ಅವಾಚ್ಯ ಶಬ್ದಗಳಿಂದ ಬೈಧಾಡುತ್ತಾ, ಆರೋಪಿತರು ಫಿರ್ಯಾದಿ ಹಾಗೂ ಇತರರಿಗೆ ರಾಡು ಕಟ್ಟಿಗೆಯಿಂದ ಮತ್ತು ಕಲ್ಲುಗಳಿಂದ ಹಲ್ಲೆ ಮಾಡಿ ಕೊಲೆ ಮಾಡುವ ಉದ್ದೇಶದಿಂದ ನಸಿರುದ್ದೀನ ಈತನಿಗೆ ಭಾರಿ ರಕ್ತಗಾಯಗೊಳಿಸಿ ಹಾಗೂ ಇತರರಿಗೆ ಸಾದಾ ಮತ್ತು ಬಾರಿ ಗಾಯಗೊಳಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಮೇಲಿಂದ   ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.  
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 191/2015 ಕಲಂ. 78(3) Karnataka Police Act & 420 IPC.
ದಿನಾಂಕಃ-24-08-2015 ರಂದು ರಾತ್ರಿ 22-55 ಗಂಟೆಗೆ ಶ್ರೀ ಅಂಜಿನೆಯಪ್ಪ ಪಿ.ಎಸ್.ಐ ಗಂಗಾವತಿ ಸಂಚಾರಿ ಠಾಣೆ ಇವರು ಠಾಣೆಗೆ ಹಾಜರಾಗಿ ಮಟ್ಕಾ ಜೂಜಾಟದ ಮೂಲ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದು ಇದರ ಸಾರಾಂಶವೆನಂದರೆ, ಇಂದು ದಿನಾಂಕ 24-08-2015 ರಂದು ಮಾನ್ಯ ಡಿ.ಎಸ್.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ನಾಗನಕಲ್ ಗ್ರಾಮದ ವೆಂಕಟೇಶ ಈಳಿಗೆರ ಇವರ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮೋಸಮಾಡುವ ಉದ್ದೆದಿಂದ ಮಟಕಾ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಂಚರ ಸಮಕ್ಷಮದಲ್ಲಿ ರಾತ್ರಿ 7-30 ಗಂಟೆಗೆ ದಾಳಿಮಾಡಿದ್ದು ಇಬ್ಬರು ಆರೋಪಿತರಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಆರೋಪಿ ಶರಣಪ್ಪ ತಂದೆ ಸಂಗಪ್ಪ ಕುಂಬಾರ ವಯಾ 39 ವರ್ಷ ಜಾತಿ: ಕುಂಬಾರ ಸಾ: ನಾಗನಕಲ್ ಇತನನ್ನು ದಸ್ತಗಿರಿ ಮಾಡಿಕೊಂಡಿದ್ದು ಸದರಿ ಆರೋಪಿತನಿಂದ ಮಟಕಾ ಜುಜಾಟದ ಹಣ 9700-00 ರೂಪಾಯಿಗಳು, 03 ಮಟಕಾ ನಂಬರು ಬರೆದ ಪಟ್ಟಿ ಮತ್ತು 1 ಬಾಲ್ ಪೆನ್ನು ದೊರೆತಿದ್ದು ಮಟಕಾದ ಪಟ್ಟಿ ಬರೆಯುತ್ತಿದ್ದ ಇನ್ನೊಬ್ಬ ಆರೋಪಿ ಸುರೇಶ ತಂದೆ ವೆಂಕಟೇಶ ಈಳಿಗೆರ ಸಾ: ನಾಗನಕಲ್ ಇತನು ಓಡಿ ಹೋಗಿದ್ದು ಮಟಕಾದ ಪಟ್ಟಿಯನ್ನು ಮಟಕಾದ ಬುಕ್ಕಿಯಾದ ಯೆಸುಬಾಬು ಸಾ: ಚೆಳ್ಳೂರು ಕ್ಯಾಂಪ ಇತನಿಗೆ ಕೊಡುತ್ತಿರುವುದಾಗಿ ತಿಳಿಸಿದ್ದು ಸದರಿ ಮಟಕಾ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಪಂಚಾನಾಮೆಯನ್ನು ಇಂದು ದಿನಾಂಕ 24-08-2015 ರಂದು ರಾತ್ರಿ 7-30 ಗಂಟೆಯಿಂದ ರಾತ್ರಿ 8-30 ಗಂಟೆಯವರೆಗೆ ಪೂರೈಸಿದ್ದು ಸದರಿ ಮೂಲ ದಾಳಿ ಪಂಚನಾಮೆಯನ್ನು ಮತ್ತು ನಗದು ಹಣ, ಮಟಕಾದ ಸಾಮಾಗ್ರಿಗಳನ್ನು ಹಾಗೂ ಆರೋಪಿ ಶರಣಪ್ಪ ತಂದೆ ಸಂಗಪ್ಪ ಕುಂಬಾರ ನನ್ನು ಹಾಜರುಪಡಿಸುತ್ತಿದ್ದು ಸದರಿ 3 ಜನ ಆರೋಪಿತರ ಬಗ್ಗೆ ಕಲಂ: 78(3) ಕೆ.ಪಿ. ಕಾಯ್ದೆಮತ್ತು 420 .ಪಿ.ಸಿ. ಆಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಕಾನೂನು ರೀತಿಯ ಕ್ರಮ ಜರುಗಿಸಲು ಈ ವರದಿಯನ್ನು ನೀಡಿದ್ದರ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
4) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 149/2015 ಕಲಂ. 87 Karnataka Police Act.
ದಿನಾಂಕ 24-08-2015 ರಂದು ರಾತ್ರಿ 7-15 ಗಂಟೆಗೆ ಶ್ರೀ ಆರ್.ಎಸ್. ಉಜ್ಜನಕೊಪ್ಪ ಸಿ.ಪಿ.ಐ. ಸಾಹೇಬರು ಕುಷ್ಟಗಿ ರವರು ಠಾಣೆಗೆ ಬಂದು ಒಂದು ವರದಿ, ಮತ್ತು ಇಸ್ಪೇಟ ಜೂಜಾಟದ ದಾಳಿ ಪಂಚನಾಮೆ 4 ಜನ ಆರೋಪಿತರನ್ನು ಹಾಗೂ ಜೂಜಾಟದ ಹಣ 8210=00 ರೂ ಮತ್ತು 52 ಇಸ್ಪೇಟ ಎಲೆಗಳನ್ನು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ಹಿರೇಮನ್ನಾಪೂರ  ಗ್ರಾಮದ ಗ್ಯಾನಪ್ಪನ ಗುಡ್ಡದಲ್ಲಿ ಅಂದರಬಾಹರ ಎಂಬ ಇಸ್ಪೇಟ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಫಿರ್ಯಾಧಿದಾರರು ಮತ್ತು ಸಿಬ್ಬಂದಿಯವರಾದ ಪುಂಡಪ್ಪ ಎ.ಎಸ್.ಐ ಹೆಚ್.ಸಿ 36, ಪಿಸಿ-117,116,109,407,347,124 ಎ.ಪಿ.ಸಿ-115 ರವರೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 4 ಜನ ಆರೋಪಿತರನ್ನು ಹಾಗೂ ಇಸ್ಪೇಟ ಜೂಜಾಟದ ಒಟ್ಟು ಹಣ 8210=00, ಹಾಗೂ 52 ಇಸ್ಪೇಟ ಎಲೆಗಳು ಹಾಗೂ ನಾಲ್ಕು ಮೋಬೈಲ್ ಗಳು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಠಾಣೆ ಗುನ್ನೆ ನಂ.: 149/2015 ಕಲಂ 87 ಕೆ.ಪಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೆನು.
5) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 150/2015 ಕಲಂ. 279, 304(ಎ) ಐ.ಪಿ.ಸಿ:
ದಿನಾಂಕ : 24-08-2015 ರಂದು 10-15 ಪಿ.ಎಂ ಗಂಟೆಗೆ ಪಿರ್ಯಾಧಿದಾರನಾದ ರಂಗಪ್ಪ ತಂದೆ ಯಂಕಪ್ಪ ದಾಸರ ಸಾ: ಯಪಲದಿನ್ನಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಹಾಜರಪಡಿಸಿದ್ದು ಸದರ ದೂರಿನ ಸಾರಾಂಶವೆನೆಂದರೆ. ದಿನಾಂಕ:24-08-2015 ರಂದು ಮದ್ಯಾಹ್ನ 03-00 ಗಂಟೆಯ ಸುಮಾರಿಗೆ ಕಂದಕೂರ ಸೀಮಾದಲ್ಲಿ ಯರೇಹಳ್ಳದ ಹತ್ತಿರ ಪಿರ್ಯಾಧಿ ಅಳಿಯನು ಟ್ರ್ಯಾಕ್ಟರ ಕೆಲಸಕ್ಕೆ ಹೋಗಿದ್ದಾಗ ಟ್ರ್ಯಾಕ್ಟರ ಚಾಲಕನಾದ ಹನುಮಂತಪ್ಪ ತಂದೆ ಮಲ್ಲಣ್ಣ ಮಂಗಳೂರ ಸಾ: ಕಂದಕೂರ ಈತನು ಬಸವರಾಜನಿಗೆ ಟ್ರ್ಯಾಕ್ಟರನ್ನು ನಡೆಸಲು ಹೇಳಿದ್ದು ಆಗ ಬಸವರಾಜನು ಟ್ರ್ಯಾಕ್ಟರ ಡ್ರೈವಿಂಗ ಸೀಟನಲ್ಲಿ ಹತ್ತುವಾಗ ಸದರಿ ಹನುಮಂತಪ್ಪ ಈತನು ಒಮ್ಮಿಂದೊಮ್ಮಲೇ ಟ್ರ್ಯಾಕ್ಟರನ್ನು ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿದ್ದು ಆಗ ಬಸವರಾಜ ಈತನು ಜೋಲಿ ತಪ್ಪಿ ಕೆಳಗೆ ಬಿದ್ದು ಗಾಯ ಮತ್ತು ಒಳಪೆಟ್ಟುಗಳಾಗಿದ್ದು ನಂತರ ಆತನನ್ನು ಚಿಕಿಸ್ತೆ ಕುರಿತು ಸರಕಾರಿ ಆಸ್ಪತ್ರೆ ಕುಷ್ಟಗಿಗೆ ಸೇರಿಕೆ ಮಾಡಿದಾಗ ಸಂಜೆ 04-15 ಗಂಟೆಗೆ ಸುಮಾರಿಗೆ ಸದರಿಯವನು ಚಿಕಿಸ್ತೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ವಿಷಯ ತಿಳಿದು ಬಂದು ನೋಡಿ ವಿಷಯ ನಿಜವಿದ್ದು ಕಾರಣ ಸದರಿ ಟ್ರ್ಯಾಕ್ರರ ನಂ: ಕೆ.ಎ-37 ಟಿ.ಎ-120 & ಅದರ ಟ್ರ್ಯಾಲಿ ನಂ: ಕೆ.ಎ-37 ಟಿ.ಎ-121 ನೇದ್ದರ ಚಾಲಕನಾದ ಹನುಮಂತಪ್ಪ ಈತನು ನನ್ನ ಅಳಿಯನಾದ ಬಸವರಾಜನಿಗೆ ಟ್ರ್ಯಾಕ್ಟ್ರರ ನಡೆಸಲು ಹೇಳಿ ಆತನು ಟ್ರ್ಯಾಕ್ಟರ ನಡೆಸಲು ಡ್ರೈವಿಂಗ ಸೀಟ ಮೇಲೆ ಹತ್ತುತ್ತಿದ್ದಾಗ ವಾಹನವನ್ನು ಮುಂದಕ್ಕೆ ನಡೆಸಿ ಅಪಘಾತಪಡಿಸಿದ್ದರಿಮದ ನನ್ನ ಅಳಿಯ ಮೃತ ಪಟ್ಟಿದ್ದು ಕಾರಣ ಸದರಿಯವನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


0 comments:

 
Will Smith Visitors
Since 01/02/2008